ಚಲ್ಲಾಟ – ಮಾಯಕ – ಬಿರುಕು – ನಿಜನಾಮಧೇಯ

ಚಲ್ಲಾಟ – ಮಾಯಕ – ಬಿರುಕು – ನಿಜನಾಮಧೇಯ

ಬದುಕಿನ ಪ್ರೀತಿ, ಪ್ರೇಮ,
ಪ್ರಣಯಭರಿತ
ಚಲ್ಲಾಟಗಳ ಭರದಲ್ಲಿ
ಅಷ್ಟು ಇಷ್ಟು ಬಿರುಕುಗಳನ್ನು
ಅವಗಣಿಸಿ ಹೇಗೋ ಎಂತೋ
ಓಡುತ್ತಿರುತ್ತದೆ ಬದುಕಿನ
ಜಟಕಾ ಬಂಡಿ….

ಅದನ್ನು ಕೊಂಚ
ಗಂಭೀರವಾಗಿ
ಸೂಕ್ಷ್ಮ ಕೋನಗಳಿಂದ
ಅವಲೋಕಿಸಿದರೂ
ಎಂಥವರಿಗೂ
ತಿಳಿಯುತ್ತದೆ
ಬದುಕಿನ ಇನ್ನೊಂದು
ನಿಜನಾಮಧೇಯ
‘ಮಾಯಕವೆಂದು…’

Leave a Reply