ಪಂಜಾಬಿನ ಗಂಡುಗಲಿ, ಕ್ರಾಂತಿಸಿಂಹ ಸರ್ದಾರ್ ಅಜಿತ್ ಸಿಂಗ್ ಸರ್ದಾರ್ ಅಜಿತ್ ಸಿಂಗ್: ಪಂಜಾಬ್ ಪ್ರಾಂತ್ಯದಲ್ಲಿ ಬ್ರಿಟಿಷ್ ಸರ್ಕಾರದ ದೌರ್ಜನ್ಯದ ವಿರುದ್ಧ ದನಿಯೆತ್ತಿದ, ಜನರನ್ನು ಸಂಘಟಿಸಿದ ಅಗ್ರಶ್ರೇಣಿಯ ಕ್ರಾಂತಿಕಾರಿ ಸರ್ದಾರ್ ಅಜಿತ್ ಸಿಂಗ್. ಇವರು ಕ್ರಾಂತಿಸಿಂಹ ಸರ್ದಾರ್ ಭಗತ್ ಸಿಂಗ್ ರ ಚಿಕ್ಕಪ್ಪ. 1947 ರ ಆಗಸ್ಟ್ 15 ರಂದು ಭಾರತ ಸ್ವತಂತ್ರವಾದಾಗ ‘ಥ್ಯಾಂಕ್ ಗಾಡ್, ನಮ್ಮ ಕೆಲಸ, ಹೋರಾಟ ಯಶಸ್ವಿಯಾಯಿತು’ ಎಂದು ಖುಷಿಯಿಂದ, ಸಂಭ್ರಮದಿಂದ ಆ ಕ್ಷಣಗಳನ್ನು ಕಂಡು ಅಂದೇ ‘ಧನ್ಯತೆಯ ಸಾವು’ ಕಂಡವರು ಅಜಿತ್ ಸಿಂಗ್ ರು. […]
Author: ramachandrahegde
‘ಚಿತ್ತಗಾಂಗ್ ಶಸ್ತ್ರಾಗಾರ ದಾಳಿ’ ಯ ರೂವಾರಿ, ಬಂಗಾಳದ ಕ್ರಾಂತಿಕಿಡಿ: ‘ಮಾಸ್ಟರ್ ದಾ’ ಸೂರ್ಯ ಸೇನ್
‘ಚಿತ್ತಗಾಂಗ್ ಶಸ್ತ್ರಾಗಾರ ದಾಳಿ’ ಯ ರೂವಾರಿ, ಬಂಗಾಳದ ಕ್ರಾಂತಿಕಿಡಿ: ‘ಮಾಸ್ಟರ್ ದಾ’ ಸೂರ್ಯ ಸೇನ್ ‘ಮಾಸ್ಟರ್ ದಾ’ ಸೂರ್ಯ ಸೇನ್ : ಬಂಗಾಳದ ಮತ್ತೊಬ್ಬ ಕ್ರಾಂತಿಕಿಡಿ, ಬ್ರಿಟಿಷರ ಎದೆ ನಡುಗಿಸಿದ’ ಚಿತ್ತಗಾಂಗ್ ಶಸ್ತ್ರಾಗಾರ ದಾಳಿ’ಯ ರೂವಾರಿ ಸೂರ್ಯ ಸೇನ್. ಜನರು, ಕ್ರಾಂತಿಕಾರಿ ಸಹವರ್ತಿಗಳು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಮಾಸ್ಟರ್ ದಾ. ಪ್ರಸ್ತುತ ಬಾಂಗ್ಲಾದೇಶದಲ್ಲಿರುವ ಚಿತ್ತಗಾಂಗ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧ ದೊಡ್ಡಮಟ್ಟದ ಹೋರಾಟವನ್ನು ರೂಪಿಸುವಲ್ಲಿ ಸೂರ್ಯ ಸೇನ್ ರ ಪಾತ್ರ ಪ್ರಮುಖವಾದದ್ದು. ಬಿಎ ವಿದ್ಯಾರ್ಥಿಯಾಗಿದ್ದಾಗ ಭಾರತ […]
ಹಾವೇರಿಯ ಹುಲಿ, ಹುತಾತ್ಮ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು
ಹಾವೇರಿಯ ಹುಲಿ, ಹುತಾತ್ಮ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು ಮೆಣಸಿನಹಾಳ ತಿಮ್ಮನಗೌಡ: ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಬ್ರಿಟಿಷರ ವಿರುದ್ಧ ಕ್ರಾಂತಿ ಕಹಳೆ ಮೊಳಗಿಸಿ ಹುತಾತ್ಮನಾದ ವೀರ ಕನ್ನಡಿಗ ಮೆಣಸಿನಹಾಳ ತಿಮ್ಮನಗೌಡರು. ಇಂದಿನ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಮೆಣಸಿನಹಾಳದಲ್ಲಿ ಶ್ರೀಮಂತ ಪಾಟೀಲ ಕುಟುಂಬದಲ್ಲಿ ಜನಿಸಿದ ತಿಮ್ಮನಗೌಡ ಬ್ಯಾಡಗಿಗೆ ಸುಭಾಷಚಂದ್ರ ಬೋಸರು ಬಂದಾಗ ಸ್ವಾತಂತ್ರ್ಯಹೋರಾಟದ ಕುರಿತ ಅವರ ಭಾಷಣ ಕೇಳಿ ರೋಮಾಂಚಿತರಾಗಿ ತ್ಯಾಗ ಮತ್ತು ಬಲಿದಾನದ ದೀಕ್ಷೆತೊಟ್ಟು ತನ್ನ 21ರ ವಯಸ್ಸಿನಲ್ಲೇ ಕಾನೂನು ಭಂಗ ಚಳುವಳಿಗೆ ಧುಮುಕಿದರು. ಆ […]
ತಮಿಳುನಾಡಿನ ಕ್ರಾಂತಿಸಿಂಹ ವಾಂಚಿನಾಥನ್ ಅಯ್ಯರ್
ತಮಿಳುನಾಡಿನ ಕ್ರಾಂತಿಸಿಂಹ ವಾಂಚಿನಾಥನ್ ಅಯ್ಯರ್ ವಾಂಚಿನಾಥನ್ ಅಯ್ಯರ್ : ತಮಿಳುನಾಡಿನ ರಾಷ್ಟ್ರಭಕ್ತ ಕ್ರಾಂತಿಕಾರಿ, ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೆಡ್ಡುಹೊಡೆದು ಪ್ರಾಣಾರ್ಪಣೆ ಮಾಡಿದ ಹುತಾತ್ಮ ವಾಂಚಿನಾಥನ್ ಅಯ್ಯರ್. ಜನರಿಂದ ‘ವಂಚಿ’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಈ 25 ರ ದೇಶಭಕ್ತ ತರುಣ ತಿರುನಲ್ವೇಲಿಯ ಕಲೆಕ್ಟರ್ ರಾಬರ್ಟ್ಆಶ್ ನನ್ನು ಹಾಡಹಗಲೇ ಗುಂಡಿಕ್ಕಿ ತಾನೂ ಆತ್ಮಾರ್ಪಣೆ ಮಾಡಿದ. ತಿರುನಲ್ವೇಲಿ ಜಿಲ್ಲೆಯ ಸೆಂಗೊತ್ತೈ ಎಂಬ ಊರಿನಲ್ಲಿ ಜನಿಸಿದ ವಾಂಚಿನಾಥನ್ ಪ್ರಾಥಮಿಕ ಶಿಕ್ಷಣವನ್ನು ತನ್ನೂರಿನಲ್ಲೇ ಮುಗಿಸಿ, ಎಂ.ಎ ಪದವಿಯನ್ನು ತಿರುವನಂತಪುರದ ಕಾಲೇಜಿನಲ್ಲಿ ಪಡೆದಿದ್ದ. ಕಾಲೇಜಿನಲ್ಲಿ ಓದುವಾಗಲೇ […]
ಧ್ವಜದ ಗೌರವ ರಕ್ಷಣೆಗಾಗಿ ಪ್ರಾಣವಿತ್ತ ವೀರವನಿತೆಯರು: ಕನಕಲತಾ ಬರುವಾ, ಭೋಗೇಶ್ವರಿ ಫು೦ಖನಾನಿ
ಧ್ವಜದ ಗೌರವ ರಕ್ಷಣೆಗಾಗಿ ಪ್ರಾಣವಿತ್ತ ವೀರವನಿತೆಯರು: ಕನಕಲತಾ ಬರುವಾ, ಭೋಗೇಶ್ವರಿ ಫು೦ಖನಾನಿ ಕನಕಲತಾ ಬರುವಾ ಮತ್ತು ಭೋಗೇಶ್ವರಿ ಫು೦ಖನಾನಿ: ರಾಷ್ಟ್ರಧ್ವಜದ ಗೌರವ ರಕ್ಷಣೆಗಾಗಿ ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಬಲಿದಾನಗೈದ ಅಸ್ಸಾಮಿನ ವೀರವನಿತೆಯರು ಕನಕಲತಾ ಬರುವಾ ಮತ್ತು ಭೋಗೇಶ್ವರಿ ಫು೦ಖನಾನಿ. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರದ ಭೂಪಟ, ವಂದೇಮಾತರಂ ಎಲ್ಲವೂ ದೇಶಾಭಿಮಾನದ ಅಭಿವ್ಯಕ್ತಿಯ ಸಂಕೇತಗಳಾದರೂ ಅವು ನಮ್ಮಲ್ಲಿ ಸೃಷ್ಟಿಸುವ ಭಾವ ವರ್ಣನಾತೀತ. ಸೈನಿಕನೊಬ್ಬ ಯುದ್ಧ ಗೆದ್ದಾಗ, ಕ್ರೀಡಾಳುವೊಬ್ಬ ಆಟದಲ್ಲಿ ಗೆದ್ದಾಗ ತ್ರಿವರ್ಣ ಧ್ವಜಹಿಡಿದು ಕುಣಿದು ಕುಪ್ಪಳಿಸುವುದು ಕಾಣುತ್ತೇವೆ. ಯುದ್ಧಕ್ಕೆ ಹೊರಟ […]