Your Cart

Need help? Call +91 9535015489

📖 Print books shipping available only in India. ✈ Flat rate shipping

ಚಿನ್ನದ ಕಡ್ಡಿ

ಚಿನ್ನದ ಕಡ್ಡಿ ಒಂದಾನೊಂದು ಕಾಲದಲ್ಲಿ ಗಂಡ ಹೆಂಡತಿ ಇದ್ದರು. ಮರ ಕಡಿದು ಮಾರಿ ಹೊಟ್ಟೆ ಹೊರೆಯುತ್ತಿದ್ದರು. ಒಂದು ದಿನ ಗಂಡ ಅಡವಿಗೆ ಹೋಗಿ ಮಾವಿನ ಮರ ಕಡಿಯಲೆಂದು ಕೊಡಲಿಯನ್ನು ಎತ್ತಿದ. ಕೂಡಲೇ ಮರವು ಮಾತಾಡಿತು: ಮಾಮರ: “ಅಣ್ಣಾ ಅಣ್ಣಾ ಮರ ಕಡಿವಣ್ಣ, ದಯಮಾಡಿ ಕಡಿಯಬೇಡ ನನ್ನ, ಅಣ್ಣಾ ಮರ ಕಡಿವಣ್ಣಾ, ಚಿಗುರಿ ಹೂ ಬಿಡಲಿರುವ ನನ್ನನ್ನು ಕಡಿಯಬೇಡಣ್ಣ. ನನ್ನ ಚಿಗುರಿಗಾಗಿ ಎಷ್ಟೊಂದು ಗಿಳಿ, ಗುಬ್ಬಿ, ಗೊರವಂಕಗಳು ಥರಾವರಿ ಹಾಡುತ್ತಾ ನನ್ನ ಸುತ್ತ ಸಂಭ್ರಮದಿಂದ ಹಾರಾಡುತ್ತಿವೆ ನೋಡು! ಕೋಗಿಲೆಯಂತೂ […]

ಪುಟ್ಟರಾಜು ಮತ್ತು ಮೀನುಗಳು

ಪುಟ್ಟರಾಜು ಮತ್ತು ಮೀನುಗಳು ಒಂದು ಸುಂದರವಾದ ಊರು. ಊರಿನಾಚೆ ಒಂದು ಕಾಡು. ಕಾಡಿನ ಪಕ್ಕದಲ್ಲಿ ಒಂದು ಚಿಕ್ಕ ಮನೆ. ಪ್ರಕೃತಿಯ ಸೌಂದರ್ಯದ ಹಿನ್ನೆಲೆಯಲ್ಲಿ ಆ ಮನೆ ಇನ್ನಷ್ಟು ಅಂದವಾಗಿ ಕಾಣುತ್ತಿತ್ತು. ಆ ಮನೆಯಲ್ಲಿ ಅಪ್ಪ-ಅಮ್ಮನ ಜೊತೆಯಲ್ಲಿ ಪುಟ್ಟರಾಜು ಎಂಬ ಹುಡುಗನಿದ್ದ. ಅವನು ದಿನವೂ ಶಾಲೆಗೆ ಹೋಗುತ್ತಿದ್ದ. ಹೋಗುವಾಗ, ಬರುವಾಗ ಹಚ್ಚಹಸುರಿನ ಗಿಡಮರಗಳು, ಹೂಬಳ್ಳಿಗಳ ಲತೆ, ಕೋಗಿಲೆಯ ಗಾನ, ಜುಳುಜುಳು ಹರಿಯುವ ನದಿಯ ಸೌಂದರ್ಯವನ್ನು ಸವಿಯುತ್ತಿದ್ದನು. ಎಷ್ಟೋ ಸಲ ತನ್ನಲ್ಲಿದ್ದ ಕೊಳಲನ್ನು ತೆಗೆದುಕೊಂಡು ಒಂದುಕಡೆ ಕುಳಿತು ಕೊಳಲನ್ನು ಊದುತ್ತ […]

ಸಾರ್ಥಕ ಬದುಕು

ಸಾರ್ಥಕ ಬದುಕು ತಿಪ್ಪ ಒಬ್ಬ ಕೂಲಿ. ಅವನು ಒಬ್ಬಂಟಿ, ಅವನಿಗೆ ಹೆಂಡತಿ ಮಕ್ಕಳು ಇರಲಿಲ್ಲ. ಬೆಟ್ಟದ ತಪ್ಪಲಿನ ಪುಟ್ಟ ಮನೆಯಲ್ಲಿ ಅವನು ವಾಸವಾಗಿದ್ದ. ತಿಪ್ಪ ಬಹಳ ಶ್ರಮ ಜೀವಿ. ಸೋಮಾರಿಯಾಗಿ ಅವನು ಎಂದೂ ಸಮಯ ಕಳೆಯುತ್ತಿರಲಿಲ್ಲ. ಊರವರು ಕೆಲಸಕ್ಕೆ ಕರೆದಾಗ ಅವನು ಹೋಗುತ್ತಿದ್ದ. ಹೇಳಿದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದ.  ಅವರು ಕೊಟ್ಟದ್ದನ್ನು ಪಡೆದು, ಮನೆಗೆ ಮರಳುತ್ತಿದ್ದ. ಕೆಲಸವಿಲ್ಲದ ದಿನಗಳಲ್ಲೂ ಅವನು ತೆಪ್ಪಗೆ ಕೂಡುತ್ತಿರಲಿಲ್ಲ. ಆಗ ಅವನು ತನ್ನ ಜಮೀನಿನಲ್ಲೇ ಏನಾದರೂ ಕೆಲಸದಲ್ಲಿ ತೊಡಗುತ್ತಿದ್ದ. ತಿಪ್ಪನ ಮನೆಯ ಸುತ್ತಮುತ್ತಲಿನ […]

‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’

‘ನಿಮ್ಮ ಉನ್ನತ ಹುದ್ದೆ ಬೆಂಕಿಗೆ ಹಾಕಿ!’ ನೇತಾಜಿ ಸುಭಾಷಚಂದ್ರ ಬೋಸ್ ಭಾರತೀಯ ಆಡಳಿತಾತ್ಮಕ ಪರೀಕ್ಷೆಯಾಗಿದ್ದ ‘ಐ.ಸಿ.ಎಸ್.’ (Indian Civil Service) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಇಂಗ್ಲೆಂಡ್ ನಿಂದ ಭಾರತಕ್ಕೆ ಮರಳಿದರು. ಇಲ್ಲಿ ಅವರಿಗೆ ಇನ್ನೊಂದು ಲಿಖಿತ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು. ಪರೀಕ್ಷೆಯಲ್ಲಿ ಕುಳಿತುಕೊಂಡ ಅವರು ಪ್ರಶ್ನೆ ಪತ್ರಿಕೆಯನ್ನು ನೋಡಿ ಕೂಡಲೇ ರೊಚ್ಚಿಗೆದ್ದರು. ಆ ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರಕ್ಕೆ ಒಂದು ಭಾಗವನ್ನು ನೀಡಲಾಗಿತ್ತು. ಆ ಭಾಗದ ಶಿರೋನಾಮೆಯು ಮುಂದಿನಂತೆ ಇತ್ತು – ‘Indian Soldiers are generally Dishonest’ (ಅಂದರೆ ‘ಸಾಮಾನ್ಯವಾಗಿ […]

ಸನ್ಯಾಸಿ ನರಿ

ಸನ್ಯಾಸಿ ನರಿ ಅದೊಂದು ಭಯಂಕರ ಕಾಡು. ಆ ಕಾಡಿನ ಮೃಗಗಳಲ್ಲಿ ಇದ್ದಕ್ಕಿದ್ದಂತೆ ಭಿನ್ನಾಭಿಪ್ರಾಯ ಉಂಟಾಗಿ ಹಗೆ ಪ್ರಾರಂಭವಾಯಿತು. ಈ ಕಲಹದಿಂದ ಕಾಡುಪ್ರಾಣಿಗಳು ಬದುಕುವುದೇ ಕಷ್ಟವಾಯಿತು. ಸಿಂಹ, ಆನೆ, ಒಂಟೆ, ಕಾಡುಕುದುರೆ, ಹಾವು, ಕಾಡುಕೋಣ ಮುಂತಾದವು ಒಂದು ಗುಂಪಾದರೆ, ಹುಲಿ, ಚಿರತೆ, ಹೆಬ್ಬಾವು, ನರಿ, ಮುಂಗುಸಿ, ತೋಳ, ಜಿರಾಫೆ, ಮತ್ತಿತರ ಪ್ರಾಣಿಗಳದೇ ಇನ್ನೊಂದು ಗುಂಪು. ತಮ್ಮ ತಾತ, ಮುತ್ತಾತರ ಕಾಲದಲ್ಲಿದ್ದಂತೆ ಆರೋಗ್ಯ, ನೆಮ್ಮದಿ, ಸಂತೋಷದಿಂದ ಬದುಕುವುದೇ ಕಷ್ಟ ಆಯಿತು. ಭಯ ಭೀತಿಗಳು ಎರಡು ಗುಂಪಿನಲ್ಲೂ ಹಾಸುಹೊಕ್ಕಾಗಿ ಎಲ್ಲ ಜೀವಿಗಳ […]

ಸಣ್ಣ ಹಕ್ಕಿಗಳ ದೊಡ್ಡ ಕೆಲಸ

ಸಣ್ಣ ಹಕ್ಕಿಗಳ ದೊಡ್ಡ ಕೆಲಸ ಬಹಳ ಹಿಂದಿನ ಕಾಲದ ಕತೆ ಇದು. ಒಂದು ಊರಲ್ಲಿ ಒಬ್ಬ ರಾಜ ಇದ್ದ. ಬಹಳ ಒಳ್ಳೆಯ ರಾಜ. ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಅವರ ಸುಖಕ್ಕಾಗಿ ಶ್ರಮಿಸುತ್ತಿದ್ದ. ಒಂದು ದಿನ ಊರ ರೈತರೆಲ್ಲ ರಾಜನ ಬಳಿಗೆ ಬಂದು, ‘ಮಹಾಸ್ವಾಮಿ, ಊರಲ್ಲಿ ಗುಬ್ಬಿಗಳು ಬಹಳ ಹೆಚ್ಚಾಗಿವೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಅವು ಹೊಲಗಳನ್ನು ಮುತ್ತುತ್ತಿವೆ. ನಮಗೆ ಕಷ್ಟನಷ್ಟ ಉಂಟು ಮಾಡುತ್ತಿವೆ. ಈ ಗುಬ್ಬಿಗಳನ್ನೆಲ್ಲ ಕೊಲ್ಲಿಸಿ ನಮ್ಮ ಸಂಕಟವನ್ನು ಪರಿಹರಿಸಿ’ ಎಂದು ಬೇಡಿಕೊಂಡರು. ಅರಸನು […]

ಜಾಣ ಬಾಲಕ

ಜಾಣ ಬಾಲಕ ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನೊಬ್ಬ ನುರಿತ ಚಿತ್ರ ಕಲಾವಿದ ಆಗಿದ್ದನು. ಅವನು ಸುಂದರವಾದ ಜಾಗಗಳಿಗೆ ಹೋಗಿ ಅಲ್ಲಿ ಚಿತ್ರಗಳನ್ನು ಬರೆಯುತ್ತಿದ್ದನು. ಒಂದು ದಿನ ರಾಜನು ಬೆಟ್ಟಗುಡ್ಡಗಳಿರುವ ಜಾಗಕ್ಕೆ ಹೋದನು. ಸುತ್ತಲಿನ ಬೆಟ್ಟಗಳು, ಮರಗಳು, ಹುಲ್ಲುಗಾವಲಿನ ಅಂದವನ್ನು ನೋಡುತ್ತಾ ಅವನು ಚಿತ್ರ ಬರೆಯಲು ತೊಡಗಿದನು. ತುಂಬಾ ಹೊತ್ತಿನವರೆಗೆ ರಾಜನು ಬೆಟ್ಟದ ತುದಿಯಲ್ಲಿ ನಿಂತು ಚಿತ್ರ ಬರೆಯುತ್ತಿದ್ದನು. ಕೊನೆಗೆ ಅವನು ಚಿತ್ರವನ್ನು ಪೂರ್ಣ ಮಾಡಿದನು. ಬಳಿಕ ಅರಸನು ಹಿಂದೆ ಹಿಂದೆ ಹೋಗುತ್ತಾ ಚಿತ್ರವನ್ನು ಪರೀಕ್ಷಿಸತೊಡಗಿದನು. ದೂರದಿಂದ […]

ಸಹನೆಯೇ ಗೆಲುವಿನ ದಾರಿ

ಸಹನೆಯೇ ಗೆಲುವಿನ ದಾರಿ ಒಂದು ಸಲ ಶಿವಾಜಿ ಮಹಾರಾಜರು ಒಂದು ಕೋಟೆಯಿಂದ ಮತ್ತೊಂದು ಕೋಟೆಗೆ ಹೋಗುವಾಗ ದಾರಿ ತಪ್ಪಿದರು. ಆಗ ಅವರು ಒಂದು ಬೆಟ್ಟ ಏರಿ ಯಾವುದಾದರೂ ಹಳ್ಳಿ ಇದೆಯಾ ಎಂದು ನೋಡಿದರು, ಆದರೆ ಯಾವ ಹಳ್ಳಿಯೂ ಕಾಣಿಸಲಿಲ್ಲ. ರಾತ್ರಿಯಾಗುತ್ತಿತ್ತು. ಅವರು ಬೆಟ್ಟ ಇಳಿದು ಬರುವಾಗ ದೂರದಲ್ಲಿ ದೀಪವೊಂದು ಮಿಣುಕುವುದು ಕಾಣಿಸುತ್ತಿತ್ತು. ಅದೇ ದಾರಿಯಲ್ಲಿ ಹೋದಾಗ ಅವರು ಒಂದು ಗುಡಿಸಿಲಿನ ಬಳಿ ಬಂದರು. ಆ ಗುಡಿಸಲಿನಲ್ಲಿ ಒಬ್ಬ ವೃದ್ಧ ಮಹಿಳೆ ಇದ್ದಳು. ಅವಳು ಮಹಾರಾಜರನ್ನು ಒಬ್ಬ ಸೈನಿಕ […]

ಸೋಲನ್ನೇ ಕಾಣದ ತೆನಾಲಿರಾಮ

ಸೋಲನ್ನೇ ಕಾಣದ ತೆನಾಲಿರಾಮ ತೆನಾಲಿರಾಮನಿಗೆ ನಗುವುದು ನಗಿಸುವುದು ದೇವರು ಕೊಟ್ಟ ವರ. ಈ ಕಲೆಯಿಂದಲೇ ತನ್ನ ಜೀವನದಲ್ಲಿ ಎದುರಾದ ಎಷ್ಟೋ ಆಪತ್ತುಗಳಿಂದ ಪಾರಾಗಿದ್ದನು. ತೆನಾಲಿರಾಮ ವಿಜಯನಗರದ ಕೃಷ್ಣದೇವರಾಯನ ಆಸ್ಥಾನದಲ್ಲಿ ಬಹಳ ಪ್ರೀತಿ ವಾತ್ಸಲ್ಯದಿಂದ ಇದ್ದನು. ಈ ವಿಷಯದ ಬಗ್ಗೆ ಆಸ್ಥಾನಿಕರಲ್ಲಿ ಅಸೂಯೆ ಇತ್ತು. ಒಂದು ಬಾರಿ ಆಸ್ಥಾನದಲ್ಲಿ ಎಲ್ಲಾ ಪಂಡಿತರೂ ನೆರೆದಿದ್ದರು. ಕೃಷ್ಣದೇವರಾಯ ತೆನಾಲಿರಾಮನನ್ನು ಸಲಿಗೆಯಿಂದ ಕರೆದು ಇಂದು ನಾವಿಬ್ಬರೇ ಪಗಡೆ ಆಟ ಆಡೋಣ ಎಂದನು. ತೆನಾಲಿರಾಮ ರಾಜನ ಆಜ್ಞೆಯನ್ನು ಉಲ್ಲಂಘಿಸದೆ ರಾಜನ ಸಂತೋಷಕ್ಕಾಗಿ ಒಪ್ಪಿ ಪಗಡೆ […]