ಕಾಲವಿಲ್ಲಿ ಸ್ಥಾಯಿ!

ಕಾಲವಿಲ್ಲಿ ಸ್ಥಾಯಿ!
ಕೃಷಿ ರಂಗಕ್ಕೆ ಯಂತ್ರಗಳು ದಾಪುಗಾಲಿಡುತ್ತಿದ್ದಂತೆ, ಉಟ್ಟು ಬಿತ್ತುವುದರಿಂದ ಹಿಡಿದು, ಬೆಲೆ ಕಟಾವಿನವರೆಗೂ ಎಲ್ಲ ಕೆಲಸಗಳನ್ನು ಯಂತ್ರಗಳೇ ಮಾಡುತ್ತಿವೆ. ಹೀಗಾಗಿ ಹಿಂದೆ ಕೃಷಿ ಚಟುವಟಿಕೆಗೆ ಪೂರಕವಾಗಿದ್ದ ನೇಗಿಲು-ನೊಗ, ರಂಟೆ- ಹರ್ತೆಕುಂಟೆ, ಹಲ್ಕು, ಕತ್ತಿ, ಗುದ್ದಲಿ, ಹರೇ, ಪಿಕಾಸಿ ಮುಂತಾದವು ಕಣ್ಮರೆಯಾಗಿ ಬಿಟ್ಟವು. ಈಗ ಶಹರ ಸಂಸ್ಕೃತಿಯ ಮುಂದಿನ ಪೀಳಿಗೆಗೆ ಶ್ರಮ ಸಂಸ್ಕೃತಿಯ ನಮ್ಮ ಪೂರ್ವಜರು ಬಳಸುತ್ತಿದ್ದ ಬೇಸಾಯದ ಉಪಕರಣಗಳನ್ನು ನೆನಪಿಸುವ ಕೆಲಸವನ್ನು ನಟ , ನಾಟಕಕಾರರೂ ಆಗಿರುವ ಇಕ್ಬಾಲ್ ಅಹಮದ್ ರವರು ಮಾಡಿದ್ದಾರೆ. ಶಿಕಾರಿಪುರದಲ್ಲಿನ ಸ್ವಗೃಹವನ್ನೇ ಒಂದು ಕಲಾಕೇಂದ್ರವನ್ನಾಗಿಸಿದ ಇವರು, ಈ ಮನೆಯ ಹೊರ ಗೋಡೆಗಳಿಗೆ ಹಳೆಯ ಬೇಸಾಯದ ಉಪಕರಣಗಳನ್ನು ಅಂಟಿಸಿ ಆ ಕಾಲವನ್ನಿಲ್ಲಿ ಸ್ಥಾಯಿಯಾಗಿಸಿಬಿಟ್ಟಿದ್ದಾರೆ. ಅನುಪಯುಕ್ತವಾಗಿ ಬಿಡುತ್ತಿದ್ದ ವಸ್ತುವೊಂದನ್ನು ತಮ್ಮ ಕ್ರಿಯಾತ್ಮಕ ಚಿಂತೆಗಳಿಂದ, ಆಲೋಚನೆಗಳಿಂದ ಒಂದು ಅಪರೂಪದ ಕಲಾಕೃತಿಯಾಗಿಸಿದವರು ಇಕ್ಬಾಲ್ ಅಹ್ಮದ್ ರವರು.

ಹೊಸ್ಮನೆ ಮುತ್ತು

Leave a Reply