ಅನುಭವ-ಅನುಭಾವ (ನಾನರಿತ ದಿನ)
ಆಸೆಗಳ ಹಿರಿದು ಬೆಟ್ಟವೇರಿ
ಕಡಲಗಲದ ಮೋಹ ಲೋಭವೆಂಬ
ಭೂತ ಬಡಿದು
ಸ್ವಾರ್ಥವೆಂಬ ಹಡಗನೇರಲು
ಸತ್ಯವೆಂಬ ಚಂಡ ಮಾರುತ
ಬೀಸಿ ಹಡಗು ಮುಳುಗಿ
ದುಃಖವೆಂಬ ಪರ್ವತ ಏರಿ ಕುಳಿತಂತೆ
ಅನ್ಯರ ಅಂತರಾಳದ
ದುಃಖ ತಾಪವ ಕೇಳಿ
ಒಡನೆ ಹುಸಿ ಪ್ರೀತಿ ತೋರಿ
ಬೆನ್ನಹಿಂದೆ ಆಡಿಕೊಂಡು
ಮುಗುಳು ನಕ್ಕು ಮೆರೆಯಲು
ಒಡನೆ ಕಾಯ್ದಿತ್ತು ತಾಪ
ನಿಂತಿತೊಂದು ಎದೆಯ ಮೇಲೆ
ತೋರಿಕೆಯ ಮುಖವಾಡಗಳ
ಸರಿಸುವ ಮಾಯದ ಬೆಟ್ಟ.
ಬೇಯದ ಬೇಳೆ ತಿನ್ನಲು ಬಾರದು
ಅರೆ ಬೇಯಲು ಏನೆಂದರಿಯಲು ಬಾರದು
ಬೆಂದರು ಸಿಹಿ ಉಪ್ಪಿರದೆ ರುಚಿಸದು
ಬೆಂದನುಭವಕೆ ಬಾರದಿರಲು ನಿರುಪಯುಕ್ತವು
ಬೆಂದೂ ಬೆಂದೂ ಹದನಾದ ಅನುಭವವು
ಅನುಭಾವಿಯಾಗಲು ಬೆಲ್ಲದ್ಹೂರಣ ಸವಿ
ಸವಿಯುವುದು ಜಗವು.
You must log in to post a comment.