Your Cart

Need help? Call +91 9535015489

📖 Print books shipping available only in India. ✈ Flat rate shipping

ಈ ಕಾಡು ನದಿ ಮಣ್ಣು

ಈ ಕಾಡು ನದಿ ಮಣ್ಣು ಈ ಕಾಡು ನದಿ ಮಣ್ಣು ದೇವರ ಕಾಯ, ಏನಂತ ಹಾಡಲಿ ದೇವರ ಮಾಯಾ, ಈ ಕಾಡು ನದಿ ಮಣ್ಣು ದೇವರ ಕಾಯ, ಎಸ್ಟ್ ಅಂತ ಹಾಡಲಿ ದೇವರ ಮಾಯಾ, ಕಿಮ್ಮುವ ಹೂವಿನ ಘಮ್ಮನೆ ವಾಸನೆ, ಕಿಮ್ಮುವ ಹೂವಿನ ಘಮ್ಮನೆ ವಾಸನೆ, ಸುಮ್ಮನೆ ಸಡಗರ ಏನನ್ನಲಿ, ಸುಮ್ಮನೆ ಸಡಗರ ಏನನ್ನಲಿ, ಸುಡಗಾಡದೊಳಗೆ ಹೂ ಬಿಡುವ ಮುಳ್ಳಿಗೆ, ಸುಡಗಾಡದೊಳಗೆ ಹೂ ಬಿಡುವ ಮುಳ್ಳಿಗೆ, ಏನೆಂಬ ಹೆಸರಿಂದ ಕರೆಯುವನೇ, ಏನೆಂಬ ಹೆಸರಿಂದ ಕರೆಯುವನೇ, ಈ ಕಾಡು […]

ಬಾ ಸೊಗವೇ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ, ನೀನಾಸಮ್ ರಂಗಗೀತೆಗಳ ದಾಖಲೀಕರಣ. 15 ಡಿಸೆಂಬರ್ 2016ರಂದು ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣ. “ಬಾ ಸೊಗವೇ” / “ಅಹಲ್ಯೆ – 1999” ನೀನಾಸಮ್ ರಂಗಶಿಕ್ಷಣ ಕೇಂದ್ರ – ನಾಟಕಕಾರ / ಗೀತಕಾರ: ಪು.ತಿ.ನರಸಿಂಹಾಚಾರ್ ನಾಟಕ ನಿರ್ದೇಶನ / ಸಂಗೀತ ಸಂಯೋಜನೆ: ಅಕ್ಷರ ಕೆ.ವಿ. ನಿರೂಪಣೆ: ಅಕ್ಷರ ಕೆ.ವಿ. ಗಾಯಕಿಯರು: ವಿದ್ಯಾ ಹೆಗಡೆ, ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ ಸಿದ್ದಿ ಕೀಬೋರ್ಡ್: ರವಿ ಮೂರೂರು, ಶಿಶಿರ ಕೆ.ವಿ. ಹಾರ್ಮೋನಿಯಮ್: […]

ಪದ್ಮಗಂಧಾ (೨೦೧೬)

ನಾಟಕದ ಬಗ್ಗೆ ಪದ್ಮಗಂಧಾ ನಾಟಕದ ಕಥಾವಸ್ತು ಮಹಾಭಾರತವನ್ನು ಆಧರಿಸಿದ್ದು. ಇದರಲ್ಲಿ ವ್ಯಕ್ತವಾಗುವ ತ್ಯಾಗ, ಪ್ರೀತಿ, ವಾತ್ಸಲ್ಯಭಾವ ಇಂದಿನ ಸಮಾಜಕ್ಕೆ ತೀರ ಸನಿಹವಾಗುತ್ತದೆ. ಶ್ರೀಮಂತಿಕೆ ಇರುವಲ್ಲಿ ಪ್ರೀತಿಯ ಕೊರತೆ ಒಂದುಕಡೆ ಆದರೆ ನಿಸರ್ಗದತ್ತ ಸಹಜ ಪ್ರೀತಿ ಇರುವಡೆ ಮಾನವ ನಿರ್ಮಿತಿಯ ಸಂಪತ್ತಿನ ಆಕರ್ಷಣೆ ಇನ್ನೊಂದೆಡೆ. ಇಂತಹ ಮಾನವನ ಸ್ವಾಭಾವಿಕ ಸೆಳೆತಗಳು ಹಸ್ತಿನಾಪುರ ಹಾಗೂ ದಾಸಪುರದಲ್ಲಿ ಕಂಡುಬರುತ್ತದೆ. ಕೊನೆಯಲ್ಲಿ ಈ ಬಯಕೆಗಳು ದೇವವ್ರತನ ತ್ಯಾಗದ ಫಲವಾಗಿ ಈಡೇರುವಂತಾಗುತ್ತದೆ. ಉಪರಿಚರನ ಧಾತುವಿನಿಂದ ಮತ್ಸ್ಯದಲ್ಲಿ ಹುಟ್ಟಿದ ಮಗು ದಾಶರಾಜನಿಗೆ ಸಿಕ್ಕು ಮತ್ಸ್ಯಗಂಧಿಯಾಗಿ ಬೆಳೆಯುತ್ತಾಳೆ. […]

ಸೇತುಬಂಧನ (ಮೇ ೨೦೧೬)

ನಾಟಕದ ಬಗ್ಗೆ: ಟಿ.ಪಿ.ಅಶೋಕ ಅವರ ಬರಹವೊಂದರಿಂದ ಆಯ್ದ ಭಾಗಗಳು ಈ ನಾಟಕವನ್ನು ಒಂದು ಸ್ವತಂತ್ರ ನಾಟಕವಾಗಿಯೂ ಹಾಗೂ ಅಕ್ಷರ ಅವರ ಹಿಂದಿನ ನಾಟಕಗಳಾದ “ಸ್ವಯಂವರ ಲೋಕ” ಮತ್ತು “ಭಾರತ ಯಾತ್ರೆ”ಗಳ ಮುಂದುವರೆದ ಭಾಗವಾಗಿಯೂ ಓದಬಹುದು. “ಸ್ವಯಂವರ ಲೋಕ” ನಾಟಕವು ಹಳೆಯೂರು ಎಂಬ ದ್ವೀಪವೊಂದರಲ್ಲಿ ನಡೆಯುತ್ತದೆ. `ಅಭಿವೃದ್ಧಿ’ಗಾಗಿ ನದಿಯೊಂದಕ್ಕೆ ಅಣೆಕಟ್ಟು ಕಟ್ಟಿದ ಪರಿಣಾಮವಾಗಿ ಹಳೆಯೂರು ಒಂದು ದ್ವೀಪವಾಗಿದೆ. ಅದು ಒಂದು `ಹಿಂದುಳಿದ’ ಪ್ರದೇಶ. ಹೊರ ಜಗತ್ತು ವೇಗವಾಗಿ ಚಲಿಸುತ್ತಿದೆ. ಹಾಗಾಗಿ ವಿದ್ಯಾಭ್ಯಾಸ, ಉದ್ಯೋಗ, ಹೊಸಜೀವನಗಳನ್ನು ಅರಸಿ ಅಲ್ಲಿನ ಅನೇಕರು […]

ಬಹುಮುಖಿ (ಮೇ ೨೦೧೬)

ಬಹುಮುಖಿ – ನಾಟಕ ನಾಟಕದ ಬಗ್ಗೆ: ಇದು ಈವತ್ತಿನ ಕಾಲದಲ್ಲಿ ಜರುಗುವ ನಾಟಕ. ರೋಚಕ ಕಥೆಯೊಂದರ ಬೆನ್ನಟ್ಟಿ ಹೋದ ಪತ್ರಕರ್ತನೊಬ್ಬನಿಗೆ ಎದುರಾಗುವ ಜಗತ್ತು ಇಲ್ಲಿ ಹಲವು ಪಾತಳಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಅವನು ಸೃಷ್ಟಿಸಿದ ಸುದ್ದಿಯ ಮುಖಾಂತರ ಅವನ ಜೀವನದೊಳಕ್ಕೆ ಬರುವ ಜನರು ಅವರವರ ಕಥೆಗಳನ್ನು ಮುಂಚೂಣಿಗೆ ತರುತ್ತಾರೆ ಮತ್ತು ಆ ಮೂಲಕ ಪಲ್ಲಟದ ನೋವು, ಶಹರದ ಬದುಕಿನ ಢಾಂಬಿಕತೆ, ಪೊಳ್ಳು ಸಂಬಂಧಗಳ ಅಸಹನೀಯತೆ, ನಗರವೆಂಬ ಬೆಂಕಿಯೊಳಗೆ ಬಿದ್ದು ಉರಿದುಹೋಗುತ್ತಿರುವ ಜೀವನಕ್ರಮಗಳು ಅನಾವರಣಗೊಳ್ಳುತ್ತವೆ. ನಮ್ಮ ದಿನನಿತ್ಯಗಳನ್ನು ಅನೇಕ ವಿಧಗಳಲ್ಲಿ […]