Your Cart

Need help? Call +91 9535015489

📖 Print books shipping available only in India. ✈ Flat rate shipping

ಗಂಧ ಬಾಬಾ

ಗಂಧ ಬಾಬಾ ಓಡೋಡಿ ಬಂದು ಹೊರಡುತ್ತಿರುವ ರೈಲು ಹತ್ತಿದೆ. ಸುತ್ತ ನೋಡಿದೆ. ಎಲ್ಲ ಸೀಟುಗಳು ಭರ್ತಿ. ಕೆಲವರು ಬಾಗಿಲ ಬಳಿ ನಿಂತು ತಂಬಾಕು ಚಟ ತೀರಿಸಿಕೊಳ್ಳುತ್ತಿದ್ದರೆ ಅಲ್ಲಿ ನಿಂತು ಏನು ಮಾಡುವುದು ಎಂದೆನಿಸಿ ಮುಂದೆ ನಡೆದೆ. ಅಲ್ಲಿ ಒಂದು ಬಾಕಿನ ಮೇಲೆ ನಾಲ್ಕು ಜನ ಕೂಡ್ರುವಲ್ಲಿ ಐದು ಜನ ಕುಳಿತಿದ್ದರು. ಅವರೆಲ್ಲ ಸಣಕಲಾದ್ದರಿಂದ ಅಲ್ಲಿ ಇನ್ನೂ ಸ್ಥಳ ಉಳಿದಿದೆ ಎಂದೆನಿಸಿ ಸ್ವಲ್ಪ ಸರೀರಿ ಎಂದೆ. ಹಳ್ಳಿಯವನೊಬ್ಬ “ಬರ್ರಿ ಬರ್ರಿ ಅದರಾಗ ಕುಂಡ್ರುಣು, ಮುಂದಿನ ಟೆಶನ್ ದಾಗ ಇಳಿತೀನಿ” […]

ರದ್ದಿಯಲ್ಲಿ ಸಿಕ್ಕ ಪತ್ರಗಳು

ರದ್ದಿಯಲ್ಲಿ ಸಿಕ್ಕ ಪತ್ರಗಳು ಪತ್ರ-1 ನಾಟಕ ನುಚ್ಚೇಶ್ವರ, ನೀಲಪ್ಪ ದ್ವಿತೀಯ ದರ್ಜೆ ಗುಮಾಸ್ತ. ಪಾಳು ಕಟ್ಟಡ ಮತ್ತು ಗು0ಡಿ ರಸ್ತೆ ವಿಭಾಗ ಕಚೇರಿ, ಗುಡಿಕೋಟೆ -ಇವರಿ0ದ ದಿ. 11-11-2001 ಮಾನ್ಯ ಮುಖ್ಯ (ಅತೀ ಮುಖ್ಯ) ಅಭಿಯ0ತ್ರರು ಪಾಳು ಕಟ್ಟಡ ಮತ್ತು ಹಾಳು ಗು0ಡಿ ರಸ್ತೆ ವಲಯ ಕಚೇರಿ, ಬೆ0ಗಳೂರು ಇವರಿಗೆ, ಮಾನ್ಯರೆ, ವಿಷಯ : ನಾಟಕ ಮಾಡಲು ಪರವಾನಿಗೆ ನೀಡುವ ಬಗ್ಗೆ ಮನವಿ: ಈ ಮೂಲಕ ತಮ್ಮಲ್ಲಿ ವಿನ0ತಿಸುವುದೇನೆ0ದರೆ, ಸ್ವಾಮಿ ನಾವು ತಲತಲಾ0ತರದಿ0ದ ನಾಟಕ -ಗೀಟಕ ಅ0ತ […]

ಪಾತರಗಿತ್ತಿ

ಪಾತರಗಿತ್ತಿ ಬಂತು ಪಾತರಗಿತ್ತಿ ಹೂಬನವ ಸುತ್ತಿ ಗಿರಿ ಶಿಖರಗಳ ನೆತ್ತಿ ಹತ್ತಿ ಕೊಳ್ಳ ಕಣಿವೆಗಳ ಸುತ್ತಿ ಮನಸೋ ಇಚ್ಛಿ ಬಂದೈತಿ ಇತ್ತ ಮುಂದಿನ ಪಯಣವೆತ್ತ ? ರೇಶಿಮೆಯ ನುಣುಪಿನ ನವಿರಾದ ರೆಕ್ಕಿ ಬಣ್ಣ ಬಣ್ಣಗಳ ಹಚ್ಚಿ ಚುಚ್ಚಿ ವಿವಿಧ ವರ್ಣ ಸಂಯೋಜನಗೆಳ ಭಿತ್ತಿ ಚಿತ್ತ ಚಿತ್ತಾರದ ರಂಗುಗಳ ರೆಕ್ಕಿ ಹೂವಿಂದ ಹೂವಿಗೆ ಹಾರುವ ಗಟ್ಟಿಗಿತ್ತಿ ಚಂದುಳ್ಳಿ ಮನದ ಪಾತರಗಿತ್ತಿ ಇಷ್ಟು ದಿನ ನೀನು ಎಲ್ಲಿದ್ದಿ ಸುಂದರಿ ? ಇದ್ದಕಿದ್ದಂತೆ ಧರೆಯಲುದಿಸಿದ ಪರಿ ! ಹಾರುವೆಡೆಯಲ್ಲೆಲ್ಲ ಜಗದ ತುಂಬೆಲ್ಲ […]

ಸುಂದರ ನಟಿ ಸಾಧನಾ ಇನ್ನು ಬರಿ ನೆನಪು

ಸುಂದರ ನಟಿ ಸಾಧನಾ ಇನ್ನು ಬರಿ ನೆನಪು ಕಳೆದ ಶತಮಾನದ ಆರನೆ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಮೋಡಿ ಮಾಡಿದ ಹಿಂದಿ ಚಲನಚಿತ್ರರಂಗದ ಸುಂದರಿ ಸಾಧನಾ ಇನ್ನು ಬರಿ ನೆನಪು ಮಾತ್ರ. ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದಾಗಿ ನಿಧನಳಾಗಿದ್ದಾಳೆ. ತನ್ನ ೭೪ ವರ್ಷದ ಸುಧೀರ್ಘ ಪಯಣದಲ್ಲಿ ಕಾಯಿಲೆಯ ತೀವ್ರತೆಯಿಂದಾಗಿ ತನ್ನ ಫ್ಲಾಟ್ ನಲ್ಲಿ ಏಕಾಂಗಿಯಾಗಿ ಜೀವಿತಾವಧಿ ಕಳೆದು ಬದುಕಿಗೆ ವಿದಾಯ ಹೇಳಿದ್ದಾಳೆ. ತನ್ನ ರೊಮ್ಯಾಂಟಿಕ್ ಪಾತ್ರಗಳಿಂದ ಅಭಿಮಾನಿಗಳನ್ನು ರಂಜಿಸಿದ್ದ ಆಕೆ ಹಿಂದಿ ಚಿತ್ರರಂಗದ ದುರಂತ ನಾಯಕಿಯ ಪಾತ್ರದಂತೆ […]

ಸಂಗೀತ ವಿಶಾರದ ಆರ್. ಟಿ. ಹೆಗಡೆ

ಸಂಗೀತ ವಿಶಾರದ ಆರ್. ಟಿ. ಹೆಗಡೆ ಆಧ್ಯಾತ್ಮಿಕ ಶಕ್ತಿಯ ತಪೋಭೂಮಿ ಶೀಗೇಹಳ್ಳಿಯಲ್ಲಿ ಜನಿಸಿ ಸಂಗೀತ ಸಾಧಕರಾಗಿ ಬೆಳೆದವರು ಆರ್.ಟಿ.ಹೆಗಡೆ. ತಾನು ಬೆಳೆಯುತ್ತ ತನ್ನ ಸುತ್ತ ಸಂಗೀತದ ಹೊಸ ತಲೆಮಾರು ಬೆಳೆಸಿದವರು. ಇತ್ತಿಚಿಗೆ ಇಹಲೋಕ ತ್ಯಜಿಸಿದ ಶ್ರೀಯುತರ ಸಾಧನೆಯ ಅವಲೋಕನ ಇಲ್ಲಿದೆ ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆ ಬಸವಳಿದ ಕಾಲವದು, ೬೦ರ ದಶಕದಲ್ಲಿಯೂ ನಮ್ಮ ಹಳ್ಳಿಗಳಿಗೆ ರಸ್ತೆ, ಸೇತುವೆ, ವಾಹನ, ವಿದ್ಯುತ್ ಸೌಕರ್ಯವಿರಲಿಲ್ಲ. ಶಾಲೆಗಳು ಆಗಷ್ಟೇ ಆರಂಭವಾಗಿದ್ದವು. ಎತ್ತಿನಗಾಡಿ ಅವಲಂಬಿತ ಜನಜೀವನ. ಕಾಲದ ಕಷ್ಟ ಏನೇ ಇರಲಿ, ಬದುಕಿಗೆ ಖುಷಿ […]

ರುದ್ರಾಕ್ಷ ಶಿವನ ಕಣ್ಣ ಹನಿ

ರುದ್ರಾಕ್ಷ ಶಿವನ ಕಣ್ಣ ಹನಿ ವೀರಭದ್ರಪ್ಪ ಧೋತರದ ಚುಂಗು ಎತ್ತಿ ಹಿಡಿದು ಭರಭರ ಹೊರಟನೆಂದರೆ ಮೈಲು ದೂರ ಇರುವ ಮುರುಘಾಮಠ ಮಾರು ದೂರವಾಗುತ್ತದೆ. ಎತ್ತರದ ಬಡಕುದೇಹಿ ವೀರಭದ್ರಪ್ಪನನ್ನು ‘ಉದ್ದಾನ ವೀರಭದ್ರ’ ಎಂದು ಓಣಿ ತುಂಟ ಹುಡುಗುರು ಅವನ ಹಿಂದಿನಿಂದ ಆಡಿಕೊಳ್ಳಲು ಅದೇ ಓಣಿಯ ‘ಗಿಡ್ಡ ವೀರಭದ್ರ’ನೂ ಒಂದು ಕಾರಣ. ಹೆಬ್ಬಳ್ಳಿ ಅಗಸಿಯ ಕರೆ ಹಂಚಿನ ನಾಲ್ಕು ಪಾಲಾದ ಹಿರೇರ ಮನಿಯು ಮೂರು ಫೂಟು ಅಗಲದ ಓಣಿಯಲ್ಲಿತ್ತು. ಒಂದು ಹಾಲ್ಕಮ್ ಡೈನಿಂಗ್ ಆದರೆ ಇನ್ನೊಂದು ಕಿಚಿನ್ ಕಮ್ ಬೆಡರೂಮ್ […]

ಹುಚ್ರಾಯಪ್ಪನ ಹೊಸ ಕಂಪನಿ

 ಹುಚ್ರಾಯಪ್ಪನ ಹೊಸ ಕಂಪನಿ ನಿನ್ನೆ ರಾತ್ರಿ ಟಿವಿ ವಾಹಿನಿಯಲ್ಲಿ ಕಾಳೀ ಸ್ವಾಮಿಯ ಡ್ಯಾನ್ಸ್ ಪ್ರೋಗ್ರಾಂ ನೋಡಿ ನೋಡಿ ಸಾಕಾಗಿ ನಾನು ಟಿವಿಯನ್ನು ಕುಟ್ಟಿ ಮಲಗಿದ್ದೆ. ರಾತ್ರಿಯ ‘ಟಿವಿ ಪಾರ್ಟಿಯ’ ಹ್ಯಾಂಗ್ಓವರಿನಿಂದಾಗಿ ಬೇಗನೇ ಏಳಲಾಗದೇ ಬೆಳಗಿನ ವಾಕಿಂಗ್ಗೆ ಹೋಗುವ ಮನಸ್ಸಿರಲಿಲ್ಲ. ಪೇಪರ್ನಲ್ಲಿ ನಿನ್ನೆಯ ‘ಬೆನ್ನು ವರ್ಸ್ಸ್ ಚೂರಿ’ಯ ಪ್ರೇಮ ಕಲಹದ ವಿಶೇಷ ವರದಿಯನ್ನು ಓದುತ್ತಾ ಕೂತಿದ್ದೆ. ಆಗ ನಮ್ಮನೇಗೆ ನನ್ನ ಶಿಷ್ಯ ‘ಹುಚ್ರಾಯಪ್ಪ ಅಡ್ಡಮನೆ’ ಬಂದ! ಜೋಲು ಮುಖ. ಮುಖದಲ್ಲಿ ಕಳೆಯೇ ಇಲ್ಲ. ಎಂಟುದಿನ ಗಡ್ಡ ಮೀಸೆ, ಮಾಸಿದ […]

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ ಆಹಾರ ಭದ್ರತೆಯ ಮಸೂದೆಯು ಬೇರೆ ವಿಷಯದ ವಿವಾದದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಚುನಾವಣಾ ಹಗ್ಗ ಜಗ್ಗಾಟದಲ್ಲಿ ಅತಂತ್ರವಾಗಿ ಆಹಾರಕ್ಕಾಗಿ ಬಾಯ್ತೆರೆದು ಕೂತ ಬಡವರೊಟ್ಟಿಗೆ ಬಾಯಿ ಬಾಯಿ ಬಿಡುತ್ತಿರುವುದಾಗಿ ಎಲ್ಲ ಪೇಪರು ಟಿವಿ ನ್ಯೂಜ್ ಚಾನಲ್ಗಳಲ್ಲಿ ರೋಚಕವಾಗಿ ಚರ್ಚೆಯಾಗುತ್ತಿದ್ದ ಸುದ್ದಿಯನ್ನು ಬೆಳಗಿನ ಪೇಪರಿನಲ್ಲಿ ಓದುತ್ತಾ ಬಡವರ ಅಭದ್ರತೆಯನ್ನು ನೆನೆಯುತ್ತಾ ಕೂತಿದ್ದಾಗ ನನ್ನವಳು ಕಾಫೀ ಲೋಟವನ್ನು ಸಿಟ್ಟಿನಿಂದ ತಂದು ನನ್ನೆದುರು ಕುಕ್ಕಿದಳು. ಹಾಲು ಸಕ್ಕರೆ ಕಾಫೀ ಇದ್ದೂ ಇಲ್ಲದಂತಿರುವ ಕಲಗಚ್ಚಿನಂತಹ ಕಾಫಿಯನ್ನು ಒಮ್ಮೆ ಅವಳನ್ನೊಮ್ಮೆ […]

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ

ಹುಚ್ಚರಾಯಪ್ಪನ ಹೊಸ ಪ್ರಣಾಳಿಕೆ ಆಹಾರ ಭದ್ರತೆಯ ಮಸೂದೆಯು ಬೇರೆ ವಿಷಯದ ವಿವಾದದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಚುನಾವಣಾ ಹಗ್ಗ ಜಗ್ಗಾಟದಲ್ಲಿ ಅತಂತ್ರವಾಗಿ ಆಹಾರಕ್ಕಾಗಿ ಬಾಯ್ತೆರೆದು ಕೂತ ಬಡವರೊಟ್ಟಿಗೆ ಬಾಯಿ ಬಾಯಿ ಬಿಡುತ್ತಿರುವುದಾಗಿ ಎಲ್ಲ ಪೇಪರು ಟಿವಿ ನ್ಯೂಜ್ ಚಾನಲ್ಗಳಲ್ಲಿ ರೋಚಕವಾಗಿ ಚರ್ಚೆಯಾಗುತ್ತಿದ್ದ ಸುದ್ದಿಯನ್ನು ಬೆಳಗಿನ ಪೇಪರಿನಲ್ಲಿ ಓದುತ್ತಾ ಬಡವರ ಅಭದ್ರತೆಯನ್ನು ನೆನೆಯುತ್ತಾ ಕೂತಿದ್ದಾಗ ನನ್ನವಳು ಕಾಫೀ ಲೋಟವನ್ನು ಸಿಟ್ಟಿನಿಂದ ತಂದು ನನ್ನೆದುರು ಕುಕ್ಕಿದಳು. ಹಾಲು ಸಕ್ಕರೆ ಕಾಫೀ ಇದ್ದೂ ಇಲ್ಲದಂತಿರುವ ಕಲಗಚ್ಚಿನಂತಹ ಕಾಫಿಯನ್ನು ಒಮ್ಮೆ ಅವಳನ್ನೊಮ್ಮೆ […]