ಕಣಕುಂಬಿಯಲಿ ಮಲಪ್ರಭೆ ನೀ ಉದ್ಭವಿಸಿ ಸವದತ್ತಿಯಲ್ಲಿ ಎಲ್ಲಮ್ಮನ ಸಂದರ್ಶಿಸಿ,ಪಾದ ಸ್ಪರ್ಶಿಸಿ ನವಿಲುತೀರ್ಥದಲಿ ರೇಣುಕಾಸಾಗರ ನೀನಾದೆ. ಹಿರೇ,ತುಪ್ಪರಿ,ಬೆಣ್ಣೆ ಹಳ್ಳಗೂಡಿ ಕೃಷ್ಣೆಯನ್ನು ಕೂಡಲಸಂಗಮ ದಲ್ಲಿ ಕೂಡಿ ರೈತ ನ ಬೆಳೆ ಹಸಿರಾಗಿಸಿ ನೀ ಸಾಗರದಲ್ಲಿ ಒಂದಾದೆ.ನೀ ಜೀವ ಜಲ ನನ್ನ ಪ್ರಾಣ ಜಲ ನಿರಂತರ ಸದಾ ನಮ್ಮ ಮನೆಯಲ್ಲಿರುವೆ ಓ ಮಲಪ್ರಭೆ,ನೀನೆ ಗಂಗೆ,ಯಮುನೆ ಮನುಜನ ಮಲಿನ ದೂರಟ್ಟಿ ನೀ ಮಲಾಪಹಾರಿ ಮನುಕುಲದ ಪ್ರಭೆಯನ್ನು ಹೆಚ್ಚಿಸಿರುವೆ… ಧಾರವಾಡವಿಜು ನೀರ ಮಿತವಾಗಿ ಬಳಸಿ
Author: vijaya inamdar
ಪ್ರೀತಿ ಹಂಬಲ
ಕಣ್ಣ ತುಂಬಾ ನೋಡುವ ಹಂಬಲ ಅದಕ್ಕೆ ಹೃದಯದ ಅತೀ ಬೆಂಬಲ ಬಂದಂತಾಗಿದೆ ಈಗ ಆನೆ ಬಲ ತಾಳಲಾರೆ ಇನ್ನ ಸದ್ಯ ಬಂದಬಿಡಲಾ. ಧಾರವಾಡ ವಿಜು
ಹಬ್ಬ ಬಂತಂದ್ರ
ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ ಹೋಗ ಗುಡಿ ಹತ್ತರ ಸಿಗತಾವ ತಗೋಂಡ ಬಾ ಸೈಕಲ ತಗೋಂಡ ಹೋಗ ಮತ್ತ. ಅಲ್ಲರ್ರಿ ಚೌಕಟ್ಟಿಗೆ ಮಾವಿನ ತೋಳಲು ಕಟ್ಟಿರ್ರಿ.ಹಾ ಕಟ್ಟಿನಿ ಮಾಲಿ ತಂದಿನಿ.ಹಾಲ ತಂದಿನಿ.ಕೈಶಾವಿಗೆ ಬಂದಾವ.ರಂಗೋಲಿ ಹಾಕರ್ರಿ.ಅಲ್ಲಾ ಬಾಳಿ ಎಲಿ ಬಂದೂವು ಬಡಸರ್ರಿ. […]
ಮುಗುಳನಗೆ
“ಕಣ್ಣು ಪಿಳಿಕಸದೆ ಆ ಒಂದು ಮುಗುಳನಗೆಯ ಮಾದಕ ನೋಟಕ್ಕೆ ಕಾಯುತಿದೆ ಹುಚ್ಚು ಮನಸ್ಸು. ಏಕೆ ಈ ಮುನಿಸು.? ನನಸಾಗಿಸು ಸುಂದರ ಕನಸು….” ಇನಾಮದಾರವಿಜು
ಹಬ್ಬ
ಹಬ್ಬ ಓ ಓ ಹಬ್ಬ ಹೂವಿನ ರೇಟ ಎರೇದ ದಿಬ್ಬ ನೀವ ಎರಸಬ್ಯಾಡರ ನಿಮ್ಮಿ ಹುಬ್ಬಾ ಎಷ್ಟ ಮನಸ್ಸಿಗೆ ಖುಷಿ ಅಬ್ಬಬ್ಬಾ! ಮತ್ತ ಮತ್ತ ಬರಬೇಕ ನಮಗ ಹಬ್ಬ ಹಬ್ಬಕ್ಕ ನೆನಪ ಹಾರದೇ ಹಾಕೋಳ್ಳರ್ರಿ ಮಸ್ತ –ಜುಬ್ಬಾ ಹಬ್ಬ ಮುಗದ ಮ್ಯಾಲೆ ಆಗಬ್ಯಾಡರ್ರಿ ಪಾ ಮಬ್ಬ ವಿಜಯ ಇನಾಮದಾರ ಧಾರವಾಡ
ಬದಲಾಗಿದೆ ಕಾಲ
ಬದಲಾಗಿದೆ ಕಾಲ…. ರಂಗೋಲಿ ಚಿತ್ರಹಾರ ಬದಲು ವಿ.ಟಿ.ವಿ., ಯೂಟ್ಯುಬ. ಇನ್ ಲ್ಯಾಂಡ.ಪತ್ರ,ಪೋನಿನ ಬದಲು ಫೇಸ ಬುಕ್, ವ್ಹಾಟ್ಸಆ್ಯಪ್ ದಿನಪತ್ರಿಕೆ,ಟಿ.ವಿ, ಬದಲು ಟ್ವಿಟರ್ ಕ್ಯಾಸೆಟ್,ಸಿಡಿ ಬದಲು ಪೆನ್ ಡ್ರೈವ ಚಡ್ಡಿ,ಪ್ಯಾಂಟಿನ ಬದಲು ಎರಡರ ನಡವಿನ ತ್ರೀ ಫೋರತ್ ಬ್ರೆಡ್,ಬನ್ನಿನ ಬದಲು ಪಾವ,ಪಿಜ್ಜಾ ಎಲ್ಲಾ ಅದಲು ಬದಲು ಆದರೂ ನೆಮ್ಮದಿ,ಸಮಾಧಾನ ಸಿಕ್ಕಿಲ್ಲ ….. ನಾವೇ ಬದಲಾಗದೆ ಎಲ್ಲಾ ಬದಲಿಸುತ್ತಿದ್ದೇವೆ. ದೇವರೆ, ಪುಣ್ಯಾಕ್ಕ ನಿನ್ನ ಬದಲು ಎನೂ ಕಂಡಿಲ್ಲ ನಮ್ಮವರಿಗೆ….ಇಲ್ಲಾಂದ್ರೆ ನಿನ್ನೂ…..
ಮನಸ್ಸೇ
ಓ ಮನಸ್ಸೇ, ಹುಚ್ಚು ಕನಸ್ಸನ್ನ ಕಾಣಬೇಡ, ಜಗತ್ತೇ ಕೆಟ್ಟಿದ್ದು ನಿನ್ನಿಂದ ಇನ್ನೂ ಎಷ್ಟು ಕೆಡುವುದು ಗಟ್ಟಿ ಮನಸ್ಸು ಮಾಡಿ ನೀ ಸಾಕು ಸುಮ್ಮನಿಟ್ಟುಕೋ ಕೆಟ್ಟದ್ದನ್ನು ಅಲ್ಲೆ ಮನಸ್ಸಿನಲ್ಲಿ…..
ಓ ಗೆಲುವೇ….
ಓ ಗೆಲುವೇ ನೀ ಎಷ್ಟು ಸ್ಪೂರ್ತಿ ತರುವೆ. ಗೆಲುವು ಹೇಗೇ ಬರಲಿ ಎಲ್ಲೆ ಬರಲಿ ಸಂತಸ ತಂದೇ ತರುವೆ. ಇವತ್ತ ಒಬ್ಬನ ಸರದಿ ನಾಳೆ ಮತ್ತೋಬ್ಬನ ಸರದಿ ಪ್ರಯತ್ನವಿಲ್ಲದೆ ಸಿಗದಿರುವೆ. ನಾ ಕಾಣೆ ಯಾವಾಗ ಬರುವದೋ ನನ್ನ ಸರದಿ ಆದರೂ ನಾ ನುಗ್ಗುತ್ತಿರುವೆ ಭಾರಿ ಭರದಿ. ಬಾ ಬೇಗನೆ ಓ ಗೆಲುವೇ…. ವಿಜಯ.ಇನಾಮದಾರ ಧಾರವಾಡ
ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ
ನನ್ನ ಮೊದಲ ಪಾದಯಾತ್ರೆ ಹಂಪಿಹೊಳಿ ಗೆ ಪಾದಯಾತ್ರೆ ಅಂದ ಕೂಡಲೇ ಎಲ್ಲಾರಿಗೂ ಓಮ್ಮಲೆ ನೆನಪು ಬರುದು ಆಳಂದಿ -ಪಂಡರಪುರ ಪಾದಯತ್ರೆ . ಜೇಷ್ಠ ತಿಂಗಳಿನಲ್ಲಿ ಲಕ್ಷಾವದಿ ವಿಠ್ಠಲನ ಭಕ್ತರು ಸಂತ ಜ್ಞಾನೇಶ್ವರರ ಪಾದುಕೆಯೊಂದಿಗೆ ಪುಣೆ ಹತ್ತಿರ ಇರುವ ಆಲಂದಿಯಿಂದ ೧೫೦ ಕಿ.ಮಿ ನಷ್ಟು ದೂರ ನಡೆದು ಪಾದಯಾತ್ರೆ ಮಾಡುತ್ತಾ ಆಷಾಡ ಏಕಾದಶಿ ಯಂದು ಪಂಡರಾಪುರ ತಲುಪುತ್ತಾರೆ . ಇದೊಂದು ಅತೀ ದೊಡ್ಡ ಪಾದಯಾತ್ರೆ . ಇದಕ್ಕೆ ವಾರಕರಿ ಸಂಪ್ರದಾಯ ಅಥವಾ ದಿಂಡಿ ಅಂತನೂ ಕರಿತಾರೆ. ಇನ್ನೂ ಲಕ್ಷ್ಮೇಶ್ವರದ […]