Need help? Call +91 9535015489

📖 Paperback books shipping available only in India.

✈ Flat rate shipping

ಪರಮಾತ್ಮನಾದ ನನ್ನನ್ನರಿತು ಶಾಂತನಾಗು

ಪರಮಾತ್ಮನಾದ ನನ್ನನ್ನರಿತು ಶಾಂತನಾಗು ಡಾ. ಆರತೀ ವಿ. ಬಿ. ‘ಮುಕ್ತಿ’ ಎನ್ನುವುದು ಭಾವಾತಿರೇಕದ ಯತ್ನಕ್ಕೆ ಸಿದ್ಧಿಸುವ ‘ಫಲ’ವಲ್ಲ. ಜೀವಿಯ ಸರ್ವತೋಮುಖ ವಿಕಾಸ ಶುದ್ಧಿ ಪಕ್ವತೆ ಸೇರಿ ಅವನನ್ನು ಸರ್ವತಂತ್ರ ಸ್ವತಂತ್ರಸ್ಥಿತಿಗೆ ಏರಿಸುತ್ತವೆ. ಅದು ಮುಕ್ತಿ. ಕೃಷ್ಣನು ಹಿಂದಿನ ಶ್ಲೋಕದಲ್ಲಿ ಇದನ್ನೇ ಸೂಚಿಸಿದ್ದ. […]

ಆಂತರಿಕ ಸಂನ್ಯಾಸವೇ ನಿಜವಾದ ಸಂನ್ಯಾಸ

ಆಂತರಿಕ ಸಂನ್ಯಾಸವೇ ನಿಜವಾದ ಸಂನ್ಯಾಸ ಕರ್ಮಸಂನ್ಯಾಸಯೋಗವೆಂಬ ಅಧ್ಯಾಯದಲ್ಲಿ ಶ್ರೀಕೃಷ್ಣನು ಮನೋನಿಗ್ರಹದ ಮೂಲಕ ಮಾಡುವ ಆಂತರಿಕ ತ್ಯಾಗದ ಬಗ್ಗೆ ಹೇಳಿದ. ತನ್ಮೂಲಕ ಪಂಚಪ್ರಾಣಗಳನ್ನು ಸ್ಥಿರಗೊಳಿಸಿ, ನಾಸಾಗ್ರದಲ್ಲಿ ದೃಷ್ಟಿಯನ್ನು ಕೀಲಿಸಿ, ನಿಶ್ಚಲಧ್ಯಾನದಲ್ಲಿ ಮುಳುಗಿ, ಆತ್ಮಸಂಸ್ಥಿತಿಯ ಯೋಗವನ್ನು ಹೊಂದಿ ಮುಕ್ತನಾಗುವ ಪರಿಯನ್ನೂ ವಿವರಿಸಿದ. ಇಂತಹ ಸ್ಥಿತಿಗೇರಿದ […]

ಬಾಹ್ಯಸಂಕೇತಗಳು ಯೋಗಕ್ಕೆ ಕೇವಲ ಪ್ರೇರಕ

ಬಾಹ್ಯಸಂಕೇತಗಳು ಯೋಗಕ್ಕೆ ಕೇವಲ ಪ್ರೇರಕ ಡಾ. ಆರತೀ ವಿ. ಬಿ. ‘‘ಆಂತರಿಕ ಸಂನ್ಯಾಸ ಅಥವಾ ಕರ್ಮಫಲತ್ಯಾಗ ಮಾಡಿ ಕರ್ಮವೆಸಗುವುದು ‘ಯೋಗ’. ಕರ್ಮಸಂಕಲ್ಪಗಳನ್ನು ತ್ಯಾಗ ಮಾಡದೆ ಇರುವವನು ಯೋಗಿ ಆಗಲಾರ’’ (ಭ.ಗೀ.: 6.2) ಎನ್ನುತ್ತಾನೆ ಕೃಷ್ಣ. ಯೋಗವು ಕೇವಲ ಬಾಹ್ಯದ ತ್ಯಾಗ-ಯೋಗಗಳ ಲಾಂಛನಗಳಿಂದ […]

ನಿನ್ನ ಉದ್ಧಾರ ನಿನ್ನ ಕೈಯಲ್ಲಿ

ನಿನ್ನ ಉದ್ಧಾರ ನಿನ್ನ ಕೈಯಲ್ಲಿ ಡಾ. ಆರತೀ ವಿ. ಬಿ. ‘‘ಹೇ ಪಾಂಡವ! (ಕರ್ಮ)ಸಂನ್ಯಾಸವೇ ‘ಯೋಗ’. ಕರ್ಮಕ್ಕೆ ಕಾರಣವಾಗುವ ಸಂಕಲ್ಪಗಳನ್ನು ತ್ಯಾಗ ಮಾಡದೇ ಇರುವವನು ‘ಯೋಗಿ’ಯಾಗಲಾರ. ಆರುರುಕ್ಷನಾದ ಮುನಿಗೆ (ನಿಷ್ಕಾಮ)ಕರ್ಮವೇ ‘ಯೋಗ’ಕ್ಕೆ ಹೇತು. ಯೋಗಾರೂಢನಿಗೆ ಸಂಕಲ್ಪಗಳ ತ್ಯಾಗವೇ ‘ಶಮ’ಸ್ಥಿತಿಯನ್ನು ತರುತ್ತದೆ’’ (ಭ.ಗೀ.: […]

ನಮಗೆ ನಾವೇ ಬಂಧು, ನಮಗೆ ನಾವೇ ಶತ್ರು

ನಮಗೆ ನಾವೇ ಬಂಧು, ನಮಗೆ ನಾವೇ ಶತ್ರು ಆರತೀ ವಿ.ಬಿ. ‘ಕೀಳರಿಮೆ ಇಟ್ಟುಕೊಳ್ಳದೆ, ಕುಂದದ ಉತ್ಸಾಹದೊಂದಿಗೆ ಸತತವೂ ಪ್ರಯತ್ನಶೀಲನಾಗಿರುತ್ತ, ತನ್ನನ್ನು ತಾನೇ ಉದ್ಧಾರ ಮಾಡಿಕೊಳ್ಳಬೇಕು’ (‘ಉದ್ಧರೇದಾತ್ಮನಾತ್ಮಾನಂ…’) ಎನ್ನುವ ಕೃಷ್ಣನ ಮಾತನ್ನು ಪರಾಂಬರಿಸುತ್ತಿದ್ದೆವು. ‘ಹಾಗಾದರೆ ದೇವರು ನಮಗಾಗಿ ಏನನ್ನೂ ಮಾಡುವುದಿಲ್ಲವೇ?’ ಎಂಬ ಗೊಂದಲ […]

ಸಂಯಮಿಯು ತನಗೆ ತಾನೇ ಬಂಧು

ಸಂಯಮಿಯು ತನಗೆ ತಾನೇ ಬಂಧು ಆರತೀ ವಿ.ಬಿ. ‘ಯಾವನು ತನ್ನನ್ನು ತಾನೇ ಗೆದ್ದಿದ್ದಾನೋ ಅವನು ತನಗೆ ತಾನೆ ಬಂಧುವು. ಯಾವನು ತನ್ನನ್ನು ತಾನು ಗೆದ್ದಿಲ್ಲವೋ ಅಂತಹವನು ತನಗೆ ತಾನೇ ಶತ್ರುವು.’ (ಭ.ಗೀ.: 6.5) ‘ತನ್ನನ್ನು ತಾನು ಗೆಲ್ಲುವುದು’ ಎಂದರೆ, ‘ನಮ್ಮ ದೇಹ, […]

ಜ್ಞಾನವೂ ವಿಜ್ಞಾನವೂ ಇರುವವನು ಯೋಗಿ

ಜ್ಞಾನವೂ ವಿಜ್ಞಾನವೂ ಇರುವವನು ಯೋಗಿ ಡಾ. ಆರತೀ ವಿ. ಬಿ. ‘ಶೀತೋಷ್ಣ ಸುಖದುಃಖಗಳಲ್ಲಿಯೂ ಮಾನಾಪಮಾನಾದಿಗಳ (ಅನುಭವದಲ್ಲಿ) ಜಿತಾತ್ಮನೂ ಪ್ರಶಾಂತಾತ್ಮನೂ ಆಗಿರುವವನಲ್ಲಿ ಪರಮಾತ್ಮನು ಸಮಾಹಿತನಾಗಿರುತ್ತಾನೆ.’ (ಭ.ಗೀ.: 6.7) ಶೀತೋಷ್ಣಾದಿಗಳು ದೇಹಕ್ಕಾಗುವ ಅನುಭವಗಳು. ಮಾನಾಪಮಾನಗಳು ಮನಸ್ಸಿನಲ್ಲಿ ಸುಖದುಃಖಗಳನ್ನು ಪ್ರಚೋದಿಸುವಂತಹವುಗಳು. ಈ ದೇಹ-ಮನಸ್ಸುಗಳ ಅನುಭವಗಳನ್ನೇ ಸರ್ವಸ್ವವೆಂದು […]

ಸರ್ವರಲ್ಲೂ ಸಮಭಾವದಿಂದ ಗೆಲುವು

ಸರ್ವರಲ್ಲೂ ಸಮಭಾವದಿಂದ ಗೆಲುವು ಡಾ. ಆರತೀ ವಿ. ಬಿ. ‘ಯೋಗಿಯು, ತನ್ನ ವಿಷಯದಲ್ಲಿ ಸುಹೃನ್ ಮಿತ್ರರಾಗಿರುವವರಲ್ಲೂ, ಉದಾಸೀನ ತೋರುವವರಲ್ಲೂ, ಮಧ್ಯಸ್ಥರಾಗಿರುವವರಲ್ಲೂ, ತನ್ನನ್ನು ದ್ವೇಷಿಸುವವರಲ್ಲೂ, ಬಂಧುಗಳಲ್ಲೂ, ಸಜ್ಜನರಲ್ಲೂ, ಪಾಪಿಗಳಲ್ಲೂ ಸಮ0ಭಾವದಿಂದಿರುತ್ತಾನೆ ಎನ್ನುವುದೇ ವಿಶೇಷ.’ (ಭ.ಗೀ.: 6.9) ‘ದುಷ್ಟರನ್ನೂ ಭ್ರಷ್ಟರನ್ನೂ ಆತಂಕವಾದಿಗಳನ್ನೂ ಶತ್ರುಗಳನ್ನೂ ಸಹಿಸಬೇಕು, […]

ಭೇದವೆಣಿಸದ ಸಮದರ್ಶಿ

ಭೇದವೆಣಿಸದ ಸಮದರ್ಶಿ ‘ಜ್ಞಾನ-ನಿರ್ಧತ-ಕಲ್ಮಶರು’ (ಜ್ಞಾನದಿಂದ ಶುದ್ಧರಾದವರು) ಮೋಹಬಂಧಗಳಿಂದ ಮೇಲೆದ್ದು ತತ್ವದೆತ್ತರಕ್ಕೆ ಏರುತ್ತಾರೆ ಎನ್ನುವುದನ್ನು ಕೃಷ್ಣನು ವಿವರಿಸುತ್ತಿದ್ದನಷ್ಟೆ? ಅಂತಹ ಜ್ಞಾನಿಗಳು ಲೋಕವನ್ನು ಹೇಗೆ ಕಾಣುತ್ತಾರೆ ಎನ್ನುವುದನ್ನು ವಿವರಿಸುತ್ತಾನೆ; ಪಂಡಿತನಾದವನು ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣನಲ್ಲಿಯೂ, ಸಿಂಹದಲ್ಲೂ, ಆನೆಯಲ್ಲೂ, ನಾಯಿಯಲ್ಲೂ, ನಾಯಿಮಾಂಸವನ್ನು ಸೇವಿಸುವಂತಹವನಲ್ಲೂ ಸಮದರ್ಶಿಯಾಗಿರುತ್ತಾನೆ. (ಭ.ಗೀ.: 5.17) […]