ತಾಕಲಾಟ – ತಲ್ಲಣ – ಮೈನೋವು – ಬ್ರೆಡ್
ಈಗೆರಡು ದಿನಗಳಿಂದ
ಮೈಕೈನೋವು, ವಿಪರೀತ ಕಣ್ಣುರಿ…
ಬಾಯ್ಬಿಟ್ಟರೆ ಮನೆಯಲ್ಲಿ ಬಾಂಬ್ ಸ್ಫೋಟ….
ನನ್ನ ಬ್ಯಾಂಕಿನ ಬಿಡುವಿಲ್ಲದ ದಿನಚರಿಯಿಂದ
ಈಗಾಗಲೇ ತಲ್ಲಣಗೊಂಡಿರುವ
ನಮ್ಮಮ್ಮ ನೆವಕ್ಕಾಗಿ ತುದಿಗಾಲಮೇಲೆಯೇ
ನಿಂತಿದ್ದಾಳೆ ನನ್ನನ್ನು ಗ್ರಹಬಂಧನದಲ್ಲಿಡಲು…
ಬರಿ ಅಷ್ಟಾದರೆ ಪರವಾಗಿಲ್ಲ….
ನನ್ನ ತಾಕಲಾಟಕ್ಕೆ ಕಾರಣವೇ ಬೇರೆ…
ಮೆಣಸಿನ ಕಾಡೆ, ಗೊಡ್ಡುಸಾರು,
ಒಣ ಒಣ ಬ್ರೆಡ್, ಅಕ್ಕಿಗಂಜಿ
ಅಂತೆಲ್ಲ ನೆನಪಾದರೆ ಬ್ಯಾಂಕಿನ ಉದ್ದುದ್ದದ
ಸಾಲುಗಳಲ್ಲೂ ಕಾಣುವದು ನನ್ನನ್ನು
ಪಾರುಮಾಡಲು ಬಂದ
ಆಪ್ತರಕ್ಷಕರೇ………
You must log in to post a comment.