ನಮ್ಮ ಧಾರ್ಮಿಕ ಧಾರವಾಡ ಪೂರ್ವಕ್ಕ ವಿದ್ಯಾಗಿರಿ ಮೈಲಾರಲಿಂಗ, ಪಶ್ಚಿಮಕ್ಕೆ ಕೆಲಗೇರಿ ಶಿರಡಿ ಬಾಬಾ, ಉತ್ತರಕ್ಕ ಮುರುಘಾಮಠ, ದಕ್ಷಿಣಕ್ಕ ಶಾಲ್ಮಲಾ ತಟ ಸೋಮೇಶ್ವರನಿಂದ ಆವೃತವಾಗಿ ನಮ್ಮ ಧಾರವಾಡವನ್ನ ಧಾರ್ಮಿಕ ಧಾರವಾಡ ಅನ್ನುವಂಗ ಮಾಡ್ಯಾವರಿ. ಧಾರವಾಡ ಅಂದ ಕೂಡಲೇ ಪಟ್ಟನೇ ಎಲ್ಲಾರೂ ‘ ಏನ್ರೀ ಧಾರವಾಡ ಪೇಡಾ ಬಾಳ ರುಚಿ ರ್ರೀ,,, ಧಾರವಾಡದಾಗ ಜಿಟಿ ಜಿಟಿ ಮಳಿ ಸಾಕಾಗ್ಯದ’ ಅಂತಾರ. ಅಜಮಾಸ ಒಂದ ಹತ್ತ ಸಾವಿರ ಸ್ಕ್ವೇರ್ ಕಿಲೋಮೀಟರ್ಗೆ ಹಬ್ಬಿ, 2 ಲಕ್ಷ ಮಂದಿ ಜನಸಂಖ್ಯಾ, ಏಳು ಗುಡ್ಡದಾಗ […]
Author: Ashok
ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’
ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’ ಸರಿ ಸುಮಾರು 1965 ರಲ್ಲಿ ಪ್ರಕಟಗೊಂಡ ಎಸ್.ಎಲ್.ಭೈರಪ್ಪನವರ ‘ವಂಶವೃಕ್ಷ’ ಮತ್ತು ಯೂ.ಆರ್.ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಗಳು ಪ್ರಕಟಗೊಂಡು ಐವತ್ತು ವರ್ಷಗಳು ಕಳೆದಿದ್ದು ಅವು ಈಗ ಸುವರ್ಣ ಸಂಭ್ರಮದಲ್ಲಿವೆ. ಅನಂತಮೂರ್ತಿಯವರು ನಮ್ಮನ್ನಗಲಿ ಹೋಗಿದ್ದರೆ ಭೈರಪ್ಪ ಇನ್ನೂ ನಮ್ಮ ನಡುವೆ ಇದ್ದು ಬರವಣಿಗೆಯಲ್ಲಿ ತಮ್ಮನ್ನು ಕ್ರಿಯಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಇಷ್ಟು ಕಾಲ ಸಂದರೂ ಈ ಕಾದಂಬರಿಗಳು ಇನ್ನೂ ಜನಪ್ರಿಯತೆಯನ್ನು ಗಳಿಸಿವೆ. ಅನೇಕ ಬಾರಿ ಪುನರ್ಮುದ್ರಣ ಕಂಡಿವೆ ಅಲ್ಲದೆ ಬೇರೆ ಬೇರೆ ರಾಷ್ಟ್ರೀಯ ಭಾಷೆಗಳಲ್ಲಿ […]
ನೆರೆ ಬರದಿರಲಿ ದೇವರೇ
ನೆರೆ ಬರದಿರಲಿ ದೇವರೇ ನೆರೆ ಬಂತು ಕೊಟ್ಟಿತು ಬರೆ ಕೇಳುವವರಿಲ್ಲ ಸಂತ್ರಸ್ತರ ಕರೆ ಹಣವೂ ಇಲ್ಲ , ಮನೆಯೂ ಇಲ್ಲ ಭರವಸೆಗಳೇ ಬರೆ ಬರೆ ಹಣ ಬರಲಿ ಬಿಡಲಿ ಈ ವರ್ಷ ಮಾತ್ರ ನೆರೆ ಬರದಿಅರಲಿ ದೇವರೆ …. ವಿಜಯ ಇನಾಮದಾರ , ಧಾರವಾಡ
ನಮ್ಮ ಧಾರ್ಮಿಕ ಧಾರವಾಡ
ನಮ್ಮ ಧಾರ್ಮಿಕ ಧಾರವಾಡ ಪೂರ್ವಕ್ಕ ವಿದ್ಯಾಗಿರಿ ಮೈಲಾರಲಿಂಗ, ಪಶ್ಚಿಮಕ್ಕೆ ಕೆಲಗೇರಿ ಶಿರಡಿ ಬಾಬಾ, ಉತ್ತರಕ್ಕ ಮುರುಘಾಮಠ, ದಕ್ಷಿಣಕ್ಕ ಶಾಲ್ಮಲಾ ತಟ ಸೋಮೇಶ್ವರನಿಂದ ಆವೃತವಾಗಿ ನಮ್ಮ ಧಾರವಾಡವನ್ನ ಧಾರ್ಮಿಕ ಧಾರವಾಡ ಅನ್ನುವಂಗ ಮಾಡ್ಯಾವರಿ. ಧಾರವಾಡ ಅಂದ ಕೂಡಲೇ ಪಟ್ಟನೇ ಎಲ್ಲಾರೂ ‘ ಏನ್ರೀ ಧಾರವಾಡ ಪೇಡಾ ಬಾಳ ರುಚಿ ರ್ರೀ,,, ಧಾರವಾಡದಾಗ ಜಿಟಿ ಜಿಟಿ ಮಳಿ ಸಾಕಾಗ್ಯದ’ ಅಂತಾರ. ಅಜಮಾಸ ಒಂದ ಹತ್ತ ಸಾವಿರ ಸ್ಕ್ವೇರ್ ಕಿಲೋಮೀಟರ್ಗೆ ಹಬ್ಬಿ, 2 ಲಕ್ಷ ಮಂದಿ ಜನಸಂಖ್ಯಾ, ಏಳು ಗುಡ್ಡದಾಗ ನಡುವ […]
ಭಯ್ಯಾ… ಪ್ಲೇಟ್ ಪಾನಿಪುರಿ
ಭಯ್ಯಾ… ಪ್ಲೇಟ್ ಪಾನಿಪುರಿ ಹೌದ್ರೀ, ಧಾರವಾಡದಾಗ ಮೂರು ಸಂಜೆ ಆತು ಅಂದ್ರ ಮಂದಿ ಭಯ್ಯಾ… ಪ್ಲೇಟ್ ಪಾನಿಪುರಿ. ಭಯ್ಯಾ… ಒಂದು ಭೇಲ್ ಪುರಿ ಅಂತ ಪಾನಿಪುರಿ ಗಾಡಿ ಮುಂದ ಮುಕರಿರತಾರ ನೋಡ್ರಿ. ಹೌದ್ರೀ, ಆ ರಾಜಸ್ತಾನ ಮಂದಿ ಏನ ಜಾದೂ ಮಾಡ್ಯಾರೊ ಏನ ತಾನೋ. ಎಲ್ಲಾ ಸಣ್ಣ ಹುಡುಗರು ಕಾಲೇಜಗೆ ಹೋಗೂ ಹುಡುಗ ಹುಡುಗೀರೂ ಭೇಲ್ ತಿನ್ನೋಣ ಏನ್, ಮೊದಲ ಒಂದ ಪ್ಲೇಟ್ ಪಾನಿಪುರಿ ಹೇಳ ಅಂತಾರ್ರಿ. […]
ಇನ್ನಿಲ್ಲವಾದ ಕಾಸರಗೋಡಿನ ಕನ್ನಡ ಧ್ವನಿ ಕಯ್ಯಾರ ಕಿಂಞಣ್ಣ ರೈ
ಇನ್ನಿಲ್ಲವಾದ ಕಾಸರಗೋಡಿನ ಕನ್ನಡ ಧ್ವನಿ ಕಯ್ಯಾರ ಕಿಂಞಣ್ಣ ರೈ ನಿನ್ನೆ ಸಾಯಂಕಾಲ 6-30 ಗಂಟೆಗೆ ಎಂದಿನಂತೆ ಪೇಟೆಯ ಕಡೆಗೆ ದಿನ ಬಳಕೆಯ ಕೆಲ ಸಾಮಾನು ಸರಂಜಾಮು ತರಲು ಪೇಟಯ ಕಡೆಗೆ ಹೊರಟಿದ್ದೆ. ಜೂನ್ ತಿಂಗಳಿನ ನಂತರ ಇಲ್ಲಿ ಅಂತಹ ಮಳೆ ಸುರಿದಿಲ್ಲ. ಪುಷ್ಯ ಮಳೆ ಸದ್ದಿಲ್ಲದೆ ಹೊರಟು ಹೋಗಿದೆ ಆಶ್ಲೇಷಾ ಮಳೆಯಾದರೂ ಕೈಹಿಡಿಯಬಹುದೆ ಎಂದು ರೈತ ಮುಗಿಲೆಡೆಗೆ ಮುಖಮಾಡಿ ಕುಳಿತಿದ್ದಾನೆ. ಇದು ಸಹ ಕಣ್ಣು ಮುಚ್ಚಾಲೆಯ ಆಟ ನಡೆಸಿದೆ ಎಲ್ಲರಲಿ ಆಶಾಭಾವ ಮೂಡಿಸಿ ಒಂದು ರೀತಿಯ ಜೂಟಾಟ […]
ಮೇರು ಸಾಧನೆ (ಡಾ. ಅಬ್ದುಲ್ ಕಲಾಂ ಕನಸಿನ ಭಾರತ)
ಮೇರು ಸಾಧನೆ (ಡಾ. ಅಬ್ದುಲ್ ಕಲಾಂ ಕನಸಿನ ಭಾರತ) ಕಂಡೆ ನೀ ಬಲಿಷ್ಠ ಭಾರತದ ಕನಸೊಂದ ಬಗೆದೆ ಅದರ ಅಂತರಾಳದ ಸಾರ ಸತ್ವವ ಮಸಗಿ ಜ್ವಾಲೆಯಾಗಿಸಿದೆ ಮುಸುಕಿದ್ದ ಅಗ್ನಿಯ ಹಾರಿಸಿದೆ ದಿಗಂತದಲಿ ಅದಕೆರಡು ರೆಕ್ಕೆ ಕಟ್ಟಿ ನೆಚ್ಚಿದೆ ನೀ ನಿನ್ನನೆ, ಕೋರಿದೆ ಹಿರಿಯರೆಲ್ಲರ ಕಟಾಕ್ಷ […]
ನಿರೂಪ
ನಿರೂಪ ಮೂಲ : ಆರುಂಧತಿ ರಾಯ್ (ದಿ ಬ್ರೀಫಿಂಗ್) ಕನ್ನಡಕ್ಕೆ : ರವೀಂದ್ರ ಆರ್. ಕೊಪ್ಪರ್, ಗದಗ್ ನನ್ನ ಶುಭಾಶಯಗಳು. ಇಂದು ನಾನು ನಿನ್ಮೊಡನೆ ಇಲ್ಲಿಲ್ಲ ಎಂಬುದು ಖೇದಕರವಾದರೂ, ಇಲ್ಲದಿರುವುದೂ ಸರಿಯಾದುದೇನೋ. ಇಂತಹ ಸನ್ನಿವೇಶದಲ್ಲಿ ನಮ್ಮ ಅಂತರಂಗವನ್ನೆಲ್ಲ ಬಯಲು ಮಾಡದಿರುವುದೇ ಕ್ಷೇಮಕರ, ಪರಸ್ಪರರಲ್ಲೂ ಅದು ಸಲ್ಲದು. ನೀವು ನಿಮ್ಮೆದುರಿನ ರೇಖೆಯನ್ನು ದಾಟಿ ವರ್ತುಲದಲ್ಲಿ ಅಡಿಯಿರಿಸಿದರೆ ನನ್ನ ಮಾತನ್ನು ಇನ್ನಿಷ್ಟೂ ಸ್ಪಷ್ಟವಾಗಿ ಆಲಿಸಬಲ್ಲಿರಿ. ನಿಮ್ಮ ಬೂಟುಗಳಿಗೆ ಖಡುವು ತಗಲದಂತೆ ನೋಡಿಕೊಳ್ಳಿ. ಇದೊಂದು ಚಿಕ್ಕ ರೂಪಕ ಕಥೆ. ಪರಿಸರವಾದಿ […]
ಚಾಳ
ಚಾಳ ಮನೆಯ ಹಿಂದಿನ ಚಾಳಿನ ಮೊದಲ ಮನೆಯಲ್ಲಿ ಕವಿಯೊಬ್ಬನಿದ್ದ, ನಿರುಪದ್ರವಿ, ತನ್ನೆಡೆಗೆ ಹೋದ ಮಕ್ಕಳಿಗೂ ಕವನ ಹಂಚುತ್ತಿದ್ದ, ಅವುಗಳನ್ನೋದುವಾಗ ಮಾತ್ರ ಭಾವುಕನಾಗುತ್ತಿದ್ದ, ಕಣ್ಣುಗಳಲ್ಲಿ ಕನಸುಗಳ ಲಗೋರಿ, ಪ್ರೇಮಲೋಕದ ಬುಗುರಿಯಾಗಿದ್ದ, ಕವನಗಳಿಗೆ ಮೆಚ್ಚಿ ಒಬ್ಬಳೂ, ಅವನ ಕೈಹಿಡಿಯಲಿಲ್ಲ! ‘ರಗಡ’ಆಗಿತ್ತು ಅವರ ಮನೆಯವರಿಗೆ, ‘ಉಂಡಾಡಿ’ ‘’ಅಡ್ನಾಡಿ’ ಯಾಗಿದ್ದ, ದಿನವೂ ಅಷ್ಟಷ್ಟ ಸತ್ತು, ಈ ಲೋಕವನ್ನೇ ತೊರೆದುಬಿಟ್ಟ! ಅವನನ್ನು ಹುಡುಕಿಕೊಂಡು ಈಗಲೂ ಬರುತ್ತಾರೆ, ಕೆಲವರು ಬೆರಗಿನಿಂದ ಕೇಳುತ್ತಿರುತ್ತಾರೆ,..ಅವನ ಬಗ್ಗೆ! ಚಾಳಿನ ಎರಡನೆಯ ಮನೆಯಲ್ಲಿ ಒಬ್ಬ ತಾಯಿ ಚಿಮಣಿಯ ಬೆಳಕಿನಲ್ಲಿ ಓದಿಸುತ್ತಿದ್ದಳು, ಮಕ್ಕಳಿಗೆ […]