ಅಜ್ಜಿಮನೆ – ಕೆಂಪು ಬಸ್ಸು – ರವೆ ಉಂಡೆ – ಕಪ್ಪುಮಣ್ಣು
“ಬಿಳಿಯ ಮಂಜಿನಲಿ ಬೆಳೆಯಬಹುದೇ
ಬೆಳೆಯುವದು ಎಲ್ಲ ಕಪ್ಪು”…
ಪೂರ್ವಾಂಗನೆ ಪಶ್ಚಿಮಾಂಗನೆಗೆ
ಕವಿತೆಸಾಲುಗಳ ಓದುತ್ತಿದ್ದ ಹಾಗೇ
ನೆನಪುಗಳ ಸಾಲು ಸಾಲು ಮೆರವಣಿಗೆ…
ಕಪ್ಪು ಮಣ್ಣಿನ ಮೇಲೆ ಓಡುವ ಆ ಕೆಂಪುಬಸ್ಸು.
“ಅಜ್ಜಿ ಅಜ್ಜಿ ಮನೀ ಬಂತಾ”-
ಎದುರಿನವರ ಭುಜಕ್ಕೆ ಕಣ್ಣುಮುಚ್ಚಿ
ಕೈಯಿಟ್ಟು ಕೇಳಿ “ಇನ್ನೂ ಇಲ್ಲ”
ಉತ್ತರಕ್ಕೆ ಖುಶಿ ಪಡುತ್ತಿದ್ದ ಆ ದಿನಗಳು…
ತಾಜಾ ಬೆಣ್ಣೆಯ ತುಪ್ಪದಲ್ಲಿ
ರವೆ ಉಂಡಿಗಾಗಿ ರವೆ ಹುರಿಯುವ
ಘಮಲಿಗೆ ಆಟಕ್ಕೆಲ್ಲ ಬೈ ಹೇಳಿ
ಒಂದುಸಿರಿನಲ್ಲಿ ಮನೆ ಸೇರುವಂತೆ
ಮಾಡುತ್ತಿದ್ದ “ಚಿನ್ನಿ ಚಿನ್ನಿ ಆಶೆಗಳು..”
ಉಫ್ಫ್.. ಬಾಲ್ಯದ ನೆನಪುಗಳ
ಮೆರವಣಿಗೆಗೆ ಕೊನೆಯಿಲ್ಲ…
ಇರಲೂ ಕೂಡದು…
You must log in to post a comment.