Your Cart

Need help? Call +91 9535015489

📖 Print books shipping available only in India. ✈ Flat rate shipping

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ…

ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ… ಇವತ್ತು ನಮ್ಮ ಬಿಡುವಿರದ ಶೆಡ್ಯೂಲುಗಳ ನಡುವೆ ಅಂತ ಬರೆಯುವಾಗ ಸ್ವಲ್ಪ ಗೊಂದಲವಾಯಿತು. ನಾವು ಅನಾದಿಕಾಲದಿಂದ ಶೆಡ್ಯೂಲ್ ಅಂತ ಹೇಳಿಕೊಂಡು ಬಂದಿದ್ದನ್ನು ಈಗಿನ ಕಾಲದ ಹುಡುಗರು ಸ್ಕೆಡ್ಯೂಲ್ ಅನ್ನುತ್ತಾರೆ. ಅದು ಬಹುಶಃ ಅಮೆರಿಕನ್ ಉಚ್ಛಾರಣೆ ಇರಬಹುದು. ನಾವು ಕಲಿತದ್ದು ರೂಢಿಸಿಕೊಂಡದ್ದು ಬ್ರಿಟಿಷರ ಇಂಗ್ಲಿಷನ್ನು. ಆದರೆ ಪಿಜ್ಜಾ ಹಟ್, ಕೆಎಫ್ಸಿಗಳ ಜೊತೆಗೆ ಅಮೆರಿಕ ಇಂಗ್ಲಿಷ ನಮಗೆ ಹತ್ತಿರವಾಗಿಬಿಟ್ಟಿತು. ಡೈರೆಕ್ಟ್ ಅವರ ಪ್ರಕಾರ ಡಿರೆಕ್ಟ್, ನಮ್ಮ ಫೈನಾನ್ಷಿಯಲ್ ಪ್ರಾಬ್ಲೆಮ್ ಅವರಿಗೆ ಕೇವಲ ಫಿನಾನ್ಷಿಯಲ್ ಪ್ರಾಬ್ಲಂ. ಅವರ […]

ರಾಂಗ್ ನಂಬರ್!

ರಾಂಗ್ ನಂಬರ್! ಅದೆಲ್ಲ ಶುರುವಾದದ್ದು ಒಂದೇ ಒಂದು ಫೋನ್ ಕಾಲ್ನಿಂದ. ನಿವೃತ್ತ ಲೆಕ್ಕದ ಮೇಷ್ಟ್ರು ಶಿವಲಿಂಗಯ್ಯನವರಿಗೆ ಆ ಮುಸ್ಸಂಜೆ ಇದ್ದಕ್ಕಿದ್ದಂತೆ ಹಾಸನದಲ್ಲಿರುವ ತಮ್ಮನ ಜೊತೆ ಮಾತಾಡಬೇಕು ಅನ್ನಿಸಿತು. ಆಗಷ್ಟೇ ಸಂಜೆ ಕರಗಿತ್ತು, ರಾತ್ರಿ ಇಳಿದಿರಲಿಲ್ಲ. ಅವರ ಮನೆಯ ಹಜಾರದಲ್ಲಿ ಇನ್ನೂ ಬೆಳಕಾಡುತ್ತಿತ್ತು. ಆ ಹೊತ್ತಲ್ಲಿ ಮೇಷ್ಟರು ಕಿಟಕಿಯ ಬಳಿ ಕುಳಿತುಕೊಂಡು ಅಲ್ಲೇ ಪಕ್ಕದಲ್ಲಿಟ್ಟಿದ್ದ ಹಳೇ ಕಾಲದ ಫೋನಿನ ಮುಕ್ಕಾಲು ಕೇಜಿ ಭಾರದ ರಿಸೀವರ್ ಎತ್ತಿಕೊಂಡರು. ಆಮೇಲೆ ಅದರ ಪಕ್ಕದಲ್ಲಿದ್ದ ಟೆಲಿಫೋನ್ ಡೈರಿ ಎತ್ತಿಕೊಂಡು ಐ ಜೆ ಕೆ […]

ಓದುಗ ಪ್ರಭು ಮತ್ತು ಲೇಖಕ ಮಹಾಶಯ!

ಓದುಗ ಪ್ರಭು ಮತ್ತು ಲೇಖಕ ಮಹಾಶಯ! ಮೊನ್ನೆ ಹೀಗೊಬ್ಬರು ವಾದಿಸಿದರು; ಓದುಗರು ಮುಖ್ಯ, ಓದುಗರೇ ಸರ್ವಸ್ವ, ಓದುಗರು ದೇವರು, ಓದುಗ ಆತ್ಮಬಂಧು ಅಂತೆಲ್ಲ ಅನೇಕ ಕತೆಗಾರರು ಹೇಳುತ್ತಿರುತ್ತಾರೆ. ನಟರು ಪ್ರೇಕ್ಷಕರ ತೀರ್ಮಾನವೇ ಅಂತಿಮ ಅನ್ನುತ್ತಾರೆ. ಪ್ರೇಕ್ಷಕ ಪ್ರಭು ಅಂತಾರೆ, ಪ್ರೇಕ್ಷಕರನ್ನು ದೇವರು ಅಂತ ಕರೆಯುತ್ತಾರೆ. ಓದುಗರನ್ನೋ ಪ್ರೇಕ್ಷಕರನ್ನೋ ಅಷ್ಟೆತ್ತರದ ಸ್ಥಾನದಲ್ಲಿ ಕೂರಿಸುವುದು ಈ ಬರಹಗಾರರ, ನಟರ ತಂತ್ರ ಅಲ್ಲವೇ? ಎಷ್ಟೇ ಓಲೈಸಿದರೂ ಪೂಸಿ ಹೊಡೆದರೂ ಮುದ್ದಾಡಿದರೂ ಓದುಗ ತನಗೆ ಇಷ್ಟವಾಗದ ಕೃತಿಯನ್ನೇನೂ ಓದುವುದಿಲ್ಲ. ಅಲ್ಲದೇ ಓದುಗನಿಗೆ ಓದುವುದರಿಂದ […]

ತೆಳ್ಳಗಿನ ತುಟಿಯಂಚಿನಲ್ಲಿ ಸಾವಿನಂಥ ಆಕರ್ಷಣೆ

ತೆಳ್ಳಗಿನ ತುಟಿಯಂಚಿನಲ್ಲಿ ಸಾವಿನಂಥ ಆಕರ್ಷಣೆ ಗೋಪಾಲಕೃಷ್ಣ ಸೋಮಯಾಜಿ ಒಬ್ಬನೇ ಬರಲಿಲ್ಲ. ಅವನ ಜೊತೆಗೆ ಅವನ ಮಗಳು ನರ್ಮದೆಯೂ ಉಪ್ಪಿನಂಗಡಿಗೆ ಬಂದಳು. ನರ್ಮದೆಯ ಪುಟ್ಟ ತಂಗಿ ಜಾಹ್ನವಿಯೂ ಜೊತೆಗಿದ್ದಳು. ನರ್ಮದೆ ಆಗಷ್ಟೇ ಕೇರಳದಲ್ಲಿ ಹನ್ನೆರಡನೆ ತರಗತಿ ಓದುತ್ತಿದ್ದಳು. ಗೋಪಾಲಕೃಷ್ಣ ಸ್ಕೂಲಿನ ಮೇಷ್ಟ್ರುಗಳ ಹತ್ತಿರ ಮಾತನಾಡಿ, ಮತ್ತೆ ಪರೀಕ್ಷೆಗೆ ಹಾಜರಾಗುತ್ತಾಳೆಂದೂ ಅಷ್ಟು ದಿನ ಮನೆಯಲ್ಲೇ ಓದಿಕೊಳ್ಳುತ್ತಾಳೆಂದೂ ದಯವಿಟ್ಟು ಹಾಜರಿ ಕೊಡಬೇಕೆಂದೂ ವಿನಂತಿಸಿಕೊಂಡು ನರ್ಮದೆಯನ್ನು ಉಪ್ಪಿನಂಗಡಿಗೆ ಕರೆದುಕೊಂಡು ಬಂದಿದ್ದ. ಅವಳನ್ನು ಗುರುವಾಯೂರಿನಲ್ಲೇ ಬಿಟ್ಟು ಬರಲು ಅವನಿಗೆ ಭಯ. ನರ್ಮದೆ ತುಂಬುಸುಂದರಿ. ಹದಿನೇಳನೆಯ […]

ಮಳೆನಿಂತ ಹಗಲಿನ ಜೊತೆಗೆ ನಾಲ್ಕಾರು ಕನ್ನಡ ಮಾತು

ಮಳೆನಿಂತ ಹಗಲಿನ ಜೊತೆಗೆ ನಾಲ್ಕಾರು ಕನ್ನಡ ಮಾತು ಹನ್ನೆರಡನೆಯ ಶತಮಾನದ ವಚನಕಾರರು ಬರೆದರು ನಡೆದಡೆ ನಡೆಗೆಟ್ಟ ನಡೆಯ ನಡೆವುದಯ್ಯ ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯ ಒಡಲ ಹಿಡಿದಡೆ ಹಿಡಿಯದೆ ಹಿಡಿವುದಯ್ಯ ಕೂಡುವೆಡೆ ಕೇಡಿಲ್ಲದೆ ಕೂಟವ ಕೂಡುವುದಯ್ಯ ಆಮೇಲೆ ಬಂದ ದಾಸರು ಬರೆದರು; ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು ತನ್ನ ಮನೆಗವಳ ಯಜಮಾನಿ ಎನಿಸಿ ಭಿನ್ನವಿಲ್ಲದೆ ಅರ್ಧದೇಹವೆನಿಸುವ ಸತಿಯು ಕಣ್ಣಿನಲಿ ನೋಡಲಮ್ಮಳು ಕಾಲವಶದಿ ಇದೇ ಸುಮಾರಿಗೆ ಬಂದ ಕುಮಾರವ್ಯಾಸ ಬರೆದ; ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿಯದು ಸಭೆಯಲ್ಲ ಮೂರ್ಖರು […]

ಹೆಂಡತಿಯೊಬ್ಬಳು ಮನೆಯೊಳಗೆ, ಪ್ರೇಯಸಿಯರು ಮನದೊಳಗೆ!

ಹೆಂಡತಿಯೊಬ್ಬಳು ಮನೆಯೊಳಗೆ, ಪ್ರೇಯಸಿಯರು ಮನದೊಳಗೆ! ಸುಮ್ಮನೆ ಕೇಳಿಕೊಳ್ಳಿ! ಪತ್ನಿಗೆ ನಿಷ್ಠನಾಗಿರುವ ಏಕಪತ್ನೀವ್ರತಸ್ಥನ ಹೆಂಡತಿ ಸುಖವಾಗಿರುತ್ತಾಳಾ? ರಸಿಕನಾದ ಬಹುಜನಪ್ರಿಯನ ಹೆಂಡತಿ ಸುಖವಾಗಿರುತ್ತಾಳಾ? ಎಫ್ಪೆಮ್ಮಿನ ಮಸ್ತ್ ಮಯೂರಿ ವಿಚಿತ್ರವಾಗಿ ಕರೆಯುವಂತೆ `ನಮ್ಮ ಭಾಮಂದಿರು’ ಏಕಪತ್ನೀವ್ರತಸ್ಥನನ್ನೇ ಹೆಚ್ಚು ಮೆಚ್ಚುತ್ತಾರೆ. ಏಕಪತ್ನಿವ್ರತಸ್ಥ ಎನ್ನುವುದೇ ಒಂದು ಸಾಧನೆ, ಅದೇ ಒಂದು ಅರ್ಹತೆ ಎಂಬಂತೆ ಮಾತಾಡುತ್ತಾರೆ. ಒಳ್ಳೇ ಗಂಡ, ಬೇರೊಂದು ಹೆಣ್ಣನ್ನು ತಲೆಯೆತ್ತಿಯೂ ನೋಡಲ್ಲ ಅನ್ನುತ್ತಾರೆ. ಆಫೀಸು ಬಿಟ್ಟು ನೇರವಾಗಿ ಮನೆಗೇ ಬರುತ್ತಾನೆ. ಒಂದು ದುರಭ್ಯಾಸ ಇಲ್ಲ ಎಂದು ಹೇಳಿ ಹೇಳಿ ಎಲ್ಲಾ ಹವ್ಯಾಸಗಳನ್ನೂ ಹತ್ತಿಕ್ಕುವುದನ್ನೂ […]

ಕಸೂತಿಯ ನಡುವೆ ಉಕ್ಕುವ ಹಾಡಿಗೆ ಮರುಳಾಗಿ….

ಕಸೂತಿಯ ನಡುವೆ ಉಕ್ಕುವ ಹಾಡಿಗೆ ಮರುಳಾಗಿ…. ಮನುಷ್ಯನ ಜೀವನದ ಅತ್ಯಂತ ನಿರ್ಣಾಯಕ ಘಳಿಗೆ ಯಾವುದು ಎಂದು ಕೇಳಿಕೊಳ್ಳಿ. ಅದನ್ನು ಇನ್ನಷ್ಟು ಸರಳಗೊಳಿಸಿ `ನನ್ನ ಜೀವನದ ಅತ್ಯಂತ ಮಹತ್ವದ ಕ್ಷಣ ಯಾವುದಾಗಿರುತ್ತದೆ’ ಅಂತ ಪ್ರಶ್ನಿಸಿಕೊಳ್ಳಿ. ತಕ್ಷಣಕ್ಕೆ ಉತ್ತರ ಸಿಕ್ಕುವುದಿಲ್ಲ. `ನಾನು ಇಂತಿಂಥವರ ಮಗನಾಗಿಯೋ ಮಗಳಾಗಿಯೋ ಹುಟ್ಟಿದ್ದು. ಇಂಥ ಸ್ಕೂಲಿಗೆ ಹೋಗಲು ಇಚ್ಚಿಸಿದ್ದು. ಇಂಥ ಕೋರ್ಸು ತೆಗೆದುಕೊಂಡದ್ದು, ಇಂಥಿಂಥಾ ಗೆಳೆಯರನ್ನು ಆರಿಸಿಕೊಂಡಿದ್ದು. ಇಂಥಾ ಕೆಲಸಕ್ಕೆ ಸೇರಿದ್ದು. ಇಂಥ ಹುಡುಗನಿಗೆ ಮನಸೋತದ್ದು..’. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪ್ರತಿಯೊಂದೂ ನಿರ್ಣಾಯಕವೇ ಅನ್ನಿಸಿಬಿಡುತ್ತದೆ. ಒಂದು […]

ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ…

ಕಾಡು ಕಾಡೆಂದರೆ ಕಾಡೇನ ಬಣ್ಣಿಸಲಿ… ಈ ಪುಟ್ಟ ಕತೆ ಹೀಗೇ ಯಾಕಿರಬೇಕು ಅಂತ ನಂಗೊತ್ತಿಲ್ಲ. 1937ರಲ್ಲೇ ಆತ ಬರೆದ ಈ ಪುಟ್ಟ ಕತೆ ಇವತ್ತು ಓದಿದರೂ ಸಾಕು ತಲ್ಲಣಿಸುವಂತೆ ಮಾಡುತ್ತದೆ. ಬರೆದಾತನ ಹೆಸರು ಯೊಹಾನ್ನೆಸ್ ಯೆನ್ಸೆನ್ ಡೆನ್ಮಾರ್ಕಿನ ಕತೆಗಾರ. ಈತನ ಕತೆ ಹೀಗೆ; ಒಬ್ಬ ರೈತ. ನಾಲ್ಕು ಕಾಸು ಸಂಪಾದಿಸಿದ ನಂತರ ದುಡಿಯುವುದಕ್ಕೊಬ್ಬ ಗುಲಾಮ ಬೇಕು ಅನ್ನಿಸುತ್ತದೆ. ಸಂತೆಗೆ ಹೋಗುತ್ತಾನೆ. ಅಲ್ಲಿ ಒಬ್ಬ ವ್ಯಾಪಾರಿ ಗುಲಾಮರನ್ನು ಮಾರುತ್ತಿದ್ದಾನೆ. ರೈತನಿಗೆ ಆ ಗುಲಾಮರು ಯಾರೂ ಇಷ್ಟವಾಗಲಿಲ್ಲ. ವ್ಯಾಪಾರಿ ಕೊನೆಗೆ […]

ಅವಳು ಅತ್ತಿಹೂವು

ಅವಳು ಅತ್ತಿಹೂವು ಶರ್ಮಿಳೆ ಬರುತ್ತಿದ್ದಾಳೆ ಎಂದು ಶಿಬಿಗೆ ಗೊತ್ತಾಗೋ ಹೊತ್ತಿಗೆ ತೀರಾ ತಡವಾಗಿತ್ತು. ಶರ್ಮಿಳೆಯ ವಾಟ್ಸ್ ಅಪ್  ಮೆಸೇಜ್ ಒಂದಲ್ಲ ಮೂರಲ್ಲ ಇಪ್ಪತ್ತಕ್ಕೂ ಹೆಚ್ಚು ಬಂದು ಶಿಬಿಯ ಸ್ಮಾರ್ಟ್ ಫೋನ್ ಮೇಲೆ ಬಿದ್ದಿದ್ದವು. ಶರ್ಮಿಳೆ ಸುಮ್ಮನೇ ಬರಲಿಕ್ಕಿಲ್ಲ. ಅಷ್ಟೊಂದು ದೂರದಿಂದ ಆಕೆ ಬರುತ್ತಾಳೆ ಎಂದರೆ ಏನೋ ಇರಲೇಬೇಕು. ಹಾಗೇ ನೋಡಿದರೆ ಶರ್ಮಿಳೆ ಅದೆಷ್ಟು ಸಾರಿ ಬಂದು ಹೋಗುತ್ತಾಳೋ ಏನೋ? ಅದನ್ನೆಲ್ಲಾ ಶಿಬಿಗೆ ಗಮನಿಸುವುದೂ ಇಲ್ಲ. ಈ ಬಾರಿ ಅವಳು ತಾನು ಬರುತ್ತಿರುವ ಕುರಿತು ಮೆಸೇಜ್ ಕಳುಹಿಸಿದ್ದಾಳೆ. ಆ ಮೆಸೇಜ್ […]