ಎತ್ತು ಎರಿಗೆ… ಕೊಣ ಕೆರೆಗೆ…

ಎತ್ತು ಎರಿಗೆ… ಕೊಣ ಕೆರೆಗೆ…
ನಾವಿರುವುದು ಒಂದು ಅತಿದೊಡ್ಡ ವಸತಿಸಮುಚ್ಚಯ. ಸಾವಿರಕ್ಕೂ ಮಿಕ್ಕಿ ಅಪಾರ್ಟಮೆಂಟ್ ಕಟ್ಟಿ ಉಳಿದ ಜಾಗದಲ್ಲಿ ಐವತ್ತೆರಡು ಗಳಿವೆ. ನಾಲ್ಕು ವರ್ಷಗಳ ಹಿಂದೆ ಬಂದಾಗ ಕೇವಲ ಐದಾರು ಕುಟುಂಬಗಳಿದ್ದು ಎಲ್ಲರೂ ಒಬ್ಬರೊಬ್ಬರ ಮನೆಗೆ ಹೋಗುವದು, ಪರಿಚಯಿಸಿಕೊಳ್ಳುವುದು, ಆಗಾಗ ಭೇಟಿಯಾಗುವುದು ಸಾಮಾನ್ಯವಾಗಿತ್ತು. ಈಗ ಎಲ್ಲ ಮನೆಗಳಿಗೂ ಜನ ಬಂದಿದ್ದಾರೆ. ದಸರಾ, ದೀಪಾವಳಿಯ ಮಧ್ಯದ ರಜೆಯಲ್ಲೊಂದು ಮಾಡುವ ವಿಚಾರದಿಂದ ಒಂದು ಕಮೀಟಿಯ ರಚನೆಯಾಗಿ ಒಂದು ಮಾಡಲಾಗಿದೆ.
ಅಲ್ಲಿಂದ ಸುರು… ನಮಗೆ ಆ ಆಗೊಲ್ಲ ನಾವು ಊರಲ್ಲಿ ಇರೋಲ್ಲ.. ನಮ್ಮನೆಯಲ್ಲಿ ನಮಗೆ ಆಗ ಕಡವಾ ಚೌತ್… ಎಷ್ಟು ಜನರೋ, ಅಷ್ಟು ಕಾರಣಗಳು, ಸಾಕಷ್ಟು ಹಗ್ಗ ಜಗ್ಗಾಟವಾಗಿ ಒಂದೆರಡು ಒಂದೆರಡು ಕೊಟ್ಟರೂ ಬಗೆಹರಿಯಲಿಲ್ಲ. ಗಂಡಸರ ಪ್ರವೇಶವಾಯ್ತು. ಪರಿಣಾಮ ಇನ್ನೂ ಗೊಂದಲಮಯ. ತಲೆಗೊಂದು ಮಾತು.. ಇಚ್ಚಿತ ರೀತಿಯಲ್ಲಿ ಹಗೆ ಹರಿಯಲಿಲ್ಲ. ಎಲ್ಲರದೂ ತಮ್ಮ ಮೂಗಿನ ನೇರಕ್ಕೇನೆ ವಿಚಾರ ಅದೊಂದು ಸಾರ್ವಜನಿಕ ಸಮಾರಂಭ ಬಹುಜನರ ಅಭಿಪ್ರಾಯ ಒಳ್ಳೆಯದು ಅಂದುಕೊಂಡು ಆಯಿತು… ಅಲ್ಲೂ ಕೆಲವರದು ಕ್ರಮೇಣ ಅದು ವ್ಯಕ್ತಿ ಪ್ರತಿಷ್ಠೆಯ ವಿಷಯವಾಗಿ ಅವರವರದೇ ಚಿಕ್ಕ ಪುಟ್ಟ ಗುಂಪುಗಳಾಗಿ ಗುಂಪು ಗುದ್ದಾಟ.. ಸಂಯೋಜಕರು ಅಸಹಾಯಕರು ಇದು ಹೆಚ್ಚು ಕಡಿಮೆ ಒಂದು ತಿಂಗಳಿಂದ ನಡೆದ ವ್ಯರ್ಥ ಗುದ್ದಾಟ ಯಾವುದೂ ಇನ್ನೂ ಪಕ್ಕಾ ಆಗಿಲ್ಲ. ಎಲ್ಲವೂ ಅರೆ ಬರೆ ಅಕ್ಕಿ ಎಲ್ಲರೊಂದಿಗೆ ಕೂಡಿಕೊಂಡು ಒಂದು ಸಂಭ್ರಮದ ನಿರೀಕ್ಷೆಯಲ್ಲಿದ್ದ ಸೀದಾ ಸಾದಾ ಮಂದಿಗೆ ತೀವೃ ಉತ್ಸಾಹ ಭಂಗ… ಯಾರ ಪರ ಮಾತಾಡಿದರೆ ಏನೋ ಎಂಬ ದಿಗಿಲು.
ದೇಶದ ಆಡಳಿತದ ಬಗ್ಗೆ, ಆಡಳಿತ ಪಕ್ಷ, ವಿರೋಧ ಪಕ್ಷಗಳ ರೀತಿಯ ಬಗ್ಗೆ ನಡೆಯುವ ಚರ್ಚೆ ಎಷ್ಟೊಂದು ವೀರಾವೇಶದಿಂದ ನಡೆಯುತ್ತವೆ ಎಲ್ಲರಿಗೂ ಗೊತ್ತು. ಸದನಗಳಲ್ಲಿ ಮಾಧ್ಯಮಗಳಲ್ಲಿ, ರಾಜಕೀಯ ವೇದಿಕೆಗಳಲ್ಲಿ ಚುನಾವಣಾ ಪ್ರಸಾರಗಳಲ್ಲಿ ಎಲ್ಲೆಂದರಲ್ಲಿ ಬಟ್ಟೆ ಕೂಡ ಹರಿದುಕೊಂಡು ಕಿರುಚಾಡಿದ್ದನ್ನು ಕಂಡು ರೋಸಿ ಹೋಗಿದ್ದೇವೆ. ವೈಯಕ್ತಿಕವಾಗಿ, ರಾಜಕೀಯ ಉದ್ದೇಶಕ್ಕಾಗಿ ತೊಡಗಿಕೊಂಡವರನ್ನು ಬಿಟ್ಟರೆ ಜನ ಸಾಮಾನ್ಯರಿಗೆ ರೇಜಿಗೆ ಹುಟ್ಟಿಸುತ್ತವೆ ಈ ವಿದ್ಯಮಾನಗಳು.
ಒಂದು ಸಮುಚ್ಚಯದ ಕೆಲವೇ ಕೆಲವು ಮನೆಗಳ ಒಂದು ಕಾರ್ಯಕ್ರಮ ಇಷ್ಟೆಲ್ಲ ಅಸಹನೀಯತೆ, ಅಶಿಸ್ತು, ಅರಾಜಕತೆ, ಅಸಹಕಾರ, ಅಸಮಾಧಾನದ ಹೊಗೆಯಬ್ಬಿಸಬಹುದಾದರೆ ಭಾರತದಂಥ ಬೃಹತ್ ದೇಶದಲ್ಲಿ ನಡೆದಿರುವದು ಸುದ್ದಿಯೇ ಅಲ್ಲ ಅನಿಸತೊಡಗಿದ್ದು ಸುಳ್ಳಲ್ಲ… ಒಂದು ಸುಂದರ ತೋಟವಾಗಿ ನಳನಳಿಸಬೇಕಿದ್ದ ಪುಟ್ಟ ಪುಟ್ಟ ಗಿಡಗಳು ಸಂಸ್ಕøತಿಯಲ್ಲಿ ಒಂದನ್ನೊಂದು ಮೈಗೂ ತಗುಲದಂತೆ ದೂರವುಳಿದಂತೆ ಮನಸ್ಸಿಗನಿಸಿ ಏಕೋ ಸಂಕಟ, ಕಿರಿಕಿರಿ, ಅರ್ಥೈಸಲಾಗದ ಕಳವಳ..

Leave a Reply