ನಗು

ನಗು

ನಗುವು ದೈವದ ಕೊಡುಗೆ ಮನುಜಗೆ
ಅದರಲ್ಲಿಹುದು ಹತ್ತು ಹಲವು ಬಗೆ
ನಗುವು ಎಂಥದ್ದಾದರೇನು?
ಅಡಗಿಹುದು ಅನಂತ ಸುಖವು
ನಗುವೇ ನೈಜ ಬದುಕುವ ಪರಿಯು
ಅಂತರಾಳದ ಚಿಂತೆ ತೆಗೆದು ಮನದ ದುಗುಡ ಹೊರಚೆಲ್ಲಿ
ಜಗವ ಮೈ ಮರೆಸುವುದು
ಒಂದೇ ಒಂದು ಮುಗುಳು ನಗೆಯು
ದೊಡ್ಡ ದ್ವೇಷ ಮರೆಸುವುದು
ಮೈತ್ರಿ ನಿಯತ ಬೆಳೆಸುವುದು
ಮೈಮನಗಳ ಹಗುರಗೊಳಿಸಿ
ಮನದ ಚಿಂತನೆಗಳ ಶುಭ್ರಗೊಳಿಸಿ
ನಗುವೊಂದು ಮೂಡಿಸುವುದು ಅನುರಾಗವು
ಎಚ್ಚೆತ್ತುವುದು ಒಳಗಿನ ಚೇತನವು
ನಗುವುದು ಸ್ವತಃಕ್ಕೆ ಹಿತವು
ನಗಿಸುವುದೇ ನಿಜ ಪರರ ಕಾಳಜಿಯು
ಇದೇ ನಗುವಿನ ನಿಜ ಮರ್ಮವು.

Leave a Reply