ಐ ಲವ್ ಯು ಮಾಯ್ ಪ್ರೆಂಡ್ಸ್ 

ಐ ಲವ್ ಯು ಮಾಯ್ ಪ್ರೆಂಡ್ಸ್

ಹಲೋ, ಹಲೋ,  ಯಾರು ಮಾತಾಡೋವ್ರು ?

ನೀನ ಹೇಳು ನೋಡೋಣ …ಎಷ್ಟು ನೆನಪಿಟ್ಟಿ ಅಂತ ಗೊತ್ತಾಗ್ತದ.

ಅತ್ಯಾ, ಏನ್ ಮಾಡ್ಲಿಕ್ಹತ್ತೀರಿ? ಇಲ್ನೋಡ್ರಿ… ಯಾರೋ ಮಾತಾಡ್ಬೇಕಂತಾರ ನಿಮ್  ಜೊತೆ…

ಯಾರವಾ?

ನೀವ   ಹೇಳ್ರಿ… ಅವರ್ಗೆ ಫೋನ್ ಕೊಡ್ತೇನಿ  ಮಾತಾಡ್ರಿ

ಹಲೋ, ನನ್ನ ನೆನಪದನೋ…. ಏನ್ ಮರ್ತ       ಬಿಟ್ಯೋ…. ನಿನ್ನ ನಂಬರ್

ಹುಡುಕಲಿಕ್ಕೆ ನಾ ಮಾಡದ ಸರ್ಕಸ್ ಇಲ್ಲ. ಅಂತೂ ಇವತ್ತ ಸಿಕ್ತು. ಎಲ್ಲಿದ್ದೀ?

ಏನ್ ತಾನ? ಒಮ್ಮೆನೂ ನನ್ನ ನೆನಪು  ಬರ್ಲೇ ಇಲ್ಲೇನು  ನಿನಗ?

ಎಷ್ಟು ದಿನಾ ಆತು ನಮ್ಮ ಭೆಟ್ಟಿ ಆಗಿ ನೆನಪು ಮಾಡ್ಕೋ…..May 12 ಕ್ಕ    ಹಾಕೋವಾಗ ಭೆಟ್ಟಿ ಆಮ್ಯಾಲ ಗಪ್ ಆಗಿ ಇವತ್ತ  ಇವರ ಮುಂದ ಬಯ್ದೆ…

ಅವರ   ಯಾಕ ಮಾಡಬೇಕು? ಏನೋ ಕಾರಣ  ಇದ್ದೀತು…. ನೀನss   ಮಾಡಿದ್ರಾತು. ಗೆಳತನದಾಗ ಎಂಥಾ ನಾ….. ನೀ….. ಹಗ್ಗ ಜಗ್ಗಾಟ ಅಂದ್ರು… ಅದ್ಕ ಮಾಡ್ದೆ…

ನನ್ನ ಹೆಸರು ನಾನss ಮರೆಯೋ ದಿವಸ  ಇವು… ಇನ್ನ 50-60 ವರ್ಷದ ಹಿಂದಿನ  ಒಂದನೇತ್ತಾ , ಬಿನ್ನೇತ್ತಾ ಗೆಳತೇರು ಫೋನ್ ಮಾಡಿ ನಾ ಯಾರು  ಹೇಳು ಅಂದ್ರ ಪರಿಸ್ಥಿತಿ ಏನಾಗಬೇಡ….

ಇನ್ನೊಂದು   chance  ಕೊಡತೇನಿ     ಅಂದುಕೋತ ಕನಿಷ್ಠ ಎರಡು, ಮೂರು, ಊಹು… ಅಲ್ಲ wrong    ಅಂತ  ಆದ ಮ್ಯಾಲೂ ಹೊಳಿದೇದ್ರ? ನನಗ  ಅನುಮಾನ…. ಎದುರು ಬಂದ ನಿಂತ್ರೂ ಆಗಲಿಕ್ಕಿಲ್ಲ ಅಂತ… ರಟ್ಟಿಹಳ್ಳಿ  ಪ್ರೈ ಮರಿ ಸ್ಕೂಲ್ , ಹೈ ಸ್ಕೂಲ್… ಧಾರವಾಡ  K.E board, J.SS college, Kumata Kamala Baliga college of Education…  ಈ ಎಲ್ಲ ಕಡೆಯ ಗೆಳತಿಯರ ಫೋನ್ಗಳು ಈ ಒಂದೇ ವಾರದಲ್ಲಿ ಬಂದದ್ದು , ಬರುತ್ತಿರುವುದು ಸ್ವಾಭಾವಿಕವೋ, ಕಾಕತಾಳಿಯವೋ ಪವಾಡವೋ ತಿಳಿಯುತ್ತಿಲ್ಲ… ಇಂದು      FRIENDSHIP DAY ಅಂತೆ ನನಗೆ  ಸುರುವಾಗಿವಾರವಾಯಿತು… ಹಳೆಯ ದಿನಗಳು, ಮಧ್ಯದ  ಆಗುಹೋಗುಗಳು, ಸಧ್ಯದ  ಪರಿಸ್ಥಿತಿ ಎಲ್ಲದರ ರೀಲುಗಳನ್ನು ಬಿಚ್ಚಿ, ನೆನೆದು, ಹಿಗ್ಗಿ, ಅಷ್ಟಿಟ್ಟು ಕರಲವೊಮ್ಮೆ ಕುಗ್ಗಿ, ಮುಂದೆ   regular contact   ಮಾಡುವ  ಭರವಸೆಯೊಂದಿಗೆ ಮಾತು ಮುಗಿಸಿದ್ದಾಯ್ತು…. ಕಷ್ಟದ ದಿನಗಳನ್ನು ಉದ್ವಿಗ್ನತೆಯಿಲ್ಲದೆ, ಇಂದಿನದನ್ನು ಒಂದು ರೀತಿಯ ನಿರ್ಲಿಪ್ತತೆಯಿಂದ, ಮುಂದಿನದನ್ನು ಅನಿಶ್ಚಿತತೆ, ಹಾಗು ಸ್ವಲ್ಪು ಆತಂಕ ಮಿಶ್ರಿತ ಧ್ವನಿಯಲ್ಲಿ ಮಾತನಾಡಿ ಮುಗಿಸಿದರೂ ಏನೋ ಆನಂದ, ನಿರಾಳ ಭಾವನೆ…. ಗೆಳೆತನವೊಂದು ವಿಶಾಲ ಆಲದ ಮರದ ನೆರಳು ಅನ್ನುತ್ತಾರೆ ಒಬ್ಬ ಕವಿ ಅದರಲ್ಲಿ  ಹರಹು ಇದೆ…. ಹಿತವಿದೆ…. ಹಾಯಾಗಿ ಕೆಲ ದಿನ ಕಳೆಯಬಲ್ಲೆವೆಂಬ  ಹುಮ್ಮಸ್ಸು ದೊರೆಯುತ್ತದೆ. ನಾನು ಹಿಂದೊಮ್ಮೆ ನನ್ನ ಕಷ್ಟದ ದಿನಗಳಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿ ಡಾಕ್ಟರರ ಬಳಿ ಹೋದಾಗ  ಅವರು ಕೊಟ್ಟ  ಸಲಹೆ, ಸಾಕಷ್ಟು ನಿಮ್ಮ ಸ್ನೇಹಿತೆಯ ರೊಂದಿಗೆ ಕಲೆತು ಇರಿ. ಸುಖ- ದುಃಖ ಹಂಚಿ ಕೊಳ್ಳಿ. ಯಾವ ವಿಷಯವನ್ನೂ ಮನದಲ್ಲಿಟ್ಟು ಕೊಳ್ಳದೇ  ವಿನಿಮಯಮಾಡಿಕೊಳ್ಳಿ.

ನನಗದು ಇಂದಿಗೂ ರಾಮಬಾಣ… ನನ್ನ ಸ್ನೇಹ ಮಂಡಲ ದೊಡ್ಡದು, ಗಾತ್ರದಿಂದ, ಹೃದಯದಿಂದ, ಯೋಗ್ಯತೆಯಿಂದ…..LOVE YOU FRIENDS… THANK YOU ALLLLLL

Leave a Reply