ಗ್ವಾರೆಮಣೆ….!

ಗ್ವಾರೆಮಣೆ….!
ಒಂದೊಂದು ಸಾಗುವಳಿ ಕೆಲಸಕ್ಕೂ ಒಂದೊಂದು ಕೃಷಿ ಉಪಕರಣಗಳು ಬೇಕು. ಈ ಕೃಷಿ ಉಪಕರಣಗಳನ್ನು ಬಳಕೆ ಮಾತಿನಲ್ಲಿ ವ್ಯವಸಾಯದ ‘ಮುಟ್ಟು’ಗಳು ಎಂದು ಕರೆಯುತ್ತಾರೆ. ಹೀಗೆ ಬಳಕೆಯಾಗುವ ಕೃಷಿ ಸಾಧನಗಳಲ್ಲಿ ‘ಗ್ವಾರೆಮಣೆ’ಯೂ ಒಂದು. ಭತ್ತವನ್ನು ರಾಶಿ ಮಾಡಲು ಹಾಗು ಸಗಣಿಯಿಂದ ಕಣ ಸಾರಿಸಲು ಉಪಯೋಗಿಸುವ ಸಾಧನ ಈ ಗ್ವಾರೆಮಣೆ. ತೆಳು ಮರದ ಹಲಗೆಯಿಂದ ಅರ್ಧಚಂದ್ರಾಕೃತಿಯಲ್ಲಿ ತಯಾರಿಸಿದ ಈ ಪರಿಕರವನ್ನು ಉಪಯೋಗಿಸಲು ಅನುಕೂಲವಾಗುವಂತೆ ಉದ್ದವಾದ ಬಿದಿರಿನ ಹಿಡಿಕೆಯನ್ನು ಅಳವಡಿಸಿರುತ್ತಾರೆ. ಆಲೆಮನೆಯಲ್ಲಿ ಕೊಪ್ಪರಿಗೆಯ ಬೆಲ್ಲವನ್ನು ತಿಕ್ಕಿ, ತಿಕ್ಕಿ ಹದ ಮಾಡಲೂ, ಅದಕೆ ಸುಗ್ಗಿಯ ಕಾಲದಲ್ಲಿ ಗೊತ್ತಾದಾಕೆಯನ್ನು ಅಂಗಳದಲ್ಲಿ ಏಕಪ್ರಕಾರವಾಗಿ ಹರಡಿ ಒಣಗಿಸಲೂ, ನಂತರ ಒಣಗಿದ ಗೋಟಡಕೆಯನ್ನು ರಾಶಿ (ಒಟ್ಟು) ಮಾಡಲೂ ಕೂಡ ಈ ಸಾಧನ ಬಹಳ ಉಪಯುಕ್ತವಾದುದು.ಯಾಂತ್ರಿಕರಣದಿಂದಾಗಿ ಕೃಷಿಗೆ ಸಾಕಷ್ಟು ಪ್ರಮಾಣದಲ್ಲಿ ಆಧುನಿಕ ಉಪಕರಣಗಳು ಬಂದವು. ಇವುಗಳ ದೆಸೆಯಿಂದಾಗಿ ಪ್ರಾಕೃತಿಕ ವಸ್ತುಗಳಿಂದಲೇ ತಯಾರಾಗುತ್ತಿದ್ದ ಹೆಚ್ಚಿನ ವಸ್ತುಗಳೆಲ್ಲಾ ನಿಧಾನವಾಗಿ ನೇಪಧ್ಯಕ್ಕೆ ಸರಿದವು. ಅವುಗಳಲ್ಲಿ ಗ್ವಾರೆಮಣೆಯೂ ಒಂದು.

ಹೊಸ್ಮನೆ ಮುತ್ತು

Leave a Reply