ಆಗದು ಎಂದು ಕೈ ಕಟ್ಟಿ ಕುಳಿತರೆ…

I.B.S  ಎಂಬ  ಪಚನಕ್ರಿಯೆಗೆ  ಸಂಬಂಧಿಸಿದ ಒಂದು  ಆರೋಗ್ಯದ ತಕರಾರಿದೆ.Irritatable Bowel  syndrome_ ಅದರ ಪೂರ್ಣ ಹೆಸರು. ಒಂದು ಪ್ರಮಾಣದ ಕೆಲ ನಿರ್ದಿಷ್ಟ ವಿಶಿಷ್ಟ ಆಹಾರಗಳನ್ನು ಹೊರತು ಪಡಿಸಿ ಉಳಿದವುಗಳನ್ನು ಹೊಟ್ಟೆ ಮಾನ್ಯ ಮಾಡುವುದಿಲ್ಲ.

ಅದು ಅತಿ ಗಂಭೀರ ತಕರಾರೇನೂ ಅಲ್ಲ…..gas form
ಮಾಡುವ, ಹೆಚ್ಚು ಮಸಾಲೆಯಿರುವ ಹೆಚ್ಚು ಪ್ರೋಟೀನ್ಯುಕ್ತ ಕಾಳುಗಳ, ಕರಿದ ಪದಾರ್ಥಗಳನ್ನು ಅದು ಒಪ್ಪಿಕೊಳ್ಳುವದಿಲ್ಲ …. ಅದನ್ನು ಅಲಕ್ಷಿಸುವ, ಅಮಾನ್ಯ ಮಾಡುವ ಪ್ರಮೇಯವೇಯಿಲ್ಲ…. ಹಾಗೇನಾದರೂ ಮಾಡದಿರೋ ಎರಡೇ ದಿನಗಳಲ್ಲಿ ಮಂಡೆಯೂರಿಸಿ ಕಿವಿ ಹಿಡಿಸಿ ಬಿಡುತ್ತದೆ. ಮುಂದೆ ಅದನ್ನು ಎಚ್ಚರತಪ್ಪಿಯೂ ಮರೆಯುವ ಹಾಗೇಯಿಲ್ಲ….
ನನಗೂ ಎರಡು  ತಿಂಗಳುಗಳಿಂದ I.B.S problem….but B stands for BRAIN… not BOWEL… ಅತಿ ಹೆಚ್ಚು ಸಾರವಿದ್ದು ಗಂಭೀರ ವಿಷಯಗಳುಳ್ಳ  ಲೇಖನಗಳು  ತಲೆಯೊಳಗೆ ಹೋಗಲು stike  ಮಾಡುತ್ತಿವೆ. ಒತ್ತಾಯಿಸಿದರೆ ತಲೆ ನೋವು ಶುರುವಾಗುತ್ತದೆ. ಇಲ್ಲವೇ ಕಣ್ಣುಗಳು ಓದುತ್ತವೆ. ಬುದ್ಧಿ ಗ್ರಹಿಸುವದೇಯಿಲ್ಲ. ಇಂಥ  ಅಗ್ರಹದೋದು  ಖುಶಿ  ತರುವದೇಯಿಲ್ಲ. ಕಿರಿಕಿರಿ ಎನಿಸುತ್ತದೆ. ಓದಬೇಕೆಂದು ಖರೀದಿಸಿದ ಪುಸ್ತಕರಾಶಿ ದಿನಾಲೂ ಅಣಕಿಸುತ್ತದೆ. “ನಿನ್ನ ಯೋಗ್ಯತೆ ಗೊತ್ತಾಯಿತೇ” ಎಂದು ಛೇಡಿಸತೊಡಗುತ್ತವೆ. ತಲೆದಿಂಬಿನ ಹತ್ತಿರದ ಪುಸ್ತಕ ಒತ್ತತೊಡಗುತ್ತದೆ. ಇದು ತಾತ್ಕಾಲಿಕ ಎಂದುಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ. ದಿನಕ್ಕೊಂದು ಪುಸ್ತಕ ಜಿದ್ದಿಗೆ ಬಿದ್ದು ಓದಿದಳು ನಾನು. ಈಗೀಗ ಒಂದು ವಾರವಾದರೂ ಅರ್ಧ ಮುಗಿಯುವದಿಲ್ಲ.
ಒಂದು ಕಣ್ನು ದೋಷಯುಕ್ತವಾಗಿದ್ದು ಒಂದೇ ಕಣ್ನಿನ ಮೇಲಿನ  pressure  ದಿಂದ  ಹಾಗಾಗಿರಬಹುದು  ಎಂದುಕೊಂಡರೂ ನನ್ನ  ಅತಿ  ಮೆಚ್ಚಿನ ಹವ್ಯಾಸ ನನಗೆ ಕೈ ಕೊಡುತ್ತಿರುವದು ಸಹಿಸಲಾಗುತ್ತಿಲ್ಲ.
ಮಧುಮೇಹ, ಏರುತ್ತಿರುವ ವಯಸ್ಸು  added woes…  ಆದರೆ ಅಷ್ಟು ಸುಲಭವಾಗಿ ಸೋಲೊಪ್ಪಿಕೊಳ್ಳುವದಾದರೂ ಹೇಗೇ? ಒಪ್ಪಿಕೊಂಡದ್ದೇ ಆದರೆ ವೇಳೆ ಕಳೆಯುವದಾದರೂ ಹೇಗೆ? ಒಪ್ಪಿಕೊಂಡದ್ದೇ ಆದರೆ ವೇಳೆ ಕಳೆಯುವದಾದರೂ ಹೇಗೆ? ಬೆಂಗಳೂರಿನಲ್ಲಿ ಹೀಗೆ  ಕಾಲಾಡಿಸಿಕೊಂಡು, ಕೆಲವರಿಗೆ Hi, Bye  ಹೇಳಿ ಅರ್ಧ ಗಂಟೆ ಕಳೆಯುವ ಮಾರ್ಗಗಳಿಲ್ಲ. ಪಕ್ಕದವರದೇ ಒಂದೊಂದು ವಾರ ಕಳೆದರೂ ಮುಖ ದರ್ಶನವಾಗುವ ಮಾತಿಲ್ಲ. ಎಲ್ಲ ಸುದ್ದಿಗಳೂ ಗುಂಪಿನ WhatsApp ಮೂಲಕ.
ಮನೆಯಲ್ಲಿ ನನ್ನಂತೆ ಒಂದು ಆಳು ಲಭ್ಯವಿದ್ದರೆ ಆಗಾಗ ಪೋನ್ ಮಾಡಬಹುದಾದ ಮಹತ್ ಅವಕಾಶ ಸಿಗುವದುಂಟು. ಹೀಗಾಗಿ ಬಹಳಷ್ಟು ಜನ TV ಮೊರೆಹೋಗುತ್ತಾರೆ. ನನಗದು ತೀವ್ರ ಅಲರ್ಜಿ. ಕಥೆಯ ಗುಂಗು ಹಿಡಿಸಿಕೊಂಡು, ನೋಡಲು ಸಿಗದಾಗ ಏನೋ ಕಳೆದುಕೊಂಡಂತೆ  ವ್ಯಥೆ  ಹಚ್ಚುಕೊಂಡು ವರ್ಷಗಟ್ಟಲೇ ಮರುಗುವ ಜಾಯಮಾನ ನನ್ನದಲ್ಲ… ಹೀಗಾಗಿ ಆ ದಾರಿ ನನಗೆ ಬಂದ್….

My never failing friends are they… With whom I converse day by day… _

ಎಂಬಂತೆ ಓದೇ ನನ್ನ all time favourite  ಆಗಿದ್ದು, ಆ ಹವ್ಯಾಸ ಈಗ ನನ್ನ ಚಾಳಿ ಠೂ ಬಿಡಲು ಹೊಂಚು ಹಾಕುತ್ತಿದೆ. ಅಷ್ಟು ಸುಲಭವಾಗಿ ಕೈ ಚಲ್ಲಲು ಪುಸ್ತಕಗಳೇನು ರಾಜಕೀಯ ವಿದ್ಯಮಾನಗಳನ್ನೊಂಡಗೊಂಡ ಕಲಸು ಮೇಲೋಗರದ ಪತ್ರಿಕೆಗಳೇ?
ಕೆಲಕಾಲ ನನ್ನನ್ನು ಸೋಲಿಸಿದ ಭ್ರಮೆಯ ಸುಖವನ್ನು ಮನಸ್ಸು ಅನುಭವಿಸಲಿ. ನಾನೂ ನೋಡುತ್ತೇನೆ. ಎಷ್ಟು ದಿನ ಹೂಂಕರಿಸೀತು ಈ (ಮೆದುಳಿನ ಆಲಸ್ಯ ರೋಗ)…. ಹ..ಹ…ಹ

Leave a Reply