Need help? Call +91 9535015489

📖 Print books shipping available only in India. ✈ Flat rate shipping

ಗುರಿ ಸಾಧನೆಗೆ ಗರಿ ಯಶೋಧರ

ಗುರಿ ಸಾಧನೆಗೆ ಗರಿ ಯಶೋಧರ ! ಸಿದ್ದಾರ್ಥನ ಬುದ್ಧನ ಮಾಡಿ ಜಗದೊಳು ಮೆರೆಸಿದ ಯಶೋಧರ ! ತ್ಯಾಗ ಅಭಿಮಾನದ ಸಂಕೇತಕೆ ಕಳಸವು ನೀ ಯಶೋಧರ ! ಅಘೋರಘನ ರಾತ್ರಿಯದಂದು ಸಖಿಯ ಕಡೆಯ ನೋಟವ ಕಣ್ತುಂಬುವ ನೆಪದಲಿ ಅಂದು ಸಿದ್ಧಾರ್ಥನು ಬಳಿ ನಿಂದಿರಲು […]

ಹಾಗೇ – ಸುಮ್ಮನೆ

ಹಿಡಿದೆನೊಂದು ಲೇಖನಿ ಇಂದು ಕ್ಷಣ ಕಣ್ಣ ರೆಪ್ಪೆ ಮುಚ್ಚಿ ನೆನೆದೆ ಬೇಂದ್ರೆ, ಕುವೆಂಪು ನರಸಿಂಹರ ಹಾಗೆ ಸುಮ್ಮನೆ ಇಳಿಯುತಿತ್ತು ಆಳಕೆ ಯೋಚನೆ ಮಿಡಿಯಿತು ಹೃದಯ ಝೆಂಕಾರದಿ ನೆನೆದು ಮಾಸ್ತಿ, ಅನಂತ ಡಿ.ವಿ.ಜಿ ಯರ ಹಾಗೆ ಸುಮ್ಮನೆ ಬರೆವ ಇಚ್ಛೆಯೊಂದು ಬಂದು ಸಾಗಿತು […]

ಸಂಗಾತಿಯ ಕಾಣಿಕೆ

  ಓ ಜೀವನ ಸಂಗತಿಯೆ ಕೇಳು ಶುಭ್ರ ಬಿಳಿ ಹಾಳೆಯಲಿ ನಾ- ಕುಂಚವ ಹಿಡಿದು ನೂರು ಬಣ್ಣಗಳ ಚಿತ್ತಾಕರ್ಷಕ ಚಿತ್ರವ ನಾ ನಿನಗಾಗಿ ತಂದಿದ್ದೆ ಹಚ್ಚ ಹಸುರಿನ ಹೂ – ತೋಟವ ಬರೆದು ಮೊಗ್ಗುಗಳಲ್ಲಿ ನೂರು

ಎಳೆಯರ ಪರೀಕ್ಷೆ

  ಅರಳು ಕುಸುಮಗಳಿಗೆ ಇಂದು ಮುದುಡಿಕೊಳುವ ಸಮಯ ಬಂತು ಮೈಯ ಬೆವರು ತರಿಸಿ ಧೀರ್ಘ ಉಸಿರು ಬಿಡುವ ಪರಿಯ ಕಂಡೆನು ವರ್ಷವಿಡೀ ಗ್ರಹಿಸಿದೆಲ್ಲವನ್ನೂ ಎರಡೇ ಗಂಟೆಯಲ್ಲಿ ಉರುಹಬೇಕು

ಹಸುರಿನ ಹಾದಿ

ಮುಂಜಾವಿನ ಚುಮುಚುಮು ಬೆಳಕಲ್ಲಿ ನಾ ಸಾಗುತ್ತಿದ್ದ ಸಮಯದಲ್ಲಿ ದೀರ್ಘ ಕಾಲು ಹಾದಿಯಲ್ಲಿ ಹಸುರಿನ ಸಾಲು ಇಕ್ಕೆಲದಲ್ಲಿ ಬುಲ್ ಬುಲ್, ಕಾಜಾಣ, ಗಿಳಿ, ಶಿಳ್ಳು ಹಕ್ಕಿಗಳ ಕೂಜನವಿಲ್ಲಿ ಹಿತವಾದ ಮಾರುತದ ಸೊಂಕಿನಲ್ಲಿ ಕಣ್ಣಿಗೆ ಹಬ್ಬದ ಸಂಭ್ರಮ ಅಕ್ಕಪಕ್ಕದಲ್ಲಿ ಆಗಾಗ ಇಣುಕುತ್ತಿದ್ದ ಸೂರ್ಯನ ಮಂದ […]

ಗುರು

ಗುರು ನೀ ಪ್ರೇಮ ಕರುಣೆಯ ಸಾಗರ ನಂಬಿಕೆ, ಪ್ರೀತಿ, ವಿಶ್ವಾಸ ತೋರಿದಲ್ಲಿ ನೀ ಅಮರ ಕೊಡುವುದಾದರೆ ಶಿಷ್ಯನಿಗೆ ಸಹಕಾರ ಕೈಗೆಟುಕುವುದು ಉತ್ತುಂಗದ ಶಿಖರ ಸಾಕು ಅರಳಿಸಿದರೆ ಕೋಮಲ ಸುಪ್ತ ಪ್ರತಿಭೆಯ ತೋರು ನೀ ಬರಿಯ ಗುರುತಿಸುವ ದಾರಿಯ ಬೇಡ ಕೈಹಿಡಿದು ನಡೆಸುವ […]

ಶ್ರಾವಣದಾಗಮನ

ಇಳೆಯು ಬಿಸಿಯ ಮುಕ್ತಿಪಡೆದು ನಭದಿ ಧರೆಗೆ ಜಲಧಾರೆ ಸುರಿದು ಕಾನನದಿ ಧರೆ ಹಸಿರು ಸೀರೆಯುಟ್ಟು ಗಿಡಮರಗಳ ಚಿಗುರ ಬಸಿರು ಮೊಳಕೆಯೊಡೆದು ಹಳ್ಳ ಕೊಳ್ಳ ಕೆರೆ ಕಾಲುವೆ ಮೈತುಂಬಿ ನದಿಯು ಬಿಂಕದಿಂದ ಬೀಗಿ ಹಾಲ ಹಳ್ಳದಂತೆ ಜಲಪಾತದ ರುದ್ರನರ್ತನ ಸಾಟಿ ಯಾರಿಗೆ? ಈ […]

ತೊರೆ ಮತ್ತು ನಾನು

ನಾ ಹರಿವ ಝರಿ ನಾ ಕುಣಿಯುತ ಸಾಗುವ ತೊರೆ ನಾ ನಿನಾದದಿ ಧುಮುಕುವ ಜಲಪಾತ ಆ ಬಾಲ್ಯದಲ್ಲಿ ಆ ಯೌವನದಲ್ಲಿ ನಾ ಪಡೆದ ಹೊಸದೊಂದು ತಿರುವು ನಾ ಕಂಡಿದ್ದು ಅಡ್ಡಡ್ಡ ಬಂಡೆ ನಾ ಚಡಪಡಿಸಿದೆ ಸಿಗದೆ ಇಳಿಜಾರು ನಾ ನಿಂತೆ ನಾ […]