ಬದುಕು ಪ್ರಕೃತಿಯ ಪ್ರತಿಫಲನ

ಬದುಕು ಪ್ರಕೃತಿಯ ಪ್ರತಿಫಲನ

ಚೈತ್ರದ ಹಸಿರು ವಸಂತ ಹಾಗೂ ಬದುಕಿನಲ್ಲಿ ಹರಯ ಎರಡೂ ಚೇತೋಹಾರಿ…
ಮಾಗಿಯ ಚಳಿಗೆ( Autumn) ಎಲೆಗಳು ಉದುರಿ ಹೋಗುವಂತೆ ಮನುಷ್ಯನ ಕಷ್ಟದ ದಿನಗಳು ಸಂಬಂಧಗಳು ಶಿಥಿಲವಾಗುತ್ತಿವೆ…

ಆರ್ದ್ರತೆಯಿಲ್ಲದ ನೆಲ ಒಣಗಿ ಬಿರಿಯುವಂತೆ ಭಾವನೆಗಳಿಲ್ಲದ ಹೃದಯ
ಕೂಡ ಅದರಲ್ಲಿ ಪಸೆ ಇರುವುದಿಲ್ಲ..

ಹಗಲು-ರಾತ್ರಿಗಳು ಸುಖ-ದುಃಖಗಳ ಪಡಿನೆಳಲು ಒಂದನ್ನೊಂದು
ಹಿಂಬಾಲಿಸುತ್ತವೆ…

ರಾತ್ರಿ ಇಲ್ಲದೆ ನಕ್ಷತ್ರಗಳ ಬೆಳಕಿಲ್ಲ ಕಷ್ಟಗಳಿಲ್ಲದೇ
ಮುಂಬರಬಹುದಾದ ಸುಖಗಳಿಗೆ ಬೆಲೆ ಇಲ್ಲ

ಕಟ್ಟೆಯೊಡೆದು ಭೋರ್ಗರೆಯುವ ನೀರು ಪ್ರಳಯಾಂತಕ…
ಹಾಗೆ ಭಾವನೆಗಳು ಕೂಡ.. ಮಿತಿ ಒಳಗಿದ್ದರೆ ಚೆನ್ನ..

ಉರಿ ಬಿಸಿಲು ಕೊರೆವ ಚಳಿಎರಡೂ ಕರಿಯಲ್ಲ ಹಾಗೆಯೇ ಅತಿ
ಸಿರಿವಂತಿಕೆ ಅತಿಯಾದ ಬಡತನ ಎರಡೂ ದಾರಿ ತಪ್ಪಿಸುತ್ತವೆ..

ಚಾಣಕ್ಯ ಸುಲಭದಲ್ಲಿ ಮಣಿಯದ ಕಲ್ಲುಬಂಡೆಗಳನ್ನು ಒಂದು ಬೀಜದ ಮೊಳಕೆ
ಬಿರಿಯುವಂತೆ ಮಾಡುತ್ತದೆ ಅದೇ ರೀತಿ ಪ್ರೇಮ ದ್ವೇಷಕ್ಕಿಂತ
ಪರಿಣಾಮಕಾರಿ…
ಸೀದಾ ಮರಗಳನ್ನು ಮೊದಲು ಕಡಿಯುತ್ತಾರೆ ಸೀದಾಸಾದಾ ಜನರು
ಮೊದಲು ದೌರ್ಜನ್ಯಕ್ಕೆ ಬಲಿಯಾಗುತ್ತಾರೆ.
ಮೆತ್ತಗಿನ ನೆಲವನ್ನೇ ಅಗೆಯುವುದು ಹೆಚ್ಚು.. ಮೆದು ಸ್ವಭಾವದವರನ್ನು
ಬಲಿ ಹಾಕುವುದು ಸುಲಭ…

ಕುದಿಯುವ ನೀರಿನಲ್ಲಿ ಮುಖ ಕಾಣುವುದಿಲ್ಲ…
ಕ್ರೋಧದಲ್ಲಿ ವಿವೇಕವಿವಿರುವುದಿಲ್ಲ…

ಮರಕ್ಕೆ ಸುತ್ತಿಕೊಂಡ ಬಳ್ಳಿ ಯಾವಾಗಲೂ ಸುಲಭದಲ್ಲಿ ಬೆಳೆಯುತ್ತದೆ…
ಪ್ರೀತಿಯ ಆಸರೆ ಬದುಕಿನಲ್ಲಿ ಚೇತೋಹಾರಿ…

ಅತಿನೀರು ನೀರಿನ ಅಭಾವ ಎರಡೂ ಸಸಿಗಳಿಗೆ ಮಾರಕ ಪ್ರೀತಿ/
ಕಾಳಜಿಯ ಯಾವುದೇ ಅತಿರೇಕವು ಮಕ್ಕಳಿಗೆ ಹಿತಕಾರಿಯಾಗದು..

ಪ್ರಕೃತಿಯಲ್ಲಿ ಎಷ್ಟೋ ವನಸುಮಗಳು ತಮ್ಮಷ್ಟಕ್ಕೆ ತಾವು
ಅರಳಿ ಘಮಘಮಿಸಿ ಮರೆಯಾಗುತ್ತವೆ… ಜೀವನದಲ್ಲಿ ಎಷ್ಟೋ
ಸಜ್ಜನರು (un sung heroes).ನಾಯಕರು ಬೆಳಕಿಗೆ ಬರುವುದೇ ಇಲ್ಲ…

ಖಾಲಿ ಪಾತ್ರೆಗಳ ಸದ್ದು ಯಾವಾಗಲೂ ಅಧಿಕ… ತುಂಬಿದ ಕೊಡ
ತುಳುಕುವುದಿಲ್ಲ… ಹಾಗೆ ನಿಜ ವಿದ್ವಾಂಸರು ಸಹ..

ಒಂದು ಹುಳು ತನ್ನ ಕೋಶ ಪಡೆದು ಹೊರ ಬಂದಾಗ ಸುಂದರ
ಚಿಟ್ಟೆ ಆಗುತ್ತದೆ… ಅತಿ ಸುರಕ್ಷಿತ ಬದುಕು ಮುಕ್ತವಾಗಿ ಅಳಲಾರದು…

ಯಾರೂ ಬಯಸದ ಕೆಸರಿನ ಕಮಲಗಳು ಅರಳುತ್ತವೆ… ನಿರ್ಗತಿಕ,
ನಿರ್ಲಕ್ಷಿತ ತಾಣಗಳು ಮೇಧಾವಿಗಳನ್ನು ಹೆರಬಲ್ಲವು…

ಅತಿಯಾಗಿ ಕಾಯುವ ಕಲ್ಲುಗಳು ಸೀಳು ಬಿಡುತ್ತವೆ… ಮನೆಯಲ್ಲಿಯ ಅತಿ
ಸಂಘರ್ಷಗಳು ಒಳಜಗಳಗಳು ಸಂಬಂಧಗಳನ್ನು ಸಡಿಲಗೊಳಿಸುತ್ತವೆ.

ಪರ್ವತ ಬೆನ್ನ ಮೇಲೆ ಅರಣ್ಯಗಳನ್ನು ಹೊರುತ್ತದೆ ನಿಜ.. ಆದರೆ
ಇಣಚಿಯಂತೆ ಛಕ್ಕನೆ ಕಾಯಿ ಕಡಿಯಲು ಅದರಿಂದ ಆಗುವುದಿಲ್ಲ… ಹಾಗೆ
ಜಗತ್ತಿನಲ್ಲಿ ಎಲ್ಲರಿಗೂ ತಮ್ಮದೇ ವಿಶಿಷ್ಟ ಕಾರ್ಯ ಕೌಶಲ್ಯವಿರುತ್ತದೆ.

ಉರುಳಿ ಬೀಳುವ ಕಲ್ಲಿನ ನೋಡಲು ಸಾಧ್ಯವಿಲ್ಲ… ಅದರಂತೆ
ದೃಡತೆ ಇಲ್ಲದ ವ್ಯಕ್ತಿತ್ವದ ಪರಿಚಯವಾಗಲು ಸಾಧ್ಯವಿಲ್ಲ…

Leave a Reply