ಈ ಭವ ರೋಗಕ್ಕೆ ಮದ್ದಿಲ್ಲ

ಈ ಭವ ರೋಗಕ್ಕೆ ಮದ್ದಿಲ್ಲ
“ಟ್ರಿಣ್… ಟ್ರಿಣ್… ಟ್ರಿಣ್…”
“ಹಲೋ, ಯಾರು?”
“ನಾನು…”
“ ಓ ಏನಿದು ಅಪರೂಪ… ಏನು ಸುದ್ದಿನೇ ಇದ್ದಿದ್ದಿಲ್ಲ… ಪೂರಾ ಗಾಯಬ್…”
“ನನಗ ಆರಾಮss ಇದ್ದಿದ್ದಿಲ್ಲ… ಎರಡು ತಿಂಗಳಿಂದ…”
“ಏನಾಗಿತ್ತು?”
“ ಶುಗರ್ , ಬಿಪಿ ಎರಡೂ ಏರಿತ್ತು…”
ಡಾಕ್ಟರ್ ಗೆ ತೋರಿಸಿದೇನು? ಏನಂತಾರ?”
ಏನನ್ನಬೇಕು? ನೂರಾ ಎಂಟು ಟೆಸ್ಟ್ ಮಾಡಿಸಿ ರೊಕ್ಕ ಎಳಕೊಂಡು ಆದ್ಮೇಲ ಡಯಟ್ ಮಾಡ್ರಿ.. Wಚಿಟಞiಟಿg ಬಿಡಬ್ಯಾಡ್ರಿ ಔಷಧಿ ರೆಗುಲರ್ ತೊಗೋರಿ ಇದsss. ಇದು ನಮಗೆ ಗೊತ್ತಿರುತ್ತದ…”
ಗೊತ್ತಿರತ್ತದ… ಆದ್ರ ಏನೂ ಪಾಲಿಸೋದಿಲ್ಲ…ಹೌದಲ್ಲೋ?”
“ಹತ್ತು ಹದಿನೈದು ವರ್ಷದ ಮ್ಯಾಲಾತು.. ಎಷ್ಟೂಂತ ಇದೆಲ್ಲ ಮಾಡೋದು.. ಬ್ಯಾಸರಾಗೂದಿಲ್ಲನ?”
“ಹಂಗಂದ್ರ ಹೆಂಗ… ಅಕ್ಕಿನೂ ಖರ್ಚ ಆಗಬಾರದು… ನೆಂಟರೂ
ಉಣಬೇಕೂ ಅನ್ನೋ ಲೆಕ್ಕದು…
ಮತ್ತ ಮಾಡು ಎಲ್ಲ ಸರಿ ಹೋಗುತ್ತದ..”
ಎಲ್ಲೆ ಹೋಗಲೆವಾ… ಇ ಮೈ ಹೊತ್ಗೊಂಡು… ನಾಕ ಹೆಜ್ಜಿಗೆ ದಮ್ ಹತ್ತದ.. ಕಾಲು ಬ್ಯಾರೆ ಬ್ಯಾನಿ ಆಗ್ಯಾವ.. ಬಾಯತಾವ..”
“ಮದಿವ್ಯಾಗ್ದ ಹುಚ್ಚು ಬಿಡಂಗಿಲ್ಲ.. ಹುಚ್ಚಬಿಡ್ದ ಮದಿವ್ಯಾಗಂಗಿಲ್ಲ… ಆ ಲೆಕ್ಕ ಆತದು.. ನನಗೊತ್ತದ ಆ ದರಿದ್ರ ಬಿಡಬೇಕಾಗ್ತದ.. ಆ ಸಂಕಟ ನಿಂಗ..”
“ಅದರ ಮ್ಯಾಲ್ಯಾಕ ಎಲ್ಲಾರು ಕಣ್ಣು ಗೊತ್ತಿಲ್ಲ … ಮನ್ಯಾಗೂ ಇದss ರಾಗ ಇದss ಹಾಡು “
ಮತ್ತ ಬಿಡ್ತಾರೆ ಏನೋ?? ಒಂದ ಕಡೆ ತಾಸಗಟ್ಟಲೇ ಕೂಡೋದು ಕುರುದಿನಸಿ ಕುರುಕೋದು…ಜಡ್ಡ ಬರಬ್ಯಾಡಂದ್ರ ಹೆಂಗ? ಸಂಜಿಗೆ ಆಗದಿದ್ರ ಬೆಳಿಗ್ಗೆ ಎದ್ದು ಸ್ವಲ್ಪರ ವಾಕಿಂಗ್ ಮಾಡಿದಿದ್ರ ಹೆಂಗ…”
“ನನ್ನ ಸಂಕಟ ನನಗ… ಬ್ಯಾರೆದವ್ರಿಗೆ ಅರ್ಥ ಆಗುವುದಿಲ್ಲ. ನಸುಕಿನ ತಂಪನ್ಯಾಗ ತಲಿಸೂಲಿ ಏಳ್ತದ.. ಒಂದ ಸಮನ ಸೀನು ಸುರುವಾಗ್ತಾವ…”
ಹಸ್ತು ಕಾಲೇಳೂದಿಲ್ಲ ಉಂಡು ಹೊಟ್ಟಿ ಬಗ್ಗೂದಿಲ್ಲ ಅಂದ್ಲಂತ
ಹೊಸಾಸೊಸಿ ಮನಿಗೆ ಬಂದಾಗ… ಏನೂ ಬದಲಾಗುವುದಿಲ್ಲ.. ನನಗೆಲ್ಲ ಬದಲಾಗಬೇಕು -ಲೆಕ್ಕ ಆತು ನಿಂದು… ಏನರ ಮಾಡ್ಕೋ ತಾಯಿ..
ನನಗೇನೂ ಹೇಳಬ್ಯಾಡ..”
“ ನಾ ಆರಾಮ ದಿನ ತೆಗಿತೀನಿ ಅಂದ್ರ ಎಷ್ಟು ಮಂದಿಗೆ ಹೊಟ್ಟೆ ಉರಿ
ಅಂತೇನಿ ಎಲ್ಲಾ ಬಿಟ್ಟು ಸನ್ಯಾಸಿ ಆಗಲೇನು?.. ಎಲ್ಲರೂ ಉಪದೇಶ ಮಾಡೋರ..”
“ಮಾಡುವುದಿಲ್ಲ… ಇನ್ನ ಮುಂದ ನಮ್ಮ ಮುಂದ ನಿನ್ನ ಜಡ್ಡಿನ ಸುದ್ದಿ ಬಿಲ್ಕುಲ್ ತೆಗಿಯೋ ಹಂಗಿಲ್ಲ …”
ಇದೇನ ಹೊಸಾ ವರಸೆ ನಿಂದು… ನಮ್ಮವರು ತಮ್ಮವರು ಅಂತ ಯಾಕಿರಬೇಕು?”
ನಮ್ಮವರು ಅಂದ್ಮೇಲೆ ಒಂದು ಮಾತ ಹೇಳಿದ್ರ ಕೇಳ್ಬೇಕಿಲ್ಲೋ…
ಗಂಡಾ ಮಕ್ಳು ಎಲ್ಲರ್ನೂ ಹೆದರ್ಸ್ಗೋತಿದಿ.. ನಾವು ಹೇಳಿದ್ದೂ ದರ್ದಿಲ್ಲ…
ಡಾಕ್ಟರ್ ಏನು ಅನ್ನೋ ಉಡಾಪೆ ..”
ಏನss ನಮ್ಮವ್ವಾ ಸುಂಕದವನ ಮುಂದ ಸುಖಾ ದುಃಖ ಹೇಳ್ಕೊಂ ಡಂಗಾತು ..
ಏನೋ ಪಾಪ ಅಂತಿಯನೋ ಅಂದ್ರ,
ಹೇಳಿದ್ದ ಪಾಪ ಅನ್ನೋಹಂಗ ಆತಿದು!”
ನಾನು ಮಾತಾಡದೆ ಬೈ ಹೇಳಿ ಫೋನಿಟ್ಟೆ. ಇದು ನಮ್ಮಿಬ್ಬರ ನಡುವಿನ ಕಾಯಂ ಬಡದಾಟ ಹಗ್ಗ ಹರಿಯೋಹಂಗಿಲ್ಲ… ಕೋಲು ಮುರಿಯೋಹಂಗಿಲ್ಲ ಆಕಿ ಹೇಳಿದ್ದು ಕೇಳೋ ಹಂಗಿಲ್ಲ…. ನಾ ಹೇಳೋದು ಬಿಡೋಹಂಗಿಲ್ಲ… ಮಂದಿದು ಬಿಡಲಿ ಸ್ವಂತ ಕಾಳಜಿನೂ ಇಲ್ಲ ಅಂದ್ರ…” ಎಲ್ಲಾ ಬಿಟ್ಟು ಬದುಕ್ಬೇಕರ ಯಾಕ? ಅನುಭವಿಸೇನsss ಹೋಗೋದು” ಅನ್ನೋ ತತ್ವ-ಸಿದ್ಧಾಂತ ಇದು ಒಂದು ಭವರೋಗ….
ಇದು ಇಂಥ ಜನರೇ ಹೆಚ್ಚು. ಮನಬಂದಂತೆ ಬದುಕು ನವ ಮಾಸವಿಲ್ಲ.. ಪ್ರಸವವೇದನೆಯಿಲ್ಲ ಧಿಡೀರ್ ಡೆಲಿವರಿಯ ಆಸೆ… ಇರುಳೇ ಇಲ್ಲದ ಹಗಲುಗನಸುಗಳ ಅಕ್ಷಯಪಾತ್ರೆ ಎಲ್ಲರ ಬಳಿ ಅವರದೇ ಚಿತ್ರೀಕರಣ. ಅವರದೇ ತಾರಾಗಣ… ಎಲ್ಲೆಲ್ಲೂ ಮುಳ್ಳಿಲ್ಲದ ಗುಲಾಬಿಗಳ ಕನಸುಗಳು… ವಿಲಾಸದ ವಿಳಾಸಗಳು…
( ಕೊನೆಯ ಪ್ಯಾರಾಗ್ರಾಫ್ ಎರವಲು)

Leave a Reply