ಪೆಟ್ನೆ…!

ಪೆಟ್ನೆ…!
ಪೆಟ್ನೆ ಎಂದು ಹೆಸರಿಸುವ ಈ ಪರಿಕರ ನೆಲವನ್ನು ಸಮತಟ್ಟು ಮಾಡುವಲ್ಲಿ ಉಪಯೋವಾಗುತ್ತಿತ್ತು. ಆಧುನಿಕ ನೆಲ ಹಾಸುಗಳ ಆವಿಷ್ಕಾರ ಆಗುವ ಮೊದಲು ಮನೆಗೆ ಮಣ್ಣಿನ ನೆಲ ಸಾಮಾನ್ಯವಾಗಿತ್ತು. ಮನೆಯ ಒಳಭಾಗವನ್ನು ಕೊಚ್ಚಿ, ಮಗುಚಿ, ನೆಲಕ್ಕೆ ಮೆದುಮಣ್ಣುನ್ನು ಮಟ್ಟ ಮಾಡಿ ಪೆಟ್ನೆಯಿಂದ ಬಡಿದು ಕಲ್ಲಿನಿಂದ ಟಿಕಿ, ತೀಡಿ ನೆಲವನ್ನು ನುಣುಪಾಗಿ ಮಾಡಿ, ನಂತರ ಸಗಣಿಯಿಂದ ಸಾರಿಸುತ್ತಿದ್ದರು. ಇದರಿಂದ ಮನೆಗೆ ನಿಸರ್ಗ ಸಹಜ ಸ್ಪರ್ಶ, ಕಡಿಮೆ ಖರ್ಚು ಜೊತೆಗೆ ಮನೆಯೂ ತಂಪು, ತಂಪು, ಕೂಲ್ ಕೂಲ್ …! ನಿರ್ವಹಣೆ ಕೂಡ ತುಂಬಾ ಸುಲಭ ಹಾಗೂ ಸರಳ. ಕಾಲಕ್ಕೆ ತಕ್ಕಂತೆ ನೆಲದ ಶೈಲಿ , ವಿನ್ಯಾಸಗಳಲ್ಲಿ ಬದಲಾವಣೆ ಆಗುತ್ತಲೇ ಬಂತು. ಆಧುನಿಕ ಕಾಲದಲ್ಲಿ ಮನೆಗೆ ಆಂತರಿಕ ವಿನ್ಯಾಸ ಎಷ್ಟು ಮುಖ್ಯವೋ ಅಷ್ಟೇ ಈ ನೆಲಹಾಸು ಕೂಡ. ಟೈಲ್ಸ್ , ವೆಟ್ರಿಫೈಡ್ ಟೈಲ್ಸ್ , ಮಾರ್ಬಲ್ಸ್ , ಗ್ರಾನೈಟ್ಸ್, ಕಡಪ… ಹೀಗೆ ಹತ್ತಾರು ಅವತಾರಗಳ ಚಮತ್ಕಾರ ಮನೆಯನ್ನು ಮಿನುಗುವಂತೆ ಮಾಡಿದವು.

ಹೊಸ್ಮನೆ ಮುತ್ತು

Leave a Reply