ದೀಪದ ಮಲ್ಲಿ!

ದೀಪದ ಮಲ್ಲಿ!
ಕಂಚಿನಿಂದ ತಯಾರಾದ ಈ ‘ದೀಪದ ಮಲ್ಲಿ’ಗೆ ಈಗ ಶತಮಾನದ ಸಂಭ್ರಮ, ನಾಲ್ಕೂವರೆ ಇಂಚು ಎತ್ತರವಿರುವ ಈ ದೀಪದ ಕಂಬ ಚಿಕ್ಕದಾದರೂ ಶಿಲ್ಪಿಯ ಕೌಶಲ್ಯ, ಸೃಜನಶೀಲತೆಯಿಂದಾಗಿ ಗಮನ ಸೆಳೆಯುತ್ತದೆ. ದೇವರ ಮುಂದೆ ದೀಪ ಬೆಳಗಲು ಬಳಕೆಯಾಗುತ್ತಿದ್ದ ಈ ಮೂರ್ತಿಯ ಕುಸುರಿ ಕೆಲಸದ ನಾಜೂಕು ಗಮನಿಸುವಂತಹದ್ದು. ಇದರ ವಿಶೇಷತೆಯೆಂದರೆ – ಚಿಕ್ಕ ಮೂರ್ತಿಯಲ್ಲೂ ನೀಳ ಹೆರಳು, ಹೆರಳಿಗೆ ಸಿಕ್ಕಿಸಿದ ಜಡೆ ಬಿಲ್ಲೆಗಳು, ಕೈ ಬಳೆ, ಕಂಠಾಭರಣ, ತೋಳುಬಂದಿ, ಕರ್ಣಾಭರಣವಲ್ಲದೇ ಸೊಂಟಪಟ್ಟಿ, ಕಾಲಂದುಗೆ, ನೀಟಾಗಿ ಕೊರೆದ ಸೀರೆಯ ನೆರಿಗೆ, ಕಂಚುಕದ ವಿನ್ಯಾಸದೊಂದಿಗೆ ಕೈ ಮತ್ತು ಕಾಲು ಬೆರಳುಗಳ ರಚನೆ ಮಾಡಿರುವುದು.ಇಂತಹ ಅಪರೂಪದ ವಸ್ತುಗಳನ್ನು ಸಂರಕ್ಷಿಸುವುದು, ಪುರಾತನ ಕಲೆಗಳಿಗೆ ಪುನರ್ಜನ್ಮ ನೀಡಿದಂತೆಯೇ ಸರಿ. ಆಧುನಿಕತೆಯ ಭರಾಟೆಯಿಂದಾಗಿ ಈ ಪರಿಕರಗಳು ಮಾಯವಾಗುತ್ತಿವೆ. ಶತಮಾನ ಪೂರೈಸಿದ ಈ ದೀಪದ ಮಲ್ಲಿ ಎಷ್ಟೊಂದು ಆಸ್ತಿಕರ ಮನಗಳನ್ನು ಬೆಳಗಿದೆಯೋ ….!

ಹೊಸ್ಮನೆ ಮುತ್ತು

Leave a Reply