ಭಗವದ್ಗೀತೆಯ ಸಾರಸರ್ವಸ್ವ  ಭಾಗ-೫

ಭಗವದ್ಗೀತೆಯ ಸಾರಸರ್ವಸ್ವ  ಭಾಗ-೫
ಪರಮ ವಾಸ್ತವತೆ–
ಅ) ಅದ್ವೈತ–
ಭಗವದ್ಗೀತೆಗೆ ಅದ್ವೈತ ಭಾವವೇ ಪರಮ ವಾಸ್ತವತೆ. ದೇಹದ ದೃಷ್ಟಿಯಿಂದ ನಮ್ಮನ್ನು ಗಮನಿಸಿದಾಗ ದೇಹಕ್ಕೆ ಬರುವ ದುಃಖ, ವೇದನೆ, ರೋಗ ಇತ್ಯಾದಿಗಳಿಂದಾಗಿ ಈ ಪ್ರಾಪಂಚಿಕ ಜೀವನ ಬೇಡವೇ ಬೇಡ ಎಂದೆನ್ನಿಸಿಬಿಡುತ್ತದೆ. ಅದೇ ಸುಖ, ಸಂತೋಷ, ಸಂತೃಪ್ತಿ ಇತ್ಯಾದಿ ಅನುಭವಗಳಿದ್ದಾಗ ಈ ಪ್ರಾಪಂಚಿಕ ಜೀವನ ಕೊನೆಗಾಣದೇ ಇರಲಿ ಎಂದೆನ್ನಿಸುತ್ತದೆ. ದೇಹಕ್ಕೆ ಉಂಟಾದುದೆಲ್ಲ ನನಗೇ ಉಂಟಾದದ್ದು ಎಂಬ ಗ್ರಹಿಕೆಯಿಂದಾಗಿ ಹೀಗೆಲ್ಲಾ ಅನ್ನಿಸುತ್ತದೆ, ಅಷ್ಟೇ. ವಾಸ್ತವದಲ್ಲಿ ನಾನು ಈ ದೇಹ ಅಲ್ಲವೇ ಅಲ್ಲ; ದೇಹಭಾವದಿಂದಾಗಿ ಗಮನಕ್ಕೆ ಬರುವ ಸುಖ ದುಃಖ, ಲಾಭ ನಷ್ಟ, ಶೀತ ಉಷ್ಣ, ಜಯ ಅಪಜಯ ಇತ್ಯಾದಿ ಧೃವ ವಿರೋಧಿ ದ್ವೈತಗಳು ವಾಸ್ತವ ಅಲ್ಲವೇ ಅಲ್ಲ; ಅವು ಕ್ಷಣಿಕ ಅನುಭವ ಅಷ್ಟೇ. ನಾನು ನೀನು, ಅದು ಇದು, ಆನೆ ನಾಯಿ, ಶ್ವಪಚ ಬ್ರಾಹ್ಮಣ ಇತ್ಯಾದಿಯಾಗಿ ನಾವು ಭಾವಿಸುವ ಧೃವ ವಿರೋಧಿ ದ್ವೈತ ದೇಹಭಾವದಿಂದಾಗಿಯೇ ವಾಸ್ತವ ಎಂದು ತೋರಿಬರುತ್ತದೆ, ಅಷ್ಟೇ; ಅದ್ವೈತವೇ ವಾಸ್ತವತೆ ಎನ್ನುತ್ತದೆ ಭಗವದ್ಗೀತೆ.
ಆ) ಬಹುತ್ವದ ಸಮಸ್ಯೆ–
ಒಂದು ಮುಖ್ಯ ಪ್ರಶ್ನೆ ಬಹುತ್ವವನ್ನು ನಿರಾಕರಿಸಲು ಸಾಧ್ಯವೆ? ಎಂಬುದು. ಇದಕ್ಕೆ ಹೊಂದಿಕೊಂಡಂತೆ ಇರುವ ಒಂದು ಮುಖ್ಯ ಸಮಸ್ಯೆ ಬಹುತ್ವದ ಪ್ರತಿಪಾದನೆಯ ಕೇಂದ್ರವಾದ ಮನುಷ್ಯನನ್ನು ಏಕತ್ವವನ್ನು ಪ್ರತಿಪಾದಿಸುವವನನ್ನಾಗಿ ಆಗಿಸುವುದು ಹೇಗೆ ಎಂಬುದು. ಬಹುತ್ವವು ಪ್ರಧಾನವಾಗಿ ನಾನು ನೀನು, ಜೀವ ಅಜೀವ, ಭೌತಿಕ ಮಾನಸಿಕ, ಮನುಷ್ಯ ಪ್ರಪಂಚ ಹೀಗೆ ದ್ವೈತವನ್ನು ಮೂಲಭೂತವಾಗಿ ಒಳಗೊಳ್ಳುತ್ತದೆ. ಈ ದ್ವೈತವು ಪರಸ್ಪರ ಪರಕೀಯ ಎಂಬ ಸಂಬಂಧವನ್ನು ಸೂಚಿಸುವುದರ ಜೊತೆಗೆ ತಾನು ಮಿಗಿಲು ಎಂಬ ಅಹಂಕಾರ, ಪ್ರತಿಷ್ಠೆ, ವೈಭವಗಳ ಅಟ್ಟಹಾಸದ ಪ್ರದರ್ಶನದ ಸಾಧ್ಯತೆಯನ್ನೂ ಸೂಚಿಸುತ್ತದೆ. ಬಹುತ್ವದ ಒಂದು ಮುಖ್ಯ ಭಾವವಾದ ಇಂಥ ದ್ವೈತದಿಂದ ಬದುಕು ಜೀವನೋತ್ಸಾಹಿ, ಸೃಜನಶೀಲ ಆಗುವುದರ ಬದಲಿಗೆ ಸುಂದರವಾಗಿ ರೂಪುಗೊಳ್ಳಬಹುದಾದ ಬದುಕನ್ನು ಎಷ್ಟು ವಿಕೃತಗೊಳಿಸಬಹುದೋ ಅಷ್ಟೂ ವಿಕೃತಗೊಳಿಸುತ್ತದೆ.
ಬಗೆ ಬಗೆಯ ವಿಕಾರಗಳಿಗೆ ಅವಕಾಶ ಕೊಡಬಹುದಾದ ದ್ವೈತವನ್ನೂ ಮತ್ತು ಬಹುತ್ವವನ್ನೂ ನಿರಾಕರಿಸಬೇಕಾದರೆ ಏಕತೆಯ ಸತ್ಯದ ಬಗ್ಗೆ ಬೌದ್ಧಿಕ ಮತ್ತು ಮಾನಸಿಕ ವಿಶ್ವಾಸ ಇರಬೇಕು; ಮನಸ್ಸಿನ ಚಾಂಚಲ್ಯಕ್ಕೆ, ಅಶಾಂತಿಗೆ ಕಾರಣ ಆಗಬಹುದಾದ ದ್ವೈತಭಾವದಿಂದ ಬಿಡುಗಡೆ ಮಾಡುವ ಅದ್ವೈತಾನುಭೂತಿಯು ವ್ಯಕ್ತಿಯನ್ನು ಸ್ವ–ನಿಯಂತ್ರಿತನನ್ನಾಗಿಸುತ್ತದೆ ಎಂದೆನ್ನುತ್ತದೆ ಭಗವದ್ಗೀತೆ. ತಾನೇ ಸಾಯುವುದಾದರೂ ಆಗಿರಲಿ ಅಥವಾ ಇನ್ನೊಬ್ಬನನ್ನು ಸಾಯಿಸುವುದಾದರೂ ಆಗಿರಲಿ, ಹಾಗೆಯೇ ಪ್ರಾಣಾರ್ಪಣೆ ಮಾಡುವುದರ ಬದಲಿಗೆ ತಾನು ಬದುಕಿರಬೇಕು ಎಂದುಕೊಳ್ಳುವುದಾಗಲೀ ಅಥವಾ ಇನ್ನೊಬ್ಬನನ್ನು ಬದುಕಿಸಲು ಪ್ರಾಣಾರ್ಪಣೆ ಮಾಡಬೇಕು ಎಂದುಕೊಳ್ಳುವುದಾಗಲೀ ಅಥವಾ ಮತ್ತಾವುದೇ ಮನೋಭಾವ ಇರಲೀ – ಅದು ವಿವೇಚನಾಯುತ ನಿರ್ಣಯವಾಗಿರುತ್ತದೆ ಎಂದು ಸ್ವ–ನಿಯಂತ್ರಣದ ಸ್ವರೂಪವನ್ನು ಸ್ಪಷ್ಟಪಡಿಸುವ ಭಗವದ್ಗೀತೆಯು ಅದ್ವೈತಾನುಭೂತಿಯು ವಿವೇಚನಾಯುತ ಬದುಕಿಗೆ ಕಾರಕವಾಗಿ ಒಬ್ಬನ ಬದುಕಿನಲ್ಲಿ ಅರ್ಥಪೂರ್ಣವಾಗುತ್ತದೆ ಎಂದೆನ್ನುತ್ತದೆ.
ಉ) ನಿಷ್ಕಾಮ ಕರ್ಮಯೋಗ–
ಅದ್ವೈತಾನುಭೂತಿಯ ಮಹತ್ವವನ್ನೂ, ಸ್ವರೂಪವನ್ನೂ ವಿಶದ ಪಡಿಸುತ್ತಾ ಭಗವದ್ಗೀತೆ ವ್ಯಕ್ತಿಯ ಆಂತರ್ಯದಲ್ಲಿರುವುದು ಜೀವಾತ್ಮ, ವ್ಯಕ್ತಿಯ ಆಚೆಗೆ ಇರುವುದು ಪರಮಾತ್ಮ. ಜೀವಾತ್ಮ ಪರಮಾತ್ಮಗಳೆರಡೂ ಮೂಲಭೂತವಾಗಿ ಒಂದೇ. ಎರಡರ ಸಾರಲಕ್ಷಣ ಶಾಂತಿ, ನಿಷ್ಕಾಮ ಕರ್ಮ ಎನ್ನುತ್ತದೆ. ಎಲ್ಲಿಯವರೆಗೆ ನಾನು ಈ ರೀತಿಯ ಕರ್ಮವನ್ನು ಮಾಡುತ್ತಿದ್ದೇನೆ, ನನಗೆ ಈ ಫಲಗಳು ದೊರಕಲಿ, ಇದೇ ಫಲಗಳು ದೊರೆಯಲೇ ಬೇಕು ಎಂಬ ಭಾವನೆ, ನಿರೀಕ್ಷೆ, ಒತ್ತಾಯಗಳು ಇರುತ್ತವೆಯೋ ಅಲ್ಲಿಯವರೆಗೆ ನಮಗೆ ದೊರೆಯಬಹುದಾದದ್ದು ಆ ಭಾವನೆ, ನಿರೀಕ್ಷೆ, ಒತ್ತಾಯಗಳ ಇತಿಮಿತಿಗಳಿಗೆ ಒಳಪಟ್ಟ ಫಲಗಳೇ. ಅವು ಸಹಜವಾಗಿ ಸುಖ ದುಃಖಗಳ ಸಮ್ಮಿಶ್ರಣ ಮತ್ತು ಅಶಾಂತಿಯ ನೆಲೆ ಎಂದು ಭಗವದ್ಗೀತೆ ಸ್ಪಷ್ಟಪಡಿಸುತ್ತದೆ. ಅಶಾಂತಿಗಿಂತ ಮಿಗಿಲಾದ ಬಂಧನ ಇನ್ನೊಂದಿಲ್ಲ ಎನ್ನುತ್ತದೆ ಭಗವದ್ಗೀತೆ.
ಮನುಷ್ಯನ ಪ್ರಾಪಂಚಿಕ ಜೀವನದ ಗುರಿ ಸ್ವಕೇಂದ್ರಿತ ಫಲದ ನಿರೀಕ್ಷೆ ಇಲ್ಲದೆ ಒಂದು ನಿರ್ದಿಷ್ಟ ಸಂದರ್ಭ ಸನ್ನಿವೇಶದಲ್ಲಿ ಅತ್ಯಾವಶ್ಯಕವಾಗಿ ಮಾಡಬೇಕಾದುದನ್ನು ಸಾಧ್ಯವಾದಷ್ಟೂ ವಿಸ್ತೃತ ತಿಳುವಳಿಕೆಯಿಂದ ಮಾಡುತ್ತಾ ನಿಷ್ಕಾಮ ಕರ್ಮಿಯಾಗುವುದು. ಹಾಗೆ ಆದಾಗ ಅವನು ಸಾವು ಬದುಕು ಎಂಬ ದ್ವೈತಗಳನ್ನೂ ಒಳಗೊಂಡಂತೆ ಎಲ್ಲಾ ದ್ವೈತಗಳಿಗೆ ಅತೀತನಾಗಿ ಅತ್ಯಾವಶ್ಯಕವಾಗಿ ಪರಮ ಶಾಂತಿಯನ್ನು ಅನುಭವಿಸುತ್ತಾನೆ, ಇದೇ ಜೀವನ್ಮುಕ್ತಿ, ನಿಷ್ಕಾಮಕರ್ಮಯೋಗ ಎಂದು ವಿವರಿಸುತ್ತದೆ.
ಊ) ಭಕ್ತಿ ಮತ್ತು ಜೀವನ್ಮುಕ್ತಿ–
ಭಗವಂತ, ಪರಮಾತ್ಮನ ಉದ್ದೇಶ ಸಾಧನೆಯಲ್ಲಿ ತಾನು ಒಂದು ಉಪಕರಣ ಎಂಬ ಅರಿವಿನಿಂದ ದೇವರಿಗೆ ಸರ್ವದಾ ಶರಣಾಗತನಾಗಿ ಸಂಕೇತದ ಮೂಲಕ ಪೂಜೆ ಮಾಡಿ ದೈವದೊಡನೆ ವ್ಯಕ್ತಿ ಆತ್ಮೀಯವಾದ ಖಾಸಗಿಯಾದ ಆಧ್ಯಾತ್ಮಿಕವಾದ ಸಂಬಂಧವನ್ನು ಅದರೊಂದಿಗಿನ ಏಕತೆ, ಐಕ್ಯತೆ, ತಾದಾತ್ಮ್ಯತೆಗಳ ಮೂಲಕ ಹೊಂದುವುದೇ ಭಕ್ತಿ. ಇದರ ಅಂತಿಮ ಪರಿಣಾಮ ಜ್ಯೋತಿರ್ಮಯ ಜ್ಞಾನಬೋಧೆ ಮತ್ತು ದೈವಸಾಕ್ಷಾತ್ಕಾರ, ಮೋಕ್ಷ.
ಜ್ಯೋತಿರ್ಮಯ ಜ್ಞಾನಬೋಧೆಯು ವ್ಯಕ್ತಿಯ ಜ್ಞಾನ ಕರ್ಮಗಳನ್ನು ಶುದ್ಧೀಕರಿಸುತ್ತದೆ. ಅವನ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳನ್ನು ಪಳಗಿಸುತ್ತದೆ. ಎಲ್ಲೆಲ್ಲೂ ದೈವವನ್ನು ಕಾಣುವ ಔದಾರ್ಯ ಮೂಡಿಸುತ್ತದೆ. ವಿಸ್ತೃತವಾಗುತ್ತಾ ಹೋಗುವ ಜ್ಞಾನಕ್ಕೆ ಅನುಗುಣವಾಗಿ ಕರ್ಮಗಳು ನಿಷ್ಕಾಮವಾಗುತ್ತಾ ಹೋಗುತ್ತವೆ. ಅಂತಿಮವಾಗಿ ಎಲ್ಲ ಆವರಣಗಳೂ ಕಳಚಿ ಬೀಳುತ್ತವೆ. ವ್ಯಕ್ತಿ ಜೀವನ್ಮುಕ್ತನಾಗುತ್ತಾನೆ ಎನ್ನುವ ಭಗವದ್ಗೀತೆಯೊಂದಿಗೆ ಇತರ ಭಾರತೀಯ ಚಿಂತಕರು ಮೋಕ್ಷಾರ್ಹ ಆಗುತ್ತಾನೆ ಎಂದು ಧ್ವನಿ ಕೂಡಿಸಿದ್ದಾರೆ.
ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಹೇಳಿರುವುದರ ಎಲ್ಲ ವಿವರಗಳಿಂದ ನಾವು ಅತ್ಯಾವಶ್ಯಕವಾಗಿ ಮನನ ಮಾಡಿಕೊಳ್ಳಬೇಕಾದದ್ದು –
ನಾವು ಸ್ವಾಭಾವಿಕವಾಗಿ ಕರ್ಮನಿರತರು; ನಮ್ಮ ಕರ್ಮಕ್ಕೆ ಬೇಕಾದದ್ದು ಕರ್ತವ್ಯಪಾಲನೆ, ಕರ್ಮಫಲಗಳ ತ್ಯಾಗ, ಹಿತಾಕಾಂಕ್ಷೆ, ಸಮಯಾಸಮಯ ವಿವೇಕಗಳ ಓರಿಯಂಟೇಷನ್; ಮತ್ತು
ಉದ್ಧರೇತ್ ಆತ್ಮನಾ ಆತ್ಮಾನಮ್
ನ ಆತ್ಮಾನಂ ಅವಸಾದಯೇತ್
ಆತ್ಮಾ ಏವ ಹಿ ಆತ್ಮನಃ ಬಂಧುಃ
ಆತ್ಮಾ ಏವ ಹಿ ರಿಪುಃ ಆತ್ಮನಃ
(ನಾವೇ ನಮ್ಮನ್ನು ಉದ್ಧರಿಸಕೊಳ್ಳಬೇಕು. ನಮ್ಮನ್ನು ನಾವೇ ನಾಶಮಾಡಿಕೊಳ್ಳಬಾರದು. ನಮಗೆ ನಾವೇ ಬಂಧುಗಳು. ನಮಗೆ ನಾವೇ ಶತ್ರುಗಳು!) ಎಂಬ ಅರಿವು.
[2/27, 17:10] mudakavi: ಹಿಂದಿನ ಲೇಖನದಲ್ಲಿ ಧರ್ಮ ಮತ್ತು ಅರ್ಥಗಳ ಕುರಿತು ಚರ್ಚಿಸಲಾಗಿತ್ತು. ಉಳಿದೆರಡು ಪುರುಷಾರ್ಥಗಳಾದ ಕಾಮ ಮತ್ತು ಮೋಕ್ಷಗಳ ಬಗ್ಗೆ ವೇದದ ಬೆಳಕಿನಲ್ಲಿ ವಿಚಾರ ಮಾಡೋಣ.
ಕಾಮ:
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||
     ಕಾಮ – ಇದು ಎರಡು ಅಲಗಿನ ಚೂಪಾದ ಖಡ್ಗ. ಅರಿಷಡ್ವರ್ಗದಲ್ಲಿ ಪ್ರಥಮ ಸ್ಥಾನದಲ್ಲಿರುವ ಇದು ನಾಲ್ಕು ಪುರುಷಾರ್ಥಗಳಲ್ಲೂ ಪ್ರಧಾನವಾದುದು. ಒಂದು ರೀತಿಯಲ್ಲಿ ಮನುಷ್ಯನನ್ನು ಅಧಃಪತನಗೊಳಿಸುವುದು ಮತ್ತು ಉದ್ಧಾರಗೊಳಿಸುವುದು ಎರಡೂ ಸಾಧ್ಯವಿರುವುದು ಈ ಕಾಮಕ್ಕೇ! ಕಾಮ ಎಂದಾಕ್ಷಣ ಸ್ತ್ರೀ-ಪುರುಷರ ಲೈಂಗಿಕತೆಗೆ ಸಂಬಂಧಿಸಿದ್ದು ಎಂಬ ಭಾವನೆ ಮೂಡುವುದು ಸಹಜ. ಆದರೆ ಕಾಮ ಎಂದರೆ ಇಷ್ಟೇ ಅಲ್ಲ, ಇದೂ ಸೇರಿದಂತೆ ಇಚ್ಛೆ, ಬಯಕೆ, ಆಸೆ, ಇತ್ಯಾದಿ ಅರ್ಥಗಳೂ ಇವೆ. ಈ ಇಚ್ಛೆ, ಬಯಕೆ, ಆಸೆಗಳು ಎರಡು ರೀತಿಯಲ್ಲೂ ಇರಬಹುದು. ಉನ್ನತಿ ಬಯಸುವ ಆಸೆಗಳು ಸಮಾಜಕ್ಕೂ, ಸ್ವಂತಕ್ಕೂ ಹಿತಕಾರಿಯಾಗಿರುತ್ತವೆ. ತಾನೂ ಹಾಳಾಗಿ ಪರರರನ್ನೂ ತೊಂದರೆಗೀಡುಮಾಡುವ ಕಾಮನೆಗಳೂ ಇರುತ್ತವೆ. ಆದರೆ ಕಾಮರಾಹಿತ್ಯ ಅಥವ ನಿಷ್ಕಾಮ ಸ್ಥಿತಿ ಎಂಬುದು ಇರಲಾರದು. ಏಕೆಂದರೆ ಉನ್ನತ ಸ್ಥಿತಿಗೆ ಏರಬೇಕು, ನೆಮ್ಮದಿ, ಶಾಂತಿ ಬೇಕು, ಆತ್ಮ/ಪರಮಾತ್ಮನನ್ನು ಅರಿಯಬೇಕು, ಇತ್ಯಾದಿ ಕಾಮನೆಗಳಾದರೂ ಇದ್ದೇ ಇರುತ್ತವೆ. ಮನುಷ್ಯನನ್ನು ನೀಚನನ್ನಾಗಿಸುವ, ಪಾತಾಳಕ್ಕೆ ತಳ್ಳುವ ಕಾಮನೆಗಳು ಮಾನವನ ಶತ್ರುವಾಗುತ್ತದೆ. ಮಾನವಜೀವನದ ಉದ್ದೇಶ ಸಾಧನೆಗೆ ಪೂರಕವಾಗುವ ಪುರುಷಾರ್ಥ ಕಾಮ ಅವನನ್ನು ನಿಜಮಾನವನನ್ನಾಗಿಸುತ್ತದೆ.
     ಕಾಮ ನಮ್ಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಇಹ-ಪರಗಳೆರಡರಲ್ಲೂ ನೆಮ್ಮದಿ, ಶಾಂತಿ ಸಿಗಬೇಕಾದರೆ ಕಾಮವನ್ನು ನಮ್ಮ ಉದ್ದೇಶಕ್ಕೆ ತಕ್ಕಂತೆ ಚಾಕಚಕ್ಯತೆಯಿಂದ ಬಳಸಿದರೆ ಮಾತ್ರ ಸಾಧ್ಯ. ಇನ್ನುಳಿದ ಪುರುಷಾರ್ಥಗಳಾದ ಧರ್ಮ. ಅರ್ಥ ಮತ್ತು ಮೋಕ್ಷಗಳ ಸಾಧನೆಗೆ ಈ ಕಾಮವೇ ಪ್ರೇರಕ ಮತ್ತು ಪೂರಕ. ಕಾಮ ಪುರುಷಾರ್ಥ ಸಾಧನೆಯೆಂದರೆ ಆಸೆ, ಬಯಕೆ, ಇಚ್ಛೆಗಳನ್ನು ಯಾರಿಗೂ ನೋವಾಗದಂತೆ, ಹಿಂಸೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಿಕೊಳ್ಳುವುದು. ಕಾಮನೆಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ. ಬಲವಂತವಾಗಿ ಹತ್ತಿಕ್ಕಲ್ಪಟ್ಟ ಆ ಶಕ್ತಿ ಅರಿವಿಲ್ಲದಂತೆ ಇದ್ದಕ್ಕಿದ್ದಂತೆ ಪುಟಿದೆದ್ದರೆ ಅನಪೇಕ್ಷಿತ ಪರಿಣಾಗಳುಂಟಾಗುತ್ತವೆ. ಸಮಾಜದಲ್ಲಿ ಗಣ್ಯರೆನಿಸಿಕೊಂಡವರೇ, ಆಧ್ಯಾತ್ಮಿಕ ಸಾಧಕರೆನಿಸಿಕೊಂಡವರೇ ಈ ಸುಳಿಗೆ ಸಿಕ್ಕಿ ಹಾಳಾದವರಿದ್ದಾರೆ. ಕಾಮವನ್ನು ಹತ್ತಿಕ್ಕುವುದಕಿಂತ ಗೆಲ್ಲುವುದು ಹಿತಕಾರಿ.
ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು|
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ
ದಿವ್ಯ ಕಾಮ ರಮ್ಯ ಕಾಮ ನಿನದಲ್ತೆ ಮೂಢ||
     ಅಥರ್ವವೇದದ ಈ ಮಂತ್ರವನ್ನೊಮ್ಮೆ ನೋಡೋಣ:-
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
     “ಓ ಕಾಮವೇ, ಯಾವ ನಿನ್ನ ವಿಸ್ತಾರಗಳು ಅಥವಾ ರೂಪಗಳು ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ, ಯಾವುದನ್ನು ನೀನು ಬಯಸುತ್ತೀಯೋ, ಯಾವ ಸತ್ಯದ ದರ್ಶನ ನಿನ್ನ ಕಾರಣದಿಂದ ಲಭಿಸುತ್ತದೆಯೋ, ಆ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು. ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು ಬೇರೆಕಡೆಗೆ ಅಟ್ಟಿಬಿಡು” ಎಂದು ಹೇಳುವ ಈ ಮಂತ್ರ ಸಾಧಕರಿಗೆ ಮಾರ್ಗದರ್ಶಿಯಾಗಿದೆ. ಜಗತ್ತು ನಡೆದಿರುವುದೇ ಕಾಮದಿಂದ. ಅದಿಲ್ಲದಿದ್ದರೆ ಜಗತ್ತು ನಿಶ್ಚಲವಾಗಿರುತ್ತಿತ್ತು. ಯಾವುದೇ ಬಯಕೆಗಳು, ಆಕಾಂಕ್ಷೆಗಳಿಲ್ಲದ ಬದುಕು ಬದುಕಾಗಲಾರದು. ಆದರೆ, ಈ ಅಕಾಂಕ್ಷೆಗಳು ಧರ್ಮ ಮಾರ್ಗದಲ್ಲಿರಬೇಕು, ಸಂಪಾದಿಸುವ ಅರ್ಥವನ್ನು ಆತ್ಮಕ್ಕೆ ಸಮ್ಮತವಾದ ರೀತಿಯಲ್ಲಿ, ಇತರರಿಗೆ ನೋವು, ಕಷ್ಟ ನೀಡದಂತೆ ಸರ್ವರ ಹಿತ ಗಮನದಲ್ಲಿರಿಸಿಕೊಂಡು ಕಾಮನೆಗಳ ಈಡೇರಿಕೆಗೆ ಬಳಸಬೇಕು. ಈರೀತಿ ಮಾಡಿದಲ್ಲಿ ಚತುರ್ಥ ಪುರುಷಾರ್ಥ ಮೋಕ್ಷಕ್ಕೆ ಹಾದಿ ಸುಗಮವಾಗುತ್ತದೆ. ಗೃಹಸ್ಥಾಶ್ರಮದಲ್ಲಿ ತಿಳಿಸಿದ ಸ್ತ್ರೀ-ಪುರುಷರ ಲೈಂಗಿಕ ಸಂಬಂಧಗಳೂ ಶಾಸ್ತ್ರೀಯವಾಧ ಮರ್ಯಾದೆಗೆ ಅನುಸಾರವಾಗಿದ್ದಲ್ಲಿ ಅದು ಇಹ-ಪರಗಳ ಸಾಧನೆಗೆ ಅಡ್ಡಿಯಾಗುವುದಿಲ್ಲ. ಈ ವೇದಮಂತ್ರದ ಭಾವ ಸುಸ್ಪಷ್ಟವಾಗಿದ್ದು, ಜೀವನ ಸರಸ ಸುಂದರವಾಗಲು, ಸುಖ, ಶಾಂತಿ, ನೆಮ್ಮದಿಗಳಿಂದ ಕೂಡಿರಲು -ಇಹದಲ್ಲಷ್ಟೇ ಅಲ್ಲ, ಪರದಲ್ಲೂ- ನಿಯಂತ್ರಿತ, ಧರ್ಮಮಾರ್ಗಿ, ಸರ್ವಹಿತದ ಕಾಮನೆಗಳು ಇರಬೇಕು. ಕೀಳು ಕಾಮನೆಗಳಿಗೆ ಈ ತೃತೀಯ ಪುರುಷಾರ್ಥದಲ್ಲಿ ಸ್ಥಾನವಿಲ್ಲ.
ಮೋಕ್ಷ:
     ಚತುರ್ಥ ಪುರುಷಾರ್ಥವಾದ ಮೋಕ್ಷ ಮಾನವಜೀವಿಗಳ ಅಂತಿಮ ಸಾಧನೆಯ ಹಂತ. ಈ ಮೋಕ್ಷ ಎಂದರೆ ಏನು? ಜನರಲ್ಲಿ ದೇವರ ಬಗ್ಗೆ, ಧರ್ಮದ ಬಗ್ಗೆ ಹಲವಾರು ಜಿಜ್ಞಾಸೆಗಳು, ಕಲ್ಪನೆಗಳು ಇರುವಂತೆಯೇ, ಮೋಕ್ಷದ ಬಗ್ಗೆ ಸಹ ತಮ್ಮದೇ ಆದ ಕಲ್ಪನೆಗಳಿವೆ. ಬೈಬಲ್ಲಿನ ಪ್ರಕಾರ ದೇವರನ್ನು ನಂಬುವವರಿಗಾಗಿ,  ಪ್ರೀತಿಸುವವರಿಗಾಗಿ ಒಂದು ಹೊಸ ಸೃಷ್ಟಿ, ಒಂದು ಹೊಸ ನಗರ, ಒಂದು ಹೊಸ ಸಮುದಾಯವೇ ಒಂದು ಹೊಸ ಸಂವಿಧಾನದಂತೆ ನಿರ್ಮಾಣವಾಗಿರುತ್ತದೆ. ಆ ಸ್ವರ್ಗವು ಕಣ್ಣು ಕಾಣದಿದ್ದ, ಕಿವಿಗೆ ಕೇಳದಿದ್ದ, ಕಲ್ಪನೆಗೆ ಎಟುಕದಿದ್ದ ರೀತಿಯಲ್ಲಿ ಇದ್ದು, ಅದರಲ್ಲೂ ಮೂರು ರೀತಿಯ ಸ್ವರ್ಗಗಳಿರುತ್ತವೆ ಎನ್ನುತ್ತದೆ (ಬೈಬಲ್ಲಿನ Revelation chapter 21). ಕುರಾನಿನ ಪ್ರಕಾರ ಅದರಲ್ಲಿ ಸುಮಾರು ೧೪೦ ಸಲ ಹೇಳಲ್ಪಡುವ ಸ್ವರ್ಗಸದೃಶ ತೋಟದಲ್ಲಿ ದೇವರನ್ನು ನಂಬುವ, ಅವನು ತೋರಿಸಿದ ಮಾರ್ಗದಲ್ಲಿ ನಡೆಯುವವರಿಗೆ ಅವರು ಬಯಸಿದ ಎಲ್ಲಾ ಸುಖ ಸಂಪತ್ತುಗಳೂ ಶಾಶ್ವತವಾಗಿ ಸಿಗುತ್ತವೆ. ಇನ್ನು ದೇವರನ್ನು ನಂಬದವರಿಗೆ ಚಿತ್ರ ವಿಚಿತ್ರ ಶಿಕ್ಷೆಗಳನ್ನು ಕೊಡುವ ನರಕಗಳ ವರ್ಣನೆಗಳೂ ಬೈಬಲ್ ಮತ್ತು ಕುರಾನುಗಳಲ್ಲಿವೆ. ಹಿಂದೂಗಳಲ್ಲಿಯೂ ಸಹ ತಮ್ಮದೇ ಆದ ಭ್ರಾಂತ ಕಲ್ಪನೆಗಳಿವೆ. ತಮ್ಮ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅನುಸಾರವಾಗಿ ಸತ್ತ ಮೇಲೆ ಕೈಲಾಸವನ್ನೋ, ವೈಕುಂಠವನ್ನೋ, ಇನ್ನು ಯಾವುದೋ ದೇವರ ಆವಾಸಸ್ಥಾನವನ್ನೋ ಸೇರುತ್ತಾರೆ ಎಂದು ನಂಬುತ್ತಾರೆ. ಅಲ್ಲಿ ಹೋಗಿಬಿಟ್ಟರೆ ಆನಂದದಿಂದ ಇದ್ದುಬಿಡಬಹುದು ಎಂದು ಭಾವಿಸುತ್ತಾರೆ. ನರಕದ ವರ್ಣನೆಗಳೂ ಕಾಣಸಿಗುತ್ತವೆ. ಗರುಡಪುರಾಣದಲ್ಲಂತೂ ಪಾಪಿಗಳಿಗೆ ಕೊಡುವ ಭೀಭತ್ಸ ಶಿಕ್ಷೆಗಳ ವರ್ಣನೆಯ ಸರಮಾಲೆಯೇ ಇದೆ. ಈ ಧರ್ಮಗ್ರಂಥಗಳು, ಪುರಾಣಗಳಲ್ಲಿ ಬರುವ ಸ್ವರ್ಗ-ನರಕಗಳ ವಿವರಣೆಗಳು ಮಾನವರನ್ನು ಧರ್ಮಮಾರ್ಗದಲ್ಲಿ ನಡೆಯಬೇಕೆಂಬ ಕಾರಣಗಳಿಗಾಗಿ ಇರಬಹುದೇ ಹೊರತು ಮತ್ತೇನೂ ಅಲ್ಲ.
     ವೇದಗಳು ಮೇಲಿನ ಎಲ್ಲಾ ಕಲ್ಪನೆಗಳನ್ನು ಸಾರಾಸಗಟಾಗಿ ತಳ್ಳಿಹಾಕುತ್ತವೆ. ಸರ್ವವ್ಯಾಪಿಯಾದ ಪರಮಾತ್ಮ ತನಗಾಗಿಯೇ ಒಂದು ಪ್ರತ್ಯೇಕ ವಾಸಸ್ಥಾನವನ್ನು ಹೊಂದಿದ್ದಾನೆಂದರೆ ಅವನ ಸರ್ವವ್ಯಾಪಕತ್ವವನ್ನು ಅಣಕಿಸಿದಂತೆಯೇ ಸರಿ. ಋಗ್ವೇದದ ಈ ಮಂತ್ರ ನೋಡಿ:-
ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್|
ಸಂ ಬಾಹುಭ್ಯಾಂ ಧಮತಿ ಸಂ ಪತತ್ರೈರ್ದ್ಯಾವಾಭೂಮೀ ಜನಯನ್ ದೇವ ಏಕಃ||  (ಋಕ್.೧೦.೮೧.೩.)
     “ವಿಶ್ವದ ಎಲ್ಲೆಡೆಯಲ್ಲೂ ಕಣ್ಣನ್ನುಳ್ಳ, ಎಲ್ಲೆಡೆಯೂ ಮುಖವುಳ್ಳ, ಎಲ್ಲೆಡೆಯೂ ಬಾಹುಗಳನ್ನುಳ್ಳ, ಎಲ್ಲೆಡೆಯೂ ಪಾದಗಳನ್ನುಳ್ಳ ಸರ್ವಕರ್ತೃ ಒಬ್ಬ ದೇವ ದ್ಯುಲೋಕ, ಪೃಥಿವಿ ಲೋಕಗಳನ್ನು ರಚಿಸುತ್ತಾ, ಸೃಷ್ಟಿ, ಸ್ಥಿತಿ, ಲಯಕಾರಕನಾಗಿ ಜೀವಾತ್ಮರುಗಳ ಮೂಲಕವೂ ಪ್ರಾಣವನ್ನು ಊದುತ್ತಿದ್ದಾನೆ” ಎನ್ನುವ ಈ ಮಂತ್ರದಲ್ಲಿ ಬರುವ ಒಬ್ಬ ದೇವರಿಗೆ ಅನೇಕ ಕಣ್ಣುಗಳು, ಕೈಕಾಲುಗಳು ಅಂದರೆ ಆತ ಸರ್ವವ್ಯಾಪಿ, ಸರ್ವಕರ್ತೃ ಎಂದು. ಬ್ರಹ್ಮಾಂಡದ ಅಣು ಅಣುವಿನಲ್ಲಿಯೂ ಇರುವ ಇಂತಹ ದೇವನಿಗೆ ಪ್ರತ್ಯೇಕ ವಾಸಸ್ಥಾನವೇ? ಜೀವಾತ್ಮರೂ ಸಹ ಅನಾದಿ ಮತ್ತು ಅನಂತರು ಎನ್ನುತ್ತದೆ ವೇದ. ಕರ್ಮಫಲಕ್ಕನುಸಾರವಾಗಿ ವಿವಿಧ ಜನ್ಮಗಳನ್ನು ತಾಳುತ್ತಾರೆ ಎಂಬುದನ್ನು ಪೂಜ್ಯ ಶಂಕರರು ಮನನೀಯವಾಗಿ ಹೇಳಿರುವುದು ಹೀಗೆ: “ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀ ಜಠರೇ ಶಯನಂ. . .” ಮೋಕ್ಷ ಪಡೆಯುವವರೆಗೂ ಈ ಹಾದಿಯನ್ನು ಜೀವರುಗಳು ಸವೆಸುತ್ತಿರುತ್ತಾರೆ. ಹಾಗಾದರೆ ಮೋಕ್ಷವೆಂದರೆ ಹುಟ್ಟು-ಸಾವುಗಳ ಚಕ್ರದಿಂದ ಹೊರಬರುವುದೇ?
     ಈ ಮೋಕ್ಷ ಅನ್ನುವುದು ಸ್ವರ್ಗದಲ್ಲಿದೆ ಅಥವ ಯಾವುದೋ ಲೋಕದಲ್ಲಿದೆ ಎಂಬ ಕಲ್ಪನೆ, ದೇವರ ಆವಾಸಸ್ಥಾನವೇ ಪ್ರತ್ಯೇಕವಾಗಿ ಇದೆ ಎಂಬುದಕ್ಕೆ ಸಮನಾದ ಭ್ರಮೆಯಾಗಿದೆ. ಮೋಕ್ಷ ಅನ್ನುವುದು ಜೀವಾತ್ಮನ ಒಂದು ಸ್ಥಿತಿ ಅಷ್ಟೇ ಆಗಿದೆ. ಹುಟ್ಟು-ಸಾವುಗಳ ಚಕ್ರದಿಂದ ಹೊರಬರುವುದು ಮೋಕ್ಷವೆಂದಾದರೆ, ಮೋಕ್ಷದ ಸ್ಥಿತಿಯಲ್ಲಿ ಜೀವಾತ್ಮಕ್ಕೆ ದೇಹದ ಬಂಧನವಾಗಲೀ, ಇಂದ್ರಿಯ, ಮನಸ್ಸು, ಬುದ್ಧಿಗಳ ಬಂಧನವಾಗಲೀ ಇರದೆ  ಮುಕ್ತ ಸ್ಥಿತಿಯಲ್ಲಿ ಅಶರೀರವಾಗಿರುತ್ತದೆ. ಭೌತಿಕ ಜಗತ್ತಿನ ಸಂಪರ್ಕವಿಲ್ಲದೆ, ಆ ಜಗತ್ತಿನ ತಾಪಗಳಿಂದ ಬಿಡುಗಡೆ ಹೊಂದಿ ಕೇವಲ ಬ್ರಹ್ಮಾನಂದ ಅನುಭವಿಸುತ್ತಿರುತ್ತದೆ ಮತ್ತು ಆ ಸ್ಥಿತಿಯಲ್ಲಿ ಎಲ್ಲಿ ಬೇಕಾದರೂ ಚಲಿಸಬಹುದಾಗಿರುತ್ತದೆ. ದೇಹ, ಇಂದ್ರಿಯಗಳು, ಮನಸ್ಸು, ಬುದ್ಧಿ ಹೊಂದಿದ್ದ ಕಾರಣದಿಂದ ಮೊದಲು ಅನುಭವಿಸುತ್ತಿದ್ದ ಸುಖ-ದುಃಖ, ನೋವು-ನಲಿವುಗಳಿಂದ ದೂರವಾಗಿರುತ್ತದೆ. ಈ ಸ್ಥಿತಿ ತಲುಪಬೇಕಾದರೆ ಜೀವಿಯು ಜ್ಞಾನ, ಕರ್ಮ, ಉಪಾಸನೆಗಳಿಂದ ಕೂಡಿದ ಧಾರ್ಮಿಕ ಜೀವನವನ್ನು ಪೂರ್ಣ ರೀತಿಯಲ್ಲಿ ಅನುಸರಿಸಿರಬೇಕಾಗುತ್ತದೆ. ಸಾಧನಾಪಥದಲ್ಲಿ ಸಾಗಿ, ಪರಮಾತ್ಮನ ಸ್ವರೂಪದ ಜ್ಞಾನಾನುಭೂತಿ ಪಡೆಯದೆ ಮೋಕ್ಷದ ಈ ಸ್ಥಿತಿ ತಲುಪಲಾಗದು. ನಮ್ಮ ಎಲ್ಲಾ ಸತ್ಕರ್ಮಗಳು, ಸಾಧನೆಗಳು ಪರಮಾತ್ಮನನ್ನು ಅರಿಯುವಲ್ಲಿ ಪರ್ಯವಸಾನವಾಗುವವರೆಗೆ ಮೋಕ್ಷ ಸಿಗಲಾರದು. ಯಜುರ್ವೇದದ ಈ ಮಂತ್ರ ಹೇಳುತ್ತದೆ:
ವೇದಾಹಮೇತಂ ಪುರುಷಂ ಮಹಾಂತಮಾದಿತ್ಯವರ್ಣಂ ತಮಸಃ ಪರಸ್ತಾತ್ |
ತಮೇವ ವಿದಿತ್ಯಾತಿ ಮೃತ್ಯುಮೇತಿ ನಾನ್ಯಃ ಪಂಥಾ ವಿದ್ಯತೇsಯನಾಯ || (ಯಜು.೩೧.೧೮.)
     ಇದರ ಅರ್ಥ ಹೀಗಿದೆ: “ನಾನು ಅಜ್ಞಾನಾಂಧಕಾರದಿಂದ ಮೇಲೆದ್ದು, ಈ ಪ್ರಾಮಾಣಿಕರಾದ ಅಖಂಡ ಸತ್ಯವಂತರಾದ ಜನರಿಂದ ವರಿಸಲ್ಪಡುವ, ಸ್ವೀಕರಿಸಲ್ಪಡುವ ಅಥವಾ ಅಖಂಡ ತೇಜಸ್ವಿಯಾದ, ಬ್ರಹ್ಮಾಂಡವೆಂಬ ಪುರದಲ್ಲಿ ವ್ಯಾಪಕನಾಗಿರುವ ಪರಮಾತ್ಮನನ್ನು ತಿಳಿದಿದ್ದೇನೆ. ಅವನನ್ನೇ ತಿಳಿದುಕೊಂಡು ಮಾನವನು, ಸಾವನ್ನು ಅಥವ ಮರ್ತ್ಯ ಲೋಕವನ್ನು ದಾಟಿ ಹೋಗುತ್ತಾನೆ. ಆತ್ಮನ ಸದ್ಗತಿಗೆ ಬೇರೆ ಮಾರ್ಗವು ಇರುವುದೇ ಇಲ್ಲ.” ನಮಗೆ ಮುಕ್ತಿ ಸಿಗಲು ನಾವೇ ಪ್ರಯತ್ನಿಸಬೇಕೇ ಹೊರತು, ಇತರರು ನಮ್ಮನ್ನು ಮಧ್ಯಸ್ತಿಕೆದಾರರಾಗಿ ಆ ಸ್ಥಿತಿಗೆ ತಲುಪಿಸಲಾರರು. ಕಾಯಾ, ವಾಚಾ, ಮನಸಾ ಪರಿಶುದ್ಧರಾಗಿ, ಜ್ಞಾನ, ಕರ್ಮ, ಉಪಾಸನೆಗಳಿಂದ ಧರ್ಮಮಾರ್ಗದಲ್ಲಿ ನಿರ್ಮಲಾಂತಃಕರಣದಿಂದ ನಿಜಮಾನವರಾಗಿ ಬಾಳಿದರೆ ಪರಮಾತ್ಮನ ಸ್ವರೂಪದ ಅರಿವಾಗುವುದರೊಂದಿಗೆ, ಜೀವಿ ತಾಪತ್ರಯಗಳಿಂದ ಹೊರತಾಗಿ ಬ್ರಹ್ಮಾನಂದದ ಸ್ಥಿತಿಯಾದ ಮೋಕ್ಷ ಪಡೆಯಲು ಅರ್ಹನಾದಾನು. ಮೋಕ್ಷದ ಸ್ಥಿತಿ ಅಂದರೇನು ಎಂದು ತಿಳಿಸುವ ಈ ಋಗ್ವೇದವಾಣಿ ಆಲಿಸಿ:
ಯತ್ರ ಕಾಮಾ ನಿಕಾಮಾಶ್ಚ ಯತ್ರ ಬ್ರದ್ನಸ್ಯ ವಿಷ್ಟಪಮ್ |
ಸ್ವಧಾ ಚ ಯತ್ರ ತೃಪ್ತಿಶ್ಚ ತತ್ರ ಮಾಮಮೃತಂ ಕೃಧೀಂದ್ರಾಯೇಂದೋ ಪರಿ ಸ್ರವಃ || (ಋಕ್.೯.೧೧೩.೧೩.)
     “ಯಾವ ಸ್ಥಿತಿಯಲ್ಲಿ, ಕಾಮನೆಗಳೆಲ್ಲಾ ತೀರಿಹೋದ ಕಾಮನೆಗಳಾಗಿವೆಯೋ ಮತ್ತು ಯಾವ ಸ್ಥಿತಿಯಲ್ಲಿ ಜಗದ್ಬಂಧುವಾದ ನಿನ್ನ ತಾಪರಹಿತವಾದ ಇರುವಿಕೆದೆಯೋ ಮತ್ತು ಯಾವ ಸ್ಥಿತಿಯಲ್ಲಿ ಆತ್ಮನನ್ನು ಎತ್ತಿಹಿಡಿಯುವ ಆನಂದ ಮತ್ತು ತೃಪ್ತಿ ಇರುವುವೋ, ಆ ಸ್ಥಿತಿಯಲ್ಲಿ ಅಮರನಾದ ನನ್ನನ್ನು ಇಡು. ಬಾಳನ್ನು ಸರಸಗೊಳಿಸುವ ಸ್ವಾಮಿ, ಇಂದ್ರಿಯವಂತನಾದ ಜೀವನಿಗಾಗಿ ಹರಿದು ಬಾ, ಸುರಿದು ಬಾ.” ಭೌತಿಕ ಕಾಮನೆಗಳ ಮತ್ತು ತಾಪಗಳ ಸಮಾಪ್ತಿ, ಆಧ್ಯಾತ್ಮಿಕ ಆನಂದ ಮತ್ತು ತೃಪ್ತಿಯ ಪ್ರಾಪ್ತಿ – ಇದೇ ಮೋಕ್ಷಾವಸ್ಥೆ.
     ಜೀವಾತ್ಮ ಅನಾದಿ ಮತ್ತು ಅನಂತವೆನ್ನುತ್ತಾರಲ್ಲಾ? ಜೀವಾತ್ಮರು ಹೊಸದಾಗಿ ಹುಟ್ಟುವುದಿಲ್ಲವೆಂದಾದರೆ ಹುಟ್ಟು-ಸಾವಿನ ಚಕ್ರದಿಂದ ಹೊರಬರುವ ಮೋಕ್ಷ ಅಂತ್ಯವಲ್ಲವೇ ಎನ್ನುವ ಸಂಶಯ ಬರುತ್ತದೆ. ಹೊಸದಾಗಿ ಹುಟ್ಟುವುದಿಲ್ಲವೆಂಬುದು ನಿಜವಾದರೆ, ಒಂದಿಲ್ಲೊಂದು ಕಾಲದಲ್ಲಿ ಎಲ್ಲರೂ ಮೋಕ್ಷಾವಸ್ಥೆಯನ್ನು ತಲುಪುತ್ತಾರೆಂದಾದರೆ ಈ ಜಗತ್ತಿಗೆ ಅರ್ಥವೆಲ್ಲಿ ಉಳಿಯುತ್ತದೆ? ವಾಸ್ತವದಲ್ಲಿ ಮೋಕ್ಷ ಎನ್ನುವುದು ಅಂತ್ಯವಲ್ಲ. ಅದು ದೀರ್ಘಾವಧಿಯವರೆಗೆ ಅಂದರೆ ಒಂದು ಪರಾಂತ ಕಾಲದವರೆಗೆ ಇರುವ ಸ್ಥಿತಿಯಾಗಿದ್ದು ನಂತರದಲ್ಲಿ ಪುನಃ ಹುಟ್ಟು-ಸಾವುಗಳ ಚಕ್ರ ಆರಂಭವಾಗುತ್ತದೆ. ಈ ಪರಾಂತಕಾಲ ಅನ್ನುವುದು ನಮ್ಮ ಕಲ್ಪನೆಗೆ ಎಟುಕದ ಬಹಳ ದೀರ್ಘವಾದ ಕಾಲವಾಗಿದೆ ಮತ್ತು ಇದು ಇಷ್ಟೊಂದು ದೀರ್ಘವಾದ ಕಾಲವಾದುದರಿಂದಲೇ ಮೋಕ್ಷವೆಂದರೆ ಹುಟ್ಟು-ಸಾವುಗಳಾಚೆಗಿನ ಸ್ಥಿತಿಯೆನ್ನುತ್ತಾರೆ. ವೈದಿಕ ಸಿದ್ಧಾಂತದ ಪ್ರಕಾರ ನಲವತ್ತನೂರು ಲಕ್ಷ ಇಪ್ಪತ್ತು ಸಾವಿರ ವರ್ಷಗಳಿಗೆ (೪೩,೨೦,೦೦೦) ಒಂದು ಚತುರ್ಯುಗ. ಎರಡು ಸಾವಿರ ಚತುರ್ಯುಗಗಳಿಗೆ ಒಂದು ಅಹೋರಾತ್ರಿ. ಇಂತಹ ಮೂವತ್ತು ಅಹೋರಾತ್ರಿಗಳಿಗೆ ಒಂದು ಮಾಸ. ಇಂತಹ ಹನ್ನೆರಡು ಮಾಸಗಳಿಗೆ ಒಂದು ವರ್ಷ. ಇಂತಹ ನೂರು ವರ್ಷಗಳಿಗೆ ಒಂದು ಪರಾಂತಕಾಲ (೩,೧೧,೦೪೦,೦೦,೦೦,೦೦೦ ವರ್ಷಗಳು). ಇದು ಒಂದು ಪರಾಂತಕಾಲ. ಇಷ್ಟು ದೀರ್ಘವಾದ ಕಾಲ ಮುಕ್ತಸ್ಥಿತಿಯಲ್ಲಿ ಇರುವುದೆಂದರೆ ಸಾಮಾನ್ಯವಾದ ಸಂಗತಿಯಲ್ಲ. ಜಿಜ್ಞಾಸುಗಳು, ಸಾಧಕರುಗಳಿಗೆ ಚತುರ್ಥ ಪುರುಷಾರ್ಥಗಳನ್ನು ಸಾಧಿಸಲು ವೇದಗಳು ಅದ್ಭುತ ಮತ್ತು ವಿಚಾರಸಮ್ಮತ ಮಾರ್ಗದರ್ಶನ ನೀಡುತ್ತಿವೆ.
(ಆಧಾರ: ಪಂ. ಸುಧಾಕರ ಚತುರ್ವೇದಿಯವರ ‘ವೇದೋಕ್ತ ಜೀವನಪಥ’)
-ಕ.ವೆಂ.ನಾಗರಾಜ್,
ಭಗವದ್ಗೀತೆಯ ಸಾರಸರ್ವಸ್ವ
ಭಗವದ್ಗೀತೆಯ ಸಾರಸರ್ವಸ್ವ
ನಮ್ಮ ನಿತ್ಯ ಜೀವನದಲ್ಲಿ ಭಗವದ್ಗೀತೆಯ ಪಾತ್ರ..
  ನಮ್ಮ ಭಾರತೀಯ ಚಿಂತನೆಯ ಮೂಲಾಧಾರ ವೇದ, ಉಪನಿಷತ್ತು, ಭಗವದ್ಗೀತೆಗಳು. ಇವುಗಳ ಪಾರಮ್ಯವನ್ನು ಒಪ್ಪಿಕೊಳ್ಳಲೀ ಒಪ್ಪಿಕೊಳ್ಳದಿರಲೀ ಅವು ಪ್ರತಿಪಾದಿಸುವ ಚಿಂತನೆಯ ಸಾರವನ್ನು ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳದಿರುವ ಭಾರತೀಯ ಚಿಂತನಾ ಪ್ರಕಾರ ಇಲ್ಲವೆಂದೇ ಹೇಳಬೇಕು.
     ಶ್ರೀಮದ್ಭಗವದ್ಗೀತೆಯ ಜಗತ್ತಿನ ಅನೇಕ ಧರ್ಮಗ್ರಂಥಗಳಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿದೆಯಲ್ಲದೆ ನಮ್ಮ ಭಾರತೀಯರ ಪವಿತ್ರ ಗ್ರಂಥ. ಹಿಂದೂ ತತ್ವಶಾಸ್ತçದ ಮತ್ತು ಆಚಾರಸಂಹಿತೆಯ ಅತ್ಯಂತ ಪ್ರಮಾಣೀಕೃತ ಮೂಲಗ್ರಂಥಗಳಲ್ಲಿ ಇದೂ ಒಂದು. ಭಗವಾನ್ ವಾಸುದೇವನೇ ಇದರ ಕರ್ತೃ.. ಅವನ ಬಾಯಿಯಿಂದಲೇ ಹೊರಟಂಥ ಆಣಿಮುತ್ತುಗಳನ್ನು ಸೇರಿಸಿದ ಮಣಿಮಾಲೆಯಿದು. ಗೀತೆಯು ಪಾರ್ಥನ ಹೃದಯವಾಗಿದೆ ಎಂದೇ ಭಗವಂತನು ಹೇಳುತ್ತಾನೆ. ಎಂದಮೇಲೆ ಇದು ಆದಿಕಾಲದಿಂದಲೂ ಧರ್ಮವನ್ನು ಮನಸಾ ಅವಲಂಬಿಸಿರುವವರ ಹೃದಯಸ್ಥ ಗೀತೆಯಾಗಿರುವುದರಲ್ಲಿ ಆಶ್ಚರ್ಯವೇನು?  ನಾಲ್ಕು ವೇದಗಳಾದ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದಗಳೊಂದಿಗೇ ಇದನ್ನು ಪಂಚಮವೇದವೆಂದೂ ಕೂಡ ಕರೆಯುತ್ತಾರೆ. ಐದು ಸಾವಿರ ವರ್ಷಗಳ ನಂತರವೂ ಇಂಥದೊಂದು ಜೀವನಸಿದ್ಧಾಂತದ ಗೀತೆಯು ನಮಗೆ ಒದಗಿದೆಯೆಂದರೆ ನಾವು ಅದೃಷ್ಟವಂತರೇ.
  ಗೀತೆಯ ಸಂದರ್ಭ ಮಹಾಭಾರತದ ಒಂದು ಸಣ್ಣ ಪ್ರಕರಣ. ಆದರೆ ಇದು ಮೇರುವಿನಂತೆ ಮಹಾಭಾರತವನ್ನು ಎತ್ತರಕ್ಕೇರಿಸಿದೆ ಎಂದು ಹೇಳಬಹುದು. ಈ ಭಗವದ್ಗೀತೆಯಿಲ್ಲದೇ ಹೋಗಿದ್ದರೆ ಮಹಾಭಾರತವು ಕೇವಲ ಒಂದು ದಾಯಾದಿಗಳ ರಾಜ್ಯದಾಹದ ಕಥೆಯಾಗುತ್ತಿತ್ತು. ಅದಕ್ಕೇ ಹಿಂದಿನವರು ಗೀತೆಯ ಬಗ್ಗೆ “ಭಾರತತೈಲಪೂರ್ಣಃ ಪ್ರಜ್ವಾಲಿತೋ ಜ್ಞಾನಮಯಪ್ರದೀಪಂ” ಎಂದು ಹೇಳಿದ್ದಾರೆ. ಇಡಿಯ ಮಹಾಭಾರತವು ಗೀತೆಯೆಂಬ ನಂದಾದೀವಿಗೆಯನ್ನು ಹೊತ್ತಿಸುವ ತೈಲವಂತೆ! ಯಾವುದೇ ಧರ್ಮಗುರುಗಳೇ ಇರಲಿ, ಅವರು ತಮ್ಮ ಒಂದು ತತ್ವಸಂಪ್ರದಾಯವನ್ನು ಸ್ಥಾಪಿಸಬೇಕೆಂದರೆ ಗೀತೆಗೆ ಭಾಷ್ಯವನ್ನು ಬರೆದು ತಾವು ಹೇಳುತ್ತಿರುವ ತತ್ವವು ಆಗಲೇ ಗೀತೆಯಲ್ಲಿ ಅಡಕಗೊಂಡಿದೆಯೆಂದು ತೋರಿಸಿದರೆ ಮಾತ್ರವೇ ಅವರ ತತ್ವಗಳು ಜನರಿಂದ ಸ್ವೀಕೃತಗೊಳ್ಳುವವು. ಅಷ್ಟೇ ಯಾಕೆ, ನಮ್ಮ ಸಂವಿಧಾನದ ಅನೇಕ ತತ್ವಗಳೂ ಕೂಡ ಗಿತೆಯ ಆದರ್ಶವನ್ನೇ ಅವಲಂಬಿಸಿವೆ.
  ಕುರುಕ್ಷೇತ್ರದಲ್ಲಿ ಯುದ್ಧಕ್ಕಾಗಿ ಕೌರವ ಹಾಗೂ ಪಾಂಡವ ಎರಡೂ ಬಣದವರು ಸೇರಿದ್ದಾರೆ. ಎರಡೂ ಪಕ್ಷಗಳ ಜನರನ್ನು ಕಂಡೊಡನೆಯೇ ಅರ್ಜುನನ ಯುದ್ಧೋತ್ಸಾಹವು ಇಳಿದುಹೋಗುತ್ತದೆ. ನಾನು ಈ ರಾಜ್ಯವೈಭವದ ಆಶೆಗಾಗಿ ನನ್ನ ಹಿರಿಯರನ್ನು ಕೊಲ್ಲಬೇಕೇ? ನನ್ನ ಸೋದರರನ್ನು ಕೊಲ್ಲಬೇಕೆ? ನನ್ನ ದಾಯಾದಿಗಳನ್ನು ಕೊಲ್ಲಬೇಕೆ? ಎಲ್ಲರನ್ನೂ ಕೊಂದು ನಾನು ಯಾವ ಸಂತೋಷಕ್ಕಾಗಿ ನಾನು ಗೆಲುವನ್ನು ಪಡೆಯಬೇಕು? ಎಂದು ಯೋಚಿಸಿದ ಅವನ ಮನಸ್ಸಿನಲ್ಲಿ ವೇದನೆಯ ತರಂಗಗಳು ಏಳುತ್ತವೆ. ಆ ವೇದನೆಯ ತರಂಗಗಳೊಂದಿಗೇ ಪ್ರಾರಂಭವಾಗುತ್ತದೆ ಭಗವದ್ಗೀತೆ! ಅರ್ಜುನನ ಮನಸ್ಸಿನ ತಳಮಳಗಳು, ಹಾಗೂ ಆತನ ಸಂದೇಹಗಳ ನಿವಾರಣೆಯೇ ಶ್ರೀಕೃಷ್ಣನ ಮಾತುಗಳಲ್ಲಿ ಅಡಕವಾಗಿದೆ. ಇಲ್ಲಿ ಶ್ರೀಕೃಷ್ಣನು ಕೇವಲ ಅರ್ಜುನನ ಸಾರಥಿಯಾಗಿಯಲ್ಲ, ನಮ್ಮ ಜೀವನದ ಸಾರಥಿಯಾಗಿಯೂ ಕಾರ್ಯನಿರ್ವಹಿಸಿದ್ದಾನೆ. ಅರ್ಜುನನು ಮಾನವಜಾತಿಯ ಪ್ರತಿನಿಧಿಯಾಗಿದ್ದಾನೆ. ಅವನು ಒಂದು ನಿಮಿತ್ತಮಾತ್ರ. ಈ ಜಗತ್ತು ಸೃಷ್ಟಿಯಾದಾಗಿನಿಂದಲೂ ಮಾನವ ಅನೇಕ ದುಃಖಗಳಿಗೆ, ಕಷ್ಟ ಕೋಟಲೆಗಳಿಗೆ ಈಡಾಗುತ್ತಲೇ ಇದ್ದಾನೆ. ಅಂಥವರಿಗೆ ಅರ್ಜುನನ ಮೂಲಕ ಶ್ರೀಕೃಷ್ಣನಿಂದ ಸಂದೇಶವು ಸಿಕ್ಕಿದೆ. ಇಡಿಯ ಮಾನವ ಸಮಾಜವನ್ನೇ ಈ ಕಷ್ಟ-ಜಂಜಡಗಳಿಂದ ಎತ್ತುವುದಕ್ಕೆಂದೇ ಗೀತಾಚಾರ್ಯನು ಸೊಂಟಕಟ್ಟಿ ನಿಂತಂತಿದೆ. ಇಲ್ಲಿ ಬೋಧಿಸಲ್ಪಟ್ಟ ವಿಷಯಗಳು ನಮ್ಮ ನಿತ್ಯ ಜೀವನದಲ್ಲಿ ಸಾಮಾನ್ಯವಾಗಿಯೇ ಕಾಣುವಂಥವು.
  ನಮ್ಮ ನಿತ್ಯ ಜೀವನವೇ ಒಂದು ಕುರುಕ್ಷೇತ್ರ. ನಾವೆಲ್ಲರೂ ಅರ್ಜುನನಂತೆ ಬಾಹ್ಯ ಶತ್ರುಗಳೊಂದಿಗೆ ಯುದ್ಧ ಮಾಡದಿದ್ದರೂ ವಿಭಿನ್ನ ಕಾರ್ಯ ಕ್ಷೇತ್ರಗಳಲ್ಲಿ ನಿರತರಾಗಿರುವಾಗ ಅರ್ಜುನನ ಮನಸ್ಸಿನಲ್ಲಿ ಯಾವ ಯಾವ ರೀತಿಯ ಪ್ರಶ್ನೆಗಳೆದ್ದವೋ, ಅವನು ಯಾವ ದುಃಖಕ್ಕೆ ಈಡಾದನೋ, ಯಾವ ರೀತಿಯಲ್ಲಿ ಧರ್ಮ ಸಂಕಟಕ್ಕೊಳಗಾದನೋ ಅದೇ ರೀತಿಯ ಪ್ರಸಂಗಗಳನ್ನು ಅನುಭವಿಸಿದವರೇ. ಅಂತೆಯೇ ಗೋವಿಂದನೇ ನಮ್ಮ ಜೀವನದ ರಥಕ್ಕೂ ಕೂಡ ಸಾರಥಿಯೇ. ಕುರುಕ್ಷೇತ್ರದಲ್ಲಿ ಅಂಥದೊಂದು ಧರ್ಮಕ್ಷೇತ್ರವನ್ನು ನಮಗೆ ತೋರಿಸುವ ಪ್ರಯತ್ನ ನಮ್ಮ ಈ ಗೀತಾಚಾರ್ಯನದು.
  ಉಪನಿಷತ್ತುಗಳಲ್ಲಿ ಇಲ್ಲದುದು ಇಲ್ಲಿ ಇಲ್ಲ. ಆದರೆ ಅವೇ ಉಪದೇಶಗಳು ಇಲ್ಲಿ ಸರಳೀಕರಣಗೊಂಡಿವೆ. ಉಪನಿಷತ್ತಿನಲ್ಲಿ ಭಕ್ತಿಗೆ ಜ್ಞಾನಮಾರ್ಗದಷ್ಟು ಪ್ರಾಧಾನ್ಯತೆಯಿಲ್ಲ. ಅಲ್ಲದೆ ಉಪನಿಷತ್ತುಗಳನ್ನು ಓದಲು ಎಲ್ಲರಿಗೂ ಮುಕ್ತ ಅವಕಾಶವಿರಲಿಲ್ಲ. ಆದರೆ ನಿತ್ಯ ಜೀವನದ ಕಷ್ಟ ನಷ್ಟಗಳಿಗೆ ಕುಗ್ಗದೆ ಅವುಗಳನ್ನು ಧೈರ್ಯದಿಂದ ಎದುರಿಸಿ ಹೋರಾಡಿ ಅವುಗಳನ್ನು ಜಯಿಸುವ ಕರ್ಮಯೋಗಿಗಳನ್ನು ಪ್ರೋತ್ಸಾಹಿಸುವಂಥ ಒಂದು ಮಾರ್ಗದರ್ಶನ ಜನರಿಗೆ ಅವಶ್ಯಕವಾಗಿತ್ತು. ನಮ್ಮ ಗೀತಾಚಾರ್ಯನು ಅಂಥದೊಂದು ಮಹತ್ಕಾರ್ಯವನ್ನು ಮಾಡಿದನು.
  ಶ್ರೀಕೃಷ್ಣನದು ಸರ್ವೋತ್ತಮ ಮಾರ್ಗ. ಅವನು ಯಾರನ್ನೂ ದ್ವೇಷಿಸುವುದಿಲ್ಲ. ತನ್ನ ಮಾರ್ಗವೇ ಸತ್ಯ, ಉಳಿದದ್ದೆಲ್ಲವೂ ಮಿಥ್ಯವೆಂದೂ ಹೇಳುವುದಿಲ್ಲ. ಅವನ ಗುರಿ ಮಾನವಕೋಟಿಯ ಉದ್ಧಾರ ಮಾತ್ರ. ಏಣಿಯ ಬಗ್ಗೆ ಅವನಿಗೆ ಯಾವುದೇ ತಕರಾರಿಲ್ಲ. ಹೀಗಾಗಿಯೇ ಅವನು ಯಾವ ಮಾರ್ಗವನ್ನೂ ಖಂಡಿಸಿಲ್ಲ. ಮಾನವನ ವಿಕಾಸವೊಂದೇ ಅವನ ಮುಖ್ಯ ಗುರಿ. ದೇವರು ನಮ್ಮ ಕಷ್ಟಗಳನ್ನು ಪರಿಹರಿಸುವುದಿಲ್ಲ. ಯಾವುದೇ ಒಂದು ಪವಾಡವನ್ನು ಮಾಡುವುದಿಲ್ಲ. ನಾವು ತಾಗಿ, ಮಾಗಬೇಕು.. ಪೂರ್ಣಾಕಾರವಾಗಿ ಬೆಳೆಯಬೇಕು. ಒಮ್ಮೊಮ್ಮೆ ನಾವು ಕಷ್ಟಗಳಲ್ಲಿ ಅತಿಯಾಗಿ ಬೆಂದಾಗ “ದೇವರೆ. ನಿನ್ನನ್ನು ನಾನು ಇಷ್ಟು ನಿಷ್ಠೆಯಿಂದ ಪೂಜಿಸಿದರೂ ನನ್ನ ಮೇಲೆ ನಿನ್ನ ಕೃಪಾಕಟಾಕ್ಷವೇಕೆ ಇನ್ನೂ ಬೀಳದು!” ಎಂದು ಉದ್ಗರಿಸುತ್ತೇವೆ. ಆದರೆ ನಾವು ಮಿಡಿಯಾಗಿ, ಕಾಯಾಗಿ, ಹಣ್ಣಾಗಬೇಕು.. ಅಂದರೇ ನಮ್ಮ ಜೀವನವು ಪರಿಪೂರ್ಣವಾಗುತ್ತದೆ. ಇದೇ ಆ ಭಗವಂತನ ಉದ್ದೇಶ. ಇದು ಕೇವಲ ಜ್ಞಾನಿಗಳ ಕೈಯಳವೇನಲ್ಲ. ಎಂಥವರಿಗೂ ನೆರವಾಗುವ ಗ್ರಂಥ. ನಮ್ಮ ತಿಳುವಳಿಕೆಯಂತೆ ಇದು ಕೇವಲ ಕೈವಲ್ಯಸಾಧನವಲ್ಲ. ಇದು ಎಲ್ಲಾ ಜನರಿಗೂ ಎಲ್ಲಾ ಕಾಲಕ್ಕೂ ಸಲ್ಲುವ ಗ್ರಂಥ. ಇದನ್ನು ಕೇವಲ ಬಾಯಿಪಾಠ ಮಾಡಿದರೆ ಸಾಲದು. ಕಾಯಾ, ವಾಚಾ, ಮನಸಾ ಗೀತೆಯ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದನ್ನು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಿಕೊಳ್ಳಬೇಕು. ಗೀತೆಯ ಅಮೃತವು ನಮ್ಮ ಬಾಳಬಳ್ಳಿಯ ಬೇರನ್ನು ಪೋಷಿಸಬೇಕು.
  ಈ ಭಗವದ್ಗೀತೆಯು ಅಷ್ಟು ಮಹತ್ವವನ್ನು ಪಡೆಯಲು ಅನೇಕ ಕಾರಣಗಳಿವೆ. ಇದು ಆತ್ಮಾವಲೋಕನಕ್ಕೆ ಸಹಕಾರಿಯಾಗಿರುವುದೂ ಇದನ್ನು ಮಹತ್ತಿಗೇರಿಸಿದೆ. ಆತ್ಮಾವಲೋಕನದಿಂದಾಗಿ ನಮಗೆ ನಮ್ಮ ತಪ್ಪುಗಳೂ ಕಣ್ಣಿಗೆ ಕಾಣುತ್ತವೆ. ಇದರಿಂದಾಗಿ ದ್ವೇಷ ಅಸೂಯೆಗಳು ಇಲ್ಲವಾಗುತ್ತವೆ. ಮನಸ್ಸು ಹೊಯ್ದಾಟವನ್ನು ಬಿಟ್ಟು ಶಾಂತವಾಗುತ್ತದೆ. ವಿವೇಚನಾ ಶಕ್ತಿಯು ಬೆಳೆಯುತ್ತದೆ. ಅಲ್ಲದೆ ಸಾಮಾಜಿಕ ಹಿತದೃಷ್ಟಿಯೂ ಇದರಲ್ಲಿ ಅಡಗಿದೆ. ಶ್ರದ್ಧಾ ಭಕ್ತಿಗಳು ಎಲ್ಲಿಂದ ಬಂದರೂ ಬೆಳಕಿನಂತೆ ಅವು ಗ್ರಾಹ್ಯವೇ.. ಎನ್ನುವ ಅವನು, ಈಶ್ವರನು ಒಬ್ಬ ವ್ಯಕ್ತಿಯಲ್ಲ.. ಅವನು ಒಂದು ಶಕ್ತಿ ಎಂದು ಹೇಳುತ್ತಾನೆ. ಅವನು ನಮ್ಮ ಹೃದಯದಲ್ಲಿ ಯಾವಾಗಲೂ ಸ್ಥಿತನಾಗಿರುತ್ತಾನೆ ಎಂದು ಹೇಳುತ್ತ, ಇವನೇ ಸಚ್ಚಿದಾನಂದ ರೂಪಿಯಾದ ಪುರುಷೋತ್ತಮ ಎಂದು ಹೇಳುತ್ತಾನೆ.
  ಕೆಲವರಿಗೆ ಭಗವದ್ಗೀತೆಯು ಕೇವಲ ಸನ್ಯಾಸಿಗಳಿಗೆ ಮಾತ್ರ ಹೇಳಿದ್ದು ಎಂಬ ತಪ್ಪುಕಲ್ಪನೆಯಿದೆ. ಆದರೆ ಈ ಗೀತೆಯ ಸಂದರ್ಭವನ್ನು ನೋಡಿದರೆ ಆ ಭಾವನೆಯು ತಪ್ಪು ಎಂಬುದು ಅರಿವಾಗುತ್ತದೆ. ಯುದ್ಧದಿಂದ ವಿಮುಖನಾಗಿ ಸನ್ಯಾಸಿಯಾಗ ಹೊರಟಂಥ ಅರ್ಜುನನನ್ನು, ಮತ್ತೆ ಯುದ್ಧ ಮಾಡಲು ಪ್ರೇರೇಪಿಸಿದ ಉಪದೇಶವಿದು..

Leave a Reply