ದೀಪಾವಳಿ ಬೆಳಕಿಗೆ ಅದೆಷ್ಟು ಅರ್ಥ; ತಿಳಿಯೋಣ ಬನ್ನಿ

ದೀಪಾವಳಿ ಬೆಳಕಿಗೆ ಅದೆಷ್ಟು ಅರ್ಥ; ತಿಳಿಯೋಣ ಬನ್ನಿ
ಡಾ.ವಿ.ಬಿ.ಆರತೀ
ಋತುಗಳನ್ನು ಅನುಸರಿಸಿಯೇ ನಮ್ಮ ಭಾರತದ ಹಬ್ಬಗಳೂ ಬರುತ್ತವೆ. ಪ್ರಕೃತಿಧಿಯನ್ನು ‘ಉಪಭೋಗದ ವಸ್ತು’ ಎಂದು ಭಾವಿಸದೆ ‘ಲಕ್ಷ್ಮೀ’ ಎಂದು ಆದರಿಸುವುದೇ ಅಪ್ಪಟ ಭಾರತೀಯ ಮನೋಭಾವ. ಹಾಗಾಗಿ ನಿಸರ್ಗವನ್ನೇ ದೈವವೆಂದು ಬಗೆಯುವುದು, ನಿಸರ್ಗದ ಪ್ರತಿಯೊಂದು ಚಿಕ್ಕಧಿದೊಡ್ದ ಪ್ರಕ್ರಿಯೆಗಳಲ್ಲೂಲಕ್ಷ್ಮೀ ವಿಲಾಸವನ್ನು ಕಾಣುವುದೇ ನಮ್ಮ ಪರಿ. ದಿನ ರಾತ್ರಿಗಳನ್ನೂ ಋುತು- ಮಾಸ-ಪಕ್ಷಗಳನ್ನೂ ಗ್ರಹತಾರೆಗಳನ್ನೂ ಸುತ್ತಲ ವನ ರಾಜಿಯನ್ನೂ ಪಶುಅರಿವಿನ ಪ್ರಜ್ಞೆಯೇ ದೀಪಾವಳಿ; ಬೆಳಗಿಸೋಣ ಆತ್ಮಜ್ಯೋತಿ ಪಕ್ಷಿ ಸಂಕುಲವನ್ನೂ ಮಾನವರನ್ನೂ ನಾವು ಪ್ರತ್ಯಕ್ಷ-ಪರದೈವವೆಂದೇ ನೋಡುತ್ತೇವೆ. ಇದು ಮೌಢ್ಯವಲ್ಲ, ಉದಾತ್ತ ದರ್ಶನ.
ಭಾರತೀಯರೆಲ್ಲ ವಾಸ್ತವಿಕವಾಗಿ ಪೂಜಿಸುವುದು ಪ್ರಕೃತಿ ರೂಪಿ ಪರಮಾತ್ಮನನ್ನೇ ಎನ್ನುವುದು ವೇದಾಗಮ ಜಾನಪದಗಳೆಲ್ಲ ರಂಗಗಳಲ್ಲೂಎದ್ದು ಕಾಣುವ ಸತ್ಯ. ಸರ್ವಂಖಲ್ವಿದಂಬ್ರಹ್ಮ (ಇರುವುದೆಲ್ಲವೂ ಬ್ರಹ್ಮವೊಂದೇ) ಎನ್ನುವುದೇ ಆರ್ಷ ದರ್ಶನ!
ದೀಪಾವಳಿ ಒಂದು ಬಹುಮಾನ್ಯವಾದ ಋತೂತ್ಸವ. ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವ ಹಬ್ಬ. ಕಾರ್ತೀಕದೀಪೋತ್ಸವ, ದೀಪೋತ್ಸವ, ಯಕ್ಷರಾತ್ರಿ ಮುಂತಾದ ನಾಮಾಂತರಗಳನ್ನು ಪ್ರಾಚೀನ ಉಲ್ಲೇಖಗಳಲ್ಲಿ ಕಾಣಬಹುದು. ಕಾರ್ತೀಕ ಮಾಸದುದ್ದಕ್ಕೂ ದೀಪೋತ್ಸವವನ್ನು ಆಚರಿಸಲಾಗುತ್ತದೆಯಾದರೂ ಆಶ್ವಿನ ಮಾಸದ ಕೊನೆಯ ಮೂರು ದಿವಸಗಳನ್ನೂ ಕಾರ್ತೀಕ ಮಾಸದ ಮೊದಲ ಎರಡು ದಿನಗಳನ್ನೂ ವಿಶೇಷವಾಗಿ ದೀಪಾವಳಿ ಉತ್ಸವವೆಂದೇ ಸರಣಿಯಲ್ಲಿ ಆಚರಿಸುವುದು ಭಾರತಾದ್ಯಂತ ಕಾಣಬರುತ್ತದೆ.

ಭಾರತೀಯರಿಗೆ ದೀಪವೆನ್ನುವುದು ಸೂರ್ಯನ ಪುಟ್ಟ ಪ್ರತಿಧಿರೂಪವಿದ್ದಂತೆ. ಜ್ಞಾನದ್ಯೋತಕ. ನಮ್ಮ ದಿನ ಪ್ರಾರಂಭಧಿವಾಗುವುದೇ ಜಗತ್ತನ್ನು ಬೆಳಗುವ ಸೂರ್ಯನ ವಂದನೆಧಿಯೊಂದಿಗೆ, ಮನೆಯಲ್ಲಿನಂದಾದೀಪವನ್ನು ಬೆಳಗುವ ಮೂಲಕವೆ. ಒಲೆಗೂ ಪೂಜೆಗೈದೇ ದಿನವನ್ನು ಪ್ರಾರಂಭಿಧಿಸುತ್ತೇವೆ. ಅಗ್ನಿಸಾಕ್ಷಿಯಾಗಿಯೇ ಮದುವೆ ಮುಂಜಿಗಳೂ ದಾನ ಧರ್ಮಗಳೂ ನಡೆಯುತ್ತವೆ. ಭಕ್ತಿಧಗೂ ಮನೆಯ ಸಡಗರದ ಕೂಟಕ್ಕೂ ದೀಪಗಳದೇ ತುಂಬ ಮುಖ್ಯ ಪಾತ್ರ. ದೀಪಗಳನ್ನು ‘ದೀಪಲಕ್ಷ್ಮೀ’ ಎಂದೂ ‘ಜ್ಞಾನಜ್ಯೋತಿ’ ಎಂದೂ ಪೂಜಿಸುತ್ತೇವೆ. ಈ ಬಂಧುರ ಭಾವವು ದೀಪಾವಳಿಯ ಸಂದರ್ಭದಲ್ಲಂತೂ ಭವ್ಯವಾಗಿ ಗರಿಗೆದರಿ ನಿಲ್ಲುವುದನ್ನು ಕಾಣುತ್ತೇವೆ. ಈ ಹಬ್ಬವಿರುವುದೇ ದೀಪಗಳ ಸುತ್ತ. ದೀಪಗಳನ್ನು ಬಗೆಬಗೆಯ ವಿನ್ಯಾಸಗಳಲ್ಲಿ ಜೋಡಿ ಸಿಟ್ಟು, ಅದರ ಸುತ್ತಲೂ ಮನೆ ಮಂದಿಯೂ ಬಂಧು ಮಿತ್ರರೂ ನೆರೆದು ಪೂಜೆ- ಹಾಡು- ಕುಣಿತ- ಔತಣ-ಕ್ರೀಡಾ ವಿನೋದಗಳಲ್ಲಿ ತೊಡಗುವ ಈ ಹಬ್ಬ ಅತ್ಯಂತ ಜನಪ್ರಿಯವಾದದ್ದು. ಜಗತ್ತಿನ ಕಣ್ಮನಗಳನ್ನೇ ಸೆಳೆದು ಬೆರಗು ಗೊಳಿಸುವಂತಹದ್ದೂ ಹೌದು.

ದೀಪಾವಳಿಯು ಐದು ದಿವಸಗಳ ಉತ್ಸವ. ಅದರಲ್ಲೂ ಮಧ್ಯದ ಮೂರು ದಿವಸಗಳು ತುಂಬ ವಿಶೇಷ. ಆಶ್ವಿನ ತ್ರಯೋದಶಿಯಂದು ‘ನೀರು ತುಂಬುವ ಹಬ್ಬ’ವನ್ನು ನಮ್ಮ ಕಡೆ ಮಾಡುತ್ತೇವೆ. ಮನೆಯ ಕೊಳೆ ಕಸಗಳನ್ನು ಆಚೆಗೆ ಬಿಸುಟು, ಗೋಡೆಗಳಿಗೆ ಸುಣ್ಣ ಬಳಿದು, ಮನೆಯಂಗಳವನ್ನು ತೊಳೆಯುವುದು, ಸಿಹಿಯೂಟವನ್ನುಂಡು ಮರುದಿನದ ಹಬ್ಬಕ್ಕೆ ತಯಾರಾಗುವುದೇ ಈ ದಿನದ ಮುಖ್ಯ ಕಲಾಪ. ಎರಡನೆಯ ದಿನವಾದ ನರಕ-ಚತುರ್ದಶಿಯಂದು ಮನೆಯ ಹಿರಿಯ ತಾಯಿ ಎಲ್ಲರಿಗೂ ತಿಲಕ ಹಚ್ಚಿ ಎಣ್ಣೆ ಶಾಸ್ತ್ರ ಮಾಡುತ್ತಾಳೆ. ಆ ಬಳಿಕ ಮನೆ ಮಂದಿಯೆಲ್ಲ ಅಭ್ಯಂಗ ಸ್ನಾನದ ಸುಖವನ್ನು ಸವಿಯುತ್ತಾರೆ. ಹೊಸ ಬಟ್ಟೆ ಧರಿಸಿ, ಮನೆಯಲ್ಲೆಲ್ಲೂ ಧ್ವಜ- ಪತಾಕೆ- ಮಾಲೆ- ತೋರಣಗಳನ್ನು ಕಟ್ಟಿ ಶೋಭೆಗೊಳಿಸುತ್ತಾರೆ. ರಂಗವಲ್ಲಿಧಿಗಳನ್ನು ರಚಿಸುತ್ತಾರೆ. ಗೋ ಪೂಜೆ, ತುಳಸೀ ಪೂಜೆ, ಹೊಸ್ತಿಲ ಪೂಜೆಗಳನ್ನು ಮುಗಿಸಿ ಎಲ್ಲರೂ ಪೂಜಾ ಮಂದಿರದಲ್ಲಿನೆರೆದು ಕುಲದೈವದ ಪೂಜೆಯನ್ನೂ ಕೃಷ್ಣ-ಲಕ್ಷ್ಮೀಯರ ಪೂಜೆಯನ್ನೂ ಮಾಡುತ್ತಾರೆ. ಆ ಬಳಿಕ ಗುರು ಹಿರಿಯರಿಗೆ ನಮಿಸಿ ಪರಸ್ಪರ ಸಿಹಿ ಹಂಚಿಕೊಂಡೇ ಆ ಬಳಿಕ ಉಪಾಹಾರ ಮಾಡುತ್ತಾರೆ.

ಇದಲ್ಲದೇ, ದೇಗುಲದರ್ಶನ, ನದಿ ತೀರದಲ್ಲಿನೆರೆದು ಪೂಜೆ ಉತ್ಸವಾಚರಣೆ ಮಾಡುವುದು ಇವೆಲ್ಲವೂ ಉಂಟು. ಮಧ್ಯಾಹ್ನ ಎಲ್ಲರೂ ಸೇರಿ ಹಬ್ಬದೂಟವನ್ನು ಸವಿಯುತ್ತ ನಕ್ಕು ನಲಿಯುತ್ತಾರೆ. ಸಂಜೆಯಾಗುತ್ತಲೇ ಮನೆಯ ಒಳಾಂಗಣವನ್ನೂ ಹೊರಾಂಗಣವನ್ನೂ, ಬಾಗಿಲು- ಕಿಟಕಿಗಳ ಇಕ್ಕೆಲಗಳನ್ನೂ ಮುದ್ದು ದೀಪದ ಸೊಡರುಗಳಿಂದ ಅಲಂಕರಿಸಿಡುತ್ತಾರೆ. ಒಬ್ಬರ ಸೊಡರಿನಿಂದ ಮತ್ತೊಬ್ಬರು ಬೆಳಕನ್ನು ಪಡೆಧಿಯುತ್ತ ಸಾಲು ಸಾಲು ದೀಪಗಳನ್ನು ಬೆಳಗುತ್ತಾರೆ. ಹೀಗೆ ಮಾಡುವಾಗ ಲಕ್ಷ್ಮೀ ಹಾಡುಗಳನ್ನು ಹಾಡುವುದುಂಟು. ಎಲ್ಲೆಲ್ಲೂ ದೀಪಲಕ್ಷ್ಮೀ ವಿಲಾಸವಿರಲು, ಹಾಡುತ್ತ ನರ್ತಿಸುತ್ತ ವಿನೋದಗಳಲ್ಲಿ ತೊಡಗುತ್ತಾರೆ. ಕಾವ್ಯಗೋಷ್ಠಿ, ಕಥಾಗೋಷ್ಠಿ, ಹರಿಕಥೆ, ಕೋಲಾಟ, ಸಂಗೀತ ಇವುಗಳೆಲ್ಲಯಥೇಚ್ಛವಾಗಿ ನಡೆಯುತ್ತವೆ. ದೀಪಾವಳಿ ಎಂದ ಮೇಲೆ ಪಟಾಕಿಗಳ ಭರ್ಜರಿ ಬೆಳಕು ನಾದಗಳು ತುಂಬಿ ಬರುತ್ತವೆ.

ದ್ವಾಪರದಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಕೊಂದಾಗ, ಅವನ ರಾಸಾಯನಿಕಮಯವಾದ ದೇಹವನ್ನು ಸುಟ್ಟಾಗ, ಅದರಿಂದ ಬಣ್ಣದ ಕಿಡಿಗಳು ಶಬ್ದ ಮಾಡುತ್ತಾ ಚಿಮ್ಮಿದವು. ಅದನ್ನು ಸಂಕೇತಿಸುವುದಕ್ಕೇ ಪಟಾಕಿಗಳನ್ನು ಸಿಡಿಸುವುದು ಎನ್ನುವುದು. ಇದರೊಂದಿಗೆ ಬೆಳೆದು ಬಂದ ಜಾನಪದದ ಕತೆಯೂ ಇದೆ. ಅತಿಯಾದ ಹೊಗೆ- ಶಬ್ದಗಳನ್ನು ಮಾಡದ, ಅಪಾಯಕಾರಿಗಳಲ್ಲದ ಪಟಾಕಿಗಳನ್ನು ಹದವರಿತು ಹಿತಮಿತವಾಗಿ ಸಿಡಿಸುವುದು ತಪ್ಪಲ್ಲ. ಆದರೆ, ಮೋಜಿಗಾಗಿ ಪಟಾಕಿಗಳನ್ನು ವಿಪರೀತವಾಗಿ ಸುಡುವುದು ತಪ್ಪು. ಮೆರವಣಿಗೆ, ರಾಜಕೀಯ ಗೆಲುವು, ಕ್ರಿಕೆಟ್ ಪಂದ್ಯದ ಗೆಲುವು, ಜನವರಿ ಒಂದನೇ ತಾರೀಕು, ಡಿಸೆಂಬರ್ ಇಪ್ಪತ್ತೈದು ಕೂಡ ಸುಮ್ಮಸುಮ್ಮನೆ ಕೇವಲ ಮೋಜಿಗಾಗಿ ಪಟಾಕಿಗಳನ್ನು ಸಿಡಿಸಿ ಪಟಾಕಿಗಳಿಗಿರುವ ಸಾಂಕೇತಿಕತೆಯನ್ನೂ ಸಭ್ಯ ಸುಂದರ ಮಿತಿಗಳನ್ನೂ ಮುರಿದಿದ್ದೇವೆ. ಇದನ್ನು ಯಥಾವತ್ತಾಗಿ ಖಂಡಿಸದೆ, ಅನಾದಿಯಿಂದ ಅರ್ಥಪೂರ್ಣವಾಗಿ ಮಿತಿಗಳಲ್ಲಿ ನಡೆದು ಬಂದ ದೀಪಾವಳಿಗೇ ‘ಪರಿಸರ ವಿರೋಧಿ’ ಎಂದು ಪಟ್ಟ ಕಟ್ಟುವ ಮೂರ್ಖ ವಾಮ ಚಿಂತನೆಗೂ ಆಸ್ಪದವಾಗಿರುವುದು ಅನ್ಯಾಯ.

ದೀಪಾವಳಿಯ ಅಮಾವಸ್ಯೆಯು ಜೈನರ ಪಾಲಿಗೆ ಬಹಳ ಮಹತ್ವದ ದಿನ. ಮೋಕ್ಷಲಕ್ಷ್ಮೀ ಪೂಜೆಯ ವ್ರತ. ಸಕಲ ಭೋಗಗಳನ್ನೀಯುವ ಲಕ್ಷ್ಮಿ ಭೋಗಾತೀತವಾದ ಆತ್ಮಜ್ಞಾನವನ್ನೂ ನೀಡುವ ತಾಯಿ. ಹಾಗಾಗಿ ಭೋಗಕ್ಕೂ ಯೋಗಕ್ಕೂ ಅವಳೇ ಉಪಾಸ್ಯ ಎನ್ನುವುದು ಇಲ್ಲಿನ ಭಾವ. ಕನ್ನಡದ ನೆಲದಲ್ಲಿ ಕೆಲವರು ರೈತಾಪಿ ಜನಾಂಗಗಳು ಅಮಾವಾಸ್ಯೆಯಂದು ಕೇದಾರೇಶ್ವರ ವ್ರತವನ್ನು ಅಥವಾ ಕೇದಾರಗೌರೀ ವ್ರತವನ್ನು ಆಚರಿಸುತ್ತಾರೆ. ಈ ದಿನವನ್ನು ಪಟಾಕಿಗಳಿಗಲ್ಲ, ಚತುರ್ದಶಿ ಮತ್ತು ಪಾಡ್ಯಗಳಂದು ಪಟಾಕಿ ಸಿಡಿಸುವುದಕ್ಕೂ ಉತ್ಸವಾಚರಣೆಗೂ ಬಳಸಬೇಕೆಂದೂ, ಅಮಾವಾಸೆಯನ್ನು ಮೌನ- ಉಪವಾಸ- ಅಂತರ್ಮುಖ ಅನುಸಂಧಾನಗಳನ್ನೂ ಮಾಡಬೇಕೆನ್ನುವ ಅಭಿಪ್ರಾಯವೂ ಬೆಳೆದಿದೆ.

ಮರು ದಿನ ಬಲಿಪಾಡ್ಯಮಿ. ಸಜ್ಜನನಾದ ಬಲಿಚಕ್ರವರ್ತಿಯು ರಾಕ್ಷಸರ ರಾಜ. ಇವನ ಸಜ್ಜನಿಕೆಯ ಕೀರ್ತಿಯನ್ನು ಅಪ ಬಳಕೆ ಮಾಡಿದ ರಾಕ್ಷಸರು, ದೇವ-ಮಾನವರುಗಳು ಲೋಕಗಳನ್ನೆಲ್ಲ ಆಕ್ರಮಿಸಿದ್ದರು. ರಾಕ್ಷಸರನ್ನು ಅವರವರ ಲೋಕಗಳಿಗೆ ಓಡಿಸಲೆಂದು ವಿಷ್ಣುವು ವಾಮನಾವತಾರ ತಾಳಿದ ದಿನವೆಂದು ಇದು ಪ್ರಸಿದ್ಧ. ಮೂರು ಹೆಜ್ಜೆ ದಾನವನ್ನು ಪಡೆಯುವ ನೆಪದಲ್ಲಿ ರಾಕ್ಷಸರು ಅಪಹರಿಸಿದ ಇತರರ ಲೋಕಗಳನ್ನೆಲ್ಲ ಮರಳಿ ಪಡೆದು, ಅವರವರಿಗೆ ಹಿಂದಿರುಗಿಸಿದ ವಿಷ್ಣುವು, ಬಲಿಯ ಭಕ್ತಿಗೂ ವಿಶೇಷಾನುಗ್ರಹವನ್ನು ಮಾಡುತ್ತಾನೆ. ಅವನ ಮನೆಯ ಬಾಗಿಲನ್ನೂ ಸದಾ ಕಾಯುವ ವೃತ್ತಿಯನ್ನು ಹಿಡಿಯುತ್ತಾನಂತೆ!

ದಾರ್ಷ್ಟ್ಯವು ಮಿತಿ ಮೀರಿದಾಗ, ನಿಯಂತ್ರಣಕ್ಕೆ ಬಾರದೇ ಹೋದಾಗ ಭಗವಂತನೇ ಅವತರಿಸಿ ಅಧರ್ಮವನ್ನು ಅಳಿಸಿ ಧರ್ಮವನ್ನು ಉಳಿಸುತ್ತಾನೆ. ದೀಪಾವಳಿಯು ದುಷ್ಟ ದಮನವನ್ನೇ ಹಬ್ಬದಂತೆ ಆಚರಿಸುವುದರ ಮೂಲಕ ಧರ್ಮಕ್ಕೆ ಜಯ, ಅಧರ್ಮಕ್ಕೆ ಅಳಿವು ಎನ್ನುವ ಸನಾತನ ಸತ್ಯವನ್ನು ಮನ ಗಾಣಿಸುತ್ತಿದೆ ಎನ್ನಬಹುದು. ಮರು ದಿನ ಯಮದ್ವಿತೀಯ ಎನ್ನುವ ಹಬ್ಬವಿದೆ. ಇದು ಸೋದರ-ಸೋದರಿಯರ ಹಬ್ಬ. ಈ ಹಬ್ಬಕ್ಕೆ ಭಾರತಾದ್ಯಂತ ಬೇರೆಬೇರೆ ಹೆಸರುಗಳಿವೆ- ಭಗಿನೀದ್ವಿತೀಯ, ಭಾಯಿಭೀಜ…, ಸೋದರ ಬಿದಿಗೆ, ಯಮನ ಹಬ್ಬ, ಯಮುನಾ ಹಬ್ಬ ಇತ್ಯಾದಿ. ಯಮುನೆಯು ತನ್ನ ಅಣ್ಣ ಯಮನನ್ನು ಈ ದಿನದಂದು ಆಹ್ವಾನಿಸಿ ಊಟವಿತ್ತು ಆದರಿಸಿದಳಂತೆ. ವರವೇನು ಬೇಕೆಂದಾಗ ಆಕೆ ”ಈ ದಿನದಂದು ಸೋದರರನ್ನು ಅನ್ನ ಪಾನಗಳಿಂದ ಸತ್ಕರಿಸುವ ಸ್ತ್ರೀಯರಿಗೆ ದೀರ್ಘಾಯಸ್ಸನ್ನು ಸೌಮಂಗಲ್ಯವನ್ನೂ ಕರುಣಿಸು,” ಎಂದು ಕೇಳಿಕೊಂಡಳಂತೆ. ಅಕ್ಕ ತಂಗಿಯರ ಮನೆಗಳಿಗೆ ತೆರಳಿ ಔತಣದಲ್ಲಿ ಭಾಗವಹಿಸಿ ನಕ್ಕು ನಲಿದು ಕಾಣಿಕೆ ಕೊಟ್ಟು ತೆಗೆದುಕೊಳ್ಳುವ ಸಂಭ್ರಮ ಇಂದಿಗೂ ಬಹಳ ಪ್ರದೇಶಗಳಲ್ಲಿ ಭರ್ಜರಿಯಾಗಿ ನಡೆಯುತ್ತದೆ. ಈ ಎಲ್ಲ ಸುಂದರ ಆಚಾರಗಳಲ್ಲೂ ಭಕ್ತಿ, ವಿಶ್ವಾಸ, ದಾನ, ಧರ್ಮಗಳಲ್ಲದೇ ಸ್ನೇಹ, ಬಾಂಧವ್ಯ, ಸಡಗರ, ಔತಣ, ಕಲಾಭಿಜ್ಞತೆಗಳೂ ಕೂಡಿವೆ ಎನ್ನುವುದು ಗಮನೀಯ. ಈ ಎಲ್ಲಆಚರಣೆಗಳನ್ನು ಕ್ರಮವರಿತು, ಅರ್ಥವರಿತು ಆಚರಿಸೋಣ. ಮರೆತಿದ್ದರೆ ಮರಳಿ ತರೋಣ. ಹಳ್ಳಿಗಳಲ್ಲಿಈ ಆಚರಣೆಗಳು ಇನ್ನೂ ಮಸ್ತಾಗಿಯೇ ನಡೆದಿವೆ. ಹೀಗೆ ಮನದೊಳಗೂ ಮನೆಯೊಳಗೂ ಊರೊಳಗೂ ಬೆಳಕನ್ನೂ ಬೆಡಗನ್ನೂ, ಸ್ನೇಹದ ಸವಿಯನ್ನೂ ಪಸರಿಸುವ ದೀಪಾವಳಿಯು ಎಲ್ಲರಿಗೂ ಪ್ರಿಯವಾದ ಹಬ್ಬ.

ಕೃಪೆ:ವಿಜಯಕರ್ನಾ‌ಟಕ

Leave a Reply