Shopping Cart

Need help? Call +91 9535015489

📖 Paperback books shipping available only in India.

✈ Flat rate shipping

ಅಮ್ಮಾ ನನಗೊಂದು ಕಥೆ ಹೇಳೆ

‘ಒಂದೂರಿನಲ್ಲಿ ಒಬ್ಬಳು ಮಡಕೆಯಕ್ಕಾ ಅನ್ನೋ ಹುಡುಗಿಯಿದ್ದಳಂತೆ. ಅವಳ ಅಮ್ಮ ಆವಳಷ್ಟೇ ಉದ್ದದ ಮಡಕೆಯನ್ನು ಕುಂಬಾರನ ಕೈಯಲ್ಲಿ ಮಾಡಿಸಿ ಅವಳಿಗೆ ಹಾಕಿಸಿದ್ದಳಂತೆ. ಇದರಿಂದ ನೋಡೋರಿಗೆ ಅವಳ ಕಣ್ಣುಗಳು ಮಾತ್ರ ಕಾಣಿಸ್ತಿದ್ವಂತೆ. ಎಲ್ಲರೂ ಅವಳು ಕುರೂಪಿ ಇರಬೇಕು, ಅದಕ್ಕೇ ಮಡಕೆಯಲ್ಲಿ ಅಡಗಿದ್ದಾಳೆ ಅಂತ ಮಾತನಾಡಿಕೊಳ್ಳುತ್ತಿದ್ದರಂತೆ. […]

ಕರ್ಣಚೈತ್ರನ ಪರ್ಣಶಾಲೆ

ಕುವೆಂಪು ಅವರು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ಅಯೋಧ್ಯಾ ಸಂಪುಟದ ‘ಚಿತ್ರಕೂಟಕೆ’ ಸಂಚಿಕೆಯಲ್ಲಿ ಭರದ್ವಾಜ ಋಷಿಗಳ ಆಶ್ರಮದ ಚಿತ್ರಣ ನೀಡಿದ್ದಾರೆ. ಮುನಿಗಳು ಶಿಷ್ಯ ಹಾರೀತನಿಗೆ ಹಿರಿಯ ಅತಿಥಿಗಳಾದ ಶ್ರೀರಾಮ, ಸೀತೆ, ಲಕ್ಷ್ಮಣರನ್ನು ಕಾಯ್ದು ಕರೆದುಕೊಂಡು ಬರಲು ತಿಳಿಸುತ್ತಾರೆ. ಆ ಆಶ್ರಮ ಧ್ಯಾನ, ಜಪತಪ […]

ಬಾಳಿನ ಗಿಡ ಪುಸ್ತಕ ವಿಮರ್ಶೆ: ಸ್ವಾತಂತ್ರ್ಯಪೂರ್ವ ಬದುಕಿನ ರಮ್ಯಕಥನ

ಬಾಳಿನ ಗಿಡ ಲೇ: ಎಂ.ಹರಿದಾಸರಾವ್ ಪ್ರ:ಸಾಹಿತ್ಯ ಭಂಡಾರ, ಬೆಂಗಳೂರು ಮೊ: 94816 04435 ದೇಶ ಸ್ವಾತಂತ್ರ್ಯ ಪಡೆದ ಹೊಸದರಲ್ಲಿ (1949) ಬರೆದ ಸಾಮಾಜಿಕ ಕಾದಂಬರಿಯಿದು. ಮೇಷ್ಟ್ರ ವೃತ್ತಿಯಿಂದ ನಿವೃತ್ತರಾದ ಗೋವಿಂದರಾಯ ಕಥಾನಾಯಕ. ಉಡುಪಿ ಪಕ್ಕದ ಬೈಲೂರಿನಲ್ಲಿ ವಾಸವಿದ್ದ ಗೋವಿಂದರಾಯ, ತನ್ನ ದೊಡ್ಡಮಗ […]

ಕೊರೋನಾ ವೈರಸ್ ಎಚ್ಚರಿಕೆಗಾಗಿ ಯಕ್ಷಗಾನದ ಮೂಲಕ ಜನಜಾಗೃತಿ

ಬೆಂಗಳೂರು: ಕರಾವಳಿಯ ಜೀವನಾಡಿಯೇ ಆಗಿರುವ ಯಕ್ಷಗಾನ ಜನ ಜಾಗೃತಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಹಾಮಾರಿ ಕಾಯಿಲೆಗಳು ಬಂದಾಗ ಅದರ ಬಗ್ಗೆ ಜನಜಾಗೃತಿ ಮೂಡಿಸುವ ‘ಏಡ್ಸಾಸುರ’ ಸಂಹಾರದಂತಹಾ ಯಕ್ಷಗಾನ ಪ್ರಸಂಗಗಳನ್ನೇ ಪ್ರದರ್ಶಿಸಿ ಸೈ ಅನ್ನಿಸಿಕೊಂಡ ಯಕ್ಷಗಾನ ರಂಗವು ಈಗ ಜಾಗತಿಕವಾಗಿ ಆತಂಕ ಮೂಡಿಸಿರುವ […]

ಬತ್ತಿದ ನದಿ

ತುಂಬಿದಂಬರದಿಂದುದುರಿದಮೃತ ಫಲಿಸಿ ಬಸುರಿಯಾದಂತೆ ನದಿ ದುಂದುಮುಕುತ್ತಲೇ ಭೋರ್ಗರೆ ಯುವುದರದರದೊಳು ಜಿಗಿದು ಸೇರಿ , ಸುಳಿಯೊಳಗೆ ಈಜಿ ಕರಗಿ ಹೋಗಬಹುದು ನೋಡಲು ಬಾರದು ಬತ್ತಿದ ನದಿಯ ಬಳುಕಿ ಸಾಗುವ ನದಿಯೊಂದಿಗೆ ಓಡಿ ದಣಿದುದಡದಲಿ ಕುಳಿತುನ್ಮನ ತುಂಬಿಕೊಳ್ಳಬಹುದು ಘನ ಬಂಡೆ ತಬ್ಬಿ , ಸೀಳಿ […]

ಪಾಪು ಕೈಬರಹವೂ ಪದಮಿತಿಯ ನಿಖರತೆಯೂ!

ಬೆಂಗಳೂರು: ಹನ್ನೆರಡು ವರ್ಷಗಳ ಹಿಂದಿನ ಆ ದಿನ ಇನ್ನೂ ಚೆನ್ನಾಗಿ ನೆನಪಿದೆ. ಏಪ್ರಿಲ್ ನಾಲ್ಕರ ಸುಡುಬಿಸಿಲಿನ ಮಧ್ಯಾಹ್ನ ಮೂರುವರೆ ಆಗಿತ್ತು. ಪಾಟೀಲ ಪುಟ್ಟಪ್ಪನವರ ಕೈಬರಹದ ನಿಖರತೆಯು ಹತ್ತಿರದಿಂದ ದರ್ಶನವಾದ ದಿನ ಅದು. ವಿಶ್ವೇಶ್ವರನಗರದಲ್ಲಿರುವ ಪಾಟೀಲ ಪುಟ್ಟಪ್ಪನವರ ಮನೆಯ ಗೇಟ್‌ ತೆಗೆದು ಒಳಗೆ […]

ನಾಡೋಜ ಪಾಟೀಲ ಪುಟ್ಟಪ್ಪ ನಿಧನ

ಹುಬ್ಬಳ್ಳಿ: ಹಿರಿಯ ಸಾಹಿತಿ, ನಾಡೋಜ ಪಾಟೀಲ ಪುಟ್ಟಪ್ಪ (100) ಸೋಮವಾರ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪಾಟೀಲ ಪುಟ್ಟಪ್ಪ ಬದುಕು ಸಾಗಿಬಂದ ಹಾದಿ […]

ಸಾಧನೆಗಿಲ್ಲ ಸಂಸಾರದ ಬಂಧನ

ನಾನೀಗ ಹೇಳ ಹೊರಟಿರುವುದು ಗೌರಮ್ಮನ ಜೀವನದ ಒಂದು ಸಣ್ಣ ತುಣುಕು ಅಷ್ಟೆ. ಹಿರಿಯರಿಗೆಂದೇ ಅವರ ಊರಿನಲ್ಲಿ ನಡೆಯುವ ಕ್ರೀಡೆಯಲ್ಲಿ ಬಹುಮಾನ ಇವರಿಗೆ ಕಟ್ಟಿಟ್ಟ ಬುತ್ತಿ. ಪ್ರಾಯ 72 ಆದರೂ ನಾಟಕಗಳಲ್ಲಿ ಪಾತ್ರ ಮಾಡುವ ಆಸೆ ಇದೆ ಎಂದು ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸುತ್ತಾರೆ. […]

‘ಮಹಾಮಾರಿ ಕೊರೊನಾ’ ಆಯುರ್ವೇದ ಚಿಕಿತ್ಸಾ ವಿಧಾನ

‘ಕೊರೊನಾ ವೈರಾಣು ಕುರಿತ ಭೀತಿ, ಆತಂಕಗಳು ನಾಗರಿಕರನ್ನು ಕಂಗೆಡಿಸಿರುವುದು ನಿಜ. ಆದರೆ ಭಾರತೀಯ ಜನಸಮುದಾಯಗಳು ಶತಶತಮಾನದಿಂದ ಇಂಥ ಸಹಸ್ರಾರು ವಿದ್ಯಮಾನಗಳನ್ನು ಎದುರಿಸಿವೆ’ ಎಂದು ಮುನ್ನುಡಿಯೊಂದಿಗೆ ಪುಸ್ತಕದ ಓದು ಆರಂಭವಾಗುತ್ತದೆ. ‘ಅಂಗಳದ ತುಳಸಿ, ಹಿತ್ತಲಿನ ವೀಳ್ಯದೆಲೆಯೂ ವೈರಾಣು ನಿರೋಧಕ’ ಎಂಬ ಭರವಸೆ ಬಿತ್ತುವ […]