ಅಳ್ಳಿಟ್ಟು ಅರಳ್ಳಿಟ್ಟು

ಅಳ್ಳಿಟ್ಟು–

ಇದು ಉತ್ತರಕರ್ನಾಟಕದ ಸುಪ್ರಸಿದ್ಧವಾದ ತಿಂಡಿ ಇದನ್ನು ಸಾಮಾನ್ಯವಾಗಿ ಬ್ರಾಹ್ಮಣರು ಅನಾದಿಕಾಲದಿಂದಲೂ ತಿನ್ನುತ್ತಾ ಬಂದಾರ.ಇದು ಅಳ್ಳಿನ ಜೊಳದಿಂದ ಮಾಡಿದ ಪದಾರ್ಥ.
ಇದನ್ನ ಹ್ಯಂಗ ಮಾಡುದಪಾ ಅಂದ್ರ?ಮೊದಲು ಅಳ್ಳೀನ ಜೋಳ ನೀರಾಗ ಹಾಕಿ ಹತ್ತಿಪ್ಪತ್ತು ನಿಮಿಷ ಕುದಿಸಿ ನೀರಿನಿಂದ ಹೊರಗ ತಗಿಬೇಕು,ನೀರನ್ನ ಎಲ್ಲಾ ಬಸದು ಜೋಳ ನೆರಳಾಗ ಆರಲಿಕ್ಕೆ ಇಡಬೇಕು
.ಆಮೇಲೆ ಕಬ್ಬಿಣದ ಬುಟ್ಟಿಯೊಳಗೆ ಜೋಳ ಹಾಕಿ ಹುರಿಬೇಕು ಅಂದರ ರೋಸ್ಟ್ಮಾಮಾಡುದು ಅಂತಾರಲ್ಲಾ ಆಗ ಅಳ್ಳು ಮ್ಯಾಲೆ ಬರತಾವ. ಅದನ್ನಗಿರಣಿಗೆ ಹಾಕಿಸಿದರ ಆತು.ಅಳ್ಳೀಟ್ಟು ತಯಾರ ಆದಂಗ.

ಇದರಾಗ ನಾರಿನ ಅಂಶ ಬಹಳ ಇರತದ.ಮತ್ತ ಪೌಷ್ಟಿಕಾಂಶ ಇರತದ.ಹಿಂಗಾಗಿ ಹಿಂದಕಿನ ಮಂದಿ ಇದನ್ನ ತಿಂದು ರಾತ್ರಿ ಮಲಗಿ ಬಿಡತಿದ್ದರು.ಹೊಟ್ಟಿಗೆ ವಜ್ಜಾ ಆಗತಿದ್ದಿಲ್ಲಾ.ಹಾ ಈಗ ಅಂಗಡಿಯಲ್ಲಿ ತಯಾರಿ ಅಳ್ಳೀಟ್ಟು ಸಿಗತದ.ಅಂದಂಗ ಇದನ್ನ ತಿನ್ನುದು ಹ್ಯಂಗ?

೧.ಹಾಲಿನಲ್ಲಿ ಸಕ್ಕರೆ ಅಥವಾ ಬೆಲ್ಲಾ ಕಲಿಸಿ ಅದರಲ್ಲಿ ಈ ಅಳ್ಳೀಟ್ಟನ್ನು ಕಲಿಸಿ ಉಂಡಿ ಮಾಡಿ ತಿನ್ನಬಹುದು.

೨. ಮಜ್ಜಿಗೆಯಲ್ಲಿ ಕಲಿಸಿ ಉಪ್ಪು ಹಾಕಿ ನಂತರ ಮೇಲೆ ಒಗ್ಗರಣೆ ಹಾಕಿಕೊಂಡು ಉಪ್ಪಿಟ್ಟಿನಂತೆ ತಿನ್ನಬಹುದು.ಹಸಿಸವತೆಕಾಯಿ ಹೆರೆದು ಮೇಲೆ ಕಲಿಸಿ ತಿಂದರೆ ಹಾ ಏನ ರುಚಿ ರೀ ?

ಮತ್ತ ಭೆಟ್ಟಿ ಆಗೋಣ ರೀ.

ನಿಮ್ಮ ಧಾರವಾಡದವ

ವಿಜಯ ಶಶಿಧರ.ಇನಾಮದಾರ

Leave a Reply