ವಿನಾಶದತ್ತ ನಮ್ಮ ನದಿಗಳು

ನಮ್ಮ ದಿನನಿತ್ಯದ ಜೀವನ ಕ್ರಮದಲ್ಲಿ ಕೆಲವು ವಸ್ತುಗಳಿಗೆ ಪರ್ಯಾಯ ವಸ್ತು ಲಭ್ಯವಿಲ್ಲ. ಉದಾಹರಣೆಗೆ: ಉಪ್ಪು, ಇದಕ್ಕೆ ಪರ್ಯಾಯ ಪದಾರ್ಥ ಯಾವದು?

ನೀರು, ಇದಕ್ಕೂ ಪರ್ಯಾಯ ಇಲ್ಲ. ನೀರಡಿಕೆ ಆದಾಗ ನೀರಿನ ಬದಲು ಯಾವ ದ್ರವ್ಯವೂ ಬಾಯಾರಿಕೆ ತೀರಿಸುವದಿಲ್ಲ.
ಪಂಚಭೂತಗಳು ಆಕಾಶ, ಪೃಥ್ವಿ, ಅಗ್ನಿ, ವಾಯು ಜೊತೆ ಇರುವುದು ನೀರು. ನಮ್ಮ ಭೂಮಿಯ ೭೦ ಪ್ರತಿಶತ ಭಾಗವನ್ನು ನೀರು ಆವರಿಸಿದೆ, ಮನುಷ್ಯರ ದೇಹದ ೫೦ ಪ್ರತಿಶತ ಭಾಗ ನೀರಿನಿಂದ ತುಂಬಿದೆ.

ಈ ಪೀಠಿಕೆಗೆ ಕಾರಣ ನಿಮ್ಮೆಲ್ಲರಿಗೂ ಒಂದು ಕಿರುಚಿತ್ರ ತೋರಿಸಲು;
ನದಿ ಮನುಷ್ಯರಿಗೆ ಅನಾದಿಕಾಲದಿಂದಲೂ ಜೀವನದ ಪ್ರಮುಖ ಅಂಗ, ಉಪಯೋಗಿಸುವ ನೀರಿನ ಮೂಲ. ಇಂತಹ ನದಿಯನ್ನು ನಮ್ಮ ಲಾಭಕ್ಕಾಗಿ ಅಥವಾ ನಾವು ಮಾಡುವ ಪ್ರಮಾದಗಳಿಂದ ಹೇಗೆ ವಿನಾಶಕ್ಕೆ ದೂಡುತ್ತೇವೆ ಎಂಬುದು ಇದರಲ್ಲಿ ಚಿತ್ರಿಸಿದೆ. ಇದನ್ನು ನೋಡಿದ ಮೇಲೆ ಜನರು ಸರಿ, ತಪ್ಪು ತಿಳಿಯುವರೆಂದು ಆಶಿಸುತ್ತೇನೆ.

1 Comment

  1. ಪರಿಸರ ಸ್ವಚ್ಛವಾಗಿ ಉಳಿಯಬೇಕಾದರೆ, ಮೊದಲನೇ ಹೆಜ್ಜೆ ಪ್ಲ್ಯಾಸ್ಟಿಕ್ ಬಳಸಿ ಮಾಡುವ ಎಲ್ಲ-ಎಲ್ಲರೀತಿಯ ಪ್ಯಾಕೇಜಿಂಗ್ ಗಳನ್ನು ಬದಲಿಸಿ, ಭೂಮಿಯಲ್ಲಿ ಕರಗುವ, ಮುದ್ರಣರಹಿತ ವಸ್ತುಗಳನ್ನು ಬಳಸಬೇಕು. ಪ್ರತಿಯೊಂದು ಪ್ಯಾಕಿಂಗೂ ಮುದ್ರಿತ, ಲ್ಯಾಮಿನೇಷನ್ ಮಾಡಿದ ಕಾಗದ ಬಳಸಬಾರದು.
    ಮಳೆಯ ನೀರನ್ನು ಎಷ್ಟುಸಾಧ್ಯವೋ ಅಷ್ಟು ನೆಲದಲ್ಲಿ ಹಿಂಗಿಸಬೇಕು. ಇನ್ನೂ ಹಲವಿವೆ, ಎಲ್ಲರಿಗೂ ತಿಳಿದಿದೆ.

    ಆದರೆ,

    ಮಾಡುವವರಿಗೆ ಅದು ಬೇಕಾಗಿಲ್ಲ, ಬೇಕಾದವರು ಮಾಡುವ ಸ್ಥಿತಿಯಲ್ಲಿಲ್ಲ.

    ನಿರಾಶಾವಾದದಿಂದಲೂ ಪ್ರಯೋಜನವಿಲ್ಲ, ಹಾಗಾದರೆ ಹೇಗೆ?

Leave a Reply