Your Cart

Need help? Call +91 9535015489

📖 Print books shipping available only in India. ✈ Flat rate shipping

ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆ

ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆ ವೈವಿಧ್ಯಮಯವಾದ ಭಾರತೀಯ ಸಂಪ್ರದಾಯದಲ್ಲಿಯ ಉಪನಿಷತ್ತಿನ ಒಂದು ವಾಕ್ಯವಿದು. ಇದರ ವಿಶೇಷ ಅರ್ಥದಿಂದಾಗಿ ಇಂದಿಗೂ ಈ ವಾಕ್ಯ ತನ್ನದೇ ಆದ ಒಂದು ವಿಶೇಷತೆಯನ್ನು ಹೊಂದಿದೆ. ಅನೇಕ ಸಂಸ್ಕೃತಿಗಳು, ಅವುಗಳನ್ನು ಅನುಸರಿಸುವ ಅನೇಕ ಕುಟುಂಬಗಳು… ಆದರೂ ಇವೆಲ್ಲವನ್ನೂ ಮೀರಿದ ನಾವು ವಿಶ್ವ ಕುಟುಂಬಿಗಳು. ವಿಶ್ವವೇ ಒಂದು ಕುಟುಂಬ ಎಂದು ಹೇಳುವ ಈ ಕುಟುಂಬ ವ್ಯವಸ್ಥೆ ನಮ್ಮದು. ಮಗು ಹುಟ್ಟಿದ ಕೂಡಲೇ ಕಣ್ಣು ತೆರೆಯುವುದೇ ತನ್ನ ಕುಟುಂಬದ ಸದಸ್ಯರ ನಡುವೆ. ಹೀಗೆ ಮಗುವಿನ ಏಳ್ಗೆಗೆ ಕುಟುಂಬ ವೇ […]

ನನಗೆ ಸಮಯವೇ ಇಲ್ಲ

ನನಗೆ ಸಮಯವೇ ಇಲ್ಲ ನನ್ನ ಸ್ನೇಹಿತರೊಬ್ಬರಿಗೆ ಧಾರವಾಡದಿಂದ ಮತ್ತೊಂದು ಕಡೆಗೆ ವರ್ಗಾವಣೆಯಾಗಿತ್ತು. ಅವರಿಗೆ ಒಂದು ಬೀಳ್ಕೊ ಡುಗೆ ಇಟ್ಟುಕೊಳ್ಳುವುದಕ್ಕೆ ನಾವೆಲ್ಲ ಸ್ನೇಹಿತರು ನಿಶ್ಚಯಿಸಿದ್ದೆವು. ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಸಂಪರ್ಕಿಸಿದಾಗ ಕಪ್ಪೀ ತೂಕ ಮಾಡಿದ ಅನುಭವವಾಗಿತ್ತು. ಎಲ್ಲರಿಗೂ ಒಂದೊಂದು ಸಮಸ್ಯೆ. ಯಾರಿಗೂ ಸಮಯವೇ ಇಲ್ಲ! ಇವತ್ತಿನ ಗಡಿಬಿಡಿ ಜೀವನದಲ್ಲಿ ಯಾರಿಗೂ ಯಾವುದಕ್ಕೂ ಸಮಯವೇ ಇಲ್ಲ. ಪ್ರತಿಯೊಂದು ಕಾರ್ಯವೂ ಒತ್ತಡದಿಂದಲೇ ಆರಂಭ. ಬೆಳಗಿನ ಚಹಾ, ಸ್ನಾನ, ತಿಂಡಿ, ತಿನಸು, ಆಫೀಸು… ಅಲ್ಲಿಯ ಕೆಲಸ. ಮಾನಸಿಕ ಒತ್ತಡ, ದೈಹಿಕ ಒತ್ತಡ.. ಈ ಒತ್ತಡಗಳನ್ನು […]

ಮಕ್ಕಳಿವರೇನಮ್ಮ…. ನಮ್ಮ?

ಮಕ್ಕಳಿವರೇನಮ್ಮ…. ನಮ್ಮ? ನಾವು ಚಿಕ್ಕವರಿದ್ದಾಗ ಕೂಡು ಕುಟುಂಬಗಳೇ ಹೆಚ್ಚು. ಮನೆಯಲ್ಲಿ ಅಜ್ಜ, ಅಜ್ಜಿ, ಕಾಕಾ, ಕಾಕು, ಅತ್ತೆ… ಅಮ್ಮ ಅಪ್ಪನಂತೂ ಸೈಯೇ ಸೈ. ನಮ್ಮ ಬಾಲ್ಯದಲ್ಲಿ ನಮಗೆ ನಮ್ಮ ಪಾಲಕರು ಕೊಡುತ್ತಿದ್ದ ಮೊದಲ ಪಾಠ ಹಿರಿಯರನ್ನು ಗೌರವಿಸಿ ಎಂಬುದು. ಅಜ್ಜನಂತೆ ನಟನೆ ಮಾಡುತ್ತ ಕೆಮ್ಮಿದರೆ, ಅಜ್ಜಿಯಂತೆ ಸೀನಿದರೆ, ದೊಡ್ಡರಿಂದ ಬೈಸಿಕೊಳ್ಳುತ್ತಿದ್ದೆವು. ಅವರು ಒಳಗಿನಿಂದ ಕೂಗಿದರೆ ಇದ್ದಲ್ಲಿಂದ ಓಡಿ ಹೋಗಬೇಕು. ಇಲ್ಲವಾದರೆ ದೊಡ್ಡವರು ಬೈಯುತ್ತಿದ್ದರು. ಮನೆಯ ಎಲ್ಲ ನಿರ್ಣಯಗಳೂ ಅವರ ನೇತೃತ್ವದಲ್ಲಿಯೇ ನಡೆಯಬೇಕು. ಅವರ ಮಾತೇ ಅಂತಿಮ. ಅವರಿಗೆ […]

ಹಿರಿಯ ಹಾಗೂ ಕಿರಿಯ ತಲೆಮಾರುಗಳ ಹೊಂದಾಣಿಕೆ ಹೇಗೆ?

ಹಿರಿಯ ಹಾಗೂ ಕಿರಿಯ ತಲೆಮಾರುಗಳ ಹೊಂದಾಣಿಕೆ ಹೇಗೆ? ಹಿರಿಯ ಹಾಗೂ ಕಿರಿಯ ತಲೆಮಾರುಗಳಲ್ಲಿ ಹೊಂದಾಣಿಕೆಯ ಸಾಧ್ಯತೆ ಹೇಗೆ? ಒಂದು ವೃಕ್ಷವು ಹೂ-ಕಾಯಿ-ಹಣ್ಣುಗಳನ್ನು ಹೊತ್ತು ನಳನಳಿಸುವಲ್ಲಿ ಚಿಗುರಿನಷ್ಟೇ ಬೇರೂ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ತಾಯಿಬೇರನ್ನು ಮರೆತು ಹಸಿರು ಉಳಿಸಿಕೊಂಡ ಮರವನ್ನು ನಾವೆಂದಾದರೂ ನೋಡಿರುವೆವೆ? ಅದೇ ರೀತಿ ಬೇರು ಕಡಿದಮೇಲೆ ವೃಕ್ಷ ಚಿಗುರು ಹೊತ್ತು ನಿಂತ ಉದಾಹರಣೆಯಿದೆಯೇ? ಮಾನವನ ಜೀವನವೂ ಕೂಡ ವೃಕ್ಷದಂತೆಯೇ. ಸಸಿಯಿಂದ ವೃಕ್ಷವಾಗುವವರೆಗಿನ ಅವನ ಅನುಭವದ ಕಣಜದಲ್ಲಿ ದುಃಖ, ಸುಖ, ನೋವು ನಲಿವು ಎಲ್ಲವೂ ಇವೆ. […]

ನೀವು ಬಲು ಜೋರೂ…

ನೀವು ಬಲು ಜೋರೂ… “ಪಾಪ… ನಿಮ್ಮವ್ರು ಸಂಭಾವಿತರು… ನೀವ ಅಗದೀ ಜೋರ ಬಿಡ್ರಿ.. ” ಇಂಥ ಮಾತುಗಳನ್ನು ಹೆಚ್ಚಾಗಿ ಹೆಣ್ಣು ಮಕ್ಕಳಾದ ನಾವು ಕೇಳೇ ಇರುತ್ತೇವೆ. ಆಗೆಲ್ಲಾ ನನ್ನ ಮನಸ್ಸಿಗೆ ಬೇಸರವಾಗುತ್ತದೆ. ಹೆಣ್ಣು ಹೀಗೆ ಜೋರಾಗಲು ಕಾರಣಗಳೇನು ಎನ್ನುವುದನ್ನು ಯಾರಾದರೂ ಚಿಂತಿಸಿದ್ದಾರೆಯೇ? ಹೆಣ್ಣಿನ ಸಂಬಂಧಿಕರು, ಗಂಡನ ಕಡೆಯವರು, ಅಷ್ಟೇ ಏಕೆ ಕೆಲಸದವರು, ಅಕ್ಕ ಪಕ್ಕದವರು.. ಮಕ್ಕಳ ಗೆಳೆಯ ಗೆಳತಿಯರು.. ಎಲ್ಲರಿಗೂ ಈ ಬಡಪಾಯಿಯ ಜೋರಿನ ಮೇಲೆಯೇ ಕಣ್ಣು. “ರೀ, ಸಮಯಕ್ಕೆ ಸರಿಯಾಗಿ ಮನೆಗೆ ಬರ್ರೀ… ಈ ಅತಿಯಾದ […]

ಮನೋಭಾವ ಅಥವಾ ಮನೋವೃತ್ತಿ

ಮನೋಭಾವ ಅಥವಾ ಮನೋವೃತ್ತಿ ಮನೋವೃತ್ತಿ ಅಥವಾ ಮನೋಭಾವ ಎಂದರೇನು? ಮನೋವೃತ್ತಿ ಎಂದರೆ ನಮ್ಮ ಆಂತರಿಕ ಭಾವನೆ. ಇದು ನಮ್ಮ ವರ್ತನೆಯಿಂದ ಅಭಿವ್ಯಕ್ತಿಗೊಳ್ಳುತ್ತದೆ. ಇದು ನಮ್ಮ ಜೀವನದ ಬಗೆಗಿನ ನಮ್ಮ ಧೋರಣೆ. ಸಾಮಾನ್ಯವಾಗಿ ಇದು ನಮ್ಮ ಅನುಭವಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಇತರರನ್ನು ನಮ್ಮೆಡೆಗೆ ಆಕರ್ಷಿಸುವ ಅಥವಾ ನಮ್ಮಿಂದ ದೂರಕ್ಕೆ ಸರಿಸುವಂಥ ಶಕ್ತಿ ಹೊಂದಿರುವ ಭಾವ. ನಮ್ಮ ಮನೋಭಾವವು ಧನಾತ್ಮಕವಾಗಿದ್ದರೆ ಆದು ನಮ್ಮ ಪ್ರಗತಿ ಹಾಗೂ ವಿಕಾಸಕ್ಕೆ ಪೂರಕವಾಗುತ್ತದೆ. ಒಂದು ವೇಳೆ ನಮ್ಮದು ಕಠಿಣ ಮನೋಭಾವವಾಗಿದ್ದರೆ ಇದರಿಂದ ನಾವು […]

ಆನ್ಲೈನ್ ಶಾಪಿಂಗ್ ಎಂಬ ಬಯಲ ಭೂತ

ಆನ್ಲೈನ್ ಶಾಪಿಂಗ್ ಎಂಬ ಬಯಲ ಭೂತ “ನನಗ ಮನೀಕೆಲಸಾ, ಆಫೀಸ್ ಕೆಲಸಾನ ರಗಡ ಆಗಿಬಿಡತದ.. ಯಾತಕ್ಕೂ ಪುರಸತ್ತ ಸಿಗಂಗಿಲ್ಲಾ… ಹಿಂಗಾಗಿ ಮಾರ್ಕೆಟ್ ಕ ಹೋಗಲಿಕ್ಕೂಆಗಿಲ್ಲಾ.. ಅವ್ವನ ಗುಳಿಗಿ ಕಡೀ ಸ್ಟ್ರಿಪ್ ಸುರೂ ಆಗೇದ….. ಛೋಟೀ ಡೈಪರ್ ಖಾಲಿ ಆಗ್ಲಿಕ್ಕೆ ಬಂದಾವ.. ನಾಳಿಗೆ ಬಿಟ್ಟದ್ದ ಬಿಟ್ಟು ಮಾರ್ಕೆಟ್ ಕ ಹೋಗಬೇಕು…” ನಂದಿನಿಯ ಗೊಣಗಾಟ ಕೇಳಿದ್ದ ತೃಪ್ತಿ “ವೈನೀ, ನೀವಿನ್ನೂ ಯಾ ಕಾಲದಾಗಿದ್ದೀರಿ? ಈಗಿನ ಪುರಸೊತ್ತಿಲ್ಲದ ಜಗತ್ತಿಗೆ ಅನುಕೂಲ ಆಗೋಹಂಗ ಆನ್ಲೈನ್ ಶಾಪಿಂಗ್ ಬಂದದ… ಇತ್ತೀಚೆಗೆ ಯಾರೂ ಮಾರ್ಕೆಟ್ ಕ […]

ಮಹಿಳಾ ಸಾಹಿತ್ಯ… ಅಂದು-ಇಂದು…

ಮಹಿಳಾ ಸಾಹಿತ್ಯ… ಅಂದು-ಇಂದು… ಪ್ರಾಚೀನ ಕಾಲದಿಂದಲೂ ಮಹಿಳೆ ಇಡೀ ಜಗತ್ತಿನಲ್ಲಿಯೇ ಎರಡನೆಯ ದರ್ಜೆಯ ಪ್ರಜೆ ಎಂದು ಗುರುತಿಸಲ್ಪಟ್ಟವಳು. ಆಯಾ ಕಾಲದಲ್ಲಿ ರಚಿಸಲ್ಪಟ್ಟ ಧರ್ಮಗ್ರಂಥಗಳನ್ನು ಅನುಸರಿಸಿ “ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಾ”, ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಮುಂತಾದ ಮಾತುಗಳನ್ನು ಅನುಸರಿಸುತ್ತ ಅವುಗಳಲ್ಲಿಯ ನಿಯಮಗಳನ್ನು ತಮ್ಮ ಮನಬಂದಂತೆ ತಿರುಚುತ್ತ ಈ ಪಿತೃಪ್ರಧಾನ ಕುಟುಂಬ ಪದ್ಧತಿ ತನ್ನ ದೌರ್ಜನ್ಯವನ್ನು ಅವಳ ಮೇಲೆ ಹೇರುತ್ತಲೇ ಬಂದಿದೆ. ವೇದಕಾಲದಲ್ಲಿ ಸ್ತ್ರೀಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿತ್ತು ಎಂದು ಹೇಳಿ ಮೈತ್ರಿ, ಗಾರ್ಗಿ ಮುಂತಾದ ಕೆಲವೇ […]

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ನಿಜ. ಮದುವೆಗಳೇನೋ ಸ್ವರ್ಗ ದಲ್ಲೇ ನಡೆಯುತ್ತವೆ.. ಅಂದರೆ ದೇವರು ನಮ್ಮ ಜೊತೆಗಾರನನ್ನು ಅಲ್ಲಿಯೇ ಜೋಡಿಸಿಯೆ ಕಳಿಸಿದ್ದರೂ ಇಲ್ಲಿ ಅವನನ್ನು ಈ ಕೋಟಿಗಟ್ಟಲೆ ಜನರಲ್ಲಿ ಹುಡುಕುವ ಪ್ರಕ್ರಿಯೆ ನಡೆಯಬೇಕಲ್ಲ… ಅದೇ ಕಷ್ಟದ ಕೆಲಸ. ಜಾತಕ ಹೊಂದಿಸಿ, ಮನೆ ಮನೆತನಗಳನ್ನು ಪರೀಕ್ಷಿಸಿ ಮಾಡುವ ಮದುವೆಗಳೂ ಕೂಡ ಒಮ್ಮೊಮ್ಮೆ ತಪ್ಪು ಅಡ್ರೆಸ್ಗೆ ಹೋಗಿ ಮಿಸ್ಡ್ ಮೇಲ್ ಡೆಲಿವರಿ ಆಗುವುದುಂಟು. ಇದೊಂದು ಮಧುರ ಬಂಧ. ಇಲ್ಲಿ ಮನಸ್ಸುಗಳು ಹೊಂದಬೇಕೇ ಹೊರತು ಜಾತಕಗಳಲ್ಲ. ಅದನ್ನು ನಾವು ತಿಳಿಯುವ ಅಥವಾ ತಿಳಿಹೇಳುವ […]