ರೋಣುಗಲ್ಲು!
ಭತ್ತದ ತೆನೆ ಕಟಾವಿನ ನಂತರ ತೆನೆಯಲ್ಲಿರುವ ಕಾಳುಗಳನ್ನು ಬೇರ್ಪಡಿಸಲು ಹಿಂದೆ ರೋಣುಗಲ್ಲು ಬಳಸುತ್ತಿದ್ದರು. ಕಣ ಮಾಡಿ, ಮೆದೆ ಹರಡಿ ತೆನೆಯ ಮೇಲೆ ಜೋಡಿ ಎತ್ತು ಕಟ್ಟಿದ ರೋಣುಗಲ್ಲು ತಿರುಗಿಸುತ್ತಿದ್ದರೆ ತೆನೆಯಿಂದ ಕಾಳು ಸಂಪೂರ್ಣವಾಗಿ ಬೇರ್ಪಡುತ್ತಿದ್ದವು. ನಂತರ ಮೆರೆಗೋಲಿನ ಸಹಾಯದಿಂದ ಹುಲ್ಲನ್ನು ತಿರುವಿ, ಕಣದಲ್ಲೆ ಧಾನ್ಯಗಳು ಹಸನುಗೊಂಡು ಮನೆಯ ಕಣಜ ಸೇರುತ್ತಿದ್ದವು. ಇತ್ತೀಚೆಗೆ ಆಧುನಿಕ ಯಂತ್ರೋಪಕರಣಗಳು ಕೃಷಿ ಭೂಮಿಗೆ ಲಗ್ಗೆ ಇಡುತ್ತಿದ್ದಂತೆ ಉತ್ತು, ಬಿತ್ತುವುದರಿಂದ ಹಿಡಿದು ಒಕ್ಕಿ, ಸ್ವಚ್ಛಮಾಡಿ ಮಾರುಕಟ್ಟೆ ಸೇರುವವರೆಗೂ ಯಂತ್ರಗಳದೇ ಪಾರುಪತ್ಯವಾದವು. ನಗರೀಕರಣದ ಕರಿಛಾಯೆ ವ್ಯಾಪಿಸಿದಂತೆ ಕೃಷಿ ಭೂಮಿಗಳು ನಿವೇಶನಗಳಾಗಿ ಬದಲಾದವು. ಹೀಗಾಗಿ ಬಳಕೆಯಲ್ಲಿದ್ದ ಸಾಂಪ್ರದಾಯಿಕ ಪರಿಕರಗಳು ನೇಪಥ್ಯಕ್ಕೆ ಸರಿದವು. ಈ ಹೊತ್ತಿನಲ್ಲಿ ರೋಣುಗಲ್ಲು ಕೇವಲ ನೆನಪಷ್ಟೇ.
ಹೊಸ್ಮನೆ ಮುತ್ತು
You must log in to post a comment.