ಯಶಸ್ಸಿನ ಬೆನ್ನು ಹತ್ತಿ

ಯಶಸ್ಸಿನ ಬೆನ್ನು ಹತ್ತಿ

ಭಾರತೀಯರೆಲ್ಲ ನಂಬುವ, ಪ್ರತಿಪಾದಿಸುವ ಕರ್ಮ ಸಿದ್ಧಾಂತವೂ ಸಹಿತ ಇದಕ್ಕೆ ಒಂದು ಅಡಿಪಾಯ ಒದಗಿಸುತ್ತದೆ. ಪ್ರತಿಯೊಬ್ಬನ ಜೀವನದಲ್ಲಿ ಒಂದಿಷ್ಟು ಕ್ಯಾಸೇ ಕ್ಯಾ ಹೋಗಯಾ ಆಗಿಯೆ ಆಗಿರುತ್ತದೆ. ಎಲ್ಲವೂ ಅವರು ತಿಳಿದುಕೊಂಡಿರುವಂತೆ, ವಿಚಾರ ಮಾಡಿರುವಂತೆ, ಕೆಲಸ ಮಾಡಿ ಅಪೇಕ್ಷೆಪಟ್ಟಂತೆ ನಡೆಯುವದಿಲ್ಲ. ಬಯಸಿದಂತೆ ಪಡೆಯುವದು ಯಶಸ್ಸು ಅಂತ ಸಂಪೂರ್ಣವಾಗಿ ಹೇಳಲೂ ಆಗುವುದಿಲ್ಲ. ಬಯಸಲಾರದನ್ನ ಪಡೆದಾಗ ಸಿಗುವದೂ ಸಹ ಸಂಪೂರ್ಣ ಯಶಸ್ಸು ಅನ್ನುವದು ಏನೂ ಅಂತಾ ಪ್ರಶ್ನೆ ಮುಂದೆ ಬಂದು ನಿಲ್ಲುತ್ತದೆ.
‘ಕ್ಯಾಸೆ ಕ್ಯಾ ಹೋಗಯಾ ಭೇವಷಾ ತೇರೆ ಪ್ಯಾರ ಮೇ’ ಅನ್ನುವ ಹಾಡು ಇತ್ತೀಚೆಗೆ ವಾಲ್ಮೀಕಿ ಜಯಂತಿಯ ದಿನ ಯಾಕೊ ಏನೊ ನೆನಪಿಗೆ ಬಂತು. ‘ಗೈಡ್’ ಸಿನಿಮಾದ ಈ ಹಾಡು ನಟನೆಯ ನಿರ್ದೇಶನದ, ಕಥೆಯ ವಸ್ತುವನ್ನೆ ಹಿಂದಿ ಚಲನಚಿತ್ರ ಬದಲಿಸಿತು. ಎಲ್ಲರೂ ಅಜರಾಮರರೆ ಆದರು. ಒಂದು ಕ್ಷಣ ವಾಲ್ಮೀಕಿಯ ನೆನಪು ಬಂತು. ಅವನ ಜೀವನದಲ್ಲಿಯ ತಿರುವುಗಳೇ ಅಲ್ಲವೇ, ಅದನನ್ನ ರಾಮಾಯಣ ರಚಿಸಲು ಹಚ್ಚಿದ್ದು. ಕಾಳಿದಾಸನ ಮೇಘದೂತ, ಶ್ರೀರಂಗರ ಹರಿ ಜನ್ವಾರ ನಾಟಕದ ಹಿನ್ನೆಲೆ. ಸ್ಟಾನ ಫರ್ಡ ವಿಶ್ವವಿದ್ಯಾನಿಲಯದ ಹುಟ್ಟಾಗಿರಬಹುದು. ಪ್ರತಿಯೊಂದು ಘಟನೆ ಪ್ರತಿಯೊಂದು ಸತ್ಯಕ್ಕೂ ತನ್ನದೇ ಆದ ತಿರುವುಗಳು. ತಿರುಗಣಿಗಳು ಸೆಳೆತ, ಪ್ರಚೋದನೆ, ಪ್ರೇರಣೆಗಳನ್ನು ಹೊಂದಿರುತ್ತವೆ.
ಭಾರತೀಯರೆಲ್ಲ ನಂಬುವ, ಪ್ರತಿಪಾದಿಸುವ ಕರ್ಮ ಸಿದ್ಧಾಂತವೂ ಸಹಿತ ಇದಕ್ಕೆ ಒಂದು ಅಡಿಪಾಯ ಒದಗಿಸುತ್ತದೆ. ಪ್ರತಿಯೊಬ್ಬನ ಜೀವನದಲ್ಲಿ ಒಂದಿಷ್ಟು ಕ್ಯಾಸೇ ಕ್ಯಾ ಹೋಗಯಾ ಆಗಿಯೆ ಆಗಿರುತ್ತದೆ. ಎಲ್ಲವೂ ಅವರು ತಿಳಿದುಕೊಂಡಿರುವಂತೆ, ವಿಚಾರ ಮಾಡಿರುವಂತೆ, ಕೆಲಸ ಮಾಡಿ ಅಪೇಕ್ಷೆಪಟ್ಟಂತೆ ನಡೆಯುವದಿಲ್ಲ. ಬಯಸಿದಂತೆ ಪಡೆಯುವದು ಯಶಸ್ಸು ಅಂತ ಸಂಪೂರ್ಣವಾಗಿ ಹೇಳಲೂ ಆಗುವುದಿಲ್ಲ. ಬಯಸಲಾರದನ್ನ ಪಡೆದಾಗ ಸಿಗುವದೂ ಸಹ ಸಂಪೂರ್ಣ ಯಶಸ್ಸು ಅನ್ನಲೂ ಆಗುವುದಿಲ್ಲ. ಹಾಗಾದರೆ ಯಶಸ್ಸು ಅನ್ನುವದು ಏನೂ ಅಂತಾ ಪ್ರಶ್ನೆ ಮುಂದೆ ಬಂದು ನಿಲ್ಲುತ್ತದೆ. ಕನಸಿನಲ್ಲಿ ಗರಿ ಗೆದರಿದ ಗುರಿಗಳನ್ನು ಒಂದೊಂದಾಗಿ ಮುಟ್ಟುತ್ತ, ಸಾಧಿಸಿಕೊಳ್ಳುತ್ತ ಹೋಗುವದೇ ಯಶಸ್ಸು ಅಂತ ಕೆಲವರು ಹೇಳುತ್ತಾರೆ. ಗುರಿಗಳು ಅನುಭವ, ಶಿಕ್ಷಣ, ವಾತಾವರಣ, ವಯಸ್ಸು, ಸಮುದಾಯ ಎಲ್ಲದರಗಳ ಮೇಲೆ ನಿರ್ಧಾರಿತವಾಗಿರುತ್ತವೆ. ಯಾವದರಿಂದ ಮನಸ್ಸಿಗೆ ಸಮಾಧಾನ ತೃಪ್ತಿ, ಶಾಂತಿ, ಹಿತ ಅನಿಸುತ್ತದೊ ಅದು ಯಶಸ್ಸೆ? ಅಂತಾ ಹೇಳಲೂ ಸಹ ಬರುವದಿಲ್ಲ. ಒಂಸು ಸಮಾಧಾನ ಇನ್ನೊಂದು ಸಮಾಧಾನಕ್ಕೆ ಒಯ್ಯುವಂತಿದ್ದರೇ, ಎಲ್ಲೊ ಏನೊ ಕಡಿಮೆ ಅನಿಸಿ ಅದೂ ಸಹಾ ಯಶಸ್ಸು ಅನ್ನಲಾಗುವದಿಲ್ಲ. ಇದು ಒಂದು ತರಹಾ “ಅಭಿ ನ ಜಾವೋ ಛೋಡಕೆ ಯೆ ದಿಲ್ ಅಭಿ ಭರಾ ನಹಿ” ಮತ್ತೊಂದು ದೇವಾನಂದನ ಹಳೆಯ ಸಿನಿಮಾಗೀತೆ ನೆನಪಾಗುತ್ತದೆ.
ಯಾವದೂ ಸಹ ಸಂಪೂರ್ಣ ಸಮಾಧಾನ ನೀಡುವದಿಲ್ಲ. ನೀಡಲೂಬಾರದು. ಹೊಸ ಯಶಸ್ಸಿನತ್ತ ಹೊಸ ಗುರಿಯತ್ತ ನಮ್ಮನ್ನು ಸಾಗಿಸಬೇಕು. ಏನೂ ಕೆಲಸವಿಲ್ಲದೇ ಸಂಪಾದನೆ ಮಾಡುವ ಖುಷಿಗಳು ಯಶಸ್ಸಿನ ರಹಸ್ಯವೇ ಅಥವಾ ಶಾಪವೇ ಅನ್ನುವ ಯಕ್ಷ ಪ್ರಶ್ನೆ ಮೂಡುತ್ತದೆ. ಕೆಲಸ ಮಾಡಬೇಕು ಅಂತಾ ಮನಸ್ಸು ಹಪಹಪಿಸುತ್ತಿರುವಾಗ, ಅಲಕ್ಷ್ಯತನಕ್ಕೊಳಗಾದಾಗಲೂ ಸಹ ಸೃಜನಶೀಲತೆ ಮತ್ತು ಲೈವಲಿ ಭಾವಗಳನ್ನು ರೂಢಿಸಿಕೊಂಡು “ಜಿಂದಗಿ ಕೈಸಿ ಹೈ ಪಹೇಲಿ ಹಾಯ್” ಕಭಿ ತೋ ಹಸಾಯೇ ಕಭಿ ತೋ ರುಲಾಯೇ..” ಎನ್ನುವ ಇನ್ನೊಂದು ಅಜರಾಮರ ಸಿನಿಮಾ ‘ಆನಂದ’ದ ಹಾಡು. ಸಾವು ನಿಶ್ಚಿತವಿರುವ ವ್ಯಕ್ತಿಯನ್ನು ಚಿರಂಜೀವಿ ಮಾಡುವ ದಿವ್ಯ ಶಕ್ತಿ ಪಡೆದು ಸುತ್ತಲಿನ ಜನರ ಭಾವನೆಗಳಲ್ಲಿ ಆನಂದ ಸಮಾಧಾನದ ಅಲೆಗಳನ್ನು ಬಡಿದೆಬ್ಬಿಸುವ ಕ್ರಿಯೆಯೆ ಯಶಸ್ಸು ಅನಬಹುದೇ? ಹೀಗೆ ಯಶಸ್ಸು ಅನ್ನುವ ಅನುಭವ, ಚಿತ್ರಗಳೆ ಒಂದು ಮಾಯಾಮೃಗ.
ಬಂಗಾರದ ಜಿಂಕೆ. ಅದರ ಬೆನ್ನ ಹಿಂದೆ ಹತ್ತಿ ಓಡುವದೇ ನಮ್ಮ ಕಾರ್ಯ. ಮಾಯಾಮೃಗದ ಬೆನ್ನು ಹತ್ತಿದ ಏನೋ ಒಂದು ಕಳೆದುಕೊಳ್ಳುತ್ತೇವೆ. ಸಮಯವಂತೂ ಸತ್ಯವಾಗಿ ಕಳೆದುಕೊಳ್ಳುವಂತಹದು. ಕಾಲ ಮತ್ತೆ ತಿರುಗಿ ಬರುವದೇ ಇಲ್ಲ. ಹಾಗೆಯೆ ನಮ್ಮ ವಯಸ್ಸು. ನಮ್ಮ ವಯಸ್ಸು ತಿರುಗಿ ಕೂಡುವ ಪುರೂರವನಂತಹ ಮಕ್ಕಳೂ ಇಲ್ಲ. ನಾವುಗಳೆಲ್ಲ ಯಯಾತಿಗಳೂ ಅಲ್ಲ. ಶರ್ಮಿಷ್ಠಿಯೂ ಬೇಕು. ದೇವಯಾನಿಯೂ ಬೇಕು. ಇಬ್ಬರು ಬಂದರೂ, ಸಿಕ್ಕರೂ ಯಶಸ್ಸು ನಮ್ಮದಾಗವದಲ್ಲ. ಯಶಸ್ಸೆ ಒಂದು ಮಾಯಾಮೃಗ. ಮೃಗಕ್ಕೆ ಎಷ್ಟು ಅಂಗಗಳು ಇವೆಯೊ ಹಾಗೆ ಯಶಸ್ಸಿಗೂ ಕೂಡಾ. ಮೃಗದ ಮಿದುಳು ಚಿಕ್ಕದು ಹಾಗೆಯೆ ಯಶಸ್ಸಿನ ಮಿದುಳು ಸಹ. ಮಾಯಾಮೃಗದ ಕಾಲುಗಳು ನಾಗಾಲೋಟಕ್ಕೆ ಹೇಳಿ ಮಾಡಿಸಿದವುಗಳು. ಹಾಗೆಯೆ ಮನಸ್ಸು ಕೂಡಾ. ಅದು ಅಧ್ಯಾತ್ಮಿಕ, ಲೌಕಿಕ, ಅಲೌಕಿಕ, ಭೌತಿಕ, ಭಾವನಾತ್ಮಕ ಅರಣ್ಯದ ಗಿಡಗಂಟಿಗಳಲ್ಲಿ ಓಡುತ್ತಲೇ ಇರುವದು.
ಎಲ್ಲಿಯೂ ವಿಶ್ರಮಿಸುವದಿಲ್ಲ. ಕಣ್ಣುಗಳು ಚಂಚಲವಾದ್ದು, ದೂರ ದೂರ ದಿಗಂತಗಳನ್ನು ನೋಡುವಂತಹದು. ಸಮೀಪದ ಸುಖಗಳನ್ನು, ವಸ್ತುಗಳನ್ನು, ನೋಡಲು ಬಯಸದ ಕಣ್ಣುಗಳು. ರಕ್ಷಣೆಗೆ ಬೇಕಾದ ಕೊಂಬುಗಳು, ಅದಕ್ಕಿಷ್ಟು ಟಿಸಿಲುಗಳು ದೇಶ, ಭಾಷೆ, ಜಾತಿ ಶಿಕ್ಷಣ, ಆಸೆ ಹೊತ್ತ ಕೊಂಬುಗಳು, ಐಶ್ವರ್ಯವೇ ಮೈ ಚರ್ಮವಾಗಿ ಮನಸ್ಸನ್ನು ಅಪಹರಿಸುವ ಚರ್ಮದ ಆಕರ್ಷಣೆಗಳು. ಪ್ರತಿಯೊಬ್ಬ ರಾಮನು ಇಂತಹ ಮಾಯಾಮೃಗ ಬೆನ್ನು ಹತ್ತುವನೇ. ಸೀತೆ ಆಶೆಯ ರೂಪದಲ್ಲಿ ಎಲ್ಲರ ಮನೆ ಮನಗಳಲ್ಲಿ ಇರುವಳೇ. ಸೀತೆಯ ಮನಸ್ಸನ್ನು ಖುಷಿಗೊಳಿಸುವ ಸಲುವಾಗಿ ರಾಮ ಮಾಯಾಮೃಗದ ಬೆನ್ನು ಹತ್ತುವನೇ. ಮಾಯಾಮೃಗವಾದ ಮಾರೀಚನ ಬಂಧು-ಬಾಂಧವರೆಲ್ಲ ನಮ್ಮ ಸುತ್ತಮುತ್ತ ಇರುವವರೇ. ನಾವೆಲ್ಲ ಇಂದು ಹುಟ್ಟೂರಿನಿಂದ, ಹುಟ್ಟಿಸಿದ ತಂದೆ ತಾಯಿಗಳಿಂದ ದೂರದ ಊರಿಗೆ ಹೊಟ್ಟೆಪಾಡಿಗಾಗಿ ವನವಾಸಕ್ಕೆ ಬಂದವರೇ.
ನಾವು ಇದ್ದಲ್ಲಿ ಪಂಚವಟಿ, ಅಲ್ಲಿ ಯಶಸ್ಸಿನ ಮಾಯಾಮೃಗ ಬರುವದೇ. ನಾವು ಬೆನ್ನ ಹತ್ತುವರೇ ನಾವು ಬೆನ್ನ ಹತ್ತಿದಾಗ ಮಾತ್ರ ರಾಮಾಯಣ ಆರಂಭವಾಗುವದು. ಅದರರ್ಥ ಬೇಕಿರಲಿ ಬೇಡವಿರಲಿ ನಮ್ಮ ಕಲ್ಪನೆಗನುಸಾರವಾದ ಒಂದು ಯಶಸ್ಸು ಅನ್ನುವದರ ಚಿತ್ರ. ಅದನ್ನು ಬೆನ್ನು ಹತ್ತಲು ಪ್ರಚೋದಿಸುವ ಆಶೆ ಎಂಬ ಸೀತೆ. ಸಮಾಜವೇ ಒಂದು ಲಕ್ಷ್ಮಣರೇಖೆ ಹಾಕಿದರೂ ಸಮಾಜವು ಸಿಗಲಾರದ ಯಶಸ್ಸನ್ನು ಬಿಡಲಾಗುವದಿಲ್ಲ. ರಾಮ ಲೀಡರಾಗಿಯೂ ಲಕ್ಷ್ಮಣ ಒಬ್ಬ ಫಾಲೋವರ್ ಆಗಿ ಯಾವಾಗಲೂ ಇರುವವರೇ. ಮಾರೀಚನಂತೆ ಬಂಧು-ಬಾಂಧವರು ಅಧಿಕಾರಿಗಳು ಇದ್ದೆ ಇರುವರು. ಸಾಧನೆಗೊಂದು ಪ್ರೇರಣೆ ಇರಬೇಕು. ಮೂಲಭೂತವಾಗಿ ಅರೆ, ಕನಸುಗಳು ಬಯಕೆಯ ರೂಪದಲ್ಲಿರಬೇಕು. ಏನಾದರೂ ಸಾಧಿಸುವ ಛಲ, ಮನೋಬಲವಿರಬೇಕು. ಎಂತಹ ಪ್ರಚಂಡ ರಾಜನು ಸಹ ಆಳುವ ಕೂಸಾಗಿರುತ್ತಾನೆ.
ತಾಯಿಯ ಗರ್ಭದಿಂದ ಬರುವಾಗ ಎಂತಹ ಅರಮನೆಯೂ ಸಹ ಮುಂಚೆ ಒಂದು ಚಿತ್ರವಾಗಿರುತ್ತೆ? ನಮ್ಮೆಲ್ಲರ ಕನಸುಗಳು ನನಸಾಗಬೇಕೆಂದರೇ ಸಮಾಜದ ಮೂಲಕ ನಾವೇ ಹಾಕಿಕೊಂಡ ಲಕ್ಷ್ಮಣ ರೇಖೆಗಳನ್ನು ದಾಟಿ ನಮ್ಮ “ನೋಡಿ ಸ್ವಾಮಿ ನಾವಿರೋದೇ ಹೀಗೆ” ಅನ್ನುವ ತಾತ್ಕಾಲಿಕ ತಟಸ್ಥ ಸ್ಥಿತಿ ಬಿಟ್ಟು ಪ್ರಚೋದನೆ ಮತ್ತು ಪ್ರೇರಣೆಯ ಮೂಲಗಳನ್ನು ಹುಡುಕುತ್ತ ಯಶಸ್ಸಿನ ಕಲ್ಪನೆಯ ಮಾಯಾಮೃಗವನ್ನು ಎಲ್ಲರನ್ನು ಬಿಟ್ಟು ದೂರದ ನಗರದ ವನವಾಸದಲ್ಲಿ ನಮ್ಮ ಪಂಚವಟಿಯಿಂದಲೆ ಸೀತೆ ತೋರಿಸಿದ ಮಾಯಾಮೃಗ ಬೆನ್ನು ಹತ್ತುವದು ಅನಿವಾರ್ಯವಾದ ದುರಂತವೊ ಅಥವಾ ಯಶಸ್ಸಿನ ಸುಖಾಂತವೋ ಕಾಲವೇ ನಿರ್ಧರಿಸುವದು.

ಕೃಪೆ : ಸಂಯುಕ್ತ ಕರ್ನಾಟಕ

Leave a Reply