Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಬದುಕಿಗೆ ಭಗವದ್ಗೀತೆ – ಶುಭಾಶುಭಗಳಿಗೆ ಅಂಟಿಕೊಳ್ಳದೆ ಮುಂದುವರೆಯುತ್ತಾನೆ ಜ್ಞಾನಿ

ಬದುಕಿಗೆ ಭಗವದ್ಗೀತೆ – ಶುಭಾಶುಭಗಳಿಗೆ ಅಂಟಿಕೊಳ್ಳದೆ ಮುಂದುವರೆಯುತ್ತಾನೆ ಜ್ಞಾನಿ ಸುಖದುಃಖಗಳಲ್ಲಿ ಸಮಭಾವದಿಂದಿರುತ್ತ, ರಾಗ-ಭಯ-ಕ್ರೋಧಗಳನ್ನು ಗೆದ್ದು ಸ್ಥಿತಪ್ರಜ್ಞನಾಗಬಲ್ಲವನೇ ಮುನಿ ಎಂದು ಶ್ರೀಕೃಷ್ಣನು ವಿವರಿಸುತ್ತಿದ್ದ. ಮುಂದುವರೆಸುತ್ತಾನೆ- ಯಃ ಸರ್ವತ್ರಾನಭಿಸ್ನೇಹಸ್ತತ್ತತ್ಪ್ರಾಪ್ಯ ಶುಭಾಶುಭಂ | ನಾಭಿನಂದತಿ ನ ದ್ವೇಷ್ಟಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ || (ಸ್ಥಿತಪ್ರಜ್ಞನು ತನಗೆ ಪ್ರಾಪ್ತಿಯಾಗುವ ಶುಭ-ಅಶುಭ ಫಲಗಳಿಗೆ ಅಂಟಿಕೊಳ್ಳುವುದಿಲ್ಲ. ತುಂಬ ಖುಷಿಪಡುವುದೂ ಇಲ್ಲ, […]

ಬದುಕಿಗೆ ಭಗವದ್ಗೀತೆ – ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ

ಬದುಕಿಗೆ ಭಗವದ್ಗೀತೆ –  ಸಮತ್ವ-ನಿರ್ಭೀತಿಗಳುಳ್ಳ ಸ್ಥಿತಪ್ರಜ್ಞನೇ ಮುನಿ ’ಸ್ಥಿತಪ್ರಜ್ಞನು ಹೇಗಿರುತ್ತಾನೆ? ಹೇಗೆ ವರ್ತಿಸುತ್ತಾನೆ?’ ಎಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಉತ್ತರಿಸಲಾರಂಭಿಸಿದ್ದ. ‘ಆತ್ಮತುಷ್ಟಿ’ಯನ್ನೇ ಸ್ಥಿತಪ್ರಜ್ಞನ ಮೊದಲ ಲಕ್ಷಣವಾಗಿ ಕೃಷ್ಣನು ಹೇಳಿದ್ದನ್ನೂ ಚರ್ಚಿಸಿದ್ದೇವೆ. ಮುಂದುವರೆಸುತ್ತಾನೆ ಕೃಷ್ಣ- ದುಃಖೇಷ್ವನುದ್ವಿಘ್ನಮನಾಃ ಸುಖೇಷು ವಿಗತಸ್ಪೃಹಃ I ವೀತರಾಗಭಯಕ್ರೋಧಃ ಸ್ಥಿತಧೀರ್ಮುನಿರುಚ್ಯತೇ […]

ಬದುಕಿಗೆ ಭಗವದ್ಗೀತೆ- ತನ್ನೊಳಗೆ ತಾನು ತುಷ್ಟನಾಗಿರುವವನೇ ಸ್ಥಿತಪ್ರಜ್ಞ

ಬದುಕಿಗೆ ಭಗವದ್ಗೀತೆ- ತನ್ನೊಳಗೆ ತಾನು ತುಷ್ಟನಾಗಿರುವವನೇ ಸ್ಥಿತಪ್ರಜ್ಞ ನಿರ್ವೇದ ಭಾವವನ್ನು ತಾಳಿ, ಯೋಗವನ್ನು ಸಿದ್ಧಿಸಿಕೊಳ್ಳುವ ಬಗ್ಗೆ ಕೃಷ್ಣನು ಹೇಳಿದ ಮಾತುಗಳನ್ನು ನೋಡಿದ್ದೇವೆ. ನಮ್ಮ ಬುದ್ಧಿಯು ಲೆಕ್ಕಾಚಾರ ಹಾಕಬಹುದು- “ಅಲ್ಲ! ಆಸೆಗಳನ್ನೇ ಬಿಟ್ಟಮೇಲೆ, ಮನುಷ್ಯನು ಕರ್ಮವನ್ನೇಕೆ ಮಾಡಬೇಕು?’ ಎಂದು. ಆದರೇ ಕಟುಸತ್ಯವೇನು ಗೊತ್ತೆ? […]

ಬದುಕಿಗೆ ಭಗವದ್ಗೀತೆ – ನಿರ್ವೇದವನ್ನು ತಾಳು, ಯೋಗದಲ್ಲಿ ಬಾಳು

ಬದುಕಿಗೆ ಭಗವದ್ಗೀತೆ – ನಿರ್ವೇದವನ್ನು ತಾಳು, ಯೋಗದಲ್ಲಿ ಬಾಳು ಲೌಕಿಕ ವ್ಯವಹಾರದಲ್ಲಿರುತ್ತಲೇ ಲೋಕೋತ್ತರದ ಯೋಗದಲ್ಲಿ ನೆಲೆಗೊಂಡ ಕರ್ಮಯೋಗಿಗಳ ಉದಾಹರಣೆಗಳನ್ನು ನೋಡಿದ್ದೇವೆ. ಸ್ವತಃ ಶ್ರೀಕೃಷ್ಣನ ಉದಾಹರಣೆಯನ್ನೇ ನೋಡಿದ್ದೇವೆ. ಈ ನಿರ್ಲಿಪ್ತ ಕರ್ಮಯೋಗವು ಅಷ್ಟು ಸುಲಭ ಸಾಧ್ಯವಲ್ಲ, ನಿಜ. ಆದರೇ ಅಸಾಧ್ಯವೂ ಅಲ್ಲ. ಅದನ್ನೇ […]

ಬದುಕಿಗೆ ಭಗವದ್ಗೀತೆ – ಕರ್ಮಯೋಗಕ್ಕೆ ಕೃಷ್ಣನದೇ ನಿದರ್ಶನ

ಬದುಕಿಗೆ ಭಗವದ್ಗೀತೆ – ಕರ್ಮಯೋಗಕ್ಕೆ ಕೃಷ್ಣನದೇ ನಿದರ್ಶನ ‘ಜ್ಞಾನಿಯು ಸುಕೃತ-ದುಷ್ಕೃತಗಳ ತನ್ನ ಬುತ್ತಿಯನ್ನು ಇಲ್ಲೇ ಅನುಭವಿಸಿ ಇಲ್ಲಿಯೇ ಬಿಟ್ಟು ಅಂತರ್ಮುಖನಾಗುತ್ತಾನೆ, ಮತ್ತೆಮತ್ತೆ ಸಂಕಲ್ಪಗಳ ಜನ್ಮಚಕ್ರಕ್ಕೆ ಸಿಲುಕುವುದಿಲ್ಲ, ಹೀಗೆ ಕರ್ಮಕೌಶಲದ ಮೂಲಕ ಜ್ಞಾನಿಯು ‘ಯೋಗ’ವನ್ನು ಪಡೆಯುತ್ತಾನೆ’ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದ. ನಿಜಕ್ಕೂ ತಾನು […]

ಬದುಕಿಗೆ ಭಗವದ್ಗೀತೆ – ಇಲ್ಲಿದನ್ನು ಇಲ್ಲಿಗೆ ಬಿಡು, ಕರ್ಮಕೌಶಲವೆಂಬ ಯೋಗವನ್ನು ಸಿದ್ಧಿಸಿಕೋ

ಬದುಕಿಗೆ ಭಗವದ್ಗೀತೆ – ಇಲ್ಲಿದನ್ನು ಇಲ್ಲಿಗೆ ಬಿಡು, ಕರ್ಮಕೌಶಲವೆಂಬ ಯೋಗವನ್ನು ಸಿದ್ಧಿಸಿಕೋ ‘ಬುದ್ಧಿಯೋಗವನ್ನಾಶ್ರಯಿಸು’ ಎಂದು ನಿರ್ದೇಶಿಸುತ್ತಿದ್ದ ಕೃಷ್ಣನು ಹೀಗೆ ಮುಂದುವರೆಸುತ್ತಾನೆ- ಬುದ್ಧಿಯುಕ್ತೋ ಜಹಾತೀಹ ಉಭೇಸುಕೃತದುಷ್ಕೃತೇI ತಸ್ಮಾದ್ಯೋಗಾಯಯುಜ್ಯ ಸ್ವಯೋಗಃ ಕರ್ಮಸು ಕೌಶಲಮ್ II ಬುದ್ಧಿಯುಕ್ತನಾದವನು ಸುಕೃತ-ದುಷ್ಕೃತಗಳನ್ನು ಇಹದಲ್ಲೇ ತ್ಯಜಿಸುತ್ತಾನೆ. ನೀನು ಯೋಗಕ್ಕಾಗಿ ಪ್ರಯತ್ನಿಸು. ಕರ್ಮಕೌಶಲವೇ […]

ಬದುಕಿಗೆ ಭಗವದ್ಗೀತೆ – ಫಲದಾಸೆಯ ಕರ್ಮವು ತುಚ್ಛ, ಬುದ್ಧಿಯೋಗವೇ ಉಚ್ಛ

ಬದುಕಿಗೆ ಭಗವದ್ಗೀತೆ – ಫಲದಾಸೆಯ ಕರ್ಮವು ತುಚ್ಛ, ಬುದ್ಧಿಯೋಗವೇ ಉಚ್ಛ ‘ಜೀವನದ ಆಗು ಹೋಗುಗಳಿಗೆ ನಾವು ಒಗ್ಗಿಕೊಳ್ಳುತ್ತ ಅಲ್ಲಿನ ಸಿದ್ಧ್ಯಸಿದ್ಧಿಗಳ ವಿಷಯದಲ್ಲಿ ಸಮವಾಗಿ ಇರಬೇಕು’ ಎನ್ನುವ ಪಾಠವನ್ನು ಕೃಷ್ಣನು ಕಲಿಸಲಾರಂಭಿಸಿದ್ದನಷ್ಟೆ? ಹೀಗೆ ಮುಂದುವರೆಸುತ್ತಾನೆ – ಸಮತ್ವಂ ಯೋಗ ಉಚ್ಯತೆ(ಸಮತ್ವವೇ ’ಯೋಗ’). ‘ಯೋಗ’ವೆಂದರೆ ಯಾವುದೋ […]

ಬದುಕಿಗೆ ಭಗವದ್ಗೀತೆ – ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿರು

ಬದುಕಿಗೆ ಭಗವದ್ಗೀತೆ – ಸಿದ್ಧಿ-ಅಸಿದ್ಧಿಗಳಲ್ಲಿ ಸಮನಾಗಿರು ‘ಯೋಗದಲ್ಲಿ ಪ್ರಜ್ಞೆಯನ್ನು ಕೇಂದ್ರೀಕರಿಸಿ, ಫಲಗಳಿಗೆ ಸಂಬಂಧಗಳಿಗೆ ಅಂಟಿಕೊಳ್ಳದೆ ಕರ್ಮವನ್ನು ಮಾಡು’ ಎಂದು ಕೃಷ್ಣನು ಕರ್ಮಕೌಶಲದ ರಹಸ್ಯವನ್ನು ಹೇಳುತ್ತಿದ್ದ. ಕರ್ಮದ ಹಾದಿಯಲ್ಲಿ ಬರುವ ವ್ಯಕ್ತಿ-ವಸ್ತು-ಲಾಭಾಲಾಭಗಳ ಬಗ್ಗೆ ಬೆಳೆಯುವ ಮಮಕಾರ-ವ್ಯಾಮೋಹಗಳು ನಮ್ಮನ್ನು ತಪ್ಪು ನಿರ್ಣಯಗಳಿಗೆ ಎಳೆಯುತ್ತವೆ. ಪರಿಣಾಮವನ್ನೂ […]

ಅಂಟಿಕೊಳ್ಳದೆ ಕರ್ಮ ಮಾಡು

ಅಂಟಿಕೊಳ್ಳದೆ ಕರ್ಮ ಮಾಡು ‘ಕರ್ಮದ ಮೇಲೆ ಮಾತ್ರವೇ ನಿನಗೆ ಹಿಡಿತ, ಫಲದ ಮೇಲಲ್ಲ, ಫಲವನ್ನೇ ಬಯಸುತ್ತ ಕರ್ಮ ಮಾಡಬೇಡ, ಹಾಗೆಂದು, ಕರ್ಮವನ್ನೇ ಮಾಡದೇ ಇರಬೇಡ’ ಎಂದು ‘ಕರ್ಮಣ್ಯೇವಾಧಿಕಾರಸ್ತೇ’ – ಶ್ಲೋಕದ ಮೂಲಕ ಗೀತಾಚಾರ್ಯನು ವಿವರಿಸಿದ್ದ. ಹಾಗಾದರೆ ಕರ್ಮವನ್ನು ಇನ್ನಾವ ಭಾವದಿಂದ ಮಾಡಬೇಕು? […]