ಪರಿಸರ ಸ್ನೇಹಿ ಆಟಿಕೆಗಳು
ಮಗುವಿನ ದೊಡ್ಡ ಪ್ರಪಂಚವೇ ಆಟಿಕೆ. ಹಿಂದೆ ಮಕ್ಕಳ ಆಟಿಕೆಗಳು ಹೆಚ್ಚಾಗಿ ಕಟ್ಟಿಗೆ, ಕಲ್ಲುಗಳಿಂದ ತಯಾರಾದಂತಹ ಆಟಿಕೆಗಳೇ ಆಗಿದ್ದವು. ಇಲ್ಲಿ ಕಾಣುವ ಆಟಿಕೆಗಳು ಅಪರೂಪವೇ ಆಗುತ್ತಿರುವ ನಮ್ಮದೇ ನೆಲದ ಸೃಷ್ಟಿಯಾದ ಬಳಪದ ಕಲ್ಲಿನ ಆಟಿಕೆಗಳು ಪರಿಸರ ಸ್ನೇಹಿಯಾದ ಇಂತಹ ಆಟಿಕೆಗಳನ್ನು ಮರೆತು ಈಗ ನಾವು ಚೀನಾ, ಜಪಾನ್ ನಿರ್ಮಿತ ಪ್ಲಾಸ್ಟಿಕ್ ಆಟಿಕೆಗಳನ್ನು ತಂದು ಕೊಟ್ಟು ಸಂಭ್ರಮಿಸುತ್ತಿದ್ದೇವೆ. ಪ್ಲಾಸ್ಟಿಕ್, ಲೋಹಗಳಿಂದ ತಯಾರಾದ ಆಟಿಕೆಗಳಲ್ಲಿ ಮಗುವಿನ ಆರೋಗ್ಯಕ್ಕೆ ಮಾರಕವಾದ ರಾಸಾಯನಿಕಗಳಿರುತ್ತವೆಂದು ತಿಳಿದು ಬಂದಿದೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸರಕಾರವು ಹಾನಿಯುಂಟು ಮಾಡುವ ಆಟಿಕೆ ಸಾಮಾನುಗಳನ್ನು ನಿಷೇಧಿಸಿರುತ್ತದೆ. ಆದರೆ ಈ ತರಹದ ಕಾಯಿದೆ ಅನುಸರಣೆಯ ವ್ಯವಸ್ಥೆ ಇಲ್ಲಿ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಮೃದು ಕಲ್ಲಿನಿಂದ ತಯಾರಾದ ಎಳೆಯ ಕೈಗಳಿಗೆ ಹಿತವಾಗಿರುವ ಇಂಥ ಆಟಿಕೆಗಳನ್ನು ಇಂದಿನ ನಮ್ಮ ಮಕ್ಕಳ ಕೈಗೆ ಕೊಡುವ ಜರೂರತ್ತಿವೆ. ಇದರಿಂದ ಗ್ರಾಮೀಣ ಕರ ಕುಶಲಕರ್ಮಿಗಳಿಗೂ ಉತ್ತೇಜನ ಕೊಟ್ಟಂತಾಗುತ್ತದೆ. ಬದಲಾವಣೆಯ ನೆಪದಲ್ಲಿ ನಾವು ಅಮೂಲ್ಯವಾದುದೇನನ್ನೋ ಕಳೆದುಕೊಂಡೆವೆಂದು ಅನ್ನಿಸುವುದಿಲ್ಲವೇ?
ಹೊಸ್ಮನೆ ಮುತ್ತು

You must log in to post a comment.