ಹಬ್ಬವೆಂದು ಸಾಂಪ್ರದಾಯಿಕ ಉಡುಗೆಗಳನ್ನೇ ಹಾಕಬೇಕೆಂದಿಲ್ಲ ಈಗ. ಹಬ್ಬಗಳೆಲ್ಲ ಬದಲಾಗುತ್ತಲೇ ಇವೆ ಕಾಲದೊಂದಿಗೆ. ಹಾಗೇ ಹಬ್ಬಕ್ಕೆ ಕೊಳ್ಳುವ ಉಡುಗೆಗಳೂ. ಸದ್ಯದ ಫ್ಯಾಷನ್ನ ಯಾವ ಡ್ರೆಸ್ಸಾದರೂ ನಡೆದೀತು. ಹಾಗೆಂದು ರೇಷ್ಮೆ ಸೀರೆಗಳ ಸಡಗರ ಕಡಿಮೆಯಾಯಿತೆ? ಯುಗಾದಿಗೆಂದೇ ಭಾರೀ ರಿಯಾಯಿತಿ ಮಾರಾಟ ಏರ್ಪಡಿಸುವ ಸೀರೆ ಅಂಗಡಿಗಳನ್ನು ನೋಡಿದರೆ ಹಾಗೆನಿಸುವುದಿಲ್ಲ… ಹಬ್ಬವೆಂದರೆ ಹಬ್ಬದೂಟ, ವಿಶೇಷ ಪೂಜೆ, ಹೊಸ ಬಟ್ಟೆ…ಇದರೊಂದಿಗೆ ಉಕ್ಕುವ ಹೊಸ ಹುರುಪು…ಹಬ್ಬವೆಂದರೆ ಒಟ್ಟಾರೆ ಖುಷಿ. ಯುಗಾದಿಯಂದು ಹೊಸ ವರ್ಷವನ್ನು ಸ್ವಾಗತಿಸಲು ಹೊಸ ಬಟ್ಟೆ ಧರಿಸಿ ಚಂದ್ರನ್ನ ನೋಡೋದು ವಾಡಿಕೆ…ಹೊಸ ನಿರೀಕ್ಷೆಯೊಂದಿಗೆ. ಹಬ್ಬವೆಂದು […]
Author: Shailaja Hugar
ಬದಲಾವಣೆಗೆ ಭಯವೇಕೆ? ಬರೆಯಿರಿ ಹೊಸ ಮುನ್ನುಡಿ
ವಸಂತ ಬರೆಯಲು ಸಿದ್ಧನಾಗಿದ್ದಾನೆ ಒಲವಿನ ಓಲೆ, ಪ್ರಕೃತಿ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮವಲ್ಲವೆ? ಆದರೆ ಈ ಬದಲಾವಣೆಗೆ ಪ್ರಕೃತಿ ಪ್ರೀತಿಯಿಂದ ತಯಾರಾಗುತ್ತದೆ, ಪ್ರತಿ ಋತುವಿನ ಆರಂಭದಲ್ಲೂ ಆನಂದ ನೀಡುತ್ತದೆ. ಇದೀಗ…ಬರಲಿರುವ ವಸಂತ ಋತುವಿನೊಂದಿಗೆ ನವ ಸಂವತ್ಸರಕ್ಕೆ ಮುನ್ನುಡಿ ಬರೆಯುತ್ತಿದೆ. ಕಳೆಗಟ್ಟುತ್ತಿದೆ ಪರಿಸರ. ಹಳೆಯ ಮರಗಳಲ್ಲೂ ಹೊಸ ಚಿಗುರಿನ ಹಸಿರು. ಹಕ್ಕಿಗಳ ಇಂಚರ ಸುಂದರ ಪರಿಸರಕ್ಕೆ ಹಿನ್ನೆಲೆ ಗಾನ. ಜಗವೆಲ್ಲ ಸುಂದರ ಚಿತ್ರ. ಬದಲಾವಣೆ…ಅದು ಸುಂದರವೂ ಹೌದು. ಯುಗಾದಿಯ ಪಾಠ ಇದುವೇ ಹೌದು. ಸುಖ ಬಂದರೆ ಹಿಗ್ಗದೆ, ನೋವಿನಲಿ […]
ಹಳತರಲ್ಲೇ ಹೊಸತನದ ಹರುಷ
ದಿನಕರ, ಅಂದು ಮೆಲ್ಲನೆ ಮೇಲೇರಿ ಬರುವ ಅವನಿಂದ ಜಗವೆಲ್ಲ ನವನವೀನ. ನಿತ್ಯದ ಅದೇ ಬದುಕು ಆದರೂ ಹೊಸತನದ ಹುರುಪು. ಬಿರುಬಿಸಿಲ ಸಂಜೆಗೆ ತಂಗಾಳಿ ಸೋಕಿ ಹಾಯೆನಿಸದೆ? ನಿಶೆ ಪ್ರವೇಶದಿಂದ ಇಳೆದುಂಬುವ ತಂಪು. ಚಂದಿರನ ದರ್ಶನಕ್ಕೆ ಕಾತರ, ಹಬ್ಬದ ನಂತರದ ನೀರವತೆಯಲ್ಲೂ ಮುಂಬರುವ ಒಳ್ಳೆಯ ದಿನಗಳಿಗೆ ಕಾತರದಿಂದ ಎದುರುನೋಡುವ ಮನಸ್ಥಿತಿ ಒದಗಿಸದೆ? ಹೊಸತೆ? ಹಳತೆ? ಹೊಸ ವಸ್ತ್ರ ಧರಿಸಿ ಹೊಸ ವರ್ಷ ಸ್ವಾಗತಿಸುವುದು ಬೆಂಗಳೂರು ಮೈಸೂರು ಭಾಗಗಳಲ್ಲಿ ನಡೆದುಬಂದ ವಾಡಿಕೆ. ಹೊಸ ಬಟ್ಟೆ ಧರಿಸಿ ಚಂದ್ರನನ್ನು ನೋಡುವುದು ಯುಗಾದಿ ಆಚರಣೆಯ […]