ಕಾಮನಬಿಲ್ಲು

ಕಾಮನಬಿಲ್ಲು

ಎಳೆ ಬಿಸಿಲದು ಇರಲು
ಮಳೆಯದೋ ಬರಲು
ಮೂಡಿತು ಇಂದು ಕಾಮನಬಿಲ್ಲು
ಮೂಡಣದಿಂದ ಪಡುವಣದೊರೆಗೂ
ಮುಟ್ಟಿರುವಂತೆ ಕಾಣುತ ಕಣ್ಣಿಗೆ
ತೋರುವುದಲ್ಲ ಡೊಂಕು ಏಣಿಯಂತೆ
ಕಣ್ಣದು ಸೆಳೆದವು ಸಪ್ತವರ್ಣ
ಕೆಂಪು, ಹಳದಿ, ನೇರಳೆ, ಹಸಿರು, ಬಿಳಿ
ಗುಲಾಬಿ, ಬೂದು ಬಣ್ಣ.
ಬಣ್ಣಗಳ್ಹೇಗೆ? ಡೊಂಕದು ಏಕೆ?
ಬಿಸಿಲು ಮಳೆಯಲೆ ಕಾಣುವುದೇಕೆ?
ಬಣ್ಣಗಳು ಹಲವು ಪಟ್ಟಿಯ ಹಾಗೆ
ಎಳೆದಿರುವಂತೆ ಕುಂಚದಿ ಹೇಗೆ?
ಕಾಣಲು ತವಕವು ಹಿರಿಯ ಕಿರಿಯರಿಗೆ
ಕಂಡೊಡೆ ಕರೆವರು ತೋರಲು ಎಮಗೆ
ಕಾತರ ಚಿಣ್ಣರಿಗೆ ಸೃಷ್ಟಿಯ ಬಗೆಗೆ
ಅರಿಯಲು ಇದೆ ಅನಂತವು ಎಮಗೆ.

Leave a Reply