ಅಬ್ಬಾ!!! ಆ ಗಳಿಗೆಗಳು!!!!

ಅಬ್ಬಾ!!! ಆ ಗಳಿಗೆಗಳು!!!!
. ದಿನಾ ಸಮಯದ ಕೈಯಲ್ಲಿ ನಾವು.. ಇಂದು  ನಮ್ಮ ಕೈಯಲ್ಲಿ ಸಮಯ ಎಂದುಕೊಂಡು ಒಂದು ರವಿವಾರ ತಲೆಗೆ ಎಣ್ಣೆ ಬಡಿದುಕೊಂಡು ಬಟ್ಟೆ ಕಟ್ಟಿ ನೀವೇ ನೀವಾಗಿ ಧೂಳು ಹೊಡೆಯುತ್ತಿರುವಾಗ ಅಪರೂಪದ ಅತಿಥಿ ಸೀದಾ ಮನೆಯಲ್ಲಿ ಹಾಜರು..
. ಯಾವುದೋ ಕಾರ್ಯಕ್ರಮಕ್ಕೆ ಬಹಳಷ್ಟು planಮಾಡಿ ತಿಂಗಳು ಮೊದಲು ತಿಕೀಟುಕಾಯ್ದಿರಿಸಿ ಆ ದಿನಕ್ಕೆ ಕಾದಾಗ, ಧಿಢೀರಣೆ ಅಡಚಣೆ ಬಂದು ಹೋಗುವದನ್ನೇ cancel ಮಾಡುವ ಪ್ರಸಂಗ…
. ತಿಂಗಳುಗಟ್ಟಲೇ ಮಗನೊಡನೆ ಗುದ್ದಾಡಿ ಎಲ್ಲ ಪರೀಕ್ಷೆ ಮುಗಿಸಿ ಒಂದೇ ಉಳಿದು ಮರುದಿನಕ್ಕೆ ಮಹಾಯಜ್ಞ ಮುಗಿಸುವ ಕಾತರದಲ್ಲಿದ್ದಾಗ ಯಾವುದೋ ಕಾರಣಕ್ಕೆ ಪೇಪರ್ ಮುಂದೂಡಿಕೆ…
. ಮನೆಯವರು ಊರಲಿಲ್ಲ. ಏನೋ ಒಂದು ಬೇಯಿಸಿ ತಿಂದ ಶಾಸ್ತ್ರ ಮಾಡುವ plan ನಲ್ಲಿದ್ದಾಗ ಧಿಢೀರನೇ ಆಕಸ್ಮಿಕವಾಗಿ ಆಪ್ತೇಷ್ಟರ ಆಗಮನದ ಆಘಾತ??…
. ಮನೆಯಲ್ಲಿ ಒಬ್ಬರೇ.. ನಿಧಾನವಾಗಿ ತಲೆ ಸ್ನಾನದ ಆನಂದದ ಕನಸಿನಲ್ಲಿ ಸ್ನಾನದ ಮನೆಹೊಕ್ಕು ಮೊದಲ ನೀರು ತಲೆಮೇಲೆ ಬೀಳುತ್ತಲೇcalling bell  ಶಬ್ದ..?…
. ಸಿಲಿಂಡರಿಗೆ ಹೆಸರು ಹಚ್ಚಿ, ಚಿಲ್ಲರೆ ರೆಡಿ ಮಾಡಿಟ್ಟುಕೊಂಡು ಮೂರುದಿನ ಕಾದಿದ್ದೀರಿ.. ಹತ್ತು ನಿಮಿಷ ಪಕ್ಕದ ಮನೆಗೆ ಹೋದಾಗ ಸಿಲಿಂಡರ್ boy  ಬಂದು ಬಾಗಿಲು ತಟ್ಟಿ door closed ಅಂತಾ ಚೀಟಿ ಅಂಟಿಸಿ ಹೋಗುತ್ತಾನೆ…
. ಹಾಲು ಉಕ್ಕೀತೆಂದು gas stove ಬಳಿಯೇ ನಿಂತು ಹುಟ್ಟಿದಾಗಿನಿಂದ ಹಾಲು ಕಾಸುತ್ತಲೇ ನಿಂತಿದ್ದೇನೆ ಎಂಬಷ್ಟು ಬೇಸತ್ತು ಹೋದಾಗ ಏನೋ ಸಪ್ಪಳಕ್ಕೆ ಒಂದು ಕ್ಷಣ ತಿರುಗುತ್ತೀರಿ.. ಇತ್ತ ಒಲೆಗೆ ಕ್ಷೀರಾಭಿಷೇಕ…
. ಬಹಳ ದಿನಗಳ ಮೇಲೆ ಮನೆಯವರಿಗೆ surprise  ಕೊಡಲು ವಿಶೇಷ ಅಡಿಗೆ ಮಾಡಿಕೊಂಡು ಅವರ ಬರುವನ್ನೇ ಕಾದಿದ್ದು, ನಂತರ ಸಿಹಬಹುದಾದ ಮೆಚ್ಚಗೆಗೆ ಮೊದಲೇ ಬೆಚ್ಚಗಾಗಿರುತ್ತೀರಿ.. ಗಂಡ ಬಂದು ಆಫೀಸಿನಲ್ಲಿಯ ಗೆಳೆಯನ ಅದ್ಧೂರಿ ಪಾರ್ಟಿ ಹೊಗಳಿ, ಒಂದು ತುತ್ತು ಬಾಯ್ಗಿಡಲೂ ಸಾಧ್ಯವಿಲ್ಲ ಎಂದು ಗೋಗರೆಯುತ್ತಾನೆ…
. ಒಮ್ಮೆ ಲಿಸ್ಟ ಮಾಡಿಕೊಂಡು ತಿಂಗಳ ಸಾಮಾನೆಲ್ಲ ತಂದರಾಯಿತೆಂದು ಹಾಗ್ಹೀಗೆ ನಡೆಸುತ್ತಿರುವಾಗ, ಪಕ್ಕದ ಮನೆಯ ಆಚಿಟಿ, ಎಂದೂ ಏನೂ ಕೇಳದವರು ಇಲ್ಲದ ಸಾಮಾನನ್ನೇ ಕೇಳಿ ಇಲ್ಲವೇಂದು ಹೇಳಲು ಮುಜುಗರ ಪಡುವಂತೆ ಆದದ್ದುಂಟೇ?…
. ಒಂದು  function ಗೆ ಹೋಗುವ ಮೊದಲು ಎಲ್ಲ ಕೆಲಸಗಳನ್ನು ಮುಗಿಸಿ ತಯಾರಾಗುತ್ತೇವೆ.. ಚಂದದಲ್ಲಿ ಸೀರೆ ಯುಟ್ಟು ಸೆರಗು pin  ಮಾಡುವಾಗ ಸರಿಯಾಗಿ ಎದುರು ಭಾಗದಲ್ಲೇ ಹಿಂದೆಂದೋ ಏನೋ ಚಲ್ಲಿ clean  ಮಾಡಿದ್ದರೂ ಸರಿಯಾಗಿ ಹೋಗದೆ ಕಲೆ ಢಾಳಾಗಿ ಅಣಕಿಸುತ್ತದೆ…
(ಇಂಥ ಅನುಭವಗಳು ಲೆಕ್ಕಕ್ಕೆ ಸಿಗದಷ್ಟು.. ನಿಮಗೂ ಹಾಗೇನಾ? ನನ್ನ ಸಮಾಧಾನಕ್ಕಾದರೂ ಹೌದೆನ್ನಿ.)

Leave a Reply