ನನ್ನ ಮಾಲಿ ಸಹ ರಾಣಿಯ ಪದಕ ಧಾರಿ! ”ನಮ್ಮ ಮನೆಗೆಲಸ ಮತ್ತು ತೋಟದ ಕೆಲಸ ಮಾಡಲು ಕೆಲಸಗಾರರು ಯಾರೂ ಸಿಗುತ್ತನೇ ಇಲ್ಲ,” ಎನ್ನುವ ಗೊಣಗು ಕೇಳಿಸದ ಊರು, ದೇಶ, ಕಾಲವೇ ಇಲ್ಲ. ಈಗಂತೂ ಕೊರೋನಾ ಮಾರಿಯ ಕಾಲದಲ್ಲಿ ಅದು ಇನ್ನೂ ಉಲ್ಬಣಗೊಳ್ಳುತ್ತಿದೆ, ನಮ್ಮ ಊರಾದ ಯು ಕೆ ದ ಡೋಂಕಾಸ್ಟರ್ ನಲ್ಲಿ ಸಹ. ಯಂತ್ರಗಳ ಸೌಲಭ್ಯವಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ನಮ್ಮ ಕೆಲಸ ಹೆಚ್ಚಾಗಿ ನಾವೇ ಮಾಡಿಕೊಳ್ಳುತ್ತೇವೆಯಾದರೂ ನನ್ನಂಥ ವಯಸ್ಸಾದವರ ಮನೆಯಲ್ಲಿ ಕಷ್ಟದಾಯಕ ತೋಟದ ಕೆಲಸಕ್ಕೆ ಸಹಾಯ ಬೇಕಲ್ಲ […]
