Shopping Cart

Need help? Call +91 9535015489

📖 Print books shipping available only in India. ✈ Flat rate shipping

ಕಾಮಧೇನು…!

ಕಾಮಧೇನು…!
ಸಮುದ್ರ ಮಥನದ ಸಮಯದಲ್ಲಿ ಕ್ಷೀರ ಸಮುದ್ರ ದಿಂದ ಉದ್ಭವವಾದ ವಸ್ತುಗಳಲ್ಲಿ ಕಾಮಧೇನುವೂ ಒಂದು ಎಂದು ನಮ್ಮ ಪುರಾಣಗಳು ಹೇಳುತ್ತವೆ. ದೇವತೆಗಳು ಮೊದಲು ಸಪ್ತರ್ಷಿಗಳಿಗೆ ದಾನವಾಗಿ ಕೊಟ್ಟಿದ್ದು, ನಂತರ ದೇವತೆಗಳ ರಾಜನಾದ ಇಂದ್ರನಿಗೆ ಲೋಕ ಕಲ್ಯಾಣಾರ್ಥವಾಗಿ ನೀಡಲಾಯಿತಂತೆ. ದೇವಲೋಕದ ಹಸುವಾದ ಈ ಕಾಮಧೇನುವಿನ ಮಗಳೇ ನಂದಿನಿ. ಇದು ವಶಿಷ್ಟ ಋಷಿಗಳ ಆಶ್ರಮದಲ್ಲಿದ್ದ ಹಸು. ಕಾಮಧೇನು ಎಂದರೆ ಕಾಮಿಸಿದ್ದನ್ನು ಕೊಡುವ ಧೇನು; ಅಂದರೆ ನಾವು ಬೇಡಿದ್ದನ್ನು ಕೊಡುವ ಹಸು ಎಂಬರ್ಥ. ಈ ಕಾಮಧೇನು ಕಲಾವಿದನ ಕಲ್ಪನೆಯಲ್ಲಿ ಅರಳಿ, ವಸ್ತು ಪ್ರದರ್ಶನವೊಂದರಲ್ಲಿ ಪ್ರದರ್ಶನಗೊಂಡು ತನ್ನ ರೂಪ, ಲಾವಣ್ಯಗಳಿಂದ ನೋಡುಗರ ಗಮನ ಸೆಳೆಯುತ್ತಿತ್ತು.
ಹೊಸ್ಮನೆ ಮುತ್ತು

Leave a Reply