ಹಿಂದೂ ಮುಸ್ಲಿಂ ಭ್ರಾತೃತ್ವದ ಮಾದರಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್: ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್ ಮತ್ತು ಅಷ್ಫಾಕ್ ಉಲ್ಲಾ ಖಾನ್ ರದ್ದು ಒಂದು ವಿಶೇಷ ಅಧ್ಯಾಯ. ಹಿಂದೂ ಮುಸ್ಲಿಂ ಭ್ರಾತೃತ್ವದ ಒಂದು ಅಪರೂಪದ ಉದಾಹರಣೆ ಈ ಇಬ್ಬರದು. ಇವರಿಬ್ಬರ ಮಧ್ಯೆ ಮತೀಯ ಸಂಘರ್ಷ ತಂದಿಡುವ ಬ್ರಿಟಿಷರ ಹುನ್ನಾರಕ್ಕೆ ದಿಟ್ಟ ಉತ್ತರವಾಗಿ ನೇಣಿಗೇರುವವರೆಗೂ ಒಂದಾಗಿ ರಾಷ್ಟ್ರೀಯ ಚಿಂತನೆಗೆ ತಮ್ಮನ್ನು […]
Author: ramachandrahegde
ವಿದೇಶಿ ನೆಲದ ಭಾರತಪ್ರೇಮಿ ಮೇಡ೦ ಭಿಕಾಜಿ ಕಾಮಾ
ವಿದೇಶಿ ನೆಲದ ಭಾರತಪ್ರೇಮಿ ಮೇಡ೦ ಭಿಕಾಜಿ ಕಾಮಾ ಮೇಡ೦ ಭಿಕಾಜಿ ಕಾಮಾ: ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿ ಮೆರೆದ ಮಹಿಳೆಯರಲ್ಲಿ ಒಬ್ಬರು ಮು೦ಬೈನ ಮೇಡ೦ ಭಿಕಾಜಿ ಕಾಮಾ. ಮೇಡಂ ಕಾಮಾ ಚಿಕ್ಕಂದಿನಿಂದಲೂ ಅಪಾರ ದೇಶಾಭಿಮಾನಿ. ತೀವ್ರ ಪ್ಲೇಗ್ ರೋಗಕ್ಕೆ ತುತ್ತಾಗಿ ಆಕೆ ಬಂಧುಗಳ ಒತ್ತಾಯದ ಮೇರೆಗೆ ದೇಶ ತ್ಯಜಿಸಿ ಲಂಡನ್ ಗೆ ಹೋಗಬೇಕಾಯಿತು. ಅಲ್ಲಿ ಗುಣಮುಖಳಾದ ಕಾಮಾ ಅಲ್ಲೇ ತನ್ನ ರಾಷ್ಟ್ರ ಜಾಗೃತಿಯ ಕಾರ್ಯಗಳನ್ನು ಆರಂಭಿಸಿದಳು. ಪರದೇಶದಲ್ಲೇ ಇತರ ದೇಶಭಕ್ತರೊಡಗೂಡಿ ಭಾರತದ ಧ್ವಜವನ್ನು ರೂಪಿಸಿದ ಮೇಡಂ […]
ರಾಷ್ಟ್ರಗುರು ಭಾರತರತ್ನ ಪಂಡಿತ ಮದನ ಮೋಹನ ಮಾಳವೀಯ
ರಾಷ್ಟ್ರಗುರು ಭಾರತರತ್ನ ಪಂಡಿತ ಮದನ ಮೋಹನ ಮಾಳವೀಯ ಪಂಡಿತ ಮದನ ಮೋಹನ ಮಾಳವೀಯ: ಭಾರತೀಯ ಸ್ವಾತಂತ್ರ್ಯ ಹೋರಾಟ ಹಾಗೂ ನಂತರದ ಭವ್ಯ ಭಾರತದ ಭವಿಷ್ಯದ ನಿರ್ಮಾಣದಲ್ಲಿ ಪಂಡಿತ ಮದನ ಮೋಹನ ಮಾಳವೀಯರ ಪಾತ್ರ ಬಹು ದೊಡ್ಡದು. ಗಾಂಧೀಜಿಯವರು ರಾಷ್ಟ್ರಪಿತನಾದರೆ ಪಂಡಿತ ಮದನ ಮೋಹನ ಮಾಳವೀಯರು “ರಾಷ್ಟ್ರಗುರು” ಎನ್ನಬೇಕು. ಭಾರತೀಯ ಸಂಸ್ಕೃತಿ ಪರಂಪರೆಯ ಉಳಿವಿಗಾಗಿ, ಭಾರತೀಯ ಚಿಂತನೆಯ ಶಿಕ್ಷಣದ ಪ್ರಸಾರಕ್ಕಾಗಿ ದೇಶಾದ್ಯಂತ ಭಿಕ್ಷೆ ಎತ್ತಿ ‘ಬನಾರಸ್ ಹಿಂದೂ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿದ ಮಹನೀಯ ಮಾಳವೀಯರು. ಸ್ವಾತಂತ್ರ್ಯ ಹೋರಾಟಗಾರ, ಕವಿ-ಸಾಹಿತಿ, ಪತ್ರಿಕೆಗಳನ್ನು […]
ಉತ್ತರ ಕರ್ನಾಟಕದ ಕ್ರಾಂತಿ ಸಿಂಹಗಳು : ಹಲಗಲಿಯ ಬೇಡರು
ಉತ್ತರ ಕರ್ನಾಟಕದ ಕ್ರಾಂತಿ ಸಿಂಹಗಳು : ಹಲಗಲಿಯ ಬೇಡರು ಹಲಗಲಿಯ ಬೇಡರು: ಬ್ರಿಟಿಷ್ ಸರ್ಕಾರದ ದೌರ್ಜನ್ಯ ದೇಶದಾದ್ಯಂತ ಆವರಿಸಿದ್ದ ಕಾಲ. ಅದಕ್ಕೆ ಉತ್ತರವಾಗಿ 1857 ರಲ್ಲಿ ದೇಶದ ವಿವಿದೆಡೆಗಳಲ್ಲಿ ಪ್ರಖರ ಹೋರಾಟ ಆರಂಭವಾಯಿತು. 1857 ರ ನವೆಂಬರ್ ನಲ್ಲಿ ಆಂಗ್ಲ ಸರ್ಕಾರ ‘ನಿಶ್ಶಸ್ತ್ರೀಕರಣ ಕಾನೂನನ್ನು’ ಜಾರಿಗೆ ತಂದು ದೇಶದ ಯಾರೂ ತಮ್ಮ ಬಳಿ ಯಾವುದೇ ಶಸ್ತ್ರಗಳನ್ನು ಹೊಂದುವಂತಿಲ್ಲ ಎಂಬ ಕರಾಳ ನಿಯಮವನ್ನು ಹೇರಿತು. ಅದರ ಪ್ರಕಾರ ಎಲ್ಲರೂ ತಮ್ಮಲ್ಲಿದ್ದ ಶಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕಾಯ್ತು. ಆದರೆ ಬೇಡರಿಗೆ ಆಯುಧಗಳೇ […]
ವಿದೇಶದಿಂದ ಬಂದ ವಾತ್ಸಲ್ಯಮೂರ್ತಿ – ಭಾರತಪ್ರೇಮಿ ಸೋದರಿ ನಿವೇದಿತಾ
ವಿದೇಶದಿಂದ ಬಂದ ವಾತ್ಸಲ್ಯಮೂರ್ತಿ – ಭಾರತಪ್ರೇಮಿ ಸೋದರಿ ನಿವೇದಿತಾ ಸೋದರಿ ನಿವೇದಿತಾ (ಮಾರ್ಗರೇಟ್ ಎಲಿಜಬೆತ್ ನೊಬೆಲ್) : ವಿದೇಶಿ ನೆಲದಲ್ಲಿ ಹುಟ್ಟಿ ಭಾರತದ ಸೇವೆಗೆ ತನ್ನ ಅರ್ಪಿಸಿಕೊಂಡ, ಭಾರತಕ್ಕಾಗಿಯೇ ತನ್ನ ಪೂರ್ತಿ ಜೀವನ ಅರ್ಪಿಸಿದ ಐರ್ಲೆಂಡ್ ದೇಶದ ಹೆಣ್ಣುಮಗಳು ಮಾರ್ಗರೇಟ್ ಎಲಿಜಬೆತ್ ನೊಬೆಲ್. ಸ್ವಾಮಿ ವಿವೇಕಾನಂದರ ಭಾಷಣ ಹಾಗೂ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಭಾರತದೆಡೆಗೆ ಆಕರ್ಷಿತರಾದ ಮಾರ್ಗರೇಟ್ ಸ್ವಾಮಿ ವಿವೇಕಾನಂದರಿಂದ ಬ್ರಹ್ಮಚರ್ಯ ಹಾಗೂ ಸೇವೆಯ ದೀಕ್ಷೆ ಪಡೆದು ‘ಸೋದರಿ ನಿವೇದಿತಾ’ ಆದರು. ಬಾಲ್ಯದಿಂದಲೇ ಆಧ್ಯಾತ್ಮದ ಸೆಳೆತ ಹೊಂದಿದ್ದ […]
ಆದಿವಾಸಿ ಜನರ ಅಪ್ರತಿಮ ನಾಯಕ – ಕ್ರಾಂತಿಕಾರಿ ಅಲ್ಲೂರಿ ಸೀತಾರಾಮರಾಜು
ಆದಿವಾಸಿ ಜನರ ಅಪ್ರತಿಮ ನಾಯಕ – ಕ್ರಾಂತಿಕಾರಿ ಅಲ್ಲೂರಿ ಸೀತಾರಾಮರಾಜು ಅಲ್ಲೂರಿ ಸೀತಾರಾಮರಾಜು: ಭಾರತದ ಸ್ವಾತಂತ್ರ್ಯಕ್ಕಾಗಿ, ಆದಿವಾಸಿ ಗುಡ್ಡಗಾಡು ಜನಾಂಗಗಳ ಹಕ್ಕುಗಳಿಗೆ ತನ್ನ ಪ್ರಾಣವನ್ನು ತೆತ್ತ ಕ್ರಾಂತಿಕಾರಿ ಹೋರಾಟಗಾರ, ಭಾರತದ ನೆಲದಲ್ಲಿ ತಮ್ಮದೇ ಆದ ಇತಿಹಾಸ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವ, ಈ ನೆಲದ ನಿಜ-ವಾರಸುದಾರರೆಂದು ಹೇಳಲಾಗುವ ಆದಿವಾಸಿಗಳ ಹಕ್ಕು ಕುರಿತಂತೆ ಈ ದೇಶದಲ್ಲಿ ಪ್ರಥಮ ಬಾರಿಗೆ ಧ್ವನಿ ಎತ್ತಿದ್ದು ಆಂಧ್ರ ಪ್ರದೇಶದ ಉತ್ತರ ತೆಲಂಗಾಣದ ಅಲ್ಲೂರಿ ಸೀತಾರಾಮ ರಾಜು ಎಂಬ ಒಬ್ಬ ಅಪ್ರತಿಮ ನಾಯಕ ಮತ್ತು […]
ತಮಿಳುನೆಲದ ಮಹಾಪರಾಕ್ರಮಿ ವೀರಪಾಂಡ್ಯ ಕಟ್ಟಬೊಮ್ಮನ್
ತಮಿಳುನೆಲದ ಮಹಾಪರಾಕ್ರಮಿ ವೀರಪಾಂಡ್ಯ ಕಟ್ಟಬೊಮ್ಮನ್ ವೀರಪಾಂಡ್ಯ ಕಟ್ಟಬೊಮ್ಮನ್ : ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಆಗಮಿಸಿ ತನ್ನ ಬೇರು ಬಿಡಲು ಆರಂಭಿಸಿದ ದಿನಗಳಲ್ಲೇ ಅವರ ವಿರುದ್ಧ ಸಿಡಿದೆದ್ದು ಅವರಿಗೆ ಸೆಡ್ಡು ಹೊಡೆದು ನೇಣು ಶಿಕ್ಷೆಗೆ ಗುರಿಯಾದ ಅಪ್ರತಿಮ ಹೋರಾಟಗಾರ ವೀರಪಾಂಡ್ಯ ಕಟ್ಟಬೊಮ್ಮನ್. ಬ್ರಿಟಿಷರು ಭಾರತದಲ್ಲಿ ಭದ್ರವಾಗಿ ನೆಲೆಯೂರಿದ ತಕ್ಷಣ ತಮ್ಮ ದಬ್ಬಾಳಿಕೆಯನ್ನು ಆರಂಭಿಸಿದರು. ಸಣ್ಣ ಪುಟ್ಟ ರಾಜರುಗಳಿಗೆ ಕಿರುಕುಳ ನೀಡುತ್ತಾ ಅಧಿಕಾರ ಚಲಾಯಿಸಲು ಶುರುಮಾಡಿದರು. ಹೆಚ್ಚು ಹೆಚ್ಚು ತೆರಿಗೆ ವಿಧಿಸಿದರು. ಅವರ ಕಿರುಕುಳ ಸಹಿಸಲಾರದ ಬಹು ಮಂದಿ […]
ಕನ್ನಡನಾಡಿನ ಗಂಡುಗಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಕನ್ನಡನಾಡಿನ ಗಂಡುಗಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಗೊಳ್ಳಿ ರಾಯಣ್ಣ: 1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷ್ ಸಾಮ್ರಾಜ್ಯದ ಎದೆ ನಡುಗಿಸಿದ, ತನ್ನ ಅಪಾರ ಶೌರ್ಯ ಪರಾಕ್ರಮಗಳಿಂದ ಬ್ರಿಟಿಷರಿಗೆ ಸವಾಲಾಗಿ ನಿಂತು ಕ್ರಾಂತಿಯ ರಣಕಹಳೆ ಮೊಳಗಿಸಿದ ಕನ್ನಡ ನಾಡಿನ ಗಂಡುಗಲಿ, ನಮ್ಮೆಲ್ಲರ ಹೆಮ್ಮೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಬಹುತೇಕರಿಗೆ ತಿಳಿಯದ ಅಚ್ಚರಿಯೆಂದರೆ, ನಮ್ಮ ರಾಯಣ್ಣ ಹುಟ್ಟಿದ್ದು ಆಗಸ್ಟ್ 15 ರಂದು ಮತ್ತು ದೇಶಕ್ಕಾಗಿ ಬಲಿದಾನಗೈದದ್ದು ಜನವರಿ 26 (15 ಆಗಸ್ಟ್ 1798 – 26 ಜನವರಿ […]
ಕ್ರಾಂತಿಕಾರಿ ವೀರ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ
ಕ್ರಾಂತಿಕಾರಿ ವೀರ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ ವಾಸುದೇವ ಬಲವಂತ ಫಡಕೆ : ೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ ಇತ್ತು – ಹಣ , ಸುಖ, ಶಾಂತಿ, ನೆಮ್ಮದಿ. ಆದರೆ ದೇಶದಲ್ಲಿ ಇವ್ಯಾವುದೂ ಇಲ್ಲ ಎಂಬ ಕಾರಣಕ್ಕೆ […]