ಏ ಲಘು ಲಘು ಆರತಿ ಮಾಡ್ರಿ ಪಾ ಏಷ್ಟೋತ್ತ ಮಾಡ್ತಿರಿ. ತಡಿಯೋ ಮಾರಾಯಾ ಇನ್ನ ನೈವೇದ್ಯ ನ ಆಗಿಲ್ಲಾ.ಲೇ ರಾಮಾ ಬಾಳಿ ಎಲಿ ತಂದಿ. ಅಯ್ಯೋ! ತಂದಿಲ್ಲಾ ಮರತ ಬಿಟ್ಟೆ. ಎನ ಪಾ ನೀ ಹಿಂಗ ಮಾಡತಿ ತಲಿ ಚಿಟ್ಟ ಹಿಡಸತಿ.ಹೋಗ ಹೋಗ ಗುಡಿ ಹತ್ತರ ಸಿಗತಾವ ಲಘೂನ ತಗೋಂಡ ಬಾ, ಸೈಕಲ ತಗೋಂಡ ಹೋಗ ಲೆ ಮತ್ತ.
ಅಲ್ಲರ್ರಿ ಚೌಕಟ್ಟಿಗೆ ಮಾವಿನ ತೋಳಲು ಕಟ್ಟಿರ್ರಿ.ಹಾ ಕಟ್ಟಿನಿ ಮಾಹರಾಯತಿ ಮಾಲಿ ತಂದಿನಿ.ಹಾಲ ತಂದಿನಿ.ಕೈಶಾವಿಗೆ ಬಂದಾವ. ನೀ ರಂಗೋಲಿ ಹಾಕ ಇನ್ನ.
ಅಲ್ಲಾ ಬಾಳಿ ಎಲಿ ಬಂದೂವು ಬಡಸರ್ರಿ.
ಅಮ್ಮಾ ನನಗ ಹಸಿವಿ ಆಗ್ಯದ.
ಮುಂಜಾನೆ ಎರಢ ಪ್ಲೇಟ ಅವಲಕ್ಕಿ ತಿಂದ್ದದ್ದು ಎಲ್ಲಿ ಹೋತೋ ಮಗನ.ಆತು ಆತು ಆರತಿ ಆತಂದ್ರ ಕೂತಿರಂತಾ..
ಗಂಧ ಹಚ್ಚಗೋರ್ರಿ.
ತೀರ್ಥ ತಗೋರ್ರಿ,
ಹೋಳಿಗಿ,ಕಡಬು,ಭಜಿ,ಕೋಸಂಬ್ರಿ ಬಡಸರ್ರಿ.
ಎಲ್ಲಾರೂ ಮೋಸರು ಅನ್ನ ಊಣ ಬೇಕಾ ಮತ್ತ.
ಇನ್ನೋಂದ ಹೋಳಿಗಿ ತಗೋ ಅದಕೇನ ಆಗತದ.
ಎಲಿ ಅಡಕಿ ತಾಟನ್ಯಾಗ ಸುಣ್ಣ ಡಬ್ಬಿ ಇಡಲೆ ಗಿಡ್ಡ… ತಂದೆ ತಂದೆ.. ಬಡಕೊ ಬ್ಯಾಡ್ರೀ.
ಹಬ್ಬ ಬಂತಂದ್ರ ಇಷ್ಟ ಅಳತಿ ಎಲ್ಲಾರ ಮನ್ಯಾಗ ಗದ್ದಲೋ ಗದ್ದಲ
ನಾಗಪ್ಪಾ ಗಣಪ್ಪಾ ಆಹಾ ಹಾ ಉಂಡಿ ಮೋದಕಾ ಹೋಳಿಗಿ ಮ್ಯಾಲೆ ಎರಡ ಚಮಚ ತುಪ್ಪಾ ಬಿತ್ತಂದ್ರ ಅ ಅ ಬ್ಬ
#NammaDharwad #ನಮ್ಮಧಾರವಾಡ
#ಹಬ್ಬ
#ನಮ್ಮಧಾರವಾಡಭಾಷಾ
#ಸಂಸ್ಕೃತಿ
ವಿಜಯ ಇನಾಮದಾರ
ಧಾರವಾಡ
You must log in to post a comment.