Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಶೈಶವ – ಪಾಳಿ – ಲೋ ಬ್ಯಾಟರಿ – ಸುರೇಶ

ಶೈಶವ – ಪಾಳಿ – ಲೋ ಬ್ಯಾಟರಿ – ಸುರೇಶ ಶೈಶವ, ಬಾಲ್ಯ, ಹರೆಯ, ವೃದ್ಧಾಪ್ಯ ಬದುಕಿನ ನಾಲ್ಕು ಹಂತಗಳು- ಪಾಳಿಯ ಮೇಲೆ ಎಲ್ಲವನ್ನೂ ಒಂದೊಂದಾಗಿ ಅನುಭವಿಸಲೇಬೇಕು- ನಮ್ಮಿಚ್ಛೆಯಂತಲ್ಲ- ಅವನಿಚ್ಛೆಯಂತೆ— ನಾನೋಬ್ಬನೇ ಅಲ್ಲ – ಪ್ರತಿಯೊಬ್ಬರೂ… ಅವನು “ಸುರೇಶ”ನಿರಲಿ “ಭುವೀಶ”ನಿರಲಿ ಏನೂ […]

ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ

ಬಣ್ಣನೆ – ಚರಿತ್ರೆ – ಬಣವೆ – ಪ್ರೇಮ ಪುಟ್ಟ ಪುಟ್ಟ ಹಳ್ಳಿಗಳಲ್ಲಿ ಬಣವೆಗಳ ಹಿಂಬದಿಯಲ್ಲಿ ಪ್ರೇಮ ಪಲ್ಲವಿಸಿ ಪೋಷಣೆಯಿಲ್ಲದೇ ಕಮರಿದ ಕಥೆಗಳೆಷ್ಟು ಚರಿತ್ರೆ ಸೇರಿವೆಯೋ ಲೆಕ್ಕ ಇಟ್ಟವರಾರು…..?? ಶಾರೂಖ – ಕಾಜೋಲ ರಣಬೀರ್ – ಐಶ್ವರ್ಯ ಕಥೆಗಳಂತೆ ಕೋಟಿ ಕೋಟಿ […]

ನಾಚು – ಕಾಡಿಗೆ – ಅಂಚು – ಬೆಂಕಿಪೊಟ್ಟಣ

ನಾಚು – ಕಾಡಿಗೆ – ಅಂಚು – ಬೆಂಕಿಪೊಟ್ಟಣ “ನಾಚಿಗೆ ಆಗೋಲ್ವಾ ನಿನಗೆ?” ಇದು ನಾಚುವದು ಅಂದರೆ ಏನು? ಯಾಕೆ, ಹೇಗೆ? ಎಲ್ಲಿ? ಯಾವಾಗ? ಒಂದೂ ಗೊತ್ತಿಲ್ಲದಾಗಲೇ ದಿನನಿತ್ಯ ನಾನೆದುರಿಸಿದ ಪ್ರಶ್ನೆ….. ಉತ್ತರ ತಪ್ಪಿದಾಗ ಗುರುಗಳು ಕೆಲಸ ಬರದಿದ್ದಾಗ ಅಮ್ಮ, ಅಪ್ಪ […]

ಪಕಳೆ – ಸಿಡಿಯುವದು – ಮೊಗ – ಕಲ್ಲಂಗಡಿ

ಪಕಳೆ – ಸಿಡಿಯುವದು – ಮೊಗ – ಕಲ್ಲಂಗಡಿ ನಡು ಮಧ್ಯಾಹ್ನ.. ನೆತ್ತಿ ಒಡೆಯುವ ಬಿಸಿಲು.. ತಲೆ ಸಿಡಿಯುತ್ತಿದೆ ಒಂದೇ ಸವನೆ… ಮೊಗ ಹೆಚ್ಚಿಟ್ಟ ಕಲ್ಲಂಗಡಿಯಂತೆ ಕೆಂಪು ಕೆಂಪು.. ಆದರೆ ಯಾರಿಗೆ ಹೇಳುವದು?? ಬಿತ್ತಿದ ಬೆಳೆಗೆ ಮಳೆಯಿಲ್ಲ… ಮಾಡುವೆನೆಂದರೂ ಕೆಲಸ ಕೊಡುವವರಿಲ್ಲ.. […]

ಮಂಗಳವಾರ – ಮನೆಗೆಲಸ – ಹಾಸಿಗೆ – ಸರಳು

ಮಂಗಳವಾರ – ಮನೆಗೆಲಸ – ಹಾಸಿಗೆ – ಸರಳು “ನಾಳೆ ಮಂಗಳವಾರ, ಮಾರನೆಯ ದಿನ ನವಮಿ.. ಆಮೇಲೆ ನಿಲ್ಲುವೆನೆ ನಾನು ಇಲ್ಲೆ….” ಮೈಸೂರು ಮಲ್ಲಿಗೆಯ ಪದ್ಮಳಂತೆ ಪತ್ರದಲ್ಲಿಯೇ ಲಲ್ಲೆಗರೆದು ಮತ್ತೆರಡು ದಿನ ಗಿಟ್ಟಿಸಿಕೊಂಡಿದ್ದಾಳೆ ನನ್ನ ರಾಣಿ… ನನಗೋ ಉಭಯ ಸಂಕಟ. ಬೇಡವೆಂದರೆ […]

ಚಮಚ – ಗಜಿಬಿಜಿ – ಸ್ಮಾರಕ – ನಿಮ್ಮಿಷ್ಟ

ಚಮಚ – ಗಜಿಬಿಜಿ – ಸ್ಮಾರಕ – ನಿಮ್ಮಿಷ್ಟ “ಬೇಂದ್ರೆ ಪುಣ್ಯತಿಥಿಯಂದು ಬೇಂದ್ರೆ ಸ್ಮಾರಕ ಕಾವ್ಯ ಗಾಯನ ಕಾರ್ಯಕ್ರಮದ ಆಯೋಜನವಾಗಬೇಕು.. ನಿಮ್ಮದೇ ಜವಾಬ್ದಾರಿ ನಿಮ್ಮದೇ ಇಷ್ಟ.. ಆದರೆ ಕಾರ್ಯಕ್ರಮ ಸ್ಮರಣೀಯವಾಗಬೇಕು.” ಬಿಸಿಬಿಸಿ ಉಪ್ಪಿಟ್ಟು ಆರಿಸಲು plateನಲ್ಲಿ ಚಮಚ ಆಡಿಸುತ್ತ ಕುಳಿತ ನನಗೆ […]

ಸಲಿಗೆ – ಜೀವ – ಕಡಲು – ಚಿನಕುರುಳಿ

ಸಲಿಗೆ – ಜೀವ – ಕಡಲು – ಚಿನಕುರುಳಿ ಜೀವಕ್ಕೆ ಜೀವಕೊಡುವ ಸಲಿಗೆಯಿದ್ದರೂ ಸಂಬಂಧಗಳಿಗೆ ಒಂದು L.O.C. ಇರಲೇಬೇಕು… ಸ್ನೇಹದ ಹಾಲುಗಡಲಲ್ಲಿ ಹುಳಿಹಿಂಡಿ ಬದುಕು ಭಂಗವಾಗಿಸುವದಕ್ಕೆ ಮಹಾ-ಕಲಹವೇನೂ ಬೇಕಾಗಿಲ್ಲ.. ಒಂದು ಚಿನಕುರುಳಿಯಂಥ ಅಸಭ್ಯ, ಅನುಚಿತ, ಅಗೌರವದ Joku ಊ ಸಾಕಾದೀತು

ಅಜ್ಜಿಮನೆ – ಕೆಂಪು ಬಸ್ಸು – ರವೆ ಉಂಡೆ – ಕಪ್ಪುಮಣ್ಣು

ಅಜ್ಜಿಮನೆ – ಕೆಂಪು ಬಸ್ಸು – ರವೆ ಉಂಡೆ – ಕಪ್ಪುಮಣ್ಣು “ಬಿಳಿಯ ಮಂಜಿನಲಿ ಬೆಳೆಯಬಹುದೇ ಬೆಳೆಯುವದು ಎಲ್ಲ ಕಪ್ಪು”… ಪೂರ್ವಾಂಗನೆ ಪಶ್ಚಿಮಾಂಗನೆಗೆ ಕವಿತೆಸಾಲುಗಳ ಓದುತ್ತಿದ್ದ ಹಾಗೇ ನೆನಪುಗಳ ಸಾಲು ಸಾಲು ಮೆರವಣಿಗೆ… ಕಪ್ಪು ಮಣ್ಣಿನ ಮೇಲೆ ಓಡುವ ಆ ಕೆಂಪುಬಸ್ಸು. […]

ಸಿಗ್ನಲ್ – ಭಾವನೆ – ಅರ್ಚನೆ – ಕಂಡರಾಗದು

ಸಿಗ್ನಲ್ – ಭಾವನೆ – ಅರ್ಚನೆ – ಕಂಡರಾಗದು “ಈ ಅರ್ಥವಿಲ್ಲದ ಅರ್ಚನೆ-ಆರಾಧನೆ- ಗಳನ್ನು ಕಂಡರಾಗದು ನನಗೆ…ಅಂತರಂಗದ ಭಾವನೆಗಳು ಶುದ್ಧವಾಗಿರಬೇಕು.. ಬಾಹ್ಯದ ಬಡಿವಾರ ಬಿಲ್ಕುಲ್ ಕೂಡದು…” ಇದು ಇತ್ತೀಚೆಗೆ ಕೇಳಿ ಬರುವ ಸೊಲ್ಲು… ಹಾ…. ಭಾಯಿ… ಹಾ.. ಇಲ್ಲವೆಂದವರಾರು??? ಆದರೆ ಬಾಹ್ಯ […]