ಗಾಂಧಾರಿ ಶಾಪ ಕೊಟ್ಟಳು  ಶ್ರೀ ಕೃಷ್ಣ ನಸು ನಕ್ಕ

ಗಾಂಧಾರಿ ಶಾಪ ಕೊಟ್ಟಳು  ಶ್ರೀ ಕೃಷ್ಣ ನಸು ನಕ್ಕ

ಗಾಂಧಾರಿ : ಗಾಂಧಾರ ದೇಶದ ರಾಜ ಸುಲಭನ ಮಗಳು. ಶಕುನಿ ಸಹೋದರಿ. ತನ್ನ ಪತಿ ಧೃತರಾಷ್ಟ್ರ ಕರುಡನೆಂದು ತಿಳಿದಾಗ ಪತಿಗೆ ಕಾಣಲಾಗದ ಈ ಜಗತ್ತು ತಾನೂ ನೋಡಲಾರನೆಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಹಾಸಾಧ್ವಿ. ಕುಂತಿಗೆ ಗಂಡು ಮಗುವಾಯಿತೆಂದು ತಿಳಿದು ಅಸೂಹೆಮಟ್ಟು ಕೊನೆಗೆ ತಾನೇ ನೂರೊಂದು ಮಕ್ಕಳನ್ನು ಪಡೆದ ಮಹಾತಾಯಿ. ಪುತ್ರ ವಾತ್ಸಲ್ಯದಿಂದ ಕುರುಡರಾಗಿ ಮಕ್ಕಳ  ಅನೀತಿಯ  ನಡುವಳಿಕೆ ವಿರೋಧಿಸದೇ ಪರೋಕ್ಷವಾಗಿ ತನ್ನೆಲ್ಲ ಮಕ್ಕಳ ಸರ್ವನಾಶಕ್ಕೆ ಕಾರಣಳಾದ ದುರಂತ ನಾಯಕಿ ಈ ಗಾಂಧಾರಿ.

ಕುರುಕ್ಷೇತ್ರ ಯುದ್ದಾ ನಂತರ ಖುದ್ದು ಪಾಂದಡವರೂ” ಶ್ರೀ ಕೃಷ್ಣನೂ ಧೃತರಾಷ್ಟ್ರ ಮತ್ತು ಗಾಂಧಾರಿಯವರಿಗರ ಸಾಂತ್ವನ ಹೇಳಲು ಬರುತ್ತಾರೆ ಆ ಹೊತ್ತಿಗೆ ಸರಿಯಾಗಿ ಗಾಂಧಾರಿಗೆ ಕುರುಕ್ಷೇತ್ರ ಯುದ್ಧದಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡು  ವೈಧವ್ಯದ ದುಃಖದಿಂದ ರೋಧಿಸುತ್ತಿದ್ದ ತನ್ನ ನೂರು ಜನ ಸೊಸೆಯರ ಮುಗಿಲು ಮುಟ್ಟುವ ರೋಧನ ಕಣ್ನು ಮುಂದೆ ಬಂದಿತು; ತಾಯಿ ಹೃದಯದ ಗಾಂಧಾರಿಗೆ ಸಹಜವಾಗಿಯೇ ದುಃಖ, ಕೋಪ –ತಾಪಗಳನ್ನು ಅದುಮಿಟ್ಟುಕೊಳ್ಳಲಾಗಲೇ ಇಲ್ಲ ಆಕೆ ಶ್ರೀ ಕೃಷ್ಣನನ್ನು ಉದ್ದೇಶಿಸಿ ಹೇಳುತ್ತಾ ಕೃ ಷ್ಣಾ ನನಗೆ ನನ್ನ ಮಕ್ಕಳ ಮರಣದ ದುಃಖ ಒಂದೆಡೆಯಾದರೆ ಯುದ್ಧದಲ್ಲಿ ಅಂಗವಿಕಲರಾದ ಯೋಧನ ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ಗಂಡನನ್ನು ಕಳೆದುಕೊಂಡು ವೈಧವ್ಯದ ನೋವಿನಲ್ಲಿರುವ ಸ್ತ್ರೀಯರ ಮಗನನ್ನು ಕಳೆದುಕೊಂಡ ಮಾತೆಯರ ದುಃಖದ,  ನೋವಿನ, ಸಂಕಟದ ಮುಖಗಳೇ ಬೇಡ ಬೇಡವೆಂದರೂ ಕಣ್ಣಿಗೆ ರಾಚುತ್ತಿರುತ್ತವೆ.

ಇವರೆಲ್ಲರ ದುಃಖ, ನೋವು ಹತಾಶೆಗೆ ನೀನೇ ಕಾರ! ಈ ತಪ್ಪಿನ ಹೊಣೆಯಿಂದ ನೀನು ತಪ್ಪಿಸಿಕೊಳ್ಳಲಾರೆ, ನೀನು ನಿನ್ನ ತಂಗಿ   ಯ  ಸೇಡಿನ ಬೆಂಕಿಗೆ ತುಪ್ಪ ಸುರಿದೆ. ಆ ಕಾರಣಕ್ಕಾಗಿಯೇ ನಿನ್ನಿಂದ ಯುದ್ಧ ತಪ್ಪಿಸುವ ಸಾಧ್ಯತೆಯಿದ್ದಾಗಲೂ ಸಹ ಮೌನವಾಗುಳಿದೆ; ನನ್ನ ಮಕ್ಕಳ ಸಾವಲ್ಲದೇ, ಲಕ್ಷಾಂತರ ಜೀವಿಗಳ ಸಾವು-ನೋವುಗಳಿಗೆ ಕಾರಣವಾದೆ, ಪಾಂಡವರನ್ನೂ ಪ್ರೇರೇಪಿಸಿ ಅಣ್ಣ-ತಮ್ಮಂದಿರು ತಮ್ಮ ತಮ್ಮಲ್ಲೇ ಕಾದಾಡಿ ಮರಣ ಹೊಂದುವಂತೆ ಮಾಡಿದೆ. ಶಾಂತಿಯಿಂದ ಅಹಿಂಸೆ ಯಿಂದ ಸಾಧ್ಯವಾಗುತ್ತಿದ್ದುದನ್ನು ತಪ್ಪಿಸಿ ಹಿಂಸೆ ಹಾಗೂ ರಕ್ತಪಾತಕ್ಕೆ ದಾರಿಯಾಗುವಂತೆ ಪ್ರಚೋದಿಸಿದೆ… ಈಗ ನೀನೇ ನೋಡು ಇಡೀ ರಾಜ್ಯದ ಜನತೆ ಒಂದಿಲ್ಲೋಂದು ಕಾರಣಕ್ಕೆ ಕಣ್ಣೀರಿನಲ್ಲಿ ಕೈ ತೊಳೆಯುವ ಸಂದರ್ಭ ಎದುರಾಗಿದೆ. ಇದಕ್ಕೆಲ್ಲ ನೀನೇ ಕಾರಣ. ಎಲ್ಲರ ದುಃಖ ನೋವುಗಳಿಗೆ   ಕಾರಣನಾದ ನೀನೂ ಸಹ ನಿನ್ನ ಯಾದವ ವಂಶದ  ಅಣ್ಣ ತಮ್ಮಂದಿರು ನಿನ್ನ ಕಣ್ಣೆದುರಲ್ಲೇ ಪರಸ್ಪರ ಕಾದಾಡಿ ಸಾಯುವುದನ್ನು ನಿಸ್ಸಹಾಯಕವಾಗಿ ನೋಡುವಂತಾಗಲಿ. ನನ್ನ ಸೊಸೆಯಂದಿರಂತೆ ನಿನ್ನ ವಂಶದ ಸೊಸೆಯಂದಿರೂ ವೈಧವ್ಯ ಅನುಭವಿಸುವಂತಾಗಲಿ ಎಂದು ಉದ್ವೇಗದಿಂದ ಶಪಿಸಿದಳು.

ಸ್ಥಿತಿ ಪ್ರಜ್ಞನಾದ ಶ್ರೀಕೃಷ್ಣ  ಆ ತಾಯಿಯ ಶಾಪದಿಂದ  ಕೊಂಚವೂ ವಿಚಲಿತನಾಗದೇ, ಗಾಂಧಾರಿಯನ್ನು ಉದ್ದೇಶಿಸಿ  ಹೀಗೆಂದು ತಾಯಿ ಪುತ್ರ ಶೋಕ ನಿರಂತರವಾದುದು ಇಂಥ ಪುತ್ರ ಶೊಕದಿಂದ ತಪ್ತಳಾದ ನಿನ್ನ ನೋವು ನನಗೆ ಅರ್ಥವಾಗುತ್ತದೆ. ನಿನ್ನ ನೋವಿನಲ್ಲಿ ದುಃಖದಲ್ಲಿ ನಾನೂ ಭಾಗಿ ಹಾಗಾಗಿ ನಿನ್ನ ಮಾತಿಗೆ ಪ್ರತಿಯಾಡುವ ಇಚ್ಚೆ ನನಗಿಲ್ಲ ಆದರೆ ನೆನಪಿರಲಿ ತಾಯಿ ನಾವೆಲ್ಲ ಈ ಕಾಲದ ಅಂಕೆಯಲ್ಲಿರುವವರು, ಈ ಜೀವ ಜಗತ್ತಿಗೆ ಬೇಕಾದ ಚೈತನ್ಯವನ್ನು ಪ್ರಭಾವವನ್ನು ಪರಿಣಾಮವನ್ನೂ ಕಾಲವೇ ನಿರ್ಧರಿಸುತ್ತದೆ. ನಾನು ನಿಮಿತ್ತ ಮಾತ್ರ.

ಪ್ರತಿಯೊಂದು ಉದ್ದೇಶ ಸಾಧನೆಗೂ ಒಂದು ಸಾಧನ ಬೇಕು ಆ ಸಾಧನವಾಗಿ ನಾನು ಇಲ್ಲಿ ಬಳಕೆಯಾಗಿದ್ದೇನೆಯೇ ಹೊರತು ಅನ್ಯಥಾ ಅಲ್ಲ ಪರಿಸ್ಥಿತಿ ಪರಿಣಾಮಗಳು ನಮ್ಮನ್ನು ಹಲವಾರು ಅನಿವಾರ್ಯ ಬಂಧಿಯಾಗಿ ಇನ್ನೇನೋ ,ಮಾಡಬೇಕಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿ, ಕುಲ, ಸಂಸ್ಥೆಗೆ ಒಂದು ಉದ್ದೇಶವಿರುತ್ತದೆ. ಆ ಉದ್ದೇಶ ಸಾಧನೆಗಾಗಿಯೇ ಪ್ರಕೃತಿ ಆತನನ್ನು ಪೋಷಿಸುತ್ತಿರುತ್ತದೆ. ಆ ಉದ್ದೇಶ ಸಾಧನೆಯಾದ ಬಳಿಕ ಅವು ನಿಪ್ಪ್ರಯೋಜಕವಾಗಬೇಕಾದ್ದು ನಿಯಮ ಎಲ್ಲಕ್ಕೂ ಎಲ್ಲರಿಗೂ ಒಂದು ಆಯುಷ್ಮಾನ ಅಂತ  ಇದ್ದೇ ಇರುತ್ತದೆ. ಹೀಗಾಗಿ ನಿನ್ನ ಶಾಪದಿಂದ ನನಗೆ  ಕಿಂಚಿತ್ತೂ ದುಃಖ ನೋವುಗಳಿಲ್ಲ ಅಲ್ಲದೇ ಈಗಾಗಲೇ ನನ್ನ ಯಾದವ ಕುಲ ತನ್ನ ನಡುವಳಿಕೆಯಿಂದಾಗಿ ವಿನಾಶದ ಶಾಪಕ್ಕೆ ಗುರಿಯಾಗಿದೆ. ಆದ್ದರಿಂದ ನಾನು ಯಾದವ ಕುಲವೂ ತುಂಬಾ ಸಂತೋಷದಿಂದ  ಈ ಶಾಪವನ್ನು ಸ್ವೀಕರಿಸುತ್ತದೆ ಎನ್ನುತ್ತಾನೆ ಶ್ರೀ ಕೃಷ್ಣ.

ಒಂದು ಕ್ಷಣ ಕ್ರೋಧ ಮತ್ತು ದುಃಖಕ್ಕೆ ಬಲಿಯಾಗಿ ಕೃಷ್ಣನನ್ನೂ ಯಾದವ ಕುಲವನ್ನೂ ಶಪಿಸಿದ ಗಾಂಧಾರಿ ನಂತರ ತನ್ನ ತಪ್ಪಿನ ಅರಿವಾಗಿ ಅಪಾರ ವೈಥೆ ಪಡುತ್ತಾಳೆ. ಆದರೆ ಮಾತು ನುಡಿದಾಗಿತ್ತು! ಕಾಲ ಮಿಂಚಿ ಮರೆಯಾಗಿತ್ತು.

ಹೊಸ್ಮನೆ ಮುತ್ತು

Leave a Reply