ಮತ್ತಿ ಅವರೆ

ಮತ್ತಿ ಅವರೆ
ಮತ್ತಿ ಅವರೆ,(ವಿಂಗ್ಡ್ ಬೀನ್ಸ್) ನಾಲ್ಕು ಮೂಲೆಗಳೊಂದಿಗೆ ರಕ್ಕೆಯಂತೆ ಕಾಣುವ ಉದ್ದನೆಯ ಅವರೆಕಾಯಿ. ಅತಿ ಹೆಚ್ಚು ಪ್ರೋಟಿನ್ ಇರುವ ತರಕಾರಿ. ಸಮರ್ಪಕವಾಗಿ ಬೆಳೆಸಲಾಗದೇ ಜನರಿಂದ ದೂರವಾಗುತ್ತಿರುವ ಅಪರೂಪದ ತರಕಾರಿ ಈ ಮತ್ತಿ ಅವರೆ. ಬಳ್ಳಿ ಜಾತಿಯ ಈ ಮತ್ತಿ ಅವರೆ, ಬೀಜ ಹಾಕಿದ ಒಂದೆರಡು ತಿಂಗಳಲ್ಲೇ ಗಣ್ಣು, ಗಣ್ಣಿಗೂ ಹೊಸ ಕುಡಿ ಚಿಗುರಿ ಮೂರರಿಂದ ನಾಲ್ಕು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಬಳ್ಳಿ ಹಬ್ಬಲು ಆರಂಭವಾದಾಗ, ಚಪ್ಪರ,ಮರ, ಗಿಡಗಳ ಆಸರೆ ಕೊಡಬೇಕು… ಎಳೆಯ ಕಾಯಿಗಳನ್ನು ಅಡುಗೆಗೆ ಬಳಕೆ ಮಾಡುವುದು ಉತ್ತಮ ಎಳೆಯ ಕಾಯಿಯ ಸಾಂಬಾರ್, ಪಲ್ಯ ಅತ್ಯಂತ ಸ್ವಾದಿಷ್ಟಕರ ಬಲಿತು ನಾರಾಗಿ ಬಿಟ್ಟರೆ ಬಳಕೆಗೆ ಅಷ್ಟು ಒಳ್ಳೆಯದಿರುವುದಿಲ್ಲ.
ಮತ್ತಿ ಅವರೆ ಲೆಗ್ಯುಮಿನೇಸಿ ಕುಟುಂಬದ ಪಾಪಿಲಿಯೋನೇಸಿ ಎಂಬ ಉಪಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು ಸೋಪೋಕಾರ್ಪಸ್ ಟೆಟ್ರಾಗೋನಾ. ಇದಕ್ಕೆ ರಕ್ಕೆ ಅವರೆ, ಮತ್ತಿ ಅವರೆ, ಚತುರ್ಭುಜ ಅವರೆ, ಗೋವಾ ಅವರೆ ಎಂದು ಪ್ರದೇಶಾವಾರು ಬೇರೆ, ಬೇರೆ ಹೆಸರುಗಳಿವೆ. ಶೇ. 35 ಪ್ರೋಟೀನ್ ಅಂಶವಿದ್ದು, ಕಡಿಮೆ ಪ್ರಮಾಣದಲ್ಲಿ ಕೊಬ್ಬಿನಂಶವಿದೆ. ಜೊತೆಗೆ ವಿಟಮಿನ್ ‘ಎ’ ಮತ್ತು ‘ಸಿ’ ಅಂಶವನ್ನೂ ಒಳಗೊಂಡಿದೆ. ಹಸುಗಳಿಗೆ ಇದು ಒಳ್ಳೆಯ ಮೇವು ಹೌದು.

ಹೊಸ್ಮನೆ ಮುತ್ತು

Leave a Reply