ಚಿನ್ಮಯಿ ಕೈ-ಕಾಲು ಮುಖ ತೊಳೆದು ದೇವರ ಮುಂದೆ ‘ಶುಭಂ ಕರೋತಿ’ ಹೇಳುತ್ತಿದ್ದ ಮುದ್ದು ಚಿನ್ಮಯಿ ಅರ್ಧಕ್ಕೆ ನಿಲ್ಲಿಸಿ-“ಅಮ್ಮಾ, ಒನ್ಸ್ ಫಾರ್ ಆಲ್ ಅಂದ್ರೇನು?” ಎಂದಳು. “ಮುದ್ದೂ, ದೇವರ ಸ್ತೋತ್ರ ಹೇಳುವಾಗ ಬೇರೆ ಮಾತಾಡಿದ್ರ ದೇವ್ರಿಗೆ ಸಿಟ್ಟು ಬರ್ತದ” ಎಂದ ನನ್ನ ಮಾತಿಗೆ- “ಏಯ್, ಹೋಗ ನೀ ಬರೇ ಸುಳ್ಳು ಮಾತಾಡ್ತಿ. ನಂಗ ಚಂಪಾಮಾಮಿ ಹೇಳ್ಯಾರ, ದೇವ್ರು ನನ್ನಂಥ ಪುಟ್ಟ ಮಕ್ಕಳ ಮ್ಯಾಲ ಎಂದೂ ಸಿಟ್ಟಿಗೆ ಏಳೂದಿಲ್ಲಂತ, ಮಕ್ಕಳಂದ್ರ ಅಂವಗ ಭಾಳಾ ಪ್ರೀತಿ” ಎಂದುತ್ತರಿಸಿದಳು. ಕೆಲಸ ಮುಗಿದ ಮೇಲೆ […]
Author: nandagarge
ಸಾಪೇಕ್ಷ
ಸಾಪೇಕ್ಷ ಬಹಳ ದಿನಗಳ ನಂತರ ಆ ಆಫೀಸಿನಲ್ಲೊಂದು ನಿವೃತ್ತಿಯ ಸಮಾರಂಭ ಏರ್ಪಟ್ಟಿತ್ತು. ಸುಮಾರು ಹನ್ನೊಂದು ವರ್ಷಗಳಿಂದಲೂ ಅದೇ ಆಫೀಸಿನಲ್ಲಿ ಕೆಲಸ ಮಾಡುತ್ತ ತಮ್ಮ ಉತ್ತಮ ವ್ಯಕ್ತಿತ್ವದಿಂದ ಎಲ್ಲರ ಮನಸ್ಸನ್ನು ಗೆದ್ದ ಶ್ರೀನಿವಾಸಮೂರ್ತಿಯವರದು. ‘ಅಜಾತ ಶತ್ರು’ ಎಂದೇ ಆಫೀಸಿನಲ್ಲಿ ಹೆಸರುವಾಸಿಯಾಗಿದ್ದ ಅವರ ಬಗೆಗೆ ಎಲ್ಲರೂ ಹೇಳುವವರೇ, ರೀತಿ ಬೇರೆ, ಅನುಭವ ಬೇರೆ, ಆದರೆ ಎಲ್ಲರದೂ ಭಾವ ಮಾತ್ರ ಒಂದೇ- “ಅವರಂತಹ ಒಳ್ಳೆಯ ವ್ಯಕ್ತಿಯನ್ನು ತಾವು ಕಂಡಿಲ್ಲ..” ಎನ್ನುವುದು. ಅದನ್ನು ಕೇಳಿ ಮೂರ್ತಿಯವರ ಮುಖದಲ್ಲಿ ಧನ್ಯತೆ ಸಂತಸಗಳಿಲ್ಲ. ಏನೋ ಉದ್ವಿಗ್ನತೆ, […]
ನೂಪುರ
ನೂಪುರ ಸಂಗೀತ ಕ್ಷೇತ್ರದಲ್ಲಿ ನಾಲ್ಕು ದಶಕಗಳನ್ನೂ ಮೀರಿ ಸೇವೆ ಸಲ್ಲಿಸಿದ ರೇಶಮ್ ಬಾಯಿ ಅದಕ್ಕಾಗಿ ರಾಷ್ಟ್ರಪತಿ ಪಾರಿತೋಷಕವನ್ನು ಸ್ವೀಕರಿಸಿ ಅದೇ ಹಿಂತಿರುಗಿ ಬಂದಿದ್ದರು. ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗಿದ ಅವರು ಮತ್ತೆ ಏಕಾಕಿಯಾಗಿದ್ದರು. ಗಡಿಬಿಡಿ, ಸಂಭ್ರಮ, ಕರತಾಡನ ತುಂಬಿದ ಸಮಾರಂಭದಲ್ಲಿ ಕಳೆದುಹೋಗಿದ್ದ ಅವರಿಗೆ ಆಗ ಕಾಣದ ದಣಿವು, ಆಯಾಸ ಈಗ ತಲೆದೋರಿತ್ತು. ವೃದ್ಧಾಪ್ಯದೆಡೆಗೆ ವಾಲುತ್ತಿದ್ದ ಅವರ ಶರೀರ ಇದನ್ನೆಲ್ಲ ತಡೆದುಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿತ್ತು. ಆದರೆ ನಾಲ್ಕು ದಶಕಗಳಲ್ಲಿ ಸಾವಿರಕ್ಕೂ ಮೀರಿದ ಹಾಡುಗಳನ್ನು ಹೇಳಿದ ಅವರ ಧ್ವನಿ ಮಾತ್ರ […]
ಡರನಾ ಕ್ಯಾ?
ಡರನಾ ಕ್ಯಾ? ಸುಮಾರು ಎರಡು – ಮೂರು ದಿನಗಳಿಂದ ಇಬ್ಬರೂ ಸೊಸೆಯರು ಗುಸುಗುಸು ಮಾತಿನಲ್ಲಿ ಏನೋ ಚರ್ಚೆ ಮಾಡುತ್ತಿರುವುದು ಸುಶೀಲಮ್ಮನ ಗಮನಕ್ಕೆ ಬಂದಿತ್ತು. ಅವರು ಕೇಳಲು ಹೋಗಿರಲಿಲ್ಲ. ಸೊಸೆಯರೊಡನೆ ಅವರ ಸಂಬಂಧ ಅತ್ತೆಯಂತಿರದೇ ಒಬ್ಬ ತಾಯಿಯಂತೆಯೇ ಇತ್ತು. ಹೀಗಾಗಿ ಅವರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಹೇಳುವಂಥ ವಿಷಯವಾದರೆ ಅವರಾಗಿಯೇ ಹೇಳುತ್ತಾರೆನ್ನುವುದು ಅವರ ಮತ. ಆದರೆ ಇಂದು ಮತ್ತೆ ಬಟ್ಟೆ ಒಣ ಹಾಕುತ್ತ ಅದೇ ರೀತಿ ಮಾತನಾಡುತ್ತಿದ್ದರು. ಸುಶೀಲಮ್ಮನ ಕುತೂಹಲ ಕೆರಳಿತು. ಒಂದು ನಿಮಿಷ ಸರಿದು ನಿಂತರು. ಲಕ್ಷ್ಮೀ […]
ವೈರಸ್
ವೈರಸ್ “ಸಂಧ್ಯಾ….” ಅತ್ಯಂತ ಸಾವಕಾಶವಾಗಿ ಕರೆದ ಅತ್ತೆಯ ದನಿ ಕೇಳಿಸಿತು ಅವಳಿಗೆ. ಆದರೆ ಸಂಧ್ಯಾಳಿಗೇಕೋ ಎದ್ದು ಮಾತನಾಡಬೇಕೆನ್ನಿಸಲಿಲ್ಲ. ಮತ್ತೊಂದು ಬಾರಿ ಕರೆದು ಅವರು ಹಿಂತಿರುಗಿ ಹೋದರು. ಹೊರಬಾಗಿಲಿನ ಕೀಲಿ ಹಾಕಿ ಅವರು ಹೊರಟುಹೋಗಿದ್ದು ತಿಳಿಯಿತು. ವಿವರಣೆ ಇರುವ ಚೀಟಿ ಹೊರಗೆ ಟೇಬಲ್ ಮೇಲೆ ಇರುತ್ತದೆ. ಬೇಕೆಂದಾಗ ತಾನು ತನ್ನಲ್ಲಿರುವ ಕೀಲಿಯಿಂದ ತೆಗೆದು ಹೋಗಬಹುದು. ಮತ್ತೆ ನಿದ್ರಿಸಲು ಪ್ರಯತ್ನಿಸಿದಳು ಸಂಧ್ಯಾ. ಊಹೂಂ, ರಾತ್ರಿಯೇ ಬಾರದ ನಿದ್ದೆ ಈಗಲೂ ಹತ್ತಿರ ಸುಳಿಯಲಿಲ್ಲ. ಮನಸ್ಸು ಹಿಂದೆ ಜಾರಿತು. ಎರಡು ವರ್ಷದ ಹಿಂದೆ […]
ಮರೆತ ಭೂಗೋಳ
ಮರೆತ ಭೂಗೋಳ ‘ಸೂರ್ಯನು ಮುಳುಗಿದನೆಂದು ಅಳುತ್ತ ಕುಳಿತರೆ ತಾರೆಗಳನ್ನು ನೋಡುವ ಭಾಗ್ಯವೂ ನಿನಗೆ ಇಲ್ಲವಾಗುತ್ತದೆ’ -ಹಿಂದೊಮ್ಮೆ ಎಲ್ಲಿಯೋ ಓದಿದ ಮಾತು ಮನಸ್ಸನ್ನು ಆವರಿಸಿತ್ತು. ಆದರೆ ಮನಸ್ಸು ಅದೇ ನಿರಾಶೆ ಮತ್ತು ನಿರಾಸಕ್ತಿಯ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತಿದೆ. ಒಮ್ಮೊಮ್ಮೆ ನನ್ನ ಅಸಹಾಯಕತೆಯ ಬಗೆಗೆ ನನಗೇ ಜಿಗುಪ್ಸೆಯುಂಟಾಗುತ್ತದೆ. ಈಗಲೂ ಸಹ ಪಕ್ಕದಲ್ಲಿರುವ ವಿನೀತಾ ಯಾರೂ ಬಯಸುವಂತಹ ಆದರ್ಶ ಪತ್ನಿ, ತನ್ನ ಮುದ್ದು ಮಾತು ಹಾಗೂ ರೂಪದಿಂದ ಇಡೀ ವಠಾರದಲ್ಲಿಯೇ ಅಚ್ಚುಮೆಚ್ಚಾಗಿರುವ ಅರ್ಪಿತಾ ನನ್ನ ಮುದ್ದುಮಗಳು. ಆದರೂ ನಾನು ಎಷ್ಟೋ ಬಾರಿ […]
ಅನಿಂದಿತಾ
ಅನಿಂದಿತಾ ಅರವಿಂದನ ಮುಖದ ಮೇಲಿನ ಆತಂಕ, ಅಸಹಾಯಕತೆ, ಅವನ ಹೆಂಡತಿ ಯಾಮಿನಿಯ ಮುಖದ ಮೇಲಿನ ಅಸಹನೆ, ಇವೆರಡಕ್ಕೂ ತಾನೇ ಕಾರಣನೇನೋ ಎನ್ನುವ ಕೀಳರಿಮೆಯಿಂದ ಶೂನ್ಯದಲ್ಲಿ ದೃಷ್ಟಿ ನೆಟ್ಟು ಮಲಗಿದ ಅರವಿಂದನ ತಂದೆ ಸದಾಶಿವರಾಯರು, ಎಲ್ಲರನ್ನೂ ಮೌನವಾಗಿ ನೋಡಿದಳು ನರ್ಸ್ ಅನಿಂದಿತಾ. ಸದಾಶಿವರಾಯರಿಗೆ ಇಂಜೆಕ್ಷನ್ ಕೊಟ್ಟು ಹೊರಟರೆ ಅಂದಿಗೆ ಅವಳ ಡ್ಯೂಟಿ ಇರದಿದ್ದರಿಂದ ಮನೆಗೆ ಹೋಗಿ ವಿರಮಿಸಬೇಕೆಂದುಕೊಂಡಿದ್ದಳು. ಆದರೆ ಅವರ ಮಾತುಕತೆಯಿಂದ ಅವಳಿಗೆ ಪರಿಸ್ಥತಿ ಅರ್ಥವಾಗಿತ್ತು. ಅಂತೆಯೇ ಕೇಸ್ ಶೀಟ್ ನೋಡುವ ನೆವದಲ್ಲಿ ಸ್ವಲ್ಪ ಹೊತ್ತು ಅಲ್ಲಿಯೇ ನಿಂತಳು. […]
ನೀನೊಲಿದರೆ…
ನೀನೊಲಿದರೆ… ರಾತ್ರಿ ಮಲಗುವ ತಯಾರಿಯಲ್ಲಿದ್ದ ಜಗದೀಶನಿಗೆ ಫೋನ್ ಘಂಟೆ ಕೇಳಿ ರಿಸೀವರ್ ಎತ್ತಿದ. ಆರು ತಿಂಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಮುದ್ದಿನ ಮಗಳು ಜ್ಯೋತಿಯ ಫೋನದು. “ಹಲೋ ಪಪ್ಪಾ, ಇವತ್ತು ರಾತ್ರಿ ಬಸ್ಸಿನಿಂದ ನಾನೂ ಮತ್ತು ಸೌರವ ಹುಬ್ಬಳ್ಳಿಗೆ ಬರ್ಲಿಕ್ಕೆ ಹತ್ತೀವಿ. ನಸುಕಿನಾಗ ಬರ್ತೇವಿ. ಗೇಟ್ ಕೀಲಿ ತೆಗೆದಿಟ್ಟಿರು.” ಜಗದೀಶನಿಗೆ ಅಚ್ಚರಿ. ಜ್ಯೋತಿ ನೀನು ಬಂದು ಹೋಗಿ ಎಂಟು ದಿನಾನೂ ಆಗಿಲ್ಲಾ?” “ಹೌದು ಪಪ್ಪಾ, ಕೆಲಸಾ ಅದ, ನಾಳೆ ಬರ್ತೀವಲ್ಲಾ ಆವಾಗ ಮಾತಾಡೋಣ” ಎಂದು ಫೋನ್ […]
ಕಹಿ ನೆನಪುಗಳು ಬೇಕು ಅರಿಯಲೀ ಬದುಕು
ಕಹಿ ನೆನಪುಗಳು ಬೇಕು ಅರಿಯಲೀ ಬದುಕು “ಸುನೀ ಚಹಾ” ಎಂದು ಕೂಗಿ ಮತ್ತೆ ಮುಸುಕೆಳೆದ ಅರವಿಂದ, ಚಹಾ ಬರುವವರೆಗೂ ಮತ್ತೈದು ನಿಮಿಷ ಮಲಗುವ ಆಸೆಯಿಂದ. ಕಿವಿಗಳು ಗೆಜ್ಜೆಯ ಶಬ್ದದ ನಿರೀಕ್ಷೆಯಲ್ಲಿದ್ದವು. ಯಾವುದೇ ಶಬ್ದವಿಲ್ಲ. ಮತ್ತೆರಡು ನಿಮಿಷಕ್ಕೆ “ಅರೂ ಚಹಾ” ಎಂದ ತಂದೆಯ ಧ್ವನಿ ಕೇಳಿ ಅಚ್ಚರಿಯಿಂದ ಮುಸುಕು ತೆಗೆದ. “ಅಪ್ಪಾಜೀ ನೀವ್ಯಾಕ ತಂದ್ರಿ? ಸುನೀ ಎಲ್ಲಿ?” “ಯಾಕಪ್ಪಾ ನಾ ತಂದ ಚಹಾ ಸಪ್ಪಗನಿಸ್ತದ?” “ಛೇ ಹಂಗಲ್ಲ, ನೀವ್ಯಾಕ ಇಷ್ಟು ಮ್ಯಾಲ ಹತ್ತಿ ಬರ್ಬೇಕಂತ ಅಷ್ಟ.” “ಸುನೀತಾ ನಸುಕಿನ್ಯಾಗ […]