ಹೋಮದ ಪರಿಕರಗಳು

ಹೋಮದ ಪರಿಕರಗಳು
ಭಾರತದ ಸನಾತನ ಪರಂಪರೆಯಲ್ಲಿ ಪೂಜೆ- ಪುನಸ್ಕಾರ, ವ್ರತಾಚರಣೆಗಳಿಗೆ ವಿಶೇಷ ಮಹತ್ವವಿದೆ. ಹೋಮ- ಹವನ ಮಾಡುವುದೂ ಕೂಡಾ ಧಾರ್ಮಿಕ ಕಾರ್ಯದ ಮುಖ್ಯ ಭಾಗ. ಇವನ್ನು ನೆರವೇರಿಸಲು ಹಲವು ಪರಿಕರಗಳು ಬೇಕಾಗುತ್ತವೆ. ಬೆಳ್ಳಿ, ತಾಮ್ರ ಅಥವಾ ಹಿತ್ತಾಳೆಯ ಪರಿಕರಗಳನ್ನೂ ಪಾತ್ರೆಗಳನ್ನೂ ಆದ್ಯತೆಯ ಮೇಲೆ ಪೂಜಾ ಕಾರ್ಯಗಳಿಗೆ ಉಪಯೋಗಿಸುವುದು ರೂಢಿಯಾದರೂ ಹೋಮ- ಹವನ ಮಾಡಲು ಮರದ ಪರಿಕರಗಳೇ ಮುಖ್ಯವಾಗುತ್ತವೆ. ಈ ಮರದ ಪರಿಕರಗಳನ್ನು ಹೆಚ್ಚಾಗಿ ಹಲಸಿನ ಮರದಿಂದ ತಯಾರಿಸಲಾಗುತ್ತದೆ. ಹೋಮ-ಹವನ ನೆರವೇರಿಸಲು ಉಪಯೋಗಿಸುತ್ತಿದ್ದ ಮರದ ಹಲವು ವಿಧದ ಪರಿಕರಗಳನ್ನು ಇಲ್ಲಿ ಕಾಣಬಹುದು.
ಹೊಸ್ಮನೆ ಮುತ್ತು

Leave a Reply