Your Cart

Need help? Call +91 9535015489

📖 Print books shipping available only in India. ✈ Flat rate shipping

ಬೋರು – ನೀರು – ಹನಿಗವನ

ಬೋರು – ನೀರು ಊರು ಹೊರಗೊಂದು ಬೋರು ಅದರಲ್ಲಿ ಸಿಹಿ ನೀರು ಊರು ಒಳಗೆ ಹಲವು ಬೋರು ಅವುಗಳಲ್ಲಿ ಇಲ್ಲ ನೀರು —- ರಘೋತ್ತಮ್ ಕೊಪ್ಪರ್

ಮಹಿಳೆ ಇಂದು ಅಂದು ಎಂದೆಂದಿಗೂ ಸೈ

ಮಹಿಳೆ ಇಂದು ಅಂದು ಎಂದೆಂದಿಗೂ ಸೈ                                                               ಲೇಖಕಿ : ಶಿಲ್ಪಾ ರಘೋತ್ತಮ್ ಕೊಪ್ಪರ್ ಮಹಿಳಾ ದಿನಾಚರಣೆ ಬಂದಾಗ ಮಾತ್ರ ಮಹಿಳೆಯರ ಬಗ್ಗೆ ಅಸಂಖ್ಯ ಲೇಖನಗಳು ಎಲ್ಲಾ ದಿನಪತ್ರಿಕೆಗಳಲ್ಲಿ ಮತ್ತು ವಾಹಿನಿಗಳಲ್ಲಿ ರಾರಾಜಿಸುತ್ತವೆ., ಮತ್ತೆ ಅಂತಹ ಲೇಖನಗಳು, ಕಾರ್ಯಕ್ರಮಗಳು ಬರುವುದು ಮುಂದಿನ ವರುಷವೇ! … ಇರಲಿ ನಮಗಾಗಿ ಎಲ್ಲ ದಿನ ಪತ್ರ್ರಿಕೆಗಳಲ್ಲಿ ಒಂದೊಂದು ಪುರವಣಿಗಳಿರುತ್ತವೆ ಮತ್ತು ವಾಹಿನಿಗಳಲ್ಲಿ ವಿಶೇಷ ಕಾರ್ಯಕ್ರಮಗಳಿರುತ್ತವೆ. ಅಷ್ಟು ಸಾಕು. “ಈ ಅಧುನಿಕ ಕಾಲದಲ್ಲಿ ಮಹಿಳೆ ಪುರುಷನಿಗೆ ಸಮಾನವಾಗಿದ್ದಾಳೆ” ಎಂಬ ಮಾತು ಎಲ್ಲ ಕಡೆಗೆ […]

ಮೋಸ ಹೋಗದಿರಿ ಜೋಕೆ !

ಮೋಸ ಹೋಗದಿರಿ! ಜೋಕೆ ಹೊಂಚು ಹಾಕಿ ಸಂಚು ಮಾಡಿ ವಂಚಿಸುವವರು ಇದ್ದಾರೆ ಗುರುವಾರ ಮುಂಜಾನೆ ನನ್ನ ಮೇಲ್ ಬಾಕ್ಸ್ ಗೆ “ಯು ವನ್ ಫ್ರಾಮ್ ಮೈಕ್ರೊಸಾಫ್ಟ್ ಪ್ರ್ರಮೊಷನ್ಸ್” ಅಂತ ಒಂದು ಮೇಲ್ ಬಂತು. ಬೆಳಿಗ್ಗೆ ಬೆಳಿಗ್ಗೆ ಇದೆಂತಾ ಚೋಕ್ ಅಂತೀರಾ. ಅಬ್ಬಾ! ಒಟ್ಟು ಒಂದು ಮಿಲಿಯನ್ ಪೌಂಡ್ಸ್ ಅಂತ ಇತ್ತು. ಇದೆನಪಾ ನನಗೆ ಅಷ್ಟು ಹಣ ಬಂದರೆ ಯಾವ ಕಾರನ್ನು ಕೊಳ್ಳಲಿ, ಮನೆ ಎಲ್ಲಿ ಕಟ್ಟಲಿ ಎಂಬ ನೂರಾರು ಆಸೆಗಳು ತಟ್ಟನೆ ಮನದಲ್ಲಿ ಹುಟ್ಟಿದವು, ಇದು ನಿಜವೇ […]

ಏ.ಟಿ.ಎಂ ನಲ್ಲಿ ಸಾಲಾಗಿ ನಿಂತಾಗ!

ಏ.ಟಿ.ಎಂ ನ ಸರದಿಯಲ್ಲಿ ನಿಂತಾಗ! ತಿಂಗಳು ಶುರುವಾದರೆ ಎಲ್ಲರೂ ಸಂಬಳವನ್ನು ಡ್ರಾ ಮಾಡುವುದಕ್ಕಾಗಿ ಬ್ಯಾಂಕಿಗೆ ಧಾವಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಏ.ಟಿ.ಎಂ (ಅಟೋಮೆಟೆಡ್ ಟೆಲ್ಲರ್ ಮಶಿನ್), (ಆಲ್ ಟೈಂ ಮನಿ ಅಂತಲೂ ಕರೆಯಬಹುದು) ಬಂದಿದೆ. ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಸಂಬಳವನ್ನು ಪಡೆಯಬೇಕಾದ ಪರಿಸ್ಥಿತಿ ಈಗಿಲ್ಲ ಅಂತ ಎಲ್ಲರೂ ನಿಟ್ಟುಸಿರು ಬಿಟ್ಟರೂ ಈ ಸರದಿ ನಿಲ್ಲುವುದು ತಪ್ಪಲಿಲ್ಲ ನೋಡಿ. ಹೌದು ಈಗ ಏ.ಟಿ.ಏಂ. ಕೌಂಟರ್ ಗಳಲ್ಲೂ ಸರದಿ ದೊಡ್ಡದಾಗಿಯೇ ಇರುತ್ತದೆ. ಆ ಸರದಿಯಲ್ಲಿ ಕೆಲವು ಜನರಿಗೆ ಏ.ಟಿ.ಎಂ. […]

ಬೆಂಗಳೂರಿನ ಕನ್ನಡಿಗರಿಗಾಗಿ

ಬೆಂಗಳೂರಿನ ಕನ್ನಡಿಗರಿಗಾಗಿ ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಗಳು ಬರುತ್ತಲೇ ಇವೆ. ಅದಿರಲಿ ಇದೇ ವಿಷಯ ಬೆಂಗಳೂರಿನಲ್ಲಿ ಅತಿರೇಕವಾಗಿ ಬೆಳೆದಿದೆ. ಇದರ ಬಗ್ಗೆ ನನ್ನ ಸ್ನೇಹಿತನೊಬ್ಬ ಮೇಲ್ ಕಳಿಸಿದ, ಅದನ್ನು ಹಾಗೆ ಕನ್ನಡೀಕರಿಸಿದ್ದೇನೆ. ಸ್ವಲ್ಪ ಓದಿ……. ಇದು ನಮ್ಮ ಕರುನಾಡು…….. ಆದರೂ ಇಲ್ಲಿ ಕನ್ನಡಿಗರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ, ಬೇರೆ ರಾಜ್ಯದವರಿಗೆ ಇಲ್ಲಿ ಸುಲಭವಾಗಿ ಉದ್ಯೋಗ ದೊರಕುತ್ತಿವೆ. ಕನ್ನಡಿಗರಿಗೆ ಬೆಂಗಳೂರಿನಲ್ಲಿ ಪ್ಲಾಟ್ ಕೊಳ್ಳುವುದು ಕಷ್ಟ. ಅನ್ಯ ಭಾಷಿಗರಿಗೆ ಅದು ಸುಲಭ, ಕಾರಣ […]

ನಮ್ ಧಾರವಾಡ ಕಡೆ ಆಡೋ ಮಾತನ್ನ ಕೇಳೋ ಮಜಾನ ಬ್ಯಾರೆ

ನಮ್ ಧಾರವಾಡ ಕಡೆ ಆಡೋ ಮಾತನ್ನ ಕೇಳೋ ಮಜಾನ ಬ್ಯಾರೆ         ನಮ್ ಧಾರವಾಡ ಕಡೆ ಆಡೋ ಮಾತನ್ನ ಕೇಳೋ ಮಜಾನ ಬ್ಯಾರೆ. ವಿಷಯ ಗಂಭೀರ ಇರ್ಲಿ ಬಿಡ್ಲಿ, ಹಿಂದಮುಂದ ಯಾರಿದ್ರೂ ದರಕಾರ ಮಾಡ್ದ ಹಿರಿಯರಿಬ್ಬರು, ‘ಏ ನಮ್ ಕಾಲ್ದಾಗ ಹಿಂಗಿರ್ಲಿಲ್ಲ ಬಿಡ್ರಿ’ ಅಂತ ಹೊಡ್ಯೋ ಹರಟಿ ಅದ ಅಲ್ಲ, ಅದು ಡ್ಯಾಮಿನ್ಯಾಗಿಂದ ಬಿಟ್ಟ ನೀರಿನ್ಹಂಗ. ತಮ್ಮ ಕಾಲದಾಗಿನ ಮೌಲ್ಯಗಳ ಬಗ್ಗೆ ಅಭಿಮಾನನೂ ಇರ್ತದ, ಈಗಿನ ಹುಡುಗರಿಗೆ ಪಾಠಾನೂ ಇರ್ತದ. ಇವ್ರೇನ್ ಮಾತಾಡ್ತಾರ ಅಂತ […]