ಪಂಚಾಂಗ – ಭಾಗ 1

ನಾವು ನಮ್ಮ ದೈನಿಕ ಜೀವನದಲ್ಲಿ ಅನೇಕ ಬಾರಿ ಪಂಚಾಂಗ ಎಂಬ ಶಬ್ದವನ್ನು ಬಳಸುತ್ತೇವೆ. ಆದರೆ ಬಹಳಷ್ಟು ಜನರಿಗೆ ಪಂಚಾಂಗ ಅಂದರೆ ಏನು ಎಂದು ತಿಳಿದಿರುವದಿಲ್ಲ. ನಮ್ಮ ಹಿರಿಯರು ಆ ಪದವನ್ನು ಬಳಸುತ್ತಿದ್ದರು, ನಾವೂ ಬಳಸುತ್ತಿದ್ದೇವೆ ಎಂಬುದು ಅವರ ವಿವರಣೆ. ಈ ಲೇಖನಮಾಲೆ ಪಂಚಾಂಗ ಅಂದರೇನು? ಅದರಲ್ಲಿನ ವಿವಿಧ ಅಂಗಗಳು ಯಾವವು ? ಎಂಬುದರ ಬಗ್ಗೆ ಒಂದು ಪ್ರಯತ್ನ.

ನಾವು ನಮ್ಮ ದೈನಂದಿ ಕಾರ್ಯಗಳಲ್ಲಿ ಗಂಟೆ, ತಾರಿಖು, ತಿಂಗಳು ಮುಂತಾದವುಗಳನ್ನು ಬಳಸುತ್ತೇವೆ. ಪಂಚಾಂಗ ಐದು ಅಂಗಗಳಿಂದ ಕೋದಿದ್ದಾಗಿದೆ. ಅವು ಯಾವುವೆಂದರೆ, ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರ್ಣ. ಇವು ಕಾಲಮಾನಗಳನ್ನು ಅಲೆಯುವ ಸಾಧನಗಳು. ನಮಗೆಲ್ಲ ಗೊತ್ತಿರುವಂತೆ ಚಂದ್ರ ಭೂಮಿಯ ಸುತ್ತಲು, ಭೂಮಿ ಸೂರ್ಯನ ಸುತ್ತಲೂ ತಿರುಗುತ್ತಿರುತ್ತವೆ. ಆದರೆ ಹಿಂದೂ ತತ್ವಶಾಶ್ತ್ರದ ಪ್ರಕಾರ, ಭೂಮಿಯನ್ನು ಮಧ್ಯ ಬಿಂದುವನ್ನಾ- ಗಿರಿಸಿಕೊಂಡು ಅದರ ಸುತ್ತಲು ಸೂರ್ಯ, ಚಂದ್ರ ಹಾಗು ಇತರ ಗ್ರಹಗಳು ಸುತ್ತುತ್ತಿವೆ ಎಂದು ಕಲ್ಪಿಸಲಾಗಿದೆ. ಸೂರ್ಯ ಹಾಗೂ ಚಂದ್ರ ಒಂದು ಯುತಿ ಬಿಂದುವಿನಿಂದ (ಅಮಾವಾಸ್ಯೆ) ತಮ್ಮ ಚಲನೆಯನ್ನು ಪ್ರಾರಂಭಿಸಿ ಮತ್ತೆ ಮೊದಲಿನ ಯುತಿ ಬಿಂದುವಿನವರೆಗೆ ಬರಲು ನಿರ್ಧಿಷ್ಟ ಸಮಯವನ್ನು ತೆಗೆದುಕೊಳ್ಳುತ್ತಾರೆ. ಈ ಚಲನೆಯಲ್ಲಿ, ಸೂರ್ಯ ಹಾಗೂ ಚಂದ್ರರ ವೇಗ ಭಿನ್ನವಾಗಿರುತ್ತದೆ. ಈ ರೀತಿ ಬಿಂದುವಿನಿಂದ ಪ್ರಾರಂಭಿಸಿ ಚಂದ್ರ ಸೂರ್ಯರ ನಡುವಿನ ಅಂತರ ೧೨ ಅಂಶಗಳಾದಾಗ ಒಂದು ತಿಥಿ ಪೂರ್ಣವಾಯಿತು ಎನ್ನುತ್ತಾರೆ. ಈ ರೀತಿ ೩೦ ತಿಥಿಗಳದಾಗ ಒಂದು ತಿಂಗಳು (ಚಂದ್ರ ಮಾಸ) ಪೂರ್ಣವಾಗುತ್ತದೆ.

ಚಂದ್ರ ಸೂರ್ಯರು ಭೂಮಿಯ ಸುತ್ತಲೂ ತಿರುಗುವ ಕಾಲ್ಪನಿಕ ದಾರಿಗೆ ವಿಷುವ್ರುತ್ತ ಎನ್ನುತ್ತಾರೆ. ಈ ವೃತ್ತವನ್ನು ೨೭ ಭಾಗಗಳನ್ನಾಗಿ ವಿಭಜಿಸಿ ಒಂದೊಂದು ಭಾಗಕ್ಕೆ ಒಂದೊಂದು ನಕ್ಷತ್ರದ ಹೆಸರನ್ನು ಕೊಟ್ಟಿದ್ದಾರೆ. ಚಂದ್ರ ಯಾವ ನಕ್ಷತ್ರ ಭಗದಲ್ಲಿರುತ್ತಾನೊ ಆ ಕಾಲದಲ್ಲಿ ಆ ನಕ್ಷತ್ರವಿದೆ ಎನ್ನುತ್ತಾರೆ. ಉಧಾಹರಣೆಗೆ ಚಂದ್ರ ಅಶ್ವಿನಿ ನಕ್ಷತ್ರದ ಭಾಗದಲ್ಲಿದ್ದರೆ ಅಂದು ಅಶ್ವಿನಿ ನಕ್ಷತ್ರವಿದೆ ಎನ್ನುತ್ತಾರೆ. ಒಟ್ಟು ೨೭ ನಕ್ಷತ್ರಗಳಿದ್ದು ಅವು ಯಾವುವೆಂದರೆ ೧) ಅಶ್ವಿನಿ, ೨) ಭರಣಿ, ೩) ಕೃತಿಕಾ, ೪) ರೋಹಿಣಿ, ೫) ಮೃಗಶಿರ, ೬) ಆರ್ದ್ರಾ, ೭) ಪುನರ್ವಸು, ೮) ಪುಷ್ಯ, ೯) ಆಷ್ಲೇಶ, ೧೦) ಮಾಘ, ೧೧) ಪೂರ್ವ, ೧೨) ಉತ್ತರ, ೧೩) ಹಸ್ತ, ೧೪) ಚಿತ್ರಾ, ೧೫) ಸ್ವಾತಿ, ೧೬) ವಿಶಾಖ , ೧೭) ಅನುರಾಧಾ, ೧೮) ಜ್ಯೆಷ್ಠಾ, ೧೯) ಮೂಲ, ೨೦) ಪೂರ್ವಾಷಾಧ, ೨೧) ಉತ್ತರಾಷಾಢ, ೨೨) ಶ್ರವಣ, ೨೩) ಧನಿಷ್ಥ, ೨೪) ಶತತಾರಕ, ೨೫) ಪೂರ್ವಾಭಾದ್ರಪದ, ೨೬) ಉತ್ತರಾಭಾದ್ರಪದ, ೨೭) ರೇವತಿ. ಪ್ರತಿಯೊಂದು ನಕ್ಷತ್ರಗಳಿಗೂ ಬೇರೆ ಬೇರೆ ಗುಣಧರ್ಮಗಳ್ನ್ನು ಹೇಳಲಾಗಿದೆ. ಚಂದ್ರ ಆಯಾ ನಕ್ಷತ್ರಗಳಲೀದ್ದಾಗ ಆಯಾ ನಕ್ಷತ್ರಗಳ ಗುಣಧರ್ಮಗಳ ಕಂಡು ಬರುತ್ತದೆ.

ಒಂದು ಸೂರ್ಯೋದಯದಿಂದ ಮುಂದಿನ ಸೂರ್ಯೋದಯದ ವರೆಗಿನ ಕಾಲಾವಧಿಗೆ ಒಂದು ದಿವಸ ಅನ್ನುತ್ತಾರೆ. ಉದಾಹರಣೆಗೆ ಸೋಮವಾರ, ಮಂಗಳವಾರ ಇತ್ಯಾದಿ.
ಮುಂದಿನ ಭಾಗದಲ್ಲಿ ಯೋಗ ಹಾಗೂ ಕಾರಣಗಳ ಬಗೆಗೆ ತಿಳಿದುಕೊಳ್ಳೋಣ

3 Comments

  1. ನಮಗೆ ಹಾಗು ನಮ್ಮ ಮಕ್ಕಳಿಗೆ ತುಂಬಾ ಉಪಯುಕ್ತ ಲೇಖನ

  2. ಭೂಮಿಯಿಂದ ನೋಡಿದಾಗ ಸೂರ್ಯ ರಾಶಿ ಚಕ್ರದ (ಮೇಷಾದಿ ಮೀನ) ಮುಂಭಾಗದಲ್ಲಿ ಕಾಣುತ್ತಾನೆ. ಭೂಮಿ ಸೂರ್ಯನ ಸುತ್ತ ಸುತ್ತುವಾಗ ಸೂರ್ಯನ ಸುತ್ತಲಿನ ೩೬೦ ಡಿಗ್ರಿಗಳನ್ನು ಪರಿಭ್ರಮಿಸಬೇಕಾಗುತ್ತದೆ. ೩೦.೪೩೭೫ ದಿನಗಳಿಗೊಮ್ಮೆ ಭೂಮಿಯಿಂದ ನೋಡಿದಾಗ ಒಂದೊಂದು ರಾಶಿ ಚಕ್ರದ ಹಿನ್ನೆಲೆಯೊಂದಿಗೆ ಸೂರ್ಯ ನಮಗೆ ಕಾಣಿಸಿಕೊಳ್ಳುತಾನೆ. ೩೬೫.೨೫ ದಿನಗಳನ್ನು ೧೨ ರಾಶಿಗಳಿಂದ ಭಾಗಿಸಿದಾಗ (೩೦.೪೩೭೫ ದಿನ) ಒಂದೊಂದು ರಾಶಿಯಲ್ಲಿ ಬದಲಾವಣೆಯಾಗುತ್ತದೆ.

  3. ಇಂಡಿಯನ್ ಸ್ಕೈ ಮ್ಯಾಪ್ ಎನ್ನುವ ಅಪ್ಲಿಕೇಶನ್ ಸ್ಮಾರ್ಟ್ ಫೋನ್ನಲ್ಲಿ ಅಳವಡಿಸಿಕೊಂಡು ನೋಡಿ ಆನಂದಿಸಿ.

    ಒಂದೊಂದು ರಾಶಿಚಕ್ರದಲ್ಲಿ ೨.೨೫ ನಕ್ಷತ್ರಗಳು ಲೆಕ್ಕಕ್ಕೆ ಬರುತ್ತವೆ. ೨೭(ಅಶ್ವಿನ್ಯಾದಿ ರೇವತಿ) ನಕ್ಷತ್ರ ಗಳನ್ನು ೧೨ ರಾಶಿ ಚಕ್ರಗಳಿಮ್ದ ಭಾಗಿಸಿದಾಗ ಬರುವ ಭಾಗಲಭ್ದ.

    ಅದಕ್ಕೆಂದೇ ರಾಶಿಗಳಲ್ಲಿ ಒಂದನೇಪಾದ ೨ನೇ ಪಾದ ಇತ್ಯಾದಿ ಹೇಳಿರುವುದು. ಫ್ರ್ಯಾಕ್ಷನ್ ನಲ್ಲಿರುವ ಭಾಗ ಮುಂದಿನ ನಕ್ಷತ್ರಕ್ಕೆ ಹೋಗುತ್ತದೆ.
    ಉದಾ: ಮೇಶರಾಶಿಯಲ್ಲಿ ಅಶ್ವಿನಿ, ಭರಣಿ ಮತ್ತು ಕೃತ್ತಿಕಾ ನಕ್ಷತ್ರದ ಒಂದುಪಾದ ಬರುತ್ತದೆ.
    ಇನ್ನೂ ಸರಳವಾಗಿ ಹೇಳಬಹುದಾದರೆ
    ಒಂದೊಂದು ನಕ್ಷತ್ರಕ್ಕೆ ನಾಲ್ಕು ಪಾದಗಳು (ಮೇಷರಾಶಿ ೪ ಪಾದ, ವೃಷಭ ೪ ಪಾದ ಇತ್ಯಾದಿ ಹೀಗೆ)
    ಅದ್ದರಿಂದ ಹೀಗೆ ಹೇಳಬಹುದು

    ಒಂದೊಂದು ರಾಶಿಚಕ್ರಕ್ಕೆ ೯ ಪಾದಗಳು

    ಈ ರೀತಿ ವಿಭಾಜಿಸಿದಾಗ ರಾಶಿ ನಕ್ಷತ್ರಗಳು ನನಗೆ ಸುಲಭವಾಗಿ ಅರ್ಥ ಆಯಿತು
    ಚರ್ಚೆ ಮುಂದುವರಿಸೋಣ

Leave a Reply