Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ತನಗಾಗಿ ಮಾತ್ರವೇ ಬದುಕುವುದು ಪಾಪ

ತನಗಾಗಿ ಮಾತ್ರವೇ ಬದುಕುವುದು ಪಾಪ ಮಾಡುವುದೆಲ್ಲವನ್ನೂ ‘ಯಜ್ಞ’ಭಾವದಿಂದ ಮಾಡಿ, ದೇವತಾರ್ಪಣ ಮಾಡಬೇಕು; ದೇವತಾಪ್ರಸಾದವಾಗಿ ಸಿಕ್ಕಿದ ಕರ್ಮಫಲವನ್ನು ಸಹಮಾನವರೊಂದಿಗೆ ಹಂಚಿಕೊಂಡೇ ಭೋಗಿಸಬೇಕು, ಇಲ್ಲದಿದ್ದರೆ ಅದು ‘ಕಳ್ಳತನ’ವೆನಿಸುತ್ತದೆ – ಎನ್ನುವ ಕೃಷ್ಣನ ಉಪದೇಶವನ್ನು ಚರ್ಚಿಸುತ್ತಿದ್ದೆವು. ಇತರರ ‘ವಸ್ತು’ವನ್ನು ಕದ್ದರೆ ಮಾತ್ರವೇ ಕಳ್ಳತನವಲ್ಲ. ಕೃತಿಚೌರ್ಯ ಕೀರ್ತಿಚೌರ್ಯ […]

ಯಜ್ಞವೇ ಜೀವನನೀತಿ

ಯಜ್ಞವೇ ಜೀವನನೀತಿ ‘‘ದೇವತಾಯಜ್ಞಗಳ ಫಲವನ್ನು ಪಡೆದವನು ಅದನ್ನು ಸಹಮಾನವರೊಂದಿಗೆ ಹಂಚಿಕೊಳ್ಳದೆ ತಾನೊಬ್ಬನೇ ಭೋಗಿಸಿದರೆ ‘ಕಳ್ಳ’ನೆನಿಸುತ್ತಾನೆ’’ ಎಂದು ಕೃಷ್ಣನು ಎಚ್ಚರಿಸಿದ್ದನ್ನು ನೋಡಿದ್ದೇವೆ. ‘ಮಾತಾಪಿತೃಗಳ, ಗುರುಹಿರಿಯರ, ಬಂಧುಮಿತ್ರರ, ನೆರೆಕೆರೆಯವರ, ಸರ್ಕಾರದ, ಸಮಾಜದ, ಪಶುಪಕ್ಷಿಗಳ ಹಾಗೂ ನಿಸರ್ಗದ ಋಣವನ್ನು ಹೊತ್ತಿರುವ ನಾವು ನಮ್ಮ ಪುಣ್ಯವನ್ನೂ ಹಾಗೂ […]

ಯಜ್ಞಶೇಷ ಹಂಚಿಕೊಳ್ಳದಿರುವುದು ಕಳ್ಳತನ

ಯಜ್ಞಶೇಷ ಹಂಚಿಕೊಳ್ಳದಿರುವುದು ಕಳ್ಳತನ ‘ದೇವತಾಯಜ್ಞದ ಮೂಲಕ ಭೋಗಯೋಗಾದಿಗಳನ್ನು ಪಡೆಯಬಹುದು. ಈ ಮೂಲಕ ಶ್ರೇಯಸ್ಸುಂಟಾಗುತ್ತದೆ ಎನ್ನುವ ವಿಚಾರವನ್ನು ಸೃಷ್ಟಿಕರ್ತನು ಸೃಷ್ಟಿಯ ಆದಿಯಲ್ಲೇ ಉಪದೇಶಿಸಿದ್ದನು’ ಎಂದು ಕೃಷ್ಣನು ಹೇಳುತ್ತಿದ್ದನಷ್ಟೆ? ‘ಯಜ್ಞ ಎಂದರೇನು? ಅದರಿಂದ ಸರ್ವತೋಮುಖ ಶ್ರೇಯಸ್ಸು ಹೇಗೆ ಆಗುತ್ತದೆ?’ ಎನ್ನುವ ವಿಚಾರವನ್ನೂ ಚರ್ಚಿಸಿದ್ದೇವೆ. ಇದೇ […]

ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ

ದೇವತಾಯಜ್ಞವು ಸರ್ವಥಾ ಶ್ರೇಯಸ್ಕರ ಸಹಯಜ್ಞಾಃ ಪ್ರಜಾಃ ಸೃಷ್ಟ್ವಾ ಪುರೋ ವಾಚಾ ಪ್ರಜಾಪತಿಃ | ಅನೇನ ಪ್ರಸವಿಷ್ಯಧ್ವಂ ಏಷ ವೋsಸ್ತ್ವಿಷ್ಟಕಾಮಧುಕ್ || ದೇವಾನ್ ಭಾವಯತಾನೇನ ತೇ ದೇವಾಃ ಭಾವಯಂತು ವಃ | ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ || (3.10-11) ಎಂಬ ಶ್ಲೋಕವನ್ನು […]

ಯಜ್ಞ ಎಂದರೇನು?

ಯಜ್ಞ ಎಂದರೇನು? ‘‘ಲೌಕಿಕರಂತೆ ಅನಗತ್ಯ ಕರ್ಮಗಳ ಜಾಲದಲ್ಲಿ ಸಿಲುಕಬೇಡ, ಮಾಡಬೇಕಾದ ಧರ್ಮಕರ್ಮಗಳನ್ನು ‘ಯಜ್ಞ’ಭಾವದಿಂದ ಮಾಡು. ಆಗ ಬಂಧನವಾಗದು’’ ಎಂದು ಕೃಷ್ಣನು ತಿಳಿಹೇಳುತ್ತಿದ್ದಾನಷ್ಟೆ? ‘ಯಜ್ಞ’ದ ಕುರಿತಾಗಿ ಮುಂದೆ ಹೀಗೆ ಹೇಳುತ್ತಾನೆ: ಸಹಯಜ್ಞಾಃ ಪ್ರಜಾಃ ಸೃಷ್ಟಾ ಪುರೋ ವಾಚಾ ಪ್ರಜಾಪತಿಃ | ಅನೇನ ಪ್ರಸವಿಷ್ಯಧ್ವಂ […]

ಅನಗತ್ಯ ಕರ್ಮವನ್ನು ಬಿಡು

ಅನಗತ್ಯ ಕರ್ಮವನ್ನು ಬಿಡು ‘ಅಕರ್ಮದ ಸೋಗು ಹಾಕುವ ಬದಲು ನಿರ್ಲಿಪ್ತಿಯಿಂದ ಕರ್ಮದಲ್ಲಿ ತೊಡಗುವುದೇ ಉತ್ತಮ ಮಾರ್ಗ’ ಎಂದು ಶ್ರೀಕೃಷ್ಣನು ನಿರ್ದೇಶಿಸಿದನಷ್ಟೆ? ‘ಬಂಧನವಾಗುವುದು ಭೋಗಾತುರದಲ್ಲಿ ಹಮ್ಮಿಕೊಳ್ಳುವ ಅನಗತ್ಯವಾದ ಭೋಗಕರ್ಮಗಳಿಂದಾಗಿಯೇ ಹೊರತು ಕರ್ತವ್ಯಕರ್ಮಗಳಿಂದಲ್ಲ’ ಎಂದು ಮುಂದೆ ಸೂಚಿಸುತ್ತಾನೆ: ಯಜ್ಞಾರ್ಥಾತ್ ಕರ್ಮಣೊನ್ಯತ್ರ ಲೋಕೊಯಂ ಕರ್ಮಬಂಧನಃ | […]

ನಿಯತ ಕರ್ಮಗಳನ್ನಾಚರಿಸು

ನಿಯತ ಕರ್ಮಗಳನ್ನಾಚರಿಸು ‘ಕರ್ಮವು ಪ್ರಕೃತಿಜನ್ಯ ಗುಣಗಳಿಂದ ಪ್ರೇರಿತವಾಗಿ ಅವಿರತವೂ ನಮ್ಮೊಳಗೂ ಹೊರಗೂ ನಡೆಯುತ್ತಲೇ ಇರುವ ಪ್ರಕ್ರಿಯೆ’ ಎನ್ನುವ ಕೃಷ್ಣನ ಮಾತನ್ನು ಅನುಸಂಧಾನ ಮಾಡಿದೆವು. ಈ ನೈಷ್ಕರ್ಮ್ಯಭಾವದ ಮರ್ಮವನ್ನು ಅರಿಯದವರು ಅದನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಂಡು, ಕಷ್ಟವೆನಿಸುವಂತಹ ಧರ್ಮಕರ್ಮಗಳನ್ನು ಬಿಟ್ಟು ಕೂರುವ […]

ಬದುಕಿಗೆ ಭಗವದ್ಗೀತೆ – ಪ್ರತಿ ಕ್ಷಣವೂ ನಡೆಯುವ ಕರ್ಮ

ಬದುಕಿಗೆ ಭಗವದ್ಗೀತೆ – ಪ್ರತಿ ಕ್ಷಣವೂ ನಡೆಯುವ ಕರ್ಮ ನೈಷ್ಕರ್ಮ್ಯವೆಂದರೆ ‘ಸುಮ್ಮನಿರುವುದಲ್ಲ’, ಅಂತರಂಗದ ಸಂಕಲ್ಪಗಳ ಗಂಟುಗಳನ್ನು ನಿರ್ಲಿಪ್ತಕರ್ಮದ ಮೂಲಕ ಕರಗಿಸಿಕೊಂಡು ಮುಕ್ತವಾಗುವುದು. ಹಾಗೆ ಕೃತಕೃತ್ಯನಾದ ಮೇಲೆ ಮನುಷ್ಯನು ಯಾವುದೇ ಕರ್ಮಗಳಲ್ಲಿ ತೊಡಗಿದರೂ, ಆತ ಅವುಗಳಿಂದ ಬದ್ಧನಾಗುವುದಿಲ್ಲ. ಹಾಗಾಗಿ ಆತನು ಕರ್ಮ ಮಾಡಿಯೂ […]

ಸುಮ್ಮನಿರುವುದೇ ನೈಷ್ಕರ್ವ್ಯುವೆ?

ಸುಮ್ಮನಿರುವುದೇ ನೈಷ್ಕರ್ವ್ಯುವೆ? ಕರ್ಮಮಾರ್ಗ-ಜ್ಞಾನಮಾರ್ಗಗಳೆಂಬ ಎರಡು ಆಯ್ಕೆಗಳನ್ನು ಬಹಳ ಹಿಂದೆ ತಾನೇ ಮುಂದಿಟ್ಟಿದ್ದಾನೆಂದು ಭಗವಂತನು ಹೇಳಿದ್ದನ್ನು ನೋಡಿದ್ದೇವೆ. ಈಗ ಕರ್ಮ-ಜ್ಞಾನಗಳ ವಿವರಣೆಯನ್ನು ನೀಡುತ್ತಾನೆ: ನ ಕರ್ಮಣಾಮನಾರಂಭಾತ್ ನೈಷ್ಕರ್ವ್ಯುಂ ಪುರುಷ್ಪೊ—ಶ್ನುತೇ | ನ ಚ ಸಂನ್ಯಸನಾದೇವ ಸಿದ್ಧಿಂ ಸಮಧಿಗಚ್ಛತಿ || (ಭ.ಗೀ.: 3.4) ‘ಕರ್ಮಗಳನ್ನು […]