ಜನ ಮರುಳೋ…. ಜಾತ್ರೆ ಮರುಳೋ…

ಜನ ಮರುಳೋ…. ಜಾತ್ರೆ ಮರುಳೋ…
ನಿಮ್ಮ ಮನೆ ಅಡಿಗೆ ರುಚಿಯಾಗ್ತಾ ಇಲ್ವಾ? ಅಮ್ಮನ ಮನೆಯಿಂದ SUN GOLD ತರಿಸಿಕೊಳ್ಳಿ. ನಂತರ ರುಚಿ ನೋಡಿ!

ಯಾಕೋ ಬಟ್ಟೆಗಳಲ್ಲಿ ಹೊಲಸು ಹಾಗೇ ಉಳಿಯುತ್ತಿದೆಯಾ? ಅಮಿತಾಬ ಬಚ್ಚನ್ ಬರ್ತಾನೆ ಬಿಡಿ. ಎರಡು ಸ್ಕ್ರೂ ಹಾಕಿ ತೆಗೆದಮೇಲೆ ಅವನು ಹೇಳಿದ ಸೋಪಿನ ಪುಡಿ ಬಳಸಿ. problem ಖತಂ.

ಬಚ್ಚಲು ಮನೆಯಲ್ಲಿ ನಿಲ್ಲೋಕಾಗ್ತಾ ಇಲ್ವಾ? ಒಂದು refreshener ತೂಗು ಹಾಕಿ…. ಕುಣಿಕುಣೀತಾ ಹಲ್ಲುಜ್ತೀರಾ… ಬಚ್ಚಲೇನೂ ಉಜ್ಜಬೇಕಾಗಿಲ್ಲ.

ಬಚ್ಚಲು ಉಜ್ಜಲೇ ಬೇಕಾ? ಚಿಂತೆ ಬೇಡ. ಅಕ್ಷಯ ಕುಮಾರನನ್ನು
ನೆನೆಯಿರಿ….ಎನು? ಎಷ್ಟು? ಹಾಕಿ ಬಚ್ಚಲು ಸ್ವಚ್ಛಮಾಡಬಹುದೆಂಬ ಮಂತ್ರ ಕ್ಷಣಾರ್ಧದಲ್ಲಿ ಲಭ್ಯ.

ಮದುವೆಗೆ ಹೋಗಬೇಕೆನ್ನುವಾಗಲೇ ಒಂದು ಬಿಳಿ ಕೂದಲು ತಲೆಯಲ್ಲಿ ಕಂಡಿತಾ? ಅಯ್ಯೋ ದೈವವೇ Please ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಕೇವಲ ಎರಡೇ ನಿಮಿಷ ತಾಳಿ. ಗೆಳತಿ hair dye ಎಂಬ ರಾಮಬಾಣದೊಂದಿಗೆ ಬರುತ್ತಾಳೆ. ಆಗ ನೋಡಿ ಮಜಾ… ಮಡುವೆಯಲ್ಲಿ ಮದುಮಗಳೇ ನಿಮ್ಮ bride maid ಆಗಿಬಿಡುತ್ತಾಳೆ.
ಓಹೋ! ಮಗ ಹಾಲು ಕುಡಿಯದೇ ನಾಯಿಗೆ ಹಾಕುತ್ತಿದ್ದಾನಾ? ಮಾತೃ ಹೃದಯ ನೋಯದಿರುತ್ತಾ? ಹಳಹಳಿಸಬೇಡಿ. ನಾಲ್ಕು ಅವರು ಹೇಳಿದ ಬಿಸ್ಕಿಟ್ನೋಂದಿಗೆ ಕೊಡಿ. ನಾಯಿಗೇ ಉಪವಾಸ ಮಾಡಿಸುತ್ತಾನೆ ನಿಮ್ಮ ಮಗ. ನೀವೂ/ ಮಗ ಇಬ್ಬರೂ ಖುಷ್.
ಅಯ್ಯೋ ಹಲ್ಲು ನೋವು. ಏನೂ ತಿನ್ನೋಕೆ ಆಗ್ತಾಯಿಲ್ಲಾ ಅಲ್ವಾ? Hospital ಗೇನೂ ಹೋಗಬೇಕಾಗಿಲ್ಲ ಆ… ! ಎಂದು ಚೀರಿ ವಸಡಿಗೆ ಕೈ ಯಿಡಿ. ಎಲ್ಲಿಂದಲೋ ಕ್ಷಣಾರ್ಧದಲ್ಲಿ ದೇವತೆಯೊಬ್ಬಳು ಪ್ರತ್ಯಕ್ಷಳಾಗಿ ಉಪ್ಪಿರುವ Colgate paste ಕೋಡುತ್ತಾಳೆ. ಉಜ್ಜಿನೋಡಿ. ಹಲ್ಲೇ.. sorry. sorry. ನೋವು ಮಾಯ. ಇಲ್ಲದಿದ್ದರೆ ನಿಮಗೂ ಆ ಖರೀದಿಸಿ ತಂದ ಅಮ್ಮನ್ನೋ, ಅಪ್ಪನ್ನೋ ಬದಲಾಯಿಸಿ ಬಿಡುವ ಮನಸ್ಸಾಗಿದ್ದರೆ ಏನು ಗತಿ ಹೇಳಿ?
ನಿಮ್ಮ fanಗಳು dustನಿಂದ ಅಲರ್ಜಿ ತೊಂದರೆ ಕೊಡುತ್ತಿವೆಯಾ? ಒರೆಸಿ ಸ್ವಚ್ಛಗೋಳಿಸುವ ಗೋಜಿಲ್ಲ. ಡಾಕ್ಟರ್ ಬಳಿ ಹೋಗಿ ಸೀನಲು ಪ್ರಾರಂಭಿಸಿ. ಅವರು ರೂಮಿಗೊಂದರಂತೆ ಹೋಸ fan ಗಳನ್ನು prescribe ಮಾಡುತ್ತಾರೆ. ಖರೀದಿಸಿ ಬದಲಾಯಿಸಿ. ಆಗ dust ಕಮ್ಮಿ trust ಜಾಸ್ತಿ…
ವಿಪರೀತ ನೆಗಡಿಯಿಂದ ಮೂಗು ಊದಿಕೊಂಡು ಚಹ ಕುಡಿಯುವಾಗ ಅಡ್ಡಡ್ಡ ಬರುತ್ತಿದೆಯೋ? ಒಂದೇ second… TV ಯವರು ಒಂದು ಇನ್ ಹೇಲರ್ ಹೇಳುತ್ತಾರೆ.. ಬಳಸಿನೋಡಿ ಚಹ direct ಆಗಿ ಸುಲಭವಾಗಿ ಮೂಗಿನಲ್ಲೇ ಹೋಗದಿದ್ದರೆ ಕೇಳಿ.
ಬದುಕೆಷ್ಟು ಸುಂದರ ಅಲ್ವಾ? ಸಮಸ್ಯೆಗಳಿಗೆ ವಿಚಲಿತರಾಗಬೇಕಿಲ್ಲ TV ಮುಂದೆ ಕೂತುಬಿಡಿ ಸಾಕು. ಅವರೇ ನಿಮ್ಮೆಲ್ಲ ಸಮಸ್ಯೆಗಳಿಗೆ ರಾಮ ಬಾಣ.
ಅವರು ಹೇಳಿದಷ್ಟು ಮಾಡಿ… ಮುಂದಿನದು ತೆರೆಯ ಮೇಲೆ ನೋಡಿ. ಇಷ್ಟು ನಿರಾತಂಕ, ನಿಶ್ಚಿಂತ, ನಿರಾಳ, ನಿರ್ಯೋಚಿತ ಯಾರಿಗುಂಟು!! ಯಾರಿಗಿಲ್ಲ!

Leave a Reply