ಚಂದ್ರಂಗೆ   ರಾಹು ಅಡ್ಡ ಬಂದಲ್ಲಿ

ಚಂದ್ರಂಗೆ   ರಾಹು ಅಡ್ಡ ಬಂದಲ್ಲಿ

ಒಂದು ಬಾಹ್ವಾಕಾಶದ ವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸುದಾಗ ಉಂಟಾಗುವ  ಖಗೋಳ ಶಾಸ್ತ್ರೀಯ ಘಟನೆಯನ್ನು ಗ್ರಹಣ ಎನ್ನುತ್ತೇವೆ. ವಿಸ್ತಾರವಾದ  ಬಾನಂಗಳದ ವಿಸ್ಮಯಗಳನ್ನು ಕರಾರುವಾಕ್ಕಾಗಿ ಇಂದು ವಿಜ್ಞಾನ ನಮಗೆ ತಿಳಿಸಿಕೊಟ್ಟಿದೆ. ಹಿಂದೆ ಗ್ರಹಣ ಕುರಿತಾದ  ಅನೇಕ ದಂತಕತೆಗಳಿದ್ದವು ಮಹಾಕಾರ್ಕೋಟಕ ರಾಹುವಿನ ವಿಷದ ಹೆಡೆ ಗಂಟೆ ಗಟ್ಟಲೆ ಚಂದ್ರನ ನ್ನು ಮಿಸುಕಾಡದಂತೆ ಹಿಡಿದು ನುಂಗುವುದೆಂಬ  ಆ ಕಾಲದ ಕಲ್ಪನೆಯನ್ನು ಶಿಲ್ಪಿಯೊಬ್ಬ ಕಲ್ಲಿನಲ್ಲಿ ಸಾಂಕೇತಿಕವಾಗಿ ಕಡೆದಿಟ್ಟಿದ್ದನ್ನು ಕಾಣಬಹುದು. ಶಿಲ್ಪಿಯ ಕರಕುಶಲತೆಗೆ, ಸೃಜನ ಶೀಲತೆಗೆ ಸಾಕ್ಷಿಯಾಗಿರುವ ಈ ಕೆತ್ತನೆಯಲ್ಲಿ ರಾಹುವಿನ (ಸರ್ಪ) ಮುಕ್ಕಿ  ತಿನ್ನುವ ಅಕ್ರೋಶ, ಚಂದ್ರನ ಭಯ  ಎದ್ದು ಕಾಣುತ್ತದೆ. ಈ ಚಿತ್ರವನ್ನು ಕೆಳದಿ ರಾಮೇಶ್ವರ ದೇವಸ್ಥಾನದ ಹಿಂಬದಿಯ ಗೋಡೆಯ ಮೇಲೆ ಕಾಣಬಹುದಾಗಿದೆ.

ಹೊಸ್ಮನೆ ಮುತ್ತು

Leave a Reply